ಭಾರೀ ರಿಯಾಯಿತಿ! 24 ಇಂಚಿನ ಟಿವಿ 5999.. 32 ಇಂಚಿನ ಟಿವಿ 7999.. ಅಗ್ಗದ ಬೆಲೆಗೆ ಈ Smart TVಗಳು ಲಭ್ಯ
ಟೆಕ್ ಬ್ರ್ಯಾಂಡ್ ಥಾಮ್ಸನ್ (Thomson) ಅಗ್ಗದ ಸ್ಮಾರ್ಟ್ ಟಿವಿಗೆ ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಸ್ಮಾರ್ಟ್ ಟಿವಿಗಳನ್ನು (Smart TV) ಇನ್ನೂ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ಹೌದು, ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಬಿಗ್ ಸೇವಿಂಗ್ ಡೇಸ್ ಸೇಲ್ (Flipkart Big Saving Days Sale) ಆಯೋಜಿಸಲಾಗಿದೆ. ಈ ಮಾರಾಟದಲ್ಲಿ ಥಾಮ್ಸನ್ ಟಿವಿಗಳ (Thomson Smart TV) ಖರೀದಿ ಮೇಲೆ ಭಾರೀ ರಿಯಾಯಿತಿ ನೀಡಲಾಗಿದೆ. ನೀವು, ಜಸ್ಟ್ 5,999 ರೂ.ಗೆ 24 ಇಂಚಿನ ಟಿವಿಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಹೌದು, ಈ ಸೇಲ್‌ನಲ್ಲಿ 24 ಇಂಚಿನ ಸ್ಮಾರ್ಟ್ ಟಿವಿ 5,999 ರೂ.ಗೆ ಲಭ್ಯವಿದೆ. 32 ಇಂಚಿನ ಟಿವಿ 7,999 ರೂ.ಗೆ ಮತ್ತು 43 ಇಂಚಿನ ಟಿವಿ ಕೇವಲ 14,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಫ್ಲಿಪ್‌ಕಾರ್ಟ್ ಮಾರಾಟವನ್ನು ಸೀಮಿತ ಅವಧಿಗೆ ಮಾತ್ರ ಆಯೋಜಿಸಲಾಗಿದೆ. ಇದು ಕೆಲವೇ ದಿನಗಳವರೆಗೆ ಇರುತ್ತದೆ. ನೀವು ಹೊಸ ಟಿವಿ ಕೊಳ್ಳಲು ಬಯಸಿದರೆ, ಥಾಮ್ಸನ್ ಸ್ಮಾರ್ಟ್ ಟಿವಿ ಉತ್ತಮ ಆಯ್ಕೆಯಾಗಿದೆ. ಯಾವ ಟಿವಿಯ ಬೆಲೆ ಎಷ್ಟು ಎಂದು ತಿಳಿಯಲು ಮುಂದೆ ಓದಿ.

ಈ ಸ್ಮಾರ್ಟ್ ಟಿವಿಗಳ ಬೆಲೆ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಇಷ್ಟು!
- 24 ಆಲ್ಫಾ001 = 5,999 ರೂ.
- 32ALPHA007BL = 7,999 ರೂ.
- 32PATH0011 = 9,499 ರೂ.
- 32RT1022 = 9,499 ರೂ.
- 40Alpha 009BL = 13,499 ರೂ.
- 40RT1033 = 14,499 ರೂ.
- 42RT1044 = 15,499 ರೂ.
- 43Alpha005BL = 14,999 ರೂ.
- 43RT1055 = 16,499 ರೂ.
- 43TJQ0012 = 18,999 ರೂ.
- 50OPMAXGT9020 = 22,999 ರೂ.
- Q32H1111 = 10,499 ರೂ.
- Q32H1110 = 20,499 ರೂ.
- Q50H1000 = 25,999 ರೂ.
- Q55H1001 = 29,999 ರೂ.
- Q65H1100 = 42,999 ರೂ.
- Q75H1101 = 72,999 ರೂ.
ಥಾಮ್ಸನ್ ಆಂಡ್ರಾಯ್ಡ್ ಟಿವಿ ಸರಣಿ
ಥಾಮ್ಸನ್‌ನ ಆಂಡ್ರಾಯ್ಡ್ ಟಿವಿ ಸರಣಿಯು ಅಲ್ಟ್ರಾ ಹೈ ಡೆಫಿನಿಷನ್ ರೆಸಲ್ಯೂಶನ್ ಮತ್ತು HDR10+ ನೊಂದಿಗೆ ಬರುತ್ತದೆ. ಇದು 40W ಧ್ವನಿ ಉತ್ಪಾದನೆ ಹೊಂದಿದೆ. ಇದು ಡಾಲ್ಬಿ MS 12, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು DTS ಟ್ರೂಸರೌಂಡ್ ಲಭ್ಯವಿದೆ. ಇದು ಗೇಮಿಂಗ್ ಪ್ರಿಯರಿಗೆ ಉತ್ತಮ ಅನುಭವ ನೀಡುತ್ತದೆ. ಈ ಸ್ಮಾರ್ಟ್ ಟಿವಿಗಳು ಆಂಡ್ರಾಯ್ಡ್ 10 ಅನ್ನು ಬೆಂಬಲಿಸುತ್ತವೆ. ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್ ಮತ್ತು ಏರ್‌ಪ್ಲೇ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಈ ಟಿವಿ ರಿಮೋಟ್‌ನಲ್ಲಿ ಗೂಗಲ್ ಅಸಿಸ್ಟೆಂಟ್‌ಗಾಗಿ ಶಾರ್ಟ್‌ಕಟ್ ನೀಡಲಾಗಿದೆ. ಇದು ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಗೂಗಲ್ ಪ್ಲೇಗೆ ನೇರ ಪ್ರವೇಶದ ಆಯ್ಕೆಯನ್ನು ಹೊಂದಿದೆ.
ಥಾಮ್ಸನ್ FA ಟಿವಿ
ಥಾಮ್ಸನ್ FA ಟಿವಿ ಟಿವಿಗಳು ರಿಯಲ್‌ಟೆಕ್ ಪ್ರೊಸೆಸರ್ ಹೊಂದಿವೆ. ಇವು ಆಂಡ್ರಾಯ್ಡ್ 11 ಓಎಸ್‌ನೊಂದಿಗೆ ಕೆಲಸ ನಿರ್ವಹಿಸುತ್ತವೆ. ಈ ಟಿವಿಗಳು ಬೆಜೆಲ್ ಲೆಸ್ ವಿನ್ಯಾಸ, 30W ಸ್ಪೀಕರ್‌ಗಳು, ಡಾಲ್ಬಿ ಡಿಜಿಟಲ್ ಮತ್ತು ಅಂತರ್ನಿರ್ಮಿತ ನೆಟ್‌ಫ್ಲಿಕ್ಸ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಈ ಟಿವಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಆಪಲ್ ಟಿವಿ, ವೂಟ್, Zee5, ಸೋನಿ LIV ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ 500,000 ಟಿವಿ ಕಾರ್ಯಕ್ರಮಗಳು ಸೇರಿದಂತೆ 6,000ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳನ್ನು ಬೆಂಬಲಿಸುತ್ತದೆ.
ಇದರೊಂದಿಗೆ ಥಾಮ್ಸನ್ ಗೂಗಲ್ ಟಿವಿ, ಥಾಮ್ಸನ್ ಕ್ಯೂಎಲ್ಇಡಿ ಟಿವಿ ಸಹ ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಥಾಮ್ಸನ್ ಕ್ಯೂಎಲ್ಇಡಿ ಟಿವಿಗಳು ಸಂಪೂರ್ಣವಾಗಿ ಫ್ರೇಮ್‌ಲೆಸ್ ವಿನ್ಯಾಸದಲ್ಲಿ ಬರುತ್ತವೆ.


Click it and Unblock the Notifications








