Home
Deal of the day

8GB RAM ಆಯ್ಕೆಯ ಈ ವಿವೋ ಫೋನ್‌ಗೆ 21% ಡಿಸ್ಕೌಂಟ್‌! ಹಾಗಿದ್ರೆ ಆಫರ್‌ ಬೆಲೆ ಎಷ್ಟು?

ಸ್ಮಾರ್ಟ್‌ಫೋನ್‌ಗಳು ಇತ್ತೀಚೆಗೆ ವಿವಿಧ ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತಿರುವುದರಿಂದಾಗಿ ಜನರು ಅವುಗಳಿಗೆ ಅಪ್‌ಗ್ರೇಡ್ ಆಗಲು ಬಯಸುತ್ತಾರೆ. ಅಷ್ಟು ಮಾತ್ರವಲ್ಲದೆ ಇತ್ತೀಚಿಗೆ ಲಾಂಚ್‌ ಆಗಿರುವ ಫೋನ್‌ಗಳು ಯಾವಾಗ ಹಾಗೂ ಎಲ್ಲಿ ಡಿಸ್ಕೌಂಟ್‌ಗೆ ಲಭ್ಯ ಇರುತ್ತವೆ ಎಂದು ಕೆಲವರು ಹುಡುಕುತ್ತಿರುತ್ತಾರೆ. ಆ ರೀತಿಯ ಗ್ರಾಹಕರಿಗೆ ಈಗ ಉತ್ತಮ ಸಮಯ ಬಂದಿದೆ.

ಹೌದು, ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಆಗಿರುವ ವಿವೋ (Vivo) ಸಾಕಷ್ಟು ವಿಶೇಷವಾದ ಫೋನ್‌ಗಳನ್ನು ಲಾಂಚ್‌ ಮಾಡಿದೆ. ಅದರಂತೆ ಈ ಫೋನ್‌ಗಳ ಸಾಲಿನಲ್ಲಿ ವಿವೋ X80 5G (Vivo X80 5G) ಫೋನ್‌ ಸಹ ಬಹಳ ಜನಪ್ರಿಯತೆ ಪಡೆದುಕೊಂಡಿದ್ದು, ಈ ಫೋನ್‌ಗೆ ಇದೀಗ 21% ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಅದೂ ಸಹ 8GB RAM ವೇರಿಯಂಟ್ ಇರುವ ಫೋನ್‌ಗೆ. ಹಾಗಿದ್ರೆ, ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್‌ ಬೆಲೆ ಬಗ್ಗೆ ತಿಳಿದುಬರೋಣ.

8GB RAMಆಯ್ಕೆಯ ಈ ವಿವೋ ಫೋನ್‌ಗೆ 21% ಡಿಸ್ಕೌಂಟ್‌!ಹಾಗಿದ್ರೆ ಆಫರ್‌ ಬೆಲೆ ಎಷ್ಟು?

ವಿವೋ X80 5G ಫೋನ್‌ ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ಇಷ್ಟು ಕಡಿಮೆ ಬೆಲೆಗೆ ಖರೀದಿ ಮಾಡುವ ಮುನ್ನ ಈ ಬೆಲೆಯಲ್ಲಿ ತಕ್ಕ ಫೀಚರ್ಸ್ ಇದರಲ್ಲಿ ಇದೆಯಾ ಎಂದು ತಿಳಿದುಕೊಳ್ಳುವುದು ಉತ್ತಮ. ಅದರಂತೆ ಈ ಫೋನ್ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 518ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 1440 x 3200 ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ.

ಇದರೊಂದಿಗೆ ಇದರ ಆಕಾರ ಅನುಪಾತವು 20:9 ಆಗಿದ್ದು, ಫೋನ್‌ನ ಸ್ಕ್ರೀನ್-ಟು-ಬಾಡಿ ಅನುಪಾತವು 89.6% ಆಗಿದೆ. ಉಳಿದಂತೆ 120Hz ರಿಫ್ರೆಶ್ ರೇಟ್‌ ಆಯ್ಕೆ ಮೂಲಕ ಈ ಫೋನ್‌ ಇತರೆ ಫೋನ್‌ಗಳಿಗಿಂತ ಭಿನ್ನ ಸ್ಥಾನ ಪಡೆದುಕೊಂಡಿದೆ. ಅಂದರೆ ಬಳಕೆ ಸಮಯದಲ್ಲಿ ಉತ್ತಮವಾದ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ಖಾತ್ರಿಪಡಿಸುತ್ತದೆ.

ವಿವೋ X80 5G ಫೋನ್‌ ಪ್ರೊಸೆಸರ್‌ ಮಾಹಿತಿ: ಇದರ ಪ್ರೊಸೆಸರ್‌ ವಿಚಾರಕ್ಕೆ ಬರುವುದಾದರೆ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 1 ಪ್ರೊಸೆಸರ್‌ ಬಲ ಹೊಂದಿದ್ದು, ಕಾರ್ಟೆಕ್ಸ್ X2, ಕಾರ್ಟೆಕ್ಸ್ A710 ಮತ್ತು ಕಾರ್ಟೆಕ್ಸ್ A510 ಲೇಔಟ್‌ಗಳೊಂದಿಗೆ 3GHz ಆಕ್ಟಾ-ಕೋರ್ ಸಿಪಿಯು ಅನ್ನು ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ ಅಡ್ರಿನೋ 730 ಜಿಪಿಯು ಶಕ್ತಿ ಹೊಂದಿದೆ. ಇದೆಲ್ಲಕ್ಕೂ ಮಿಗಿಲಾಗಿ 8GB RAM ವಿಶೇಷ ಎನಿಸಲಿದೆ.

ವಿವೋ X80 5G ಫೋನ್‌ ಕ್ಯಾಮೆರಾ ರಚನೆ: ಇನ್ನು ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆ ಹೊಂದಿದೆ. ಅಂದರೆ 12MP ಪ್ರಾಥಮಿಕ ಕ್ಯಾಮೆರಾ, 8MP ಸೆಕೆಂಡರಿ ಕ್ಯಾಮೆರಾ, 48MP ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 50MP ವೈಡ್ ಆಂಗಲ್ ಪ್ರೈಮರಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಕ್ಯಾಮೆರಾಗಳು ಎಲ್ಇಡಿ ಫ್ಲ್ಯಾಶ್‌, ಡಿಜಿಟಲ್ ಜೂಮ್, ಟಚ್ ಟು ಫೋಕಸ್, ಆಟೋಫೋಕಸ್ ಸೇರಿದಂತೆ ವಿವಿಧ ಫೀಚರ್ಸ್‌ ಪಡೆದುಕೊಂಡಿವೆ. ಇನ್ನು ಸ್ಕ್ರೀನ್ ಫ್ಲ್ಯಾಶ್‌ ಆಯ್ಕೆಯೊಂದಿಗೆ 32MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

8GB RAMಆಯ್ಕೆಯ ಈ ವಿವೋ ಫೋನ್‌ಗೆ 21% ಡಿಸ್ಕೌಂಟ್‌!ಹಾಗಿದ್ರೆ ಆಫರ್‌ ಬೆಲೆ ಎಷ್ಟು?

ವಿವೋ X80 5G ಫೋನ್‌ ಬ್ಯಾಟರಿ ಹಾಗೂ ಇತರೆ: ಈ ವಿಶೇಷ ಸ್ಮಾರ್ಟ್‌ಫೋನ್ 4700mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಬಳಕೆದಾರರಿಗೆ ಉತ್ತಮವಾದ ಬ್ಯಾಕಪ್‌ ನೀಡಲಿದೆ. ಇಷ್ಟು ಮಾತ್ರವಲ್ಲದೆ 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದ್ದು, ಇದರಿಂದಾಗಿ ಕ್ಷಣಾರ್ಧದಲ್ಲಿ ನೀವು ಈ ಫೋನ್‌ ಅನ್ನು ಚಾರ್ಜ್ ಮಾಡಿಕೊಳ್ಳಬಹುದು. ಇದರೊಂದಿಗೆ 5G ಬೆಂಬಲಿತ ಈ ಫೋನ್‌, ವೈ-ಫೈ, ಬ್ಲೂಟೂತ್‌ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ.

ವಿವೋ X80 5G ಫೋನ್‌ ಬೆಲೆ ಹಾಗೂ ಆಫರ್‌ ವಿವರ: ಇನ್ನು ಈ ಫೋನ್‌ನ ಪ್ರಮುಖ ವಿಚಾರಕ್ಕೆ ಈಗ ಬರೋಣ. ಅದರಂತೆ ಈ ಫೋನ್ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ 21% ಡಿಸ್ಕೌಂಟ್‌ ಪಡೆದಿದೆ. ಈ ಮೂಲಕ ನೀವು 46,990ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 59,999 ರೂ.ಗಳು. ಇಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಅನ್ನು ಖರೀದಿ ಮಾಡಬಹುದು.

Best Mobiles in India

English summary
Vivo X80 5G phone has become very popular and now 21% discount has been announced for this phone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+