ಖುಷಿ ಸುದ್ದಿ! ಈ Samsung ಫೋನ್ ಬೆಲೆ 12,000 ಇಳಿಕೆ! ಎಷ್ಟಿತ್ತು? ಎಷ್ಟಾಗಿದೆ?
ಸ್ಯಾಮ್‌ಸಂಗ್ ಪ್ರಿಯರಿಗೆ ಖುಷಿ ಸುದ್ದಿ ಇದೆ. ಸ್ಯಾಮ್‌ಸಂಗ್‌ನ ಈ ಫೋನ್ ಖರೀದಿಸಿದರೆ ಬರೋಬ್ಬರಿ 12,000 ರೂ. ಹಣ ಉಳಿಸಬಹುದು. ಹೌದು, ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ಕಂಪನಿಯು ಈ ವರ್ಷದ ಆರಂಭದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S24 (Samsung Galaxy S24) ಫೋನನ್ನು ಬಿಡುಗಡೆ ಮಾಡಿತು. ಇದರ ಆರಂಭಿಕ ಬೆಲೆ 79,999 ರೂ. ಇದೆ. ಆದರೆ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಈ ಫ್ಲ್ಯಾಗ್‌ಶಿಪ್ ಫೋನ್ ಭರ್ಜರಿ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಇರಲಿದೆ.
ಹೌದು, ಸ್ಯಾಮ್‌ಸಂಗ್ ತನ್ನ ಪ್ರಮುಖ Galaxy S24 ಬೆಲೆಯನ್ನು ಭಾರತದಲ್ಲಿ 12,000 ರೂ.ಗಳಷ್ಟು ಕಡಿತಗೊಳಿಸಿದೆ. ಸ್ವಾತಂತ್ರ್ಯ ದಿನದ ಕೊಡುಗೆಯ ಭಾಗವಾಗಿ, Galaxy S24 ಈಗ 62,999 ರೂ.ಗಳಿಗೆ ಲಭ್ಯವಿದೆ. ಸ್ಯಾಮ್‌ಸಂಗ್ ಗ್ರಾಹಕರಿಗೆ ನೋ ಕಾಸ್ಟ್ ಇಎಂಐ ಆಯ್ಕೆಗಳನ್ನೂ ನೀಡುತ್ತಿದೆ. ಈ ಆಫರ್ ಮುಂದಿನ ವಾರದವರೆಗೆ ಮಾತ್ರ ಲಭ್ಯವಿರುತ್ತದೆ. Galaxy S24 ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 6.2 ಇಂಚಿನ AMOLED ಡಿಸ್ಲ್ಪೇ ಮತ್ತು 4000mAh ಬ್ಯಾಟರಿಯೊಂದಿಗೆ ಬರುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ S24 ಫೋನಿನ ಹೊಸ ಬೆಲೆ
ಸ್ಯಾಮ್‌ಸಂಗ್ ಕಂಪನಿಯು ತನ್ನ ಗ್ಯಾಲಕ್ಸಿ S24 ಫೋನಿನ ಬೆಲೆಯನ್ನು 12,000 ರೂ.ಗಳಷ್ಟು ಕಡಿತಗೊಳಿಸಿದೆ. ಅದರಂತೆ ಈ ಫೋನಿನ 8GB RAM ಮತ್ತು 128GB ಸ್ಟೋರೇಜ್ ಬೆಲೆ 62,999 ರೂ.ಗೆ ಇಳಿಕೆಯಾಗಿದೆ. ಈ ಫೋನಿನ ಮೂಲ ಬಿಡುಗಡೆ ಬೆಲೆ 74,999 ರೂ. ಆಗಿದೆ. ಹೆಚ್ಚುವರಿಯಾಗಿ, ನೀವು ತಿಂಗಳಿಗೆ 5,666 ರೂ. ನಂತೆ 24 ತಿಂಗಳ ನೋ-ಕಾಸ್ಟ್ EMI ಆಫರ್ ಪಡೆಯಬಹುದು. ಸ್ಯಾಮ್‌ಸಂಗ್‌ನ ವೆಬ್‌ಸೈಟ್‌ನಲ್ಲಿನ ಟೈಮರ್ ಪ್ರಕಾರ, ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಆಗಸ್ಟ್ 15 ರವರೆಗೆ ಲಭ್ಯವಿರಲಿದೆ.
ಫೋನಿನ 256GB ಸ್ಟೋರೇಜ್ ವೇರಿಯಂಟ್ ಬೆಲೆ ಮೂಲ 79,999 ರೂ. ಇದೆ. ಡಿಸ್ಕೌಂಟ್ ಬಳಿಕ 67,999 ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನೂ, 512GB ಸ್ಟೋರೇಜ್ ಆಯ್ಕೆಯ ಮೂಲ ಬೆಲೆ 89,999 ರೂ. ಇದೆ. ರಿಯಾಯಿತಿಯೊಂದಿಗೆ 77,999 ರೂ.ಗೆ ಲಭ್ಯವಿದೆ. ಇದಲ್ಲದೆ, ಅಮೇಜಾನ್‌ನಲ್ಲಿ ಗ್ಯಾಲಕ್ಸಿ S24 ಫೋನನ್ನು 56,000 ರೂ.ಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ 62,000 ರೂ.ಗೆ ಪಟ್ಟಿ ಮಾಡಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S24 ಫೋನಿನ ಫೀಚರ್ಸ್
ಡಿಸ್ಲ್ಪೇ: ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ S24 ಫೋನ್ 6.2 ಇಂಚಿನ ಪೂರ್ಣ HD+ ಡೈನಾಮಿಕ್ AMOLED 2X ಡಿಸ್ಲ್ಪೇಯನ್ನು ಹೊಂದಿದೆ. ಇದು 120 Hz ವರೆಗಿನ ರಿಫ್ರೆಶ್ ದರ ಮತ್ತು ವಿಷನ್ ಬೂಸ್ಟರ್ ಬೆಂಬಲವನ್ನು ಹೊಂದಿದೆ.
ಪ್ರೊಸೆಸರ್: ಸ್ಯಾಮ್ಸಂಗ್ ಗ್ಯಾಲಕ್ಸಿ S24 ಫೋನ್ Qualcommನ Snapdragon 8 Gen 3 ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ Exynos 2400 SoC ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 8GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರುತ್ತದೆ.
ಕ್ಯಾಮೆರಾ: ಗ್ಯಾಲಕ್ಸಿ S24 ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಈ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು, 25W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. IP68 ರೇಟೆಡ್ ಧೂಳು ಮತ್ತು ನೀರಿನ ನಿರೋಧಕ ವಿನ್ಯಾಸವನ್ನು ಹೊಂದಿದೆ.
ಶೀಘ್ರದಲ್ಲೇ ಹೊಸ ಫೋನ್ ಲಾಂಚ್!
ಕಂಪನಿಯು ಶೀಘ್ರದಲ್ಲೇ Samsung Galaxy S24 FE ಫೋನನ್ನು ಬಿಡುಗಡೆ ಮಾಡಲಿದೆ. ಸಾಮಾಜಿಕ ಜಾಲತಾಣಗಳಲ್ಲಿನ ಸೋರಿಕೆಯಿಂದ ಈ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ಲಭ್ಯವಾಗಿದೆ. ಫ್ರಾನ್ಸ್‌ನಲ್ಲಿರುವ ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಸಪೋರ್ಟ್ ಪೇಜ್ ಲೈವ್ ಆಗಿದೆ. ಈ ಫೋನ್ ಮಾದರಿ ಸಂಖ್ಯೆ SM-S721B ನೊಂದಿಗೆ ಕಾಣಿಸಿಕೊಂಡಿದೆ. ಇದು ಡ್ಯುಯಲ್ ಸಿಮ್ ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್ 6.65 ಇಂಚಿನ ಡಿಸ್ಲ್ಪೇಯನ್ನು ಹೊಂದಿರಲಿದೆ.


Click it and Unblock the Notifications








