Home
Deal of the day

ವಿವೋ V23 5G ಫೋನ್‌ಗೆ ಅಮೆಜಾನ್‌ಲ್ಲಿ ಬೃಹತ್ ರಿಯಾಯಿತಿ: ಆಫರ್‌ ಬೆಲೆ ಕೇವಲ ಇಷ್ಟೇ!?

ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವುದು ಹಿಂದೆಂದಿಗಿಂತಲೂ ಈಗ ಸುಲಭ. ಯಾಕೆಂದರೆ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಆಫರ್‌ ರೂಪದಲ್ಲಿ ಲಭ್ಯ ಆಗುತ್ತಿವೆ. ಈ ನಡುವೆ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾದ ವಿವೋದ ಈ ವಿಶೇಷ ಫೋನ್‌ ಸಹ ಅಗ್ಗದ ಬೆಲೆಗೆ ಲಭ್ಯ ಆಗುತ್ತಿದೆ.

ಹೌದು, ವಿವೋದ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಸ್ಟೋರೇಜ್‌, ಕ್ಯಾಮೆರಾ ಹಾಗೂ ಕಾರ್ಯಕ್ಷಮತೆಯಲ್ಲಿ ಉತ್ತಮ ಅನುಭವ ನೀಡುತ್ತವೆ. ಇದರ ಭಾಗವಾಗಿಯೇ ಈಗ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ 12GB RAM ಆಯ್ಕೆಯ ವಿವೋ V23 5G(Vivo V23 5G) ಫೋನ್‌ಗೆ ಭರ್ಜರಿ ಆಫರ್‌ ನೀಡಲಾಗಿದೆ. ಈ ಫೋನ್‌ ಟ್ರಿಪಲ್ ಕ್ಯಾಮೆರಾ ಆಯ್ಕೆ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 920 MT6877T CPUನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಿದ್ರೆ, ಬನ್ನಿ ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಗಮನಿಸೋಣ.

ವಿವೋ V23 5G ಫೋನ್‌ಗೆ ಅಮೆಜಾನ್‌ಲ್ಲಿ ಬೃಹತ್ ರಿಯಾಯಿತಿ:ಆಫರ್‌ ಬೆಲೆ ಕೇವಲ ಇಷ್ಟೇ?

ವಿವೋ V23 5G ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ಗಳನ್ನು ತಿಳಿಯೋಣ. ಈ ಫೋನ್ ​​6.44 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 20:9 ಆಕಾರ ಅನುಪಾತ ಪಡೆದಿದೆ. ಅದರಂತೆ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ನಂದಿಗೆ 409 ppi ಪಿಕ್ಸೆಲ್ ಸಾಂದ್ರತೆ ಒಳಗೊಂಡಿದ್ದು, 90Hz ರಿಫ್ರೆಶ್ ರೇಟ್‌ ಆಯ್ಕೆ ಹೊಂದಿದೆ.

ವಿವೋ V23 5G ಪ್ರೊಸೆಸರ್‌ ಮಾಹಿತಿ: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 MT6877T CPU ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಆಯ್ಕೆಯನ್ನು ಹೊಂದಿದೆ. ಈ ಮೂಲಕ ಗ್ರಾಹಕರು ಯಾವುದೇ ಸಮಸ್ಯೆ ಇಲ್ಲದೆ ಫೋನ್‌ ಅನ್ನು ಬಳಕೆ ಮಾಡಬಹುದಾಗಿದೆ. ಜೊತೆಗೆ ಮಾಲಿ-G68 MC4 GPU ಬಲ ಇದ್ದು, ಇದು ಗೇಮರ್‌ಗಳಿಗಂತೂ ಬಹಳ ಅನುಕೂಲ ಹಾಗೆಯೇ ಈ ಮೊಬೈಲ್ ಫೋನ್ 2.5GHz ಗರಿಷ್ಠ ಆಪರೇಟಿಂಗ್ ಆವರ್ತನವನ್ನು ಹೊಂದಿದೆ.

ವಿವೋ V23 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಅದರಲ್ಲಿ 2MP ಮ್ಯಾಕ್ರೋ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, ಮತ್ತು f/1.89 ಅಪರ್ಚರ್ ಹೊಂದಿರುವ 64MP ಮುಖ್ಯ ಕ್ಯಾಮೆರಾ ಆಯ್ಕೆ ಇದೆ. ಇದರೊಂದಿಗೆ ಮುಂಭಾಗದಲ್ಲಿ ವಿವೋ ಅವಳಿ-ಕ್ಯಾಮೆರಾ ರಚನೆ ಪಡೆದಿದೆ. ಅದರಲ್ಲಿ ಐ ಎಎಫ್ ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ ಮತ್ತು 8 MP ಅಲ್ಟ್ರಾ-ವೈಡ್ ಆಂಗಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ವಿವೋ V23 5G ಬ್ಯಾಟರಿ ಹಾಗೂ ಇತರೆ: ಇನ್ನುಳಿದಂತೆ ಈ ಫೋನ್ ​​4200mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 44W ಫ್ಲ್ಯಾಶ್‌ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ. ಇದರೊಂದಿಗೆ ಬ್ಲೂಟೂತ್, ವೈ-ಫೈ ಆಡಿಯೋ ಜ್ಯಾಕ್ 3.5 ಎಂಎಂ ನೊಂದಿಗೆ ವಿವಿಧ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದ್ದು, ಬಳಕೆದಾರರು ಈ ಮೂಲಕ ಅಗತ್ಯ ಸೌಕರ್ಯ ಪಡೆದುಕೊಳ್ಳಬಹುದು.

ವಿವೋ V23 5G ಫೋನ್‌ಗೆ ಅಮೆಜಾನ್‌ಲ್ಲಿ ಬೃಹತ್ ರಿಯಾಯಿತಿ:ಆಫರ್‌ ಬೆಲೆ ಕೇವಲ ಇಷ್ಟೇ?

ವಿವೋ V23 5G ಬೆಲೆ ಹಾಗೂ ಆಫರ್‌ ವಿವರ: ಈ ಫೋನ್‌ನ ಪ್ರಮುಖ ವಿಚಾರಕ್ಕೆ ಬರುವುದಾದರೆ ಇದು 37,990ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು ಕೇವಲ 28,289ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ ಈ ಫೋನ್‌ಗೆ 26% ಡಿಸ್ಕೌಂಟ್‌ ಘೋಷಣೆ ಮಾಡಿದೆ. ಇಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್‌ ಗಳ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದರೆ ಇನ್ನೂ ಕಡಿಮೆ ಬೆಲೆಯಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಬಹುದು.

Best Mobiles in India

English summary
Vivo's smartphones offer users a better experience in terms of storage, camera and functionality. As part of this, the leading e-commerce site now offers great deals on the 12GB RAM variant of the Vivo V23 5G phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+