Home
Gadgets

ಕಡಿಮೆ ಬೆಲೆಗೆ ಲಭ್ಯವಿರುವ 5 ಅತ್ಯುತ್ತಮ Laptops ಲಿಸ್ಟ್‌ ಇಲ್ಲಿದೆ ನೋಡಿ!

ಪ್ರಸ್ತುತ ದಿನಗಳಲ್ಲಿ ಲ್ಯಾಪ್‌ಟಾಪ್‌ ಸಹ ಅಗತ್ಯ ಡಿವೈಸ್‌ ಆಗಿ ಬಿಂಬಿತವಾಗಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಹಲವು ಆಕರ್ಷಕ ಲ್ಯಾಪ್‌ಟಾಪ್‌ಗಳು ಎಂಟ್ರಿ ನೀಡುತ್ತಲೇ ಸಾಗಿವೆ. ಅನೇಕ ಬಳಕೆದಾರರು ಬಜೆಟ್‌ ದರದಲ್ಲಿ ಹಾಗೂ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಉತ್ತಮ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ. ಇನ್ನು ಬಜೆಟ್‌ ಬೆಲೆಯ ಲ್ಯಾಪ್‌ಟಾಪ್‌ಗಳಲ್ಲಿಯೂ ಆಕರ್ಷಕ ಫೀಚರ್ಸ್‌, ಸ್ಟೈಲಿಶ್‌ ಲುಕ್‌ ಹಾಗೂ ಹಗುರ ರಚನೆ ಕಾಣಬಹುದಾಗಿದೆ.

ಹೌದು, ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳು (Laptops) ಖರೀದಿಗೆ ಲಭ್ಯ ಇವೆ. ಇನ್ನು ಬಳಕೆದಾರರು ಅವರ ಕೆಲಸದ ಅಗತ್ಯಕ್ಕೆ ಅನುಗುಣವಾಗಿ ಲ್ಯಾಪ್‌ಟಾಪ್‌ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಾಗ್ಯೂ, ಅನೇಕರು ಬಜೆಟ್‌ ದರದಲ್ಲಿ ಸಿಗುವ ಲ್ಯಾಪ್‌ಟಾಪ್‌ ಆಕರ್ಷಕ ಎನಿಸುತ್ತವೆ. ಹಾಗಾದರೇ ಸುಮಾರು 30,000ರೂ. ಗಳ ಬೆಲೆ ಒಳಗೆ ಖರೀದಿ ಮಾಡಬಹುದಾದ ಕೆಲವು ಉತ್ತಮ ಲ್ಯಾಪ್‌ಟಾಪ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಕಡಿಮೆ ಬೆಲೆಗೆ ಲಭ್ಯವಿರುವ 5 ಅತ್ಯುತ್ತಮ Laptops ಲಿಸ್ಟ್‌ ಇಲ್ಲಿದೆ ನೋಡಿ!

ಆಸುಸ್‌ ವಿವೋಬುಕ್‌ ಗೋ 15

ಆಸುಸ್‌ ವಿವೋಬುಕ್‌ ಗೋ 15 (ASUS Vivobook Go 15 OLED Ryzen 3-7320U) ಲ್ಯಾಪ್‌ಟಾಪ್‌ 15.6 ಇಂಚಿನ ಪೂರ್ಣ HD OLED ಡಿಸ್‌ಪ್ಲೇ ಪಡೆದಿದ್ದು, ಉತ್ತಮ ಬ್ರೈಟ್ನೆಸ್‌, IPS LCD ಸ್ಕ್ರೀನ್‌ ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್‌ AMD Ryzen 3 7320U ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, ಇದರೊಂದಿಗೆ 8GB RAM ಹಾಗೂ 512GB SSD ಸ್ಟೋರೇಜ್‌ ಸೌಲಭ್ಯ ಒಳಗೊಂಡಿದೆ. ವಿಂಡೋಸ್‌ 11 ಸೌಲಭ್ಯ ಇದೆ. ಇನ್ನು ಈ ಲ್ಯಾಪ್‌ಟಾಪ್‌ ಹಗುರ ರಚನೆ ಪಡೆದಿದ್ದು, ಇದು 1.63KG ತೂಕ ಪಡೆದುಕೊಂಡಿದೆ.

ಹೆಚ್‌ಪಿ 15s AMD Ryzen 3 ಲ್ಯಾಪ್‌ಟಾಪ್‌

ಹೆಚ್‌ಪಿ 15s AMD Ryzen 3 Quad Core 5300U (HP 15s AMD Ryzen 3 Quad Core 5300U) ಲ್ಯಾಪ್‌ಟಾಪ್‌ 15.6 ಇಂಚಿನ ಪೂರ್ಣ HD ಡಿಸ್‌ಪ್ಲೇ ಪಡೆದಿದ್ದು, 1920 x 1080 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕೂಡಾ ಇಂಟೆಲ್‌ ಕೋರ್ i3 (Intel Core i3-1215U) ಪ್ರೊಸೆಸರ್‌ ಪವರ್‌ ಪಡೆದಿದ್ದು, ಇದರೊಂದಿಗೆ 8GB RAM ಹಾಗೂ 512GB SSD ಸ್ಟೋರೇಜ್‌ ಸೌಲಭ್ಯ ಒಳಗೊಂಡಿದೆ.

ಏಸರ್‌ ಆಸ್ಪಿರ್ ಲೈಟ್‌

ಏಸರ್‌ ಆಸ್ಪಿರ್ ಲೈಟ್‌ 12th Gen Intel Core i3-1215U (Acer Aspire Lite 12th Gen Intel Core i3-1215U) ಲ್ಯಾಪ್‌ಟಾಪ್‌ 15.6 ಇಂಚಿನ ಪೂರ್ಣ HD ಡಿಸ್‌ಪ್ಲೇ ಪಡೆದಿದ್ದು, 1920 x 1080 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್‌ ಕೂಡಾ ಇಂಟೆಲ್‌ ಕೋರ್ i3 (Intel Core i3-1215U) ಪ್ರೊಸೆಸರ್‌ ಪವರ್‌ ಪಡೆದಿದ್ದು, ಇದರೊಂದಿಗೆ 8GB RAM ಹಾಗೂ 512GB SSD ಸ್ಟೋರೇಜ್‌ ಸೌಲಭ್ಯ ಒಳಗೊಂಡಿದೆ. ಇನ್ನು ಏಸರ್‌ ಸಂಸ್ಥೆಯ ಲ್ಯಾಪ್‌ಟಾಪ್‌ ಸ್ಟೈಲಿಶ್‌ ಲುಕ್‌ ಜೊತೆಗೆ ಹಗುರ ರಚನೆ ಪಡೆದಿದ್ದು, ಇದು 1.59KG ತೂಕ ಒಳಗೊಂಡಿದೆ.

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 3

ಲೆನೊವೊ ಐಡಿಯಾಪ್ಯಾಡ್‌ ಸ್ಲಿಮ್‌ 3 11th Gen Core i3-1115G4 (Lenovo IdeaPad Slim 3 11th Gen Core i3-1115G4) ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಉತ್ತಮ ರೆಸಲ್ಯೂಶನ್‌ ಸೌಲಭ್ಯ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ AMD Ryzen 3 Quad Core 5300U ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದ್ದು, ಇದರೊಂದಿಗೆ 8GB RAM ಹಾಗೂ 256GB SSD ಸ್ಟೋರೇಜ್‌ ಸೌಲಭ್ಯ ಒಳಗೊಂಡಿದೆ. ವಿಂಡೋಸ್‌ 11 ಸೌಲಭ್ಯ ಇದೆ. ಇನ್ನು ಲೆನೊವಾದ ಈ ಲ್ಯಾಪ್‌ಟಾಪ್‌ ಸ್ಟೈಲಿಶ್‌ ಲುಕ್‌ ಜೊತೆಗೆ ಹಗುರ ರಚನೆ ಪಡೆದಿದ್ದು, ಇದು 1.7KG ತೂಕ ಪಡೆದುಕೊಂಡಿದೆ.

MSI ಮಾಡೆರ್ನ್ 14 ಲ್ಯಾಪ್‌ಟಾಪ್‌

MSI ಮಾಡೆರ್ನ್ 14 Intel Core i3 12th Gen 1215U (MSI Modern 14 Intel Core i3 12th Gen 1215U) ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇ ಪಡೆದಿದ್ದು, 60Hz ರಿಫ್ರೆಶ್‌ ರೇಟ್‌ ಸೌಲಭ್ಯ ಪಡೆದಿದೆ. ಇನ್ನು ಈ ಲ್ಯಾಪ್‌ಟಾಪ್‌ Intel Core i3 12th Gen 1215U ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದರೊಂದಿಗೆ 8GB RAM ಹಾಗೂ 512GB SSD ಸ್ಟೋರೇಜ್‌ ಸೌಲಭ್ಯ ಒಳಗೊಂಡಿದೆ.

Best Mobiles in India

English summary
5 Best Budget and Affordable Laptops in October 2024. check laptops, specifications, price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+