Home
Deal of the day

ಸಸ್ತಾ ಬೆಲೆ! ಯುಗಾದಿಗೂ ಮುನ್ನ.. ಈ Vivo ಫೋನಿನ ಬೆಲೆ ಇಳಿಕೆ.. 2000 ರಿಯಾಯಿತಿ.. ಎಷ್ಟಕ್ಕೆ ಸಿಗುತ್ತೆ?

ವಿವೋ ಬಜೆಟ್‌ ವಿಭಾಗದ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಭಾರತೀಐ ಮಾರುಕಟ್ಟೆಯಲ್ಲಿ ಭಾರೀಬೇಡಿಕೆ ಸಹ ಹೊಂದಿದೆ. ಗ್ರಾಹಕರು ಸಹ ಈ ಫೋನ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಈ ಪೈಕಿ ವಿವೋ T3 ಪ್ರೊ 5G (vivo T3 Pro 5G) ಮೊಬೈಲ್‌ ಸಹ ಒಂದಾಗಿದೆ. ಈ ಫೋನ್‌ ಮೀಡ್‌ರೇಂಜ್‌ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಈ ವಿವೋ 5G ಮೊಬೈಲ್‌ ಬೊಂಬಾಟ್ ಆಫರ್‌ನೊಂದಿಗೆ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ. ನೀವು ಬ್ಯಾಂಕ್ ಕಾರ್ಡ್‌ಗಳೊಂದಿಗೆ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದು. ಈ ಫೋನಿನ ಮೂಲ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ವಿವೋ T3 ಪ್ರೊ 5G ಮೊಬೈಲ್ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ಫೋನಿನ ವಿಶೇಷತೆಗಳೆಂದರೆ, ಇದು ಸ್ನಾಪ್‌ಡ್ರಾಗನ್ 7 ಜೆನ್‌ 3 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್‌ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಲ್ಪೇ ಹೊಂದಿದೆ. ಹಾಗೆಯೇ 256GB ಸ್ಟೋರೇಜ್‌, 5500mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ಈ ಫೋನ್ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ನೀವು ಸ್ಯಾಂಡ್‌ಸ್ಟೋನ್‌ ಆರೇಂಜ್‌ ಲೆದರ್‌ ಹಾಗೂ ಎಮರಾಲ್ಡ್ ಗ್ರೀನ್ ಬಣ್ಣದಲ್ಲಿ ಖರೀದಿಸಬಹುದು.

 ಸಸ್ತಾ ಬೆಲೆ! ಯುಗಾದಿಗೂ ಮುನ್ನ.. ಈ Vivo ಫೋನಿನ ಬೆಲೆ ಇಳಿಕೆ.. 2000 ರಿಯಾಯಿತಿ

ವಿವೋ T3 ಪ್ರೊ 5G ವೈಶಿಷ್ಟ್ಯಗಳು

ವಿವೋ T3 ಪ್ರೊ 5G ಸ್ಮಾರ್ಟ್‌ಫೋನ್ 6.67 ಇಂಚಿನ 3D ಕರ್ವ್ಡ್‌ ಅಮೋಲೆಡ್‌ ಡಿಸ್ಲ್ಪೇ ಹೊಂದಿದೆ. ಇದು 120Hz ರಿಫ್ರೆಶ್ ದರ, 2,400 × 1,080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಮತ್ತು 4,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್‌ ಸಹ ಹೊಂದಿದೆ. ಈ ವಿವೋ 5G ಫೋನ್ ಸ್ನಾಪ್‌ಡ್ರಾಗನ್ 7 ಜೆನ್‌ 3 ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ FuntouchOS 14 ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಈ ಫೋನ್ ಗ್ರಾಫಿಕ್ಸ್‌ಗಾಗಿ, ಅಡ್ರಿನೊ 720 ಚಿಪ್‌ಸೆಟ್‌ ಹೊಂದಿದೆ. ಇದರೊಂದಿಗೆ 8GB RAM + 128GB, 8GB + 256GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

Take a Poll

ವಿವೋ T3 ಪ್ರೊ 5G ಫೋನ್ ಡ್ಯುಯಲ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್, 16 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ಫಾಸ್ಟ್ ಚಾರ್ಜಿಂಗ್ ಮತ್ತು 7.5W ರಿವರ್ಸ್ ವೈರ್ಡ್ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ ಆವೃತ್ತಿ 5.3, ಜಿಪಿಎಸ್‌, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ವಿವೋ T3 ಪ್ರೊ 5G ಹೊಸ ಬೆಲೆ ಮತ್ತು ಆಫರ್‌

ವಿವೋ T3 ಪ್ರೊ 5G ಮೊಬೈಲ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಫೋನಿನ 8GB + 128GB ಸ್ಟೋರೇಜ್ ರೂಪಾಂತರವು 24,999 ರೂ. ಮತ್ತು 8GB + 128GB ಸ್ಟೋರೇಜ್ ಆಯ್ಕೆಯು 26,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ, ನೀವು ಫ್ಲಿಪ್‌ಕಾರ್ಟ್ ಸೈಟ್‌ನಲ್ಲಿ ಈ ಫೋನನ್ನು 22,999 ರೂ. ಮತ್ತು 24,999 ರೂ.ಗೆ ಖರೀದಿಸಬಹುದು. ವಿವೋ T3 ಪ್ರೊ 5G ಫೋನಿನ ಬೆಲೆ ಇಳಿಕೆ ಜೊತೆಗೆ ಎಲ್ಲಾ ಬ್ಯಾಂಕ್‌ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ 2,000 ರೂ. ವರೆಗೆ ರಿಯಾಯಿತಿ ಪಡೆಯಬಹುದು. ಇದರೊಂದಿಗೆ ಈ ಫೋನಿನ ಆರಂಭಿಕ ಬೆಲೆ 20,999 ರೂ.ಗೆ ಇಳಿಕೆಯಾಗಲಿದೆ.

Best Mobiles in India

English summary
vivo T3 Pro 5G Available With Rs 2000 discount on flipkart sale: check Offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+