Home
Deal of the day

9,809 ರಿಯಾಯಿತಿ! 200MP ಕ್ಯಾಮೆರಾ.. 6000mAh ಬ್ಯಾಟರಿ.. ಈ ದೈತ್ಯ Vivo ಫೋನಿನ ಬೆಲೆ ಮತ್ತೆಇಳಿಕೆ.. ಎಷ್ಟಾಗಿದೆ?

ನೀವು ಅತ್ಯುತ್ತಮ ಕ್ಯಾಮೆರಾ ಹೊಂದಿರುವ ವಿವೋ (Vivo) ಫೋನ್ ಹುಡುಕುತ್ತಿದ್ದೀರಾ? ಹಾಗಿದ್ರೆ, ಈ ಆಫರ್ ಮಿಸ್‌ ಮಾಡಿಕೊಳ್ಳಲೇಬೇಡಿ. ಹೌದು, ವಿವೋ X200 ಪ್ರೊ (Vivo X200 Pro) ನಿಮಗೆ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಇದು 200MP ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಬರುತ್ತದೆ. ಇದು ಫೋಟೋಗ್ರಫಿ ಪ್ರಿಯರಿಗೆ ಅತ್ಯುತ್ತಮವಾಗಿದೆ. ನೀವು ಉನ್ನತ ದರ್ಜೆಯ ಫೋಟೋಗಳನ್ನು ಕ್ಲಿಕ್ಕಿಸಲು ಈ ವಿವೋ ಮೊಬೈಲ್ ಹೆಸರುವಾಸಿಯಾಗಿದೆ. ಪ್ರಸ್ತುತ, ಈ ಫೋನಿನ ಬೆಲೆಯನ್ನು ಭಾರೀ ಇಳಿಕೆ ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿವೋ X200 ಪ್ರೊ ಸ್ಮಾರ್ಟ್‌ಫೋನ್ ಕೇವಲ ಒಂದು ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆಯಾಗಿದೆ. ಈ ಫೋನಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು Zeiss APO ಕ್ಯಾಮೆರಾ ಹೊಂದಿದೆ. ಈ ವಿವೋ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ 512GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಹೊಸ ಬೆಲೆ ಮತ್ತು ಆಫರ್ ತಿಳಿಯಲು ಮುಂದೆ ಓದಿ.

Vivo X200 Pro ಬೆಲೆ ಭಾರೀ ಇಳಿಕೆ; 9,809 ರಿಯಾಯಿತಿ.. ಹೊಸ ದರ ಇಷ್ಟೆನಾ?

ವಿವೋ X200 ಪ್ರೊ ವೈಶಿಷ್ಟ್ಯಗಳು

ವಿವೋ X200 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ 2K ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 4,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಡಿಸ್ಪ್ಲೇಯು ಆರ್ಮರ್ ಗ್ಲಾಸ್ ರಕ್ಷಣೆ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ ಹೊಂದಿದೆ. ಈ ಪ್ರೊಸೆಸರ್‌ ಹೊಂದಿರುವ ಭಾರತ ಎರಡನೇ ಸ್ಮಾರ್ಟ್‌ಫೋನ್ ಇದಾಗಿದೆ. ಈ ವಿವೋ ಮೊಬೈಲ್ ಆಂಡ್ರಾಯ್ಡ್‌ 15 ಆಧಾರಿತ FunTouch ಓಎಸ್‌ 15 ನಲ್ಲಿ ಕೆಲಸ ಮಾಡುತ್ತದೆ.

ವಿವೋ X200 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 200 ಮೆಗಾಪಿಕ್ಸೆಲ್ Zeiss APO ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸಹ ಹೊಂದಿದೆ.

Vivo X200 Pro ಬೆಲೆ ಭಾರೀ ಇಳಿಕೆ; 9,809 ರಿಯಾಯಿತಿ.. ಹೊಸ ದರ ಇಷ್ಟೆನಾ?

ವಿವೋ X200 ಪ್ರೊ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 30W ವೈರ್‌ಲೆಸ್ ಚಾರ್ಜಿಂಗ್‌ ಸಹ ಹೊಂದಿದೆ. ಈ ವಿವೋ ಫೋನ್‌ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP68, IP69 ರೇಟಿಂಗ್ ಪಡೆದಿದೆ. ಹಾಗೆಯೇ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಎನ್‌ಎಫ್‌ಸಿ ಮತ್ತು ಸರ್ಕಲ್ ಟು ಸರ್ಚ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Take a Poll

ವಿವೋ X200 ಪ್ರೊ ಹೊಸ ಬೆಲೆ ಮತ್ತು ಆಫರ್

ವಿವೋ X200 ಪ್ರೊ ಪ್ರಸ್ತುತ ಅಮೆಜಾನ್‌ನಲ್ಲಿ 86,690 ರೂ.ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇದು ಫೋನಿನ 16GB RAM + 512GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಇದನ್ನು 94,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಇದುವರೆಗೆ ನೀಡಲಾದ ಅತ್ಯಂತ ಕಡಿಮೆ ಬೆಲೆಯಾಗಿದೆ. ಈ ಆಫರ್ ಕಾಸ್ಮೊಸ್ ಕಪ್ಪು ಬಣ್ಣದ ಫೋನಿಗೆ ಮಾತ್ರ ಅನ್ವಯಿಸುತ್ತದೆ. ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ ಆಫರ್ ಲಭ್ಯವಿದೆ. ನೀವು ಹೆಚ್ಚುವರಿಯಾಗಿ 1,500 ರೂ. ರಿಯಾಯಿತಿ ಪಡೆಯಬಹುದು. ಹಳೆಯ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮೂಲಕ ಈ ಫೋನಿನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.

Best Mobiles in India

English summary
Vivo X200 Pro Price Drop in India with Rs 9,809 Discount on Amazon: How to get this deal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+