ಭಾರೀ ಡಿಸ್ಕೌಂಟ್‌ನಲ್ಲಿ ಹೈ ಎಂಡ್ ಕ್ಯಾಮೆರಾ ಫೋನ್ ಖರೀದಿಗೆ ಇದುವೇ ಬೆಸ್ಟ್ ಚಾನ್ಸ್!
ಲೀಡಿಂಗ್ ಮೊಬೈಲ್ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವ ಶಿಯೋಮಿಯ ಕೆಲವು ಮೊಬೈಲ್ ಹೈ ಎಂಡ್ ಫೀಚರ್ಸ್‌ಗಳ ಮೂಲಕ ಖರೀದಿದಾರರ ಗಮನ ಸೆಳದಿವೆ. ಅಂತಹ ಫೋನ್‌ಗಳ ಸಾಲಿನಲ್ಲಿ ಕಾಣಿಸಿಕೊಂಡಿರುವ ಶಿಯೋಮಿ 14 CIVI (Xiaomi 14 CIVI) ಫೋನ್ ಅತ್ಯುತ್ತಮ ಕ್ಯಾಮೆರಾ ಹಾಗೂ ಬಲು ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಸದ್ಯ ಈ ಮೊಬೈಲ್ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಸಖತ್ ಇಳಿಕೆಯ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಖರೀದಿದಾರರು ವಾವ್ ಎನ್ನುವಂತೆ ಆಗಿದೆ.
ಹೌದು, ಇ ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಶಿಯೋಮಿ 14 CIVI (Xiaomi 14 CIVI) ಸ್ಮಾರ್ಟ್‌ಫೋನ್ ಶೇ. 25% ರಷ್ಟು ನೇರ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ನ 8GB RAM + 256GB ವೇರಿಯಂಟ್ 40,999ರೂ. ಗಳ ಆಫರ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಗ್ರಾಹಕರು ಇನ್ನಷ್ಟು ರಿಯಾಯಿತಿ ಪಡೆಯಲು ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು.

ಅಂದಹಾಗೆ ಶಿಯೋಮಿ 14 CIVI ಫೋನ್ 8GB + 256GB ಮತ್ತು 12GB + 512GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್ ಆಯ್ಕೆ ಪಡೆದಿದೆ. ಈ ಮೊಬೈಲ್ 4,700mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಸಹ ಪಡೆದುಕೊಂಡಿದೆ. ಅಮೆಜಾನ್ ತಾಣದಲ್ಲಿ Xiaomi 14 CIVI ಫೋನ್ ಅನ್ನು ಭಾರೀ ಡಿಸ್ಕೌಂಟ್‌ನಲ್ಲಿ ಖರೀದಿ ಮಾಡಬಹುದು. ಇನ್ನುಳಿದಂತೆ ಶಿಯೋಮಿ 14 CIVI ಫೋನಿನ ಇತರೆ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಹೇಗಿದೆ
ಶಿಯೋಮಿ 14 CIVI ಮೊಬೈಲ್ 6.55 ಇಂಚಿನ 1.5K ಕರ್ವ್ಡ್ AMOLED ಡಿಸ್‌ಪ್ಲೇ ಸೌಲಭ್ಯ ಇದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಹಾಗೂ 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಸೌಲಭ್ಯ ಇದೆ. ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು 446ppi ಪಿಕ್ಸೆಲ್ ಸಾಂದ್ರತೆ ಮತ್ತು 3,000 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಅಲ್ಲದೇ ಇದು HDR10+, ಡಾಲ್ಬಿ ವಿಷನ್ ಅನ್ನು ಸಪೋರ್ಟ್ ಮಾಡುತ್ತದೆ ಅಲ್ಲದೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಒಳಗೊಂಡಿದೆ.
ಪ್ರೊಸೆಸರ್ ಬಲ ಯಾವುದು
ಶಿಯೋಮಿ 14 CIVI ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8s ಜೆನ್ 3 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು 8GB + 256GB ಮತ್ತು 12GB + 512GB ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯಂಟ್ ಆಯ್ಕೆಯನ್ನು ಒಳಗೊಂಡಿದೆ.
ಡ್ಯುಯಲ್ ಕ್ಯಾಮೆರಾ ಧಮಾಕಾ
ಶಿಯೋಮಿ 14 CIVI ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದ್ದು, ಇದರೊಂದಿಗೆ ತೃತೀಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್ ಆಯ್ಕೆ ಅನ್ನು ಪಡೆದಿದೆ. ಇದರೊಂದಿಗೆ ಮುಂಭಾಗದಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 32 ಮೆಗಾಪಿಕ್ಸಲ್ ಹಾಗೂ 32 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿವೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ
ಶಿಯೋಮಿ 14 CIVI ಮೊಬೈಲ್ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 67W ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಇದು ಬ್ಯಾಟರಿ ಚಾರ್ಜ್ ಮಾಡಿದ 30 ನಿಮಿಷಗಳಲ್ಲಿ 80 ಪ್ರತಿಶತದಷ್ಟು ಚಾರ್ಜ್ ಅನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ5G, Wi-Fi 6, NFC, ಬ್ಲೂಟೂತ್ 5.4, GPS, ಗೆಲಿಲಿಯೋ, ಗ್ಲೋನಾಸ್, Beidou, NFC, ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ.


Click it and Unblock the Notifications