Home
Deal of the day

ಹೊಸ ಆಫರ್..! ಜಸ್ಟ್ 10749 ಸಾಕು.. ಲಕ್ಷುರಿ ಫೀಚರ್ಸ್‌.. ಯಾವ ಫೋನ್? ಎಲ್ಲಿ ಖರೀದಿಸಬೇಕು?

ಸ್ಯಾಮ್‌ಸಂಗ್ ಮೊಬೈಲ್ ಖರೀದಿಸಲು ಇದು ಸುವರ್ಣಾವಕಾಶ! ಸ್ಯಾಮ್‌ಸಂಗ್ ತನ್ನ ಅಭಿಮಾನಿಗಳಿಗಾಗಿ ಹೊಸ ಆಫರ್ ತಂದಿದೆ. ಹೌದು, ಕಂಪನಿಯು ಆಯ್ದ ಗ್ಯಾಲಕ್ಸಿ 'ಎಂ' (Galaxy M) ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಇದು ಸೀಮಿತ ಅವಧಿಯ ಆಫರ್ ಆಗಿರುತ್ತದೆ. ಹೊಸ ಬೆಲೆಗಳು ಮೇ 1 ರಿಂದಲೇ ಜಾರಿಗೆ ಬಂದಿದೆ. ಈ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G (Samsung Galaxy M16 5G) ಸ್ಮಾರ್ಟ್‌ಫೋನ್ ಬಿಡುಗಡೆ ಬೆಲೆಗಿಂತ ಕಡಿಮೆಗೆ ಲಭ್ಯವಿದೆ. ಈ ಫೋನಿಗೆ ಯಾವೆಲ್ಲಾ ಆಫರ್ ನೀಡಲಾಗುತ್ತಿದೆ ಮತ್ತು ಇದರ ವೈಶಿಷ್ಟ್ಯಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಸ್ಮಾರ್ಟ್‌ಫೋನ್‌ ಮೂರು ಸ್ಟೋರೇಜ್ ಆಯ್ಕೆಯಲ್ಲಿ ಮಾರಾಟವಾಗುತ್ತಿದೆ. ಈ ಮೊಬೈಲ್ ಸ್ಟೈಲಿಶ್ ಲುಕ್, ಶಕ್ತಿಶಾಲಿ ಪ್ರೊಸೆಸರ್ ಮತ್ತು ಬೊಂಬಾಟ್ ಬ್ಯಾಟರಿ ಸೇರಿದಂತೆ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ 5 ವರ್ಷಗಳ ಭದ್ರತಾ ನವೀಕರಣಗಳು ಮತ್ತು 4 ಪ್ರಮುಖ ಓಎಸ್ ಅಪ್‌ಗ್ರೇಡ್‌ಗಳನ್ನು ಪಡೆಯುತ್ತದೆ. ಇದು ಮೂರು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ನೀವು ಥಂಡರ್ ಬ್ಲ್ಯಾಕ್, ಮಿಂಟ್ ಗ್ರೀನ್ ಮತ್ತು ಬ್ಲಶ್ ಪಿಂಕ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನಿನ ಹೊಸ ಬೆಲೆ ತಿಳಿಯಲು ಮುಂದೆ ಓದಿ.

ಹೊಸ ಆಫರ್..! ಕೇವಲ 10,749 ಸಾಕು.. ಯಾವ ಫೋನ್? ಎಲ್ಲಿ ಖರೀದಿಸಬೇಕು?

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಸ್ಮಾರ್ಟ್‌ಫೋನ್ 6.7 ಇಂಚಿನ ಸೂಪರ್ ಅಲೋಲೆಡ್ ಡಿಸ್ಪ್ಲೇ ಹೊಂದಿದೆ. ಇದು ಫುಲ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್‌ ಗ್ರಾಫಿಕ್ಸ್‌ಗಾಗಿ, ARM ಮಾಲಿ G57 MC2 ಜಿಪಿಯು ಸಹ ಹೊಂದಿದೆ. ಇದರೊಂದಿಗೆ 4GB RAM + 128GB ಆಂತರಿಕ ಸ್ಟೋರೇಜ್ ಆಯ್ಕೆ ಒಳಗೊಂಡಿದೆ. ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಮೊಬೈಲ್ 2.4GHz ಮತ್ತು 5GHz ಡ್ಯುಯಲ್ ಬ್ಯಾಂಡ್ ವೈ-ಫೈ, ವೈ-ಫೈ ಡೈರೆಕ್ಟ್, ಡ್ಯುಯಲ್ ಸಿಮ್ ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯಗಳನ್ನು ಒಳಗೊಂಡಿದೆ.

ಹೊಸ ಆಫರ್..! ಕೇವಲ 10,749 ಸಾಕು.. ಯಾವ ಫೋನ್? ಎಲ್ಲಿ ಖರೀದಿಸಬೇಕು?

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಬೆಲೆ ಮತ್ತು ಲಭ್ಯತೆ

4GB + 128GB ಸ್ಟೋರೇಜ್ = 11,499 ರೂ.
6GB + 128GB ಸ್ಟೋರೇಜ್ = 12,999 ರೂ.
8GB + 128GB ಸ್ಟೋರೇಜ್ = 14,499 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M16 5G ಫೋನಿನ ಆರಂಭಿಕ ಬೆಲೆ 11,999 ರೂ. ಆಗಿದೆ. ಇದು 4GB + 128GB ಸ್ಟೋರೇಜ್ ರೂಪಾಂತರ ಹೊಂದಿರುವ ಮೊಬೈಲ್ ಬೆಲೆ ಆಗಿದೆ. ಪ್ರಸ್ತುತ ಇದು ಕೇವಲ 10,749 ರೂ.ಗೆ ಲಭ್ಯವಿರುತ್ತದೆ. ಈ ಫೋನ್ ಅಮೆಜಾನ್, ಕಂಪನಿಯ ಅಧಿಕೃತ ವೆಬ್‌ಸೈಟ್ (samsung.com) ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಬೆಲೆಯಲ್ಲಿ ಫೋನನ್ನು ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ.

ಇನ್ನು ಗ್ಯಾಲಕ್ಸಿ 'M' ಸರಣಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ M06 5G (Samsung Galaxy M06 5G) ಫೋನ್‌ 8,199 ರೂ.ಗೆ ಆಫರ್ ಅಡಿಯಲ್ಲಿ ಖರೀದಿಸಬಹುದು. ಇಷ್ಟೇ ಅಲ್ಲದೆ, 24,499 ರೂ. ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ M35 5G (Samsung Galaxy M35 5G) ಪ್ರಸ್ತುತ ಕೇವಲ 13,999 ರೂ.ಗೆ ಲಭ್ಯವಿದೆ.

Best Mobiles in India

English summary
Samsung Galaxy M16 5G get big price cut in Amazon sale: Check new Price, offers, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+