Home
Deal of the day

ಅಗ್ಗದ ಬೆಲೆಯಲ್ಲಿ ಹೊಸ 5G ಫೋನ್‌ ಖರೀದಿಗೆ ಇದು ಬೆಸ್ಟ್‌ ಆಫರ್‌!..ಉಳಿತಾಯ ಖಚಿತ!

ಅಗ್ಗದ ಬೆಲೆಯಲ್ಲಿ ನೂತನ 5G ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲ್ಯಾನ್‌ ಮಾಡಿದ್ದಿರಾ? ಅಗ್ಗದ ದರದಲ್ಲಿ ಹಲವು ಕಂಪನಿಗಳು 5G ಫೋನ್‌ ಪರಿಚಯಿಸಿವೆ, ಅವುಗಳ ಪೈಕಿ ಸ್ವದೇಶಿ ಬ್ರ್ಯಾಂಡ್‌ ಆಗಿರುವ ಲಾವಾ ಸಂಸ್ಥೆಯ ಇತ್ತೀಚಿನ ಕೆಲವು ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಅವುಗಳಲ್ಲಿ ಲಾವಾ ಸ್ಟಾರ್ಮ್‌ 5G ( Lava Storm 5G ) ಸ್ಮಾರ್ಟ್‌ಫೋನ್‌ ಕೂಡಾ ಒಂದಾಗಿದೆ. ಸದ್ಯ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಈ ಫೋನ್‌ ಬೆಲೆಯಲ್ಲಿ ಭರ್ಜರಿ ರಿಯಾಯಿತಿ ಲಭ್ಯ ಇದೆ. ಹೀಗಾಗಿ ಲಾವಾ ಫೋನ್‌ ಖರೀದಿಗೆ ಇದು ಸಕಾಲ.

ಹೌದು, ಲಾವಾ ಸಂಸ್ಥೆಯ ಲಾವಾ ಸ್ಟಾರ್ಮ್‌ 5G ( Lava Storm 5G ) ಮೊಬೈಲ್‌ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಶೇ. 20% ರಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಬಹುದಾಗಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ 11,999ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಆಫರ್‌ ಸಹ ಪಡೆಯಬಹುದಾಗಿದೆ.

ಅಗ್ಗದ ಬೆಲೆಯಲ್ಲಿ ಹೊಸ 5G ಫೋನ್‌ ಖರೀದಿಗೆ ಇದು ಬೆಸ್ಟ್‌ ಆಫರ್‌!..ಉಳಿತಾಯ ಖಚಿತ!

ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G35 ಪ್ರೊಸೆಸರ್‌ ಪವರ್‌ ಹೊಂದಿದ್ದು, ಇದರೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಇದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ಲಾವಾ ಸ್ಟಾರ್ಮ್‌ 5G ಮೊಬೈಲ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಲಾವಾ ಸ್ಟಾರ್ಮ್‌ 5G - ಫೀಚರ್ಸ್‌ ಹೀಗಿವೆ

ಲಾವಾ ಸ್ಟಾರ್ಮ್‌ 5G ಮೊಬೈಲ್‌ 6.78 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1080 x 2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಸಪೋರ್ಟ್‌ ಇದ್ದು, 396ppi ಪಿಕ್ಸೆಲ್ ಸಾಂದ್ರತೆ ಬೆಂಬಲಿಸುತ್ತದೆ.

ಲಾವಾ ಸ್ಟಾರ್ಮ್ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ. ಇದು 2.4GHz ನಲ್ಲಿ ಎರಡು ಕಾರ್ಟೆಕ್ಸ್ A76 ಕೋರ್‌ಗಳನ್ನು ಹೊಂದಿದ್ದು, 2.0GHz ನಲ್ಲಿ ಆರು ಕಾರ್ಟೆಕ್ಸ್ A55 ಕೋರ್‌ಗಳು ಮತ್ತು ಮಾಲಿ G57 MP2 GPU ಪಡೆದಿದೆ.

ಹಾಗೆಯೇ ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 13 ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ 8GB RAM ಮತ್ತು 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಆಯ್ಕೆಗಳು ಇವೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶ ಕೂಡಾ ಇದೆ.

ಲಾವಾ ಸ್ಟಾರ್ಮ್ 5G ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸಪೋರ್ಟ್‌ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸಲ್ ಅಲ್ಟ್ರಾವೈಡ್ ಲೆನ್ಸ್ ಜೊತೆಗೆ LED ಫ್ಲ್ಯಾಶ್ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇನ್ನು ಮೊಬೈಲ್ ಹಿಂಭಾಗದಲ್ಲಿ ಎಲ್‌ಇಡಿ ಫ್ಲ್ಯಾಶ್‌ಗಾಗಿ ಪ್ರತ್ಯೇಕ ರಿಂಗ್ ಅನ್ನು ಹೊಂದಿದೆ.

ಲಾವಾ ಸ್ಟಾರ್ಮ್ 5G ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್‌ ಪಡೆದಿದ್ದು, 33W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಒಟಿಜಿ ಸಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ 5.0, ಸಪೋರ್ಟ್‌ ಆಯ್ಕೆ ಇವೆ. ಇನ್ನು ಈ ಫೋನ್ ಲಾವಾ ಥಂಡರ್ ಬ್ಲಾಕ್ ಮತ್ತು ಗೇಲ್ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ದೊರೆಯುತ್ತದೆ.

Best Mobiles in India

English summary
Very attractive discount on Lava Storm 5G on amazon website. Know more about offer price, discounts, amazon price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+