ಜಬರ್ದಸ್ತ್ ಫೀಚರ್ಸ್ ಇರುವ ಈ ಫೋನಿನ ಬೆಲೆಯಲ್ಲಿ ಇಷ್ಟೊಂದು ಇಳಿಕೆಯೇ?..OMG ಅಂತೀರಾ!
ಪ್ರಮುಖ ಮೊಬೈಲ್ ಸಂಸ್ಥೆಯ ಎನಿಸಿರುವ ಹಾನರ್ (HONOR) ಮೊಬೈಲ್ ಬ್ರ್ಯಾಂಡ್‌ನ ಕೆಲವು ಫೋನ್‌ಗಳು ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಆ ಪೈಕಿ ಸಂಸ್ಥೆಯ ಇತ್ತೀಚಿನ ಮೊಬೈಲ್‌ಗಳು ಕ್ಯಾಮೆರಾ ಆಯ್ಕೆ ಹಾಗೂ ಅಪ್‌ಡೇಟ್ ಪ್ರೊಸೆಸರ್ ಮೂಲಕ ಹೆಚ್ಚಿನ ಗಮನ ಸೆಳದಿವೆ. ಸದ್ಯ ಹಾನರ್ 200 ಲೈಟ್ 5G (HONOR 200 Lite 5G) ಮೊಬೈಲ್ ದೈತ್ಯ ಇ ಕಾಮರ್ಸ್ ವೆಬ್‌ಸೈಟ್ ಅಮೆಜಾನ್‌ನಲ್ಲಿ ಗಮನಾರ್ಹ ಡಿಸ್ಕೌಂಟ್ ದರದಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ವಾವ್ ಎನ್ನುವಂತೆ ಮಾಡಿದೆ.
ಹೌದು, ಅಮೆಜಾನ್ ವೆಬ್‌ಸೈಟ್‌ನಲ್ಲಿ ಹಾನರ್ 200 ಲೈಟ್ 5G (HONOR 200 Lite 5G) ಮೊಬೈಲ್ ಶೇ. 20% ರಷ್ಟು ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಈ ಮೊಬೈಲ್‌ನ 8GB+256GB ವೇರಿಯಂಟ್ ಅನ್ನು ಗ್ರಾಹಕರು 19,998ರೂ. ಗಳ ಆಫರ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಗ್ರಾಹಕರು ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಂಡರೆ, ಮತ್ತಷ್ಟು ಡಿಸ್ಕೌಂಟ್ ಪಡೆಯುವ ಅವಕಾಶ ಸಿಗಲಿದೆ.

ಅಂದಹಾಗೆ ಹಾನರ್ 200 ಲೈಟ್ 5G ಮೊಬೈಲ್ 108 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮರಾ ಸೌಲಭ್ಯ ಪಡೆದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಆಕ್ಟಾ-ಕೋರ್ ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಆಸಕ್ತ ಖರೀದಿದಾರರು HONOR 200 Lite 5G ಅನ್ನು ಅಮೆಜಾನ್‌ನಲ್ಲಿ ಭಾರೀ ಡಿಸ್ಕೌಂಟ್ ಬೆಲೆಗೆ ಖರೀದಿಸಬಹುದು. ಹಾಗಾದರೇ ಹಾನರ್ 200 ಲೈಟ್ 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮಾಹಿತಿ
ಹಾನರ್ 200 ಲೈಟ್ 5G ಮೊಬೈಲ್ 6.7 ಇಂಚಿನ FHD+ AMOLED ಡಿಸ್‌ಪ್ಲೇ ಒಳಗೊಂಡಿದ್ದು, ಇದು 2412 x 1080 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ 3240Hz PWM ಮಬ್ಬಾಗಿಸುವಿಕೆ, 2000 ನಿಟ್ಸ್ ಪೀಕ್ ಬ್ರೈಟ್ನೆಸ್ ಪಡೆದಿದೆ. ಇದರೊಂದಿಗೆ ಈ ಡಿಸ್‌ಪ್ಲೇಯು 93.7% ಸ್ಕ್ರೀನ್-ಟು-ಬಾಡಿ ಅನುಪಾತ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ ಏನು?
ಹಾನರ್ 200 ಲೈಟ್ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಆಕ್ಟಾ-ಕೋರ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಪಡೆದುಕೊಂಡಿದೆ. ಅಲ್ಲದೇ ಇದು 8GB + 256GB ವೇರಿಯಂಟ್ ಆಯ್ಕೆ ಪಡೆದಿದ್ದು, ಇದರೊಂದಿಗೆ 8GB HONOR RAM Turbo ಸೌಲಭ್ಯ ಸಹ ಪಡೆದುಕೊಂಡಿದೆ.
ಕ್ಯಾಮೆರಾ ಸೆನ್ಸಾರ್ ಸಾಮರ್ಥ್ಯ
ಹಾನರ್ 200 ಲೈಟ್ 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಆಯತಾಕಾರದ ಮಾಡ್ಯೂಲ್‌ನಲ್ಲಿ ಇರಿಸಲಾಗಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಅಲ್ಲದೇ ಸೆಕೆಂಡರಿ ಕ್ಯಾಮೆರಾವು 5MP ಅಲ್ಟ್ರಾವೈಡ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾವು 2MP ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದು 50 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.
ಬ್ಯಾಟರಿ ಬ್ಯಾಕ್‌ಅಪ್ ಪವರ್
ಹಾನರ್ 200 ಲೈಟ್ 5G ಮೊಬೈಲ್ 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಇದು ವೈ-ಫೈ 5, ಬ್ಲೂಟೂತ್ 5.1, ಡ್ಯುಯಲ್ ನ್ಯಾನೋ ಸಿಮ್, ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳಂತಹ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications








