ಗ್ರಾಹಕ ಸ್ನೇಹಿ ಬೆಲೆಯಲ್ಲಿ ಲಭ್ಯವಿರುವ ಐದು ಆಕರ್ಷಕ ಬ್ಲೂಟೂತ್ ಸ್ಪೀಕರ್‌ಗಳು!
ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಆಡಿಯೋ ಸೌಲಭ್ಯ ಇದ್ದರೂ, ಇಂದಿನ ಬ್ಲೂಟೂತ್ ಸ್ಪೀಕರ್ಸ್‌ಗಳು ಮ್ಯೂಸಿಕ್ ಪ್ರಿಯ ಬಳಕೆದಾರರು ಮನ ಗೆದ್ದಿವೆ. ಬ್ಲೂಟೂತ್ ಸ್ಪೀಕರ್ಸ್‌ಗಳು ಹಗುರವಾದ ರಚನೆಯನ್ನು ಹೊಂದಿದ್ದು, ಜೊತೆಗೆ ಕೊಂಡ್ಯೂಯಲು ಸಹ ಕಂಫರ್ಟ್ ಅನಿಸಿವೆ. ಈ ನಿಟ್ಟಿನಲ್ಲಿ ಯಾವುದೇ ಪಾರ್ಟಿ ಇರಲಿ, ಮೋಜು ಮಸ್ತಿ ಇರಲಿ ಇಲ್ಲವೇ ಏಕಾಂತದ ಜರ್ನಿ ಇರಲಿ ಬಹುತೇಕರು ಅತ್ಯುತ್ತಮ ಬ್ಲೂಟೂತ್ ಸ್ಪೀಕರ್ಸ್ ಹೊಂದಲು ಬಯಸುತ್ತಾರೆ.

ಹೌದು, ಸದ್ಯ ಬ್ಲೂಟೂತ್ ಸ್ಪೀಕರ್ ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿಕಾಣಿಸಿಕೊಂಡಿದ್ದು, ತರಹೇವಾರಿ ವಿನ್ಯಾಸದಲ್ಲಿ ಗ್ರಾಹಕರ ಖರೀದಿಗೆ ಲಭ್ಯ ಇವೆ. ಪ್ರತಿಷ್ಠಿತ ಕಂಪನಿಗಳು ಸಹ ಗ್ರಾಹಕ ಸ್ನೇಹಿ ಬೆಲೆಯಲ್ಲಿ ಸ್ಪೀಕರ್ಸ್‌ಗಳನ್ನು ಪರಿಚಯಿಸಿವೆ. ಹಾಗೆಯೇ ಈ ಸ್ಪೀಕರ್ಸ್‌ಗಳು ವಾಟರ್‌ಪ್ರೂಫ್, ಹೆಚ್‌ಡಿಎಮ್‌ಐ, ಯುಎಸ್‌ಬಿ ಪೋರ್ಟ್ ಸೇರಿದಂತೆ ಇತ್ತೀಚಿಗಿನ ಕನೆಕ್ಟಿವಿಟಿ ಸೌಲಭ್ಯಗಳನ್ನು ಸಹ ಒಳಗೊಂಡಿವೆ. ಹಾಗಾದರೇ ಬಜೆಟ್ ದರದಲ್ಲಿ ಖರೀದಿಸಬಹುದಾದ ಐದು ಅತ್ಯುತ್ತಮ ಬ್ಲೂಟೂತ್ ಸ್ಪೀಕರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

JBL GO ಪೋರ್ಟಬಲ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್
JBL GO ಪೋರ್ಟಬಲ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್ ಅನ್ನು ಮೈಕ್‌ನೊಂದಿಗೆ ಬರುತ್ತದೆ. ಇನ್ನು ಸ್ಪೀಕರ್ ಒಟ್ಟು 6 ಬಣ್ಣದ ಆಯ್ಕೆಗಳನ್ನು ಪಡೆದಿದೆ. ಅವುಗಳು ಕ್ರಮವಾಗಿ ಹಳದಿ, ಗುಲಾಬಿ, ನೀಲಿ, ಕೆಂಪು, ಕಿತ್ತಳೆ ಮತ್ತು ಬೂದು ಆಗಿವೆ. ಗೂಗಲ್ ಅಸಿಸ್ಟಂಟ್ ಹಾಗೂ ಆಪಲ್ ಸಿರಿ ಸೌಲಭ್ಯವನ್ನು ಪಡೆದಿದೆ. ಇದರ ಬೆಲೆಯು ಅಮೆಜಾನ್ ತಾಣದಲ್ಲಿ 1499ರೂ. ಆಗಿದೆ.

ಫೈರ್-ಬೋಲ್ಟ್ ಸ್ಪೀಕರ್
ಫೈರ್-ಬೋಲ್ಟ್ ಎಕ್ಸ್‌ಪ್ಲೋಡ್ 1500 ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಹೊರಾಂಗಣ ಸ್ಪೀಕರ್ ಆಗಿದೆ. ಇದು ವರ್ಧಿತ ಬಾಸ್‌ನೊಂದಿಗೆ ಐಪಿಎಕ್ಸ್ 7 ಜಲನಿರೋಧಕ ಮತ್ತು ಹವಾಮಾನ ನಿರೋಧಕವಾಗಿದೆ. ಹಾಗೆಯೇ ಇದು ಕಪ್ಪು, ಹಸಿರು, ನೀಲಿ ಬಣ್ಣ ಆಯ್ಕೆಗಳು ಲಭ್ಯವಿದೆ. ಅಮೆಜಾನ್ ತಾಣದಲ್ಲಿ ಇದರ ಬೆಲೆಯು 1599ರೂ. ಆಗಿದೆ.

ಪೋರ್ಟ್ರೋನಿಕ್ಸ್ POR-871 ಸ್ಪೀಕರ್
ಪೋರ್ಟ್ರೋನಿಕ್ಸ್ ಪಿಒಆರ್ -871 ಸೌಂಡ್‌ಡ್ರಮ್ 4.2 ಸ್ಟಿರಿಯೊ ಪೋರ್ಟಬಲ್ ಸ್ಪೀಕರ್ ಆಗಿದೆ. ಅಬ್ಬರ್‌ದ ಆಡಿಯೋ ಅನ್ನು ಹೊರಹಾಕಲಿದೆ. ಇದು ಎಫ್‌ಎಂ ರೇಡಿಯೋ ಮತ್ತು ಇತರ ಬಹು ಸಂಪರ್ಕ ಆಯ್ಕೆಗಳೊಂದಿಗೆ ರೀಚಾರ್ಜೇಬಲ್ ಮಾಡಬಹುದಾದ ಬ್ಲೂಟೂತ್ ಸ್ಪೀಕರ್ ಆಗಿದೆ. ಇದರ ಬೆಲೆಯು 1840ರೂ. ಆಗಿದೆ.

ಐಬಾಲ್ Musi cube BT20
ಐಬಾಲ್ ಮ್ಯೂಸಿ ಕ್ಯೂಬ್ ಬಿಟಿ 20 ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಎಫ್ಎಂ ರೇಡಿಯೋ ಆಯ್ಕೆಗಳನ್ನು ಒಳಗೊಂಡಿದೆ. ಈ ಡಿವೈಸ್ ಚಿಕ್ಕದಾಗಿದ್ದು, ಕಂಪ್ಯಾಕ್ಟ್ ಮಾದರಿಯಲ್ಲಿದೆ. ಇನ್ನು ಈ ಡಿವೈಸ್ ಬೆಲೆಯು ಜಸ್ಟ್ 999ರೂ.ಗಳು ಆಗಿದೆ. USB, Micro SD, AUX ಸೌಲಭ್ಯಗಳನ್ನು ಪಡೆದಿದೆ.

ಫಿಲಿಪ್ಸ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್
ಫಿಲಿಪ್ಸ್ ಕಂಪನಿಯ ಈ BT50B ಪೋರ್ಟಬಲ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್ ಆಕರ್ಷಕ ಲುಕ್ ಪಡೆದಿದ್ದು, 10ಮೀ ವ್ಯಾಪ್ತಿ ಬ್ಲೂಟೂತ್ ಕವರೇಜ್ ಹೊಂದಿದೆ. ಇನ್ನು ಈ ಡಿವೈಸ್ ಕಪ್ಪು, ಬಿಳಿ, ನೀಲಿ ಮತ್ತು ಗ್ರೇ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಸುಮಾರು 6 ಗಂಟೆ ಬ್ಯಾಟರಿ ಬ್ಯಾಕ್‌ಅಪ್ ಒದಗಿಸುತ್ತದೆ. ಅಮೆಜಾನ್ ತಾಣದಲ್ಲಿ ಇದರ ಬೆಲೆಯು 1,355ರೂ. ಆಗಿದೆ.


Click it and Unblock the Notifications








