SmartTVs: 65 ಇಂಚಿನ QLED ಸ್ಮಾರ್ಟ್‌ಟಿವಿಗಳಿಗೆ ಇಲ್ಲಿ 57% ವರೆಗೂ ರಿಯಾಯಿತಿ! ಮಿಸ್ ಮಾಡಿಕೊಳ್ಳಬೇಡಿ
ಸ್ಮಾರ್ಟ್‌ಟಿವಿಗಳು (SmartTVs) ಇಂದು ವೀಕ್ಷಕರಿಗೆ ವಿಶೇಷವಾದ ಅನುಭವ ನೀಡುವಲ್ಲಿ ಯಶಸ್ವಿಯಾಗುತ್ತಿವೆ. ಈ ಟಿವಿಗಳಲ್ಲಿರುವ ಫೀಚರ್ಸ್ ಹೊಸ ಹೊಸ ಬಳಕೆದಾರರನ್ನು ಸೆಳೆಯುತ್ತಲೇ ಇರುತ್ತವೆ. ಈ ನಡುವೆ ಅಮೆಜಾನ್ 65 ಇಂಚಿನ QLED ಸ್ಮಾರ್ಟ್‌ಟಿವಿಗಳಿಗೆ ( 65 inch QLED SmartTVs) ಭರ್ಜರಿ ಆಫರ್ ಘೋಷಣೆ ಮಾಡಿದೆ.
ಹೌದು, ಅರ್ಧ ಬೆಲೆಗಿಂತಲೂ ಕಡಿಮೆ ದರದಲ್ಲಿ ಸ್ಮಾರ್ಟ್‌ಟಿವಿ ಲಭ್ಯವಾಗುತ್ತವೆ ಅದರಲ್ಲೂ QLED ಟಿವಿಗಳು ಲಭ್ಯ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ಅಮೆಜಾನ್ (Amazon) ವಿಶೇಷ ಅಫರ್ ಘೋಷಣೆ ಮಾಡಿದ್ದು, ಈ ಸೇಲ್‌ನಲ್ಲಿ ಒನ್‌ಪ್ಲಸ್, ಹೈಸೆನ್ಸ್, ಟಿಸಿಎಲ್ (OnePlus, Hisense, TCL) ಸೇರಿದಂತೆ ಪ್ರಮುಖ ಕಂಪೆನಿಯ ಟಿವಿಗಳು ಅಗ್ಗದ ದರದಲ್ಲಿ ಲಭ್ಯ ಇವೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳಿಗೆ ಎಷ್ಟು ಆಫರ್ ಇದೆ ಅನ್ನೋದನ್ನು ಗಮನಿಸೋಣ.

ತೋಷಿಬಾ 65 ಇಂಚಿನ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ QLED ಗೂಗಲ್ ಟಿವಿ: ಈ ಸ್ಮಾರ್ಟ್‌ಟಿವಿ ಅಮೆಜಾನ್‌ನಲ್ಲಿ 43% ರಿಯಾಯಿತಿ ಪಡೆದುಕೊಂಡಿದೆ. ಅಂದರೆ ಇದನ್ನು ನೀವು 56,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅದರಂತೆ ಈ ಸ್ಮಾರ್ಟ್‌ಟಿವಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಯವಾದ ಬ್ಲ್ಯಾಕ್ ವಿನ್ಯಾಸದೊಂದಿಗೆ ಆಕರ್ಷಕವಾಗಿದೆ. ಅಲ್ಲದೆ ಬೆರಗುಗೊಳಿಸುವ ದೃಶ್ಯಗಳು ಅಂದರೆ 4K ಅಲ್ಟ್ರಾ HD ಯೊಂದಿಗೆ ಬರಲಿದ್ದು, ಡಾಲ್ಬಿ ಅಟ್ಮಾಸ್ ಅದ್ಭುತವಾದ ಮನರಂಜನೆ ಮತ್ತು ಗೇಮಿಂಗ್ ಅನುಭವವನ್ನು ನೀಡುತ್ತದೆ.
ಟಿಸಿಎಲ್ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ QLED ಗೂಗಲ್ ಟಿವಿ: ಈ ಸ್ಮಾರ್ಟ್‌ಟಿವಿಗೆ ಅತೀ ಹೆಚ್ಚಿನ ಡಿಸ್ಕೌಂಟ್‌ದ ನೀಡಲಾಗಿದೆ. ಅಂದರೆ 57% ರಿಯಾಯಿತಿಯೊಂದಿಗೆ ನೀವು 71,990 ರೂ.ಗಳ ದರದಲ್ಲಿ ಖರೀದಿ ಮಾಡಬಹುದು. ಈ ಸ್ಮಾರ್ಟ್‌ಟಿವಿ ಡಾಲ್ಬಿ ಅಟ್ಮಾಸ್ ಆಡಿಯೋ ಜೊತೆಗೆ ನಿಮಗೆ ಮನೆಯಲ್ಲಿಯೇ ಥಿಯೇಟರ್ ತರಹದ ಅನುಭವವನ್ನು ನೀಡುತ್ತದೆ. ಜೊತೆಗೆ ಇದು ತುಂಬಾ ಹಗುರವಾಗಿದ್ದು , ನಿಮ್ಮ ಮನೆಯಲ್ಲಿನ ಯಾವುದೇ ಸ್ಥಳದಲ್ಲೂ ಇರಿಸಬಹುದಾಗಿದೆ.

ಒನ್‌ಪ್ಲಸ್ Q ಸರಣಿ 4K ಅಲ್ಟ್ರಾ ಹೆಚ್‌ಡಿ QLED ಸ್ಮಾರ್ಟ್ ಗೂಗಲ್‌ಟಿವಿ: ಈ ಸ್ಮಾರ್ಟ್‌ಟಿವಿ 50% ರಿಯಾಯಿತಿಯೊಂದಿಗೆ ನಿಮಗೆ 79,999ರೂ.ಗಳ ಬೆಲೆಗೆ ಲಭ್ಯ ಇದೆ. ಇದು 65 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ನಿಮ್ಮ ಲಿವಿಂಗ್ ರೂಮ್‌ಗೆ ಉತ್ತಮವಾಗಿ ಹೊಂದಿಕೊಳ್ಳಲಿದೆ. ಜೊತೆಗೆ ಬಳಕೆದಾರರಿಗೆ ವಾಯ್ಸ್ ಕಂಟ್ರೋಲ್ ಹಾಗೂ ವಾಯ್ಸ್ ಅಸಿಸ್ಟೆಂಟ್ ನಂತಹ ಸೌಲಭ್ಯಗಳನ್ನು ನೀಡಲಿದ್ದು, ಗೂಗಲ್ ಟಿವಿ ಮತ್ತು ವೈಡ್ ಕಲರ್ ಗ್ಯಾಮಟ್‌ನಂತಹ ಅತ್ಯುತ್ತಮ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ.
ಏಸರ್ W ಸರಣಿ 4K ಅಲ್ಟ್ರಾ ಹೆಚ್‌ಡಿ QLED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: ಈ ಸ್ಮಾರ್ಟ್‌ಟಿವಿ ನಿಮಗೆ 53% ರಿಯಾಯಿತಿ ದರದಲ್ಲಿ ಲಭ್ಯ ಇದೆ. ಅಂದರೆ ಇದರ ಆಫರ್ ದರ 69,999 ರೂ.ಗಳಾಗಿದೆ. ಈ ಸ್ಮಾರ್ಟ್‌ಟಿವಿ 4K ರೆಸಲ್ಯೂಶನ್ ಅಲ್ಟ್ರಾ ಹೆಚ್‌ಡಿ, 60Hz ನ ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 178-ಡಿಗ್ರಿ ವೀಕ್ಷಣಾ ಕೋನದೊಂದಿಗೆ ಕಾಣಿಸಿಕೊಂಡಿದ್ದು, 30 ವ್ಯಾಟ್ ಡಾಲ್ಬಿ ಅಟ್ಮಾಸ್‌ನೊಂದಿಗೆ ಅದ್ಭುತ ಗೇಮಿಂಗ್ ಅಥವಾ ಮನರಂಜನಾ ಅನುಭವವನ್ನು ನೀಡಲಿದೆ.

ಹೈಸೆನ್ಸ್ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ QLED ಟಿವಿ: ಈ ಸ್ಮಾರ್ಟ್‌ಟಿವಿಗೆ ಅಮೆಜಾನ್ 44% ರಿಯಾಯಿತಿ ಘೋಷಣೆ ಮಾಡಿದೆ. ಅಂದರೆ ನೀವು ಇದನ್ನು 49,990ರೂ.ಗಳಿಗೆ ಖರೀದಿ ಮಾಡಬಹುದು. ಈ ಟಿವಿ 60HZ ನ ರಿಫ್ರೆಶ್ ದರದೊಂದಿಗೆ 4K ಅಲ್ಟ್ರಾ ಹೆಚ್‌ಡಿ ರೆಸಲ್ಯೂಶನ್ ಸಾಮರ್ಥ್ಯದ ಡಿಸ್ಪ್ಲೇ ಆಯ್ಕೆ ಪಡೆದಿದ್ದು, ಮನರಂಜನಾ ಪ್ರಿಯರಿಗೆ ಬೆರಗುಗೊಳಿಸುವ ಆಯ್ಕೆಯಾಗಿದೆ. ಜೊತೆಗೆ ಡಾಲ್ಬಿ ಆಡಿಯೊ ಗುಣಮಟ್ಟದೊಂದಿಗೆ ಉತ್ತಮ ಸೌಂಡ್ ಅನುಭವವನ್ನೂ ಸಹ ಪಡೆಯಬಹುದಾಗಿದೆ.


Click it and Unblock the Notifications








