Home
Deal of the day

ವಿವೋದ ಈ ಫೋನ್‌ ಬೆಲೆಯಲ್ಲಿ ದಿಢೀರ್‌ ಇಳಿಕೆ; 5,000mAh ಬ್ಯಾಟರಿ ಸೌಲಭ್ಯ ಇದೆ!

ಫ್ಲಿಪ್‌ಕಾರ್ಟ್‌ ಇ ಕಾಮರ್ಸ್ ತಾಣವು ಆನ್‌ಲೈನ್‌ ಶಾಪಿಂಗ್‌ ಗ್ರಾಹಕರಿಗೆ ಬಹುದೊಡ್ಡ ಅಡ್ಡಾ ಎನಿಸಿಕೊಂಡಿದೆ. ಫ್ಲಿಪ್‌ಕಾರ್ಟ್‌ ಸಂಸ್ಥೆಯು ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ಕೊಡುಗೆ ಘೋಷಿಸುತ್ತ ಖರೀದಿದಾರರನ್ನು ಸೆಳೆಯುತ್ತದೆ. ಇದೀಗ ವಿವೋ ಕಂಪನಿಯ ವಿವೋ Y18 (vivo Y18) ಸ್ಮಾರ್ಟ್‌ಫೋನ್‌ ಸಖತ್‌ ರಿಯಾಯಿತಿ ಬೆಲೆಯಲ್ಲಿ ಗುರುತಿಸಿಕೊಂಡಿದ್ದು, ಗ್ರಾಹಕರು ವಾವ್‌ ಎನ್ನುವಂತೆ ಮಾಡಿದೆ. ಇನ್ನು ವಿವೋ ಸಂಸ್ಥೆಯ ಈ ಮೊಬೈಲ್‌ ಮೀಡಿಯಾಟೆಕ್‌ ಹಿಲಿಯೋ G85 ಪ್ರೊಸೆಸರ್ ಪವರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತದೆ.

ಹೌದು, ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ವೆಬ್‌ಸೈಟ್‌ನಲ್ಲಿ ವಿವೋ Y18 (vivo Y18) ಮೊಬೈಲ್‌ ಶೇ. 28% ರಷ್ಟು ನೇರ ಡಿಸ್ಕೌಂಟ್‌ ನೊಂದಿಗೆ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 4 GB RAM + 64 GB ಸ್ಟೋರೇಜ್ ವೇರಿಯಂಟ್ ಈಗ ಕೊಡುಗೆಯಲ್ಲಿ 9,999ರೂ. ದರದಲ್ಲಿ ಖರೀದಿ ಮಾಡಲು ಅವಕಾಶ ಇದೆ. ಹಾಗೆಯೇ ಬ್ಯಾಂಕ್‌ ಆಫರ್‌ ಮತ್ತು ನೋ ಕಾಸ್ಟ್‌ ಇಎಮ್‌ಐ ಕೂಡಾ ಗ್ರಾಹಕರಿಗೆ ಲಭ್ಯ ಆಗಲಿದೆ.

ವಿವೋದ ಈ ಫೋನ್‌ ಬೆಲೆಯಲ್ಲಿ ದಿಢೀರ್‌ ಇಳಿಕೆ; 5,000mAh ಬ್ಯಾಟರಿ ಸೌಲಭ್ಯ ಇದೆ!

ಇನ್ನು ವಿವೋದ ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯದ ಆಯ್ಕೆ ಪಡೆದಿದೆ. ಹಾಗಾದರೆ ವಿವೋ Y18 ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ವಿವೋ Y18 ಫೋನ್‌ - ಫೀಚರ್ಸ್‌

ವಿವೋ Y18 ಮೊಬೈಲ್‌ 6.56 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಡಿಸ್‌ಪ್ಲೇಯು ಹೆಚ್‌ಡಿ+ ರೆಸಲ್ಯೂಶನ್ ನಲ್ಲಿ ಇದೆ. ಹಾಗೆಯೇ ಇದು 90Hz ರಿಫ್ರೆಶ್ ರೇಟ್‌ ಅನ್ನು ಸಪೋರ್ಟ್‌ ಮಾಡುತ್ತದೆ. ಇದರ ಜೊತೆಗೆ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆ 269ppi ಆಗಿದ್ದು, ಇದು 163.63 x 75.85 x 8.39mm ಸುತ್ತಳತೆ ಪಡೆದುಕೊಂಡಿದೆ.

ವಿವೋ Y18 ಮೊಬೈಲ್‌ ಮೀಡಿಯಾ ಟೆಕ್‌ ಹಿಲಿಯೋ G85 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಅನ್ನು ಆಧರಿಸಿ ಫನ್‌ಟಚ್‌ ಓಎಸ್‌ 14 ನಲ್ಲಿ ಕೆಲಸ ನಿರ್ವಹಿಸುತ್ತದೆ. ಇದರ ಜೊತೆಗೆ 4 GB RAM ಮತ್ತು 64 GB eMMC 5.1 ಆಂತರೀಕ ಸ್ಟೋರೇಜ್‌ ಆಯ್ಕೆ ಅನ್ನು ಪಡೆದಿದ್ದು, ಇದರೊಂದಿಗೆ 4 GB ವರೆಗೆ ವರ್ಚುವಲ್ RAM ಸೌಲಭ್ಯ ಸಹ ಇದೆ. ಹಾಗೆಯೇ ಬಾಹ್ಯ ಮೆಮೊರಿ ವಿಸ್ತರಣೆಗಾಗಿ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಸಹ ನೀಡಲಾಗಿದೆ.

ವಿವೋ Y18 ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್‌ ಸೌಲಭ್ಯ ಪಡೆದಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದ್ದು, ಇದರ ಸೆಕೆಂಡರಿ ಕ್ಯಾಮೆರಾವು VGA ಸೆನ್ಸಾರ್ ಕ್ಯಾಮೆರಾ ರಚನೆ ಇದೆ. ಹಾಗೆಯೇ ಈ ಫೋನಿನ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಿಂಭಾಗದಲ್ಲಿ ಕ್ಯಾಮೆರಾ ಜೊತೆಗೆ LED ಫ್ಲ್ಯಾಶ್‌ ಸೌಲಭ್ಯ ಕೂಡಾ ಒದಗಿಸಲಾಗಿದೆ.

ವಿವೋ Y18 ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿದ್ದು, ಯುಎಸ್‌ಬಿ ಟೈಪ್‌ 2.0 ಮೂಲಕ 15W ಚಾರ್ಜಿಂಗ್ ಅನ್ನು ಸಪೋರ್ಟ್‌ ಪಡೆದಿದೆ. ಇದರೊಂದಿಗೆ ಕನೆಕ್ಟೆವಿಟಿ ಸೌಲಭ್ಯಗಳಲ್ಲಿ ಇದು ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ ಆವೃತ್ತಿ 5.0 ಸೌಲಭ್ಯ ಪಡೆದಿದೆ. ಇದರ ಜೊತೆಗೆ IP54 ರೇಟೆಡ್ ಆಗಿದ್ದು ಇದರಿಂದ ಧೂಳು ನಿರೋಧಕ ಮತ್ತು ನೀರು ನಿರೋಧಕ ಸೌಲಭ್ಯ ಪಡೆದಿದೆ. ಇದು 4GB + 64GB ವೇರಿಯಂಟ್‌ ಹಾಗೂ 4GB + 128GB ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ ಇದೆ.

Best Mobiles in India

English summary
vivo Y18 now available with a 28% discount price: check offer details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+