Home
Deal of the day

Vivo: ವಿವೋ T2x 5G ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಆಫರ್: 128 GB ROM.. 50MP ಕ್ಯಾಮೆರಾ

ವಿವೋ ಸ್ಮಾರ್ಟ್‌ಫೋನ್‌ಗಳು (Vivo smartphone) ಭಾರತದಲ್ಲಿ ವಿಶೇಷವಾದ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಬಹುಬೇಡಿಕೆಯ ಫೋನ್‌ ಆಗಿರುವ ವಿವೋ T2x 5G (Vivo T2x 5G) ಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ವಿವೋ T2x 5G ಸ್ಮಾರ್ಟ್‌ಫೋನ್‌ಗೆ ಇದೀಗ ಭಾರೀ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್ ಬೆಲೆ ವಿವರ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಿವೋ T2x 5G ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಆಫರ್: 128 GB ROM.. 50MP ಕ್ಯಾಮೆರಾ

ವಿವೋ T2x 5G ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 18,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವಿಗ ಇದನ್ನು 12,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ 31% ರಿಯಾಯಿತಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ನೀವು ಕೆಲವು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

ಈ ಫೋನ್‌ ಖರೀದಿ ಮಾಡುವಾಗ ನೀವು ಫ್ಲಿಪ್‌ಕಾರ್ಟ್‌ ಯುಪಿಐ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, ಹೆಚ್‌ಡಿಎಪ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ 1000 ರೂ.ಗಳ ರಿಯಾಯಿತಿ, ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ 1000 ರೂ.ಗಳ ರಿಯಾಯಿತಿ ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಬ್ಯಾಂಕ್‌ ಆಫರ್ ಸಹ ಇವೆ. ಹಾಗಿದ್ರೆ, ಈ ಫೋನ್‌ನ ಕೆಲವು ಫೀಚರ್ಸ್‌ ಅನ್ನೂ ಗಮನಿಸೋಣ ಬನ್ನಿ.

ವಿವೋ T2x 5G ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಆಫರ್: 128 GB ROM.. 50MP ಕ್ಯಾಮೆರಾ

ವಿವೋ T2x 5G ಸ್ಮಾರ್ಟ್‌ಫೋನ್‌ ಫೀಚರ್ಸ್: ಈ ಸ್ಮಾರ್ಟ್‌ಫೋನ್ ಅನ್ನು 11ನೇ ಏಪ್ರಿಲ್ 2023 ರಂದು ಲಾಂಚ್‌ ಮಾಡಲಾಗಿದೆ. ಇದು 6.58 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ 4GB, 6GB, 8GB RAM ನೊಂದಿಗೆ ಈ ಫೋನ್‌ ಲಭ್ಯ ಇದೆ. ಹಾಗೆಯೇ ಆಂಡ್ರಾಯ್ಡ್ 13 ಓಎಸ್‌ ಅನ್ನು ಈ ಫೋನ್‌ ರನ್‌ ಮಾಡಲಿದೆ.

ಈ ಫೋನ್‌ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು 50 ಮೆಗಾಪಿಕ್ಸೆಲ್ (f/1.8) ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಈ ಸೆನ್ಸರ್ ಆಟೋಫೋಕಸ್ ಸೌಲಭ್ಯ ಪಡೆದಿವೆ. ಅಲ್ಲದೆ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್‌ 8 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಫೋಟೋಗ್ರಫಿ ಪ್ರಿಯರ ನೆಚ್ಚಿನ ಫೋನ್‌ ಆಗಿದೆ.

ವಿವೋ T2x 5G ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಆಫರ್: 128 GB ROM.. 50MP ಕ್ಯಾಮೆರಾ

ಇದರ ಜೊತೆಗೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ. ಇನ್ನು ಈ ಫೋನ್ ಡ್ಯುಯಲ್-ಸಿಮ್ (GSM ಮತ್ತು GSM) ಮೊಬೈಲ್ ಆಗಿದ್ದು ನ್ಯಾನೊ-ಸಿಮ್ ಮತ್ತು ನ್ಯಾನೊ-ಸಿಮ್ ಕಾರ್ಡ್‌ಗಳನ್ನು ಅನುಮತಿಸುತ್ತದೆ. ವೈ-ಫೈ, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ, 3G, 4G ಮತ್ತು 5G ಕನೆಕ್ಟಿವಿಟಿ ಬೆಂಬಲ ಪಡೆದಿದ್ದು, ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಸಾಮೀಪ್ಯ ಸೆನ್ಸರ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ಪಡೆದಿದೆ. ಈ ಫೋನ್‌ ಅನ್ನು ನೀವು ಅರೋರಾ ಗೋಲ್ಡ್, ಗ್ಲಿಮ್ಮರ್ ಬ್ಲಾಕ್ ಮತ್ತು ಮೆರೈನ್ ಬ್ಲೂ ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Vivo T2x 5G smartphone has just announced a huge offer. The smartphone is powered by a MediaTek Dimensity 6020 processor with 128 GB internal storage option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+