Vivo T3 Ultra vs Vivo T3 Pro: ಈ 5G ಫೋನ್‌ಗಳ ವ್ಯತ್ಯಾಸವೇನು? ಬೆಲೆ ಎಷ್ಟು, ಯಾವುದು ಬೆಸ್ಟ್?
Vivo T3 Ultra vs Vivo T3 Pro: ವಿವೋ ಕಂಪನಿಯು ಇತ್ತೀಚೆಗೆ ವಿವೋ T3 ಅಲ್ಟ್ರಾ 5G (Vivo T3 Ultra 5G) ಫೋನನ್ನು ಬಿಡುಗಡೆ ಮಾಡಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಕಂಪನಿಯು ಹಲವು ಆಫರ್‌ಗಳೊಂದಿಗೆ ಇದನ್ನು ಮಾರುಕಟ್ಟೆಯಲ್ಲಿ ಪ್ರಾರಂಭಿಸಿದೆ. ಈ ಹಿಂದೆ ವಿವೋ T3 ಪ್ರೋ (Vivo T3 Pro) ಫೋನನ್ನು ಬಿಡುಗಡೆ ಮಾಡಲಾಗಿತ್ತು. ನಾವು, ಈ ಎರಡು ಮೊಬೈಲ್‌ಗಳಲ್ಲಿ ಯಾವುದು ಉತ್ತಮ ಆಯ್ಕೆ ಮತ್ತು ಇವೆರಡರ ನಡುವಿನ ವ್ಯತ್ಯಾಸಗಳನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ.
ವಿವೋ T3 ಪ್ರೋ (Vivo T3 Pro) ಫೋನನ್ನು ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎರಡು ಇತ್ತೀಚಿನ ಫೋನ್‌ಗಳಲ್ಲಿ ಯಾವುದನ್ನು ಖರೀದಿಸಬೇಕು ಎಂಬ ಬಗ್ಗೆ ನಿಮಗೆ ಗೊಂದಲ ಇರುತ್ತದೆ. ನೀವು ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಈ ಲೇಖನದಲ್ಲಿ ಈ ಎರಡು ಫೋನ್‌ಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದು. ಈ ಫೋನ್‌ಗಳ ಡಿಸ್ಲ್ಪೇ, ಪ್ರೊಸೆಸರ್, ಕ್ಯಾಮೆರಾ ಸೆಟಪ್, ಬ್ಯಾಟರಿ ಮತ್ತು ಬೆಲೆ ಸೇರಿದಂತೆ ಇನ್ನಿತರ ಸಂಪೂರ್ಣ ವಿವರಗಳನ್ನು ತಿಳಿಯೋಣ ಬನ್ನಿ.

ವಿವೋ T3 ಅಲ್ಟ್ರಾ 5G ಮತ್ತು ವಿವೋ T3 ಪ್ರೊ ಬೆಲೆ
ಕಂಪನಿಯು ವಿವೋ T3 ಅಲ್ಟ್ರಾ ಫೋನನ್ನು 28,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ನೀವು, ಈ ಫೋನನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಪಾವತಿಯೊಂದಿಗೆ ಖರೀದಿಸಿದರೆ 3,000 ರೂ.ಗಳ ತ್ವರಿತ ರಿಯಾಯಿತಿ ಪಡೆಯಬಹುದು. ಕಂಪನಿಯು 3,000 ರೂ.ಗಳ ಎಕ್ಸ್‌ಚೇಂಜ್ ಆಫರ್ ಸಹ ನೀಡುತ್ತಿದೆ. ವಿವೋ T3 ಪ್ರೊ ಫೋನಿನ 8GB + 128GB ಸ್ಟೋರೇಜ್ ಅನ್ನು 24,999 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.
ಕಂಪನಿಯು ವಿವೋ T3 ಅಲ್ಟ್ರಾ 5G ಫೋನನ್ನು ಎರಡು ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಿದೆ. ಲೂನಾರ್ ಗ್ರೇ ಮತ್ತು ಫ್ರಾಸ್ಟ್ ಗ್ರೀನ್‌ನಲ್ಲಿ ಖರೀದಿಗೆ ಲಭ್ಯವಿದೆ. ನೀವು, ವಿವೋ T3 ಪ್ರೊ ಫೋನನ್ನು ಎಮರಾಲ್ಡ್ ಗ್ರೀನ್ ಮತ್ತು ಸ್ಯಾಂಡ್‌ಸ್ಟೋನ್ ಆರೆಂಜ್ ಬಣ್ಣಗಳಲ್ಲಿ ಖರೀದಿಸಬಹುದು.
ವಿವೋ T3 ಅಲ್ಟ್ರಾ ಮತ್ತು ವಿವೋ T3 ಪ್ರೊ ನಡುವಿನ ವ್ಯತ್ಯಾಸ
ಡಿಸ್ಪ್ಲೇ: ವಿವೋ T3 ಅಲ್ಟ್ರಾ ಫೋನ್ 120Hz ರಿಫ್ರೆಶ್ ದರದೊಂದಿಗೆ 6.78 ಇಂಚಿನ AMOLED 1.5K ಡಿಸ್ಪ್ಲೇಯನ್ನು ಹೊಂದಿದೆ. ವಿವೋ T3 ಪ್ರೊ 5G ಮೊಬೈಲ್ 6.67 ಇಂಚಿನ ಬಾಗಿದ ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರದೊಂದಿಗೆ 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲಿಸುತ್ತದೆ.
ಪ್ರೊಸೆಸರ್: ವಿವೋ T3 ಅಲ್ಟ್ರಾ ಫೋನ್ MediaTek ಡೈಮೆನ್ಸಿಟಿ 9200 ಪ್ಲಸ್ ಪ್ರೊಸೆಸರ್ ಅನ್ನು ಹೊಂದಿದೆ. ಪಡೆಯುತ್ತಿದೆ. ಈ ಮೊಬೈಲ್ ಇತ್ತೀಚಿನ ಫೋನ್ Android 14 ಆಧಾರಿತ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿವೋ T3 ಪ್ರೊ 5G ಫೋನ್ Snapdragon 7 Gen 3 ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ Funtouch OS 14 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್: ವಿವೋ T3 ಅಲ್ಟ್ರಾ 5G ಮೊಬೈಲ್ 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಹೆಚ್ಚುವರಿಯಾಗಿ, ಇದು ವರ್ಚುವಲ್ RAM ಗೆ ಬೆಂಬಲವನ್ನು ಸಹ ಒಳಗೊಂಡಿದೆ. ನೀವು ಈ ಫೋನ್‌ನ RAM ಅನ್ನು 24GB ವರೆಗೆ ಹೆಚ್ಚಿಸಬಹುದು. ವಿವೋ T3 ಪ್ರೊ ಫೋನ್ 8GB + 128GB ಮತ್ತು 8GB + 256GB ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ.
ಈ ಸುದ್ದಿ ಓದಿದ್ದೀರಾ?: Realme: ಹೊಸ 5G ಫೋನ್ ಬಂದಿದೆ.. 50MP ಕ್ಯಾಮೆರಾ.. 256GB ಮೆಮೊರಿ; ಯಾವುದು?
ಕ್ಯಾಮೆರಾ: ವಿವೋ T3 ಅಲ್ಟ್ರಾ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. OIS ಬೆಂಬಲದೊಂದಿಗೆ, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ ರಿಯರ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ವಿವೋ T3 ಪ್ರೊ ಮೊಬೈಲ್ ಡ್ಯುಯಲ್ ಸೆಟಪ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕ ಒಳಗೊಂಡಿದೆ.ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ವಿವೋ T3 ಅಲ್ಟ್ರಾ ಫೋನ್ 5,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ವಿವೋ T3 ಪ್ರೊ ಮೊಬೈಲ್ 5,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು 80 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಕಂಪನಿಯು ತನ್ನ ಹೊಸ ಫೋನಿನ ಬ್ಯಾಟರಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ಇತರೆ ವೈಶಿಷ್ಟ್ಯಗಳು: ವಿವೋ T3 ಅಲ್ಟ್ರಾ 5G ಫೋನ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿವೆ. ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ ಐಪಿ68 ರೇಟಿಂಗ್ ನೀಡಲಾಗಿದೆ. ವಿವೋ T3 ಪ್ರೊ ಮೊಬೈಲ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಜೊತೆಗೆ, ಲಿಕ್ವಿಡ್ ಕೂಲಿಂಗ್ ಸಿಸ್ಟಮ್, ಅಲ್ಟ್ರಾ ಗೇಮ್ ಮೋಡ್, 2000 Hz ತ್ವರಿತ ಸ್ಪರ್ಶ ಮಾದರಿ ಕೆಂಪು ಮತ್ತು 4D ಗೇಮ್ ವೈಬ್ರೇಶನ್‌ನಂತಹ ಬೆಂಬಲವನ್ನು ಪಡೆದಿದೆ.
ಒಟ್ಟಾರೆ, ಈ ಲೇಖನದಲ್ಲಿ ವಿವೋ T3 ಅಲ್ಟ್ರಾ 5G ಮತ್ತು ವಿವೋ T3 ಪ್ರೊ ಮೊಬೈಲ್ ನಡುವಿನ ಅನೇಕ ವ್ಯತ್ಯಾಸಗಳನ್ನು ತಿಳಿಸಲಾಗಿದೆ. ಈ ಮೂಲಕ ನೀವು ಯಾವ ಮೊಬೈಲ್ ಖರೀದಿಸಬೇಕು ಎಂಬ ಗೊಂದಲಕ್ಕೆ ತೆರೆ ಎಳೆದಿದ್ದೇವೆ. ನೀವು ಹೊಸ ವಿವೋ ಮೊಬೈಲ್ ಖರೀದಿಸುವ ಮೊದಲು ಈ ಲೇಖನವನ್ನು ಒಮ್ಮೆ ಓದಿ. ಇದಲ್ಲದೆ, ನಾವು ಹೊಸ ಮತ್ತು ಹಳೆಯ ಫೋನ್‌ಗಳ ನಡುವಿನ ವ್ಯತ್ಯಾಸವನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗೆ ನಮ್ಮ ಗಿಜ್ಬಾಟ್ ಕನ್ನಡ ವೆಬ್‌ಸೈಟ್‌ಗೆ ಭೇಟಿ ನೀಡಿ.


Click it and Unblock the Notifications








