Home
Deal of the day

ಕೇವಲ 11,749 ರೂ.! 6000mAh ಬ್ಯಾಟರಿ.. 50MP ಕ್ಯಾಮೆರಾ.. ಈ vivo ಫೋನಿನ ಭರ್ಜರಿ ಡಿಸ್ಕೌಂಟ್!

ವಿವೋ ಮೊಬೈಲ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಕಂಪನಿಯು ಸಹ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಭಿನ್ನ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇವು ಈಗಾಗಲೇ ಗ್ರಾಹಕರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿವೆ. ಆ ಪೈಕಿ ವಿವೋ T3x 5G (vivo T3x 5G) ಸಹ ಒಂದಾಗಿದೆ. ಪ್ರಸ್ತುತ, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನಿನ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಬನ್ನಿ, ಈ ವಿವೋ ಫೋನಿನ ಹೊಸ ಬೆಲೆ ಮತ್ತು ಕಂಪನಿ ಯಾವೆಲ್ಲಾ ಆಫರ್‌ಗಳನ್ನು ನೀಡುತ್ತಿದೆ ತಿಳಿಯೋಣ.

ವಿವೋ T3x 5G ಫೋನ್‌ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಪ್ರಸ್ತುತ ಶೇ.25 ರಷ್ಟು ಡಿಸ್ಕೌಂಟ್‌ ಲಭ್ಯವಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 6 ಜೆನ್ 1 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಫೋನಿನಲ್ಲಿ 6.72 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಹಾಗೆಯೇ, 128GB ಸ್ಟೋರೇಜ್‌, 6000mAh ಬ್ಯಾಟರಿ ಮತ್ತು 44W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕೇವಲ 11,749 ರೂ.! 6000mAh ಬ್ಯಾಟರಿ.. 50MP ಕ್ಯಾಮೆರಾ.. ಯಾವ ಫೋನ್ ಗೊತ್ತಾ?

ವಿವೋ T3x 5G ಬೆಲೆ ಮತ್ತು ಆಫರ್‌

ವಿವೋ T3x 5G ಫೋನನ್ನು ಫ್ಲಿಪ್‌ಕಾರ್ಟ್‌ನಲ್ಲಿ ಶೇ.25 ರಷ್ಟು ರಿಯಾಯಿತಿಯೊಂದಿಗೆ 12,999 ರೂ.ಗೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ, 1250 ರೂ. ಡಿಸ್ಕೌಂಟ್ ಲಭ್ಯವಿದೆ. ಈ ರಿಯಾಯಿತಿಯೊಂದಿಗೆ ಕೇವಲ 11,749 ರೂ. ಬೆಲೆಯಲ್ಲಿ ನೀವು, ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.

ವಿವೋ T3x 5G ವೈಶಿಷ್ಟ್ಯಗಳು

ಡಿಸ್ಪ್ಲೇ ಮಾಹಿತಿ

ವಿವೋ T3x 5G ಮೊಬೈಲ್ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.

ಸ್ನಾಪ್‌ಡ್ರಾಗನ್‌ ಪ್ರೊಸೆಸರ್

ವಿವೋ T3x 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್‌ 6 ಜೆನ್ 1 ಪ್ರೊಸೆಸರ್‌ ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್‌ 14 ಆಧಾರಿತ FuntouchOS 14 ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ವಿವೋ T3X 5G ಮೊಬೈಲ್ 4GB RAM ಮತ್ತು 128GB ಸ್ಟೋರೇಜ್‌ ಹೊಂದಿದೆ. ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸ್ಟೋರೇಜ್ ಬಳಸಬಹುದು.

ಡ್ಯುಯಲ್ ಕ್ಯಾಮೆರಾ ಸೆಟಪ್

ವಿವೋ T3x 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಎಲ್ಇಡಿ ಫ್ಲ್ಯಾಷ್ ಹೊಂದಿದೆ.

6000mAh ಸಾಮರ್ಥ್ಯದ ಬ್ಯಾಟರಿ

ವಿವೋ T3X 5G ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 44W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಫೋನ್ ನಿರ್ದಿಷ್ಟವಾಗಿ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP64 ರೇಟಿಂಗ್ ಹೊಂದಿದೆ. ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, 5G, Dual 4G VoLTE, ವೈ-ಫೈ 6, ಬ್ಲೂಟೂತ್ 5.1, GPS, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯವನ್ನು ಒಳಗೊಂಡಿದೆ.

Best Mobiles in India

English summary
vivo T3x 5G available with Rs.4,500 discount on flipkart sale: know details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+