Home
Deal of the day

ಹೋಳಿ ಆಫರ್! 1 ಲಕ್ಷದ Samsung ಫೋನ್.. ಕೇವಲ 20000ಕ್ಕೆ ಸೇಲ್.. ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 5G ಸರಣಿಯ ಸ್ಮಾರ್ಟ್‌ಫೋನ್‌ಗಳು ದುಬಾರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಪ್ರಸ್ತುತ ನಿಮಗೆ ಉತ್ತಮ ಅವಕಾಶವಿದೆ. ನೀವು ಕೇವಲ 20,000 ರೂ.ಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ (Samsung Galaxy S24 Plus) ಫೋನನ್ನು ಖರೀದಿಸಬಹುದು. ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ನೀವು ಸ್ಯಾಮ್‌ಸಂಗ್‌ ಪ್ರೀಮಿಯಂ ಫೋನ್ ಖರೀದಿಸಲು ಬಯಸಿದರೆ, ಈ ಸಮಯ ನಿಮಗೆ ಸೂಕ್ತವಾಗಿದೆ. ನೀವು ನೇರವಾಗಿ ಈ ಆಫರ್‌ನ ಲಾಭ ಪಡೆಯಬಹುದು. ಬನ್ನಿ, ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ನೋಡೋಣ.

ಹೋಳಿ ಹಬ್ಬದ ಪ್ರಯುಕ್ತ ಫ್ಲಿಪ್‌ಕಾರ್ಟ್ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಮೇಲೆ ಭಾರಿ ರಿಯಾಯಿತಿ ನೀಡಿದೆ. ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್‌ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು Exynos 2400 Deca Core ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 12GB + 512GB ಸ್ಟೋರೇಜ್, 4900mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್ ಒಳಗೊಂಡಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ 1 ಲಕ್ಷದ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು.

ಹೋಳಿ ಆಫರ್! 1 ಲಕ್ಷದ Samsung ಫೋನ್.. ಕೇವಲ 20000ಕ್ಕೆ ಸೇಲ್.. ಖರೀದಿ ಎಲ್ಲಿ?

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಆಫರ್

ಫ್ಲಿಪ್‌ಕಾರ್ಟ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಖರೀದಿ ಮೇಲೆ ಭಾರೀ ಆಫರ್ ನೀಡಿದೆ. ಈ ಸ್ಮಾರ್ಟ್‌ಫೋನಿನ 12GB RAM + 512GB ರೂಪಾಂತರವು 99,999 ರೂ.ಗೆ ಬಿಡುಗಡೆಯಾಗಿತ್ತು. ಈಗ ಕೇವಲ 56,999 ರೂ.ಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ಇದರ ಮೇಲೆ ಶೇ.43 ರಷ್ಟು ರಿಯಾಯಿತಿ ನೀಡುತ್ತಿದೆ. ಜೊತೆಗೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು.

ಐಡಿಎಫ್‌ಸಿ ಬ್ಯಾಂಕ್ ಕಾರ್ಡ್‌ನಲ್ಲಿ 750 ರೂ. ಹೆಚ್ಚುವರಿ ಡಿಸ್ಕೌಂಟ್ ಲಭ್ಯವಿದೆ. ನಿಮ್ಮ ಬಜೆಟ್ ಕಡಿಮೆಯಿದ್ದರೆ, ನೀವು 9,500 ರೂ.ಗಳ ಇಎಂಐ ಮೂಲಕವೂ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ ಬರೋಬ್ಬರಿ 52,250 ರೂ.ಗಳ ಎಕ್ಸ್‌ಚೇಂಜ್ ಆಫರ್ ಸಹ ನೀಡುತ್ತಿದೆ. ಈ ಮೂಲಕ ನೀವು ಈ ಫೋನನ್ನು ಮತ್ತಷ್ಟು ಅಗ್ಗವಾಗಿ ಖರೀದಿಸಬಹುದು. ಈ ಮೊಬೈಲ್ ಓನಿಕ್ಸ್ ಬ್ಲ್ಯಾಕ್ ಮತ್ತು ಕೋಬಾಲ್ಟ್ ವೈಲೆಟ್ ಬಣ್ಣಗಳಲ್ಲಿ ಬರುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್‌ ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 3120 x 1440 ಪಿಕ್ಸೆಲ್‌ ರೆಸಲ್ಯೂಶನ್‌, 120Hz ರಿಫ್ರೆಶ್ ದರ ಮತ್ತು 2600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಮೊಬೈಲ್ Exynos 2400 Deca Core ಪ್ರೊಸೆಸರ್‌ ಹೊಂದಿದೆ. ಇದು ಗ್ರಾಫಿಕ್ಸ್‌ಗಾಗಿ, Xclipse 940 ಜಿಪಿಯು ಸಹ ಹೊಂದಿದೆ. ಈ ಸ್ಯಾಮ್ಸಂಗ್ ಫೋನ್ ಆಂಡ್ರಾಯ್ಡ್‌ ಆಧಾರಿತ One UI 6.1 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ.

ಹೋಳಿ ಆಫರ್! 1 ಲಕ್ಷದ Samsung ಫೋನ್.. ಕೇವಲ 20000ಕ್ಕೆ ಸೇಲ್.. ಖರೀದಿ ಎಲ್ಲಿ?

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 12GB RAM + 256GB ಸ್ಟೋರೇಜ್ ರೂಪಾಂತರ ಮತ್ತು 12GB RAM + 512GB ಸ್ಟೋರೇಜ್ ರೂಪಾಂತರದಲ್ಲಿ ಮಾರಾಟವಾಗುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಪ್ಲಸ್ ಮೊಬೈಲ್ 4,900mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್‌ ಮಾಡಲು, 25W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಗ್ಯಾಲಕ್ಸಿ ಎಐ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G, 4G VoLTE, ವೈ-ಫೈ 7, ಬ್ಲೂಟೂತ್ 5.3, ಜಿಪಿಎಸ್‌ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Samsung Galaxy S24 Plus gets Massive Discount On Flipkart Sale: Check new price, offers, specifications and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+