ಮ್ಯಾಕ್‌ಬುಕ್ ಪ್ರೊ (2023) ಮಾಡೆಲ್‌ಗಳ ಮೇಲೆ 18,310 ರೂ. ವರೆಗೆ ರಿಯಾಯಿತಿ!
ದುಬಾರಿ ಬೆಲೆ ಹೊಂದಿರುವ ಹಾಗೂ ಅತ್ಯಾಕರ್ಷಕ ಫೀಚರ್ಸ್ ಆಯ್ಕೆ ಪಡೆದಿರುವ ಮ್ಯಾಕ್‌ಬುಕ್ ಪ್ರೊ (2023) (MacBook Pro 2023)ಅನ್ನು ನೀವು ಇದೀಗ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ ಕೆಲವು ಮ್ಯಾಕ್‌ಬುಕ್ ಪ್ರೊ ಮಾಡೆಲ್‌ಗಳು ವಿಜಯ್ ಸೇಲ್ಸ್‌ನಲ್ಲಿ (Vijay Sales) ಕಡಿಮೆ ಬೆಲೆಗೆ ಲಭ್ಯ ಆಗುತ್ತಿದ್ದು, ವೆಬ್‌ಸೈಟ್ ಆಪಲ್ ಡಿವೈಸ್‌ಗಳ ಮೇಲೆ 18,310 ರೂ. ವರೆಗೆ ಬೃಹತ್ ರಿಯಾಯಿತಿಗಳನ್ನು ನೀಡುತ್ತಿದೆ. ಈ ವಿಭಾಗದಲ್ಲಿ M3 ಚಿಪ್‌ನೊಂದಿಗೆ 14 ಇಂಚಿನ ಮ್ಯಾಕ್‌ಬುಕ್ ಪ್ರೊ ಅನ್ನು ಖರೀದಿ ಮಾಡಬಹುದಾಗಿದ್ದು, M3 ಪ್ರೊ ಮತ್ತು 14 ಕೋರ್ ಜಿಪಿಯು ಜೊತೆಗೆ ಮ್ಯಾಕ್‌ಬುಕ್ ಪ್ರೊ ಮಾದರಿಯು ಕಡಿಮೆ ಬೆಲೆಗೆ ಮಾರಾಟದಲ್ಲಿದೆ.
ಹೌದು, 2023 ರ ಕೊನೆಯಲ್ಲಿ ಲಾಂಚ್ ಆಗಿರುವ ಆಪಲ್‌ನ ಉನ್ನತ-ಮಟ್ಟದ ಮ್ಯಾಕ್‌ಬುಕ್ ಪ್ರೊ ಮಾದರಿಗಳನ್ನು ಖರೀದಿಸಲು ನೀವು ಏನಾದರೂ ಖರೀದಿ ಮಾಡಲು ಮುಂದಾಗಿದ್ದರೆ ಇದು ಉತ್ತಮ ಸಮಯ. ಕೆಲವು ಮ್ಯಾಕ್‌ಬುಕ್ ಪ್ರೊ ಮಾಡೆಲ್‌ಗಳು ವಿಜಯ್ ಸೇಲ್ಸ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ವೆಬ್‌ಸೈಟ್ ಆಪಲ್ ಲ್ಯಾಪ್‌ಟಾಪ್‌ಗಳ ಮೇಲೆ 18,310 ರೂ. ವರೆಗೆ ಬೃಹತ್ ರಿಯಾಯಿತಿಗಳನ್ನು ನೀಡುತ್ತಿದೆ. ಹಾಗಿದ್ರೆ, ಆಫರ್ ಬೆಲೆ ವಿವರ ಹಾಗೂ ಇದರ ಕೆಲವು ಫೀಚರ್ಸ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮ್ಯಾಕ್‌ಬುಕ್ ಪ್ರೊ (2023) ಮಾಡೆಲ್‌ಗೆ ಆಫರ್: ಆಪಲ್‌ನ 14 ಇಂಚಿನ ಮ್ಯಾಕ್‌ಬುಕ್ ಪ್ರೊ M3 ಮಾದರಿಯು 10 ಕೋರ್ ಜಿಪಿಯು ಮತ್ತು 512GB ಸ್ಟೋರೇಜ್ ಆಯ್ಕೆಯೊಂದಿಗೆ ವಿಜಯ್ ಸೇಲ್ಸ್‌ನಲ್ಲಿ ಲಭ್ಯ ಇದೆ. ಇದನ್ನು 1,58,990 ರೂ.ಗೆ ಪಟ್ಟಿಮಾಡಲಾಗಿದೆ. ಇದು ಅದರ ಮೂಲ ಉಡಾವಣಾ ಬೆಲೆ 1,69,900 ರೂ. ಕ್ಕಿಂತ ಕಡಿಮೆಯಾಗಿದೆ. ಈ ಮೂಲಕ 10,910 ರೂ.ಗಳ ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇದರ ಜೊತೆಗೆ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 5,000 ರೂ.ಗಳ ರಿಯಾಯಿತಿ ಕೊಡುಗೆಯೂ ಇದೆ. ಇದು ಬೆಲೆಯನ್ನು 1,53,990 ರೂ.ಗೆ ಇಳಿಸುತ್ತದೆ. ಆದ್ದರಿಂದ, ಒಟ್ಟು ರಿಯಾಯಿತಿ ಕೊಡುಗೆ (ಬ್ಯಾಂಕ್ ಕೊಡುಗೆಯೊಂದಿಗೆ) 15,910 ರೂ. ಗಳನ್ನು ಪಡೆಯಬಹುದಾಗಿದೆ. ಗರಿಷ್ಠ ರಿಯಾಯಿತಿಯು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳಲ್ಲಿ ಮಾತ್ರ ಲಭ್ಯವಿದೆ.
ಇನ್ನು M3 ಪ್ರೊ ಚಿಪ್ ಮತ್ತು 14 ಕೋರ್ ಜಿಪಿಯು ಜೊತೆಗೆ 14 ಇಂಚಿನ ಮ್ಯಾಕ್‌ಬುಕ್ ಪ್ರೊ ಅನ್ನು ಖರೀದಿಸಲು ಬಯಸುವ ಜನರು ಅದನ್ನು ರಿಯಾಯಿತಿ ದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಈ ಮ್ಯಾಕ್‌ಬುಕ್ ಪ್ರೊ ಅನ್ನು ಕಡಿಮೆ ಬೆಲೆಗೆ ಖರೀದಿಸಲು ಗ್ರಾಹಕರು ವಿಜಯ್ ಸೇಲ್ಸ್‌ನಲ್ಲಿ 1,86,590 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. 512GB ಸ್ಟೋರೇಜ್ ವೇರಿಯಂಟ್ ಆಯ್ಕೆಯ ಈ ಡಿವೈಸ್ ಭಾರತದಲ್ಲಿ 1,99,900 ರೂ.ಗೆ ಲಾಂಚ್ ಆಗಿತ್ತು. ಆದರೆ ಈಗ ನೀವು ಈ ಡಿವೈಸ್‌ನಲ್ಲಿ 13,310 ರೂ.ಗಳ ಆಫರ್ ಪಡೆಯಬಹುದಾಗಿದೆ.

ಹೆಚ್ಚುವರಿಯಾಗಿ, ಮೇಲೆ ತಿಳಿಸಿದ ಐಸಿಐಸಿಐ ಬ್ಯಾಂಕ್ ಸಹ ಇಲ್ಲಿ ಅನ್ವಯಿಸುತ್ತದೆ. ಅಂದರೆ ಗ್ರಾಹಕರು ಈ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 5,000 ರೂ. ಗಳ ಆಫರ್ ಪಡೆಯಬಹುದಾಗಿದೆ. ಇದು ಪರಿಣಾಮಕಾರಿಯಾಗಿ 1,81,590 ರೂ.ಗೆ ಬೆಲೆಯನ್ನು ಕಡಿಮೆ ಮಾಡುತ್ತದೆ. ನಾವು ಫ್ಲಾಟ್ ಡಿಸ್ಕೌಂಟ್ ಮತ್ತು ಬ್ಯಾಂಕ್ ಆಫರ್‌ಗಳೆರಡನ್ನೂ ಎಣಿಸಿದರೆ, ಇದು ಒಟ್ಟು 18,310 ರೂ.ಗಳನ್ನು ಉಳಿತಾಯ ಮಾಡಿದಂತೆ ಆಗಲಿದೆ.
ದೈನಂದಿನ ಕಾರ್ಯಗಳಿಗಾಗಿ ನೀವು ಮೂಲಭೂತ ಮ್ಯಾಕ್‌ಬುಕ್ ಪ್ರೊ ಅನ್ನು ಹುಡುಕುತ್ತಿದ್ದರೆ, M3 ಉತ್ತಮ ಆಯ್ಕೆಯಾಗಿದೆ. ಆದಾಗ್ಯೂ, ವಿಡಿಯೋ ಎಡಿಟಿಂಗ್, ಫೋಟೋ ಎಡಿಟಿಂಗ್ ಅಥವಾ ಪ್ರೋಗ್ರಾಮಿಂಗ್‌ನಂತಹ ಕಾರ್ಯಗಳಿಗಾಗಿ ನಿಮಗೆ ಹೆಚ್ಚಿನ ಶಕ್ತಿಯ ಅಗತ್ಯವಿದ್ದರೆ, ನೀವು M3 ಪ್ರೊ ಅಥವಾ M3 ಮ್ಯಾಕ್ಸ್-ಚಾಲಿತ ಆಪಲ್ ಲ್ಯಾಪ್‌ಟಾಪ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
M3 ಚಿಪ್‌ನೊಂದಿಗೆ 14 ಇಂಚಿನ ಮ್ಯಾಕ್‌ಬುಕ್ ಪ್ರೊ 22 ಗಂಟೆಗಳವರೆಗೆ ಪ್ರಭಾವಶಾಲಿ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದ್ದು, M3 Pro ಮತ್ತು M3 ಮ್ಯಾಕ್ಸ್ ಮಾದರಿಗಳು 18 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿವೆ. ಈ ಲ್ಯಾಪ್‌ಟಾಪ್‌ಗಳು ವೈ ಫೈ 6E, ಬ್ಲೂಟೂತ್ 5.3, ಥಂಡರ್‌ಬೋಲ್ಡ್ 4/ಯುಎಸ್‌ಬಿ 4 ಪೋರ್ಟ್‌ಗಳು, ಮ್ಯಾಗ್‌ಸೇಫ್ 3 ಚಾರ್ಜಿಂಗ್, ಎಸ್‌ಡಿಎಕ್ಸ್‌ಸಿ ಕಾರ್ಡ್ ರೀಡರ್ ಮತ್ತು ಹೆಚ್‌ಡಿಎಮ್‌ಐ ಕನೆಕ್ಟಿವಿಟಿ ಫೀಚರ್ಸ್ ಹೊಂದಿದ್ದು, ಹೆಚ್ಚುವರಿಯಾಗಿ 3.5mm ಆಡಿಯೊ ಜಾಕ್ ಅನ್ನು ಸಹ ಈ ಡಿವೈಸ್‌ನಲ್ಲಿ ಕಾಣಬಹುದಾಗಿದೆ.


Click it and Unblock the Notifications








