10,000 ಬೆಲೆ ಇಳಿಕೆ! 200MP ಕ್ಯಾಮೆರಾ.. 1TB ಸ್ಟೋರೇಜ್.. ಈ ದೈತ್ಯ Samsung ಫೋನಿಗೆ ಭರ್ಜರಿ ಡಿಸ್ಕೌಂಟ್
ಸ್ಯಾಮ್‌ಸಂಗ್ ತನ್ನ ಅಭಿಮಾನಿಗಳಿಗೆ ದೊಡ್ಡ ಆಫರ್ ನೀಡುತ್ತಿದೆ. ಕಂಪನಿಯು ತನ್ನ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S24 ಅಲ್ಟ್ರಾ (Samsung Galaxy S24 Ultra) ಫೋನಿನ ಬೆಲೆಯಲ್ಲಿ ದೊಡ್ಡ ಇಳಿಕೆ ಮಾಡಿದೆ. ಪ್ರಸ್ತುತ, ಈ ಫೋನ್ ಬಿಡುಗಡೆಗಿಂತ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹೌದು, ನೀವು ಈ ಫೋನಿನ ಖರೀದಿ ಮೇಲೆ ಬರೋಬ್ಬರಿ 10,000 ರೂ. ವರೆಗೆ ಉಳಿತಾಯ ಮಾಡಬಹುದು. ಈ ಫೋನಿನ ಹೊಸ ಬೆಲೆ, ಆಫರ್ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್ ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ನೀವು ಉನ್ನತ ಮಟ್ಟದ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S24 ಅಲ್ಟ್ರಾ ಉತ್ತಮ ಆಯ್ಕೆಯಾಗಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6.8 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 1TB ಸ್ಟೋರೇಜ್, 5000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಒಳಗೊಂಡಿದೆ.

ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S24 ಅಲ್ಟ್ರಾ ಆಫರ್
ಗ್ಯಾಲಕ್ಸಿ S24 ಅಲ್ಟ್ರಾ 12GB RAM + 1TB ಬೆಲೆ = 1,58,999 ರೂ.
ಹೊಸ ಬೆಲೆ = 1,48,999 ರೂ.
ಗ್ಯಾಲಕ್ಸಿ S24 ಅಲ್ಟ್ರಾ 12GB RAM + 512GB ಬೆಲೆ = 1,38,999 ರೂ.
ಹೊಸ ಬೆಲೆ = 1,28,999 ರೂ.
ಗ್ಯಾಲಕ್ಸಿ S24 ಅಲ್ಟ್ರಾ 12GB RAM + 256GB ಬೆಲೆ = 1,28,999 ರೂ.
ಹೊಸ ಬೆಲೆ = 1,18,999 ರೂ.
ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S24 ಅಲ್ಟ್ರಾ ಫೋನಿನ ಮೂರು ರೂಪಾಂತರಗಳ ಬೆಲೆಯನ್ನು 10,000 ರೂ. ಇಳಿಕೆ ಮಾಡಿದೆ. ಈ ಆಫರ್ ಕಂಪನಿಯ ಅಧಿಕೃತ ಸೈಟ್‌ಗಳಲ್ಲಿ ಮಾತ್ರ ಲಭ್ಯವಿದೆ. ಈ ಬೆಲೆ ಇಳಿಕೆಯು ಭಾರತದಲ್ಲಿ ಮಾರಾಟವಾಗುವ ಯೂನಿಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್ 6.8 ಇಂಚಿನ ಡೈನಾಮಿಕ್ ಅಮೋಲೆಡ್ 2X ಡಿಸ್ಪ್ಲೇ ಹೊಂದಿದೆ. ಇದು 3,120 x 1,440 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 2,600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ನೋಟ್ ಟೇಕಿಂಗ್, ಡ್ರಾಯಿಂಗ್ ಮತ್ತು ಡಾಕ್ಯುಮೆಂಟ್ ಎಡಿಟಿಂಗ್‌ಗಾಗಿ S ಪೆನ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ಒನ್ ಯುಐ 6.1 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಇದು 7 ವರ್ಷಗಳವರೆಗೆ ನವೀಕರಣಗಳನ್ನು ಪಡೆಯುತ್ತದೆ. ಹಾಗೆಯೇ 12GB RAM, 256GB, 512GB ಮತ್ತು 1TB ವರೆಗೆ ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 12 ಮೆಗಾಪಿಕ್ಸೆಲ್ ಎರಡನೇ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮೂರನೇ ಕ್ಯಾಮೆರಾ ಹೊಂದಿದೆ. ಹಾಗೆಯೇ 10 ಮೆಗಾಪಿಕ್ಸೆಲ್ ನಾಲ್ಕನೇ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 12 ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನಿನಲ್ಲಿ 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು ಕೇವಲ 30 ನಿಮಿಷದಲ್ಲಿ ಶೇ.65 ರಷ್ಟು ಚಾರ್ಜಿಂಗ್ ಮಾಡಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, 4G LTE, ವೈ-ಫೈ 7, ವೈ-ಫೈ ಡೈರೆಕ್ಟ್, ಬ್ಲೂಟೂತ್ 5.3 ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








