ಕಡಿಮೆ ಬೆಲೆಗೆ ಲಭ್ಯವಿರುವ 5 ಅತ್ಯುತ್ತಮ ಇಯರ್‌ಫೋನ್‌ಗಳು.!!
ಸ್ಮಾರ್ಟ್‌ಫೋನ್ ಜೊತೆಗೆ ಬರುತ್ತಿದ್ದ ಇಯರ್‌ಫೋನ್ ಬಳಸುವುದು ತುಂಬಾ ಕಡಿಮೆ ಆಗಿದ್ದು, ಇದೀಗ ಹಾಡುಗಳನ್ನು ಕೇಳಲು ಮ್ಯೂಸಿಕ್ ಪ್ರಿಯರ ಮೊದಲ ಆಯ್ಕೆ ಅತ್ಯುತ್ತಮ ಇಯರ್‌ಫೋನ್ ಖರೀದಿಸುವುದಾಗಿದೆ. ಇಯರ್‌ಫೋನ್ ಅನ್ನು ಕಿವಿಗೆ ಹಾಕಿಕೊಂಡು ಹಾಡುಗಳ ಕೇಳುತ್ತಾ ಪ್ರಯಾಣವನ್ನು ಮಾಡುವುದು ಟ್ರೆಂಡ್ ಆಗಿದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಇಯರ್‌ಫೋನ್‌ಗಳು ಲಭ್ಯ.

ಹೌದು, ಅಗ್ಗದ ಬೆಲೆಯಿಂದ ದುಬಾರಿ ಬೆಲೆಯವರೆಗೂ ಇಯರ್‌ಫೋನ್‌ಗಳು ದೊರೆಯುತ್ತಿದ್ದು, ಆದರೆ ಬಹುತೇಕ ಗ್ರಾಹಕರು ಬಜೆಟ್ ಬೆಲೆಯಲ್ಲಿ ದೊರೆಯುವ ಇಯರ್‌ಫೋನ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ. ಹೀಗಾಗಿ ಪ್ರಮುಖ ಇಯರ್‌ಪೋನ್ ಕಂಪನಿಗಳು ಕಡಿಮೆ ದರದಲ್ಲಿಯೂ ಉತ್ತಮ ಗುಣಮಟ್ಟದ ಇಯರ್‌ಫೋನ್‌ಗಳನ್ನು ಪರಿಚಯಿಸಿಸುವುದರ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಲೇ ಇವೆ.

ಪ್ರಸ್ತುತ ರೆಡ್ಮಿ, ಜೆಬಿಎಲ್, ಬೊಟ್, ರಿಯಲ್ ಮಿ, ಮತ್ತು ಆಂಟ್ ಕಂಪನಿಗಳ ಸೇರಿದಂತೆ ಇನ್ನೂ ಕೆಲವು ಪ್ರಮುಖ ಕಂಪನಿಗಳ ಅತ್ಯುತ್ತಮ ಗುಣಮಟ್ಟದ ಇಯರ್‌ಫೋನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಇವು ಬಜೆಟ್ ದರವನ್ನು ಹೊಂದಿವೆ. ಹೀಗಾಗಿ ಈ ಕಂಪನಿಗಳು ಗ್ರಾಹಕರ ಆಯ್ಕೆಯ ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ. ಹಾಗಾದರೇ ಅಗ್ಗದ ದರದಲ್ಲಿ ಸೆಳೆದಿರುವ ಪ್ರಮುಖ ಇಯರ್‌ಫೋನ್‌ಗಳನ್ನು ನೋಡೋಣ ಬನ್ನಿರಿ.

ರಿಯಲ್ ಮಿ ಬಡ್ಸ್
ರಿಯಲ್ ಮಿ ಕಂಪನಿಯ ಈ ವೈಯರ್ ಹೊಂದಿದ ಇಯರ್‌ಫೋನ್ ಮೈಕ್‌ಅನ್ನು ಹೊಂದಿದೆ. ಈ ಸಾಧನ 160 ಪರ್ಸೆಂಟ್ ಹೆಚ್ಚಿನ ಮತ್ತು ಆಳವಾದ ಬಾಸ್ ಅನ್ನು ಒಳಗೊಂಡಿದೆ. ಇದರ ಕೇಬಲ್ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದ್ದು, ಹೆಚ್ಚು ಬಾಳಿಕೆ ಬರಲಿದೆ. ಮೂರು ಕಂಟ್ರೂಲ್ ಬಟನ್‌ಗಳನ್ನು ಹೊಂದಿರುವ ಈ ಸಾಧನದ ಮಧ್ಯದ ಬಟನ್ ಒತ್ತುವ ಮೂಲಕ ಗೂಗಲ್ ವರ್ಚುವಲ್ ಅಸಿಸ್ಟಂಟ್ ಆಯ್ಕೆ ಬಳಸಬಹುದಾಗಿದೆ. 11mm ಡ್ರೈವರ್‌ಅನ್ನು ಹೊಂದಿದ್ದು, 20Hz-20,000kHz ತರಂಗಾತರದಲ್ಲಿ ಇರಲಿರುವ ಈ ಸಾಧನ 106 dB ಸೌಂಡ್ ಔಟ್‌ಪುಟ್ ಅನ್ನು ಹೊಂದಿದೆ. ಇದರ ಬೆಲೆಯು 499ರೂ.ಗಳು.

ಶಿಯೋಮಿ ಇಯರ್‌ಫೋನ್
ಶಿಯೋಮಿ ಇಯರ್‌ಫೋನ್‌ಗಳ ಸಹ ಕೇವ್ಲರ್ ಫೈಬರ್ ಕೇಬಲ್ ಹೊಂದಿದ್ದು, ಹೆಚ್ಚು ಕಾಲ ಬಾಳಿಕೆ ಬರಲಿವೆ. ಮೆಟಲ್ ಸೌಂಡ್ ಚೇಂಬರ್‌ನೊಂದಿಗೆ ಡೈನಾಮಿಕ್ ಬಾಸ್ ಸೌಂಡ್ ಹೊಂದಿರುವ ಜೊತೆಗೆ ಮೂರನೇ ಪೀಳಿಗೆ ಬ್ಯಾಲೆನ್ಸ್‌ಡ್ ಡ್ಯಾಂಪಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ವೈಯರ್‌ನಲ್ಲಿಯೇ ಮೂರು ಬಟನ್ಸ್‌ಗಳನ್ನು ನೀಡಲಾಗಿದ್ದು, ಅವು ಕರೆ ಸ್ವೀಕರಿಸುವ ಮತ್ತು ಸೌಂಡ್ ನಿಯಂತ್ರಿಸುವ ಬಟನ್‌ಗಳಾಗಿವೆ. ಇದರ ಬೆಲೆಯು 699ರೂ.ಗಳು.

ಜೆಬಿಎಲ್ C100SI ಇಯರ್‌ಫೋನ್
ಜೆಬಿಎಲ್ ಕಂಪನಿ ತನ್ನ ಗುಣಮಟ್ಟದ ಆಡಿಯೋ ಉತ್ಪನ್ನಗಳಿಂದ ಜನಪ್ರಿಯ ಆಗಿದ್ದು, ಕಂಪನಿಯ C100SI ಇಯರ್‌ಫೋನ್ ಹಗುರವಾದ ರಚನೆಯನ್ನು ಹೊಂದಿದ್ದು ಮತ್ತು ಮೈಕ್‌ಅನ್ನು ಒಳಗೊಂಡಿದೆ. ಇದರಲ್ಲಿರುವ 9mm ಡ್ರೈವರ್‌ಗಳು ಅತ್ಯುತ್ತಮ ಬಾಸ್ ಸೌಂಡ್ ಏರಿಳಿತವನ್ನು ಕೇಳಿಸುವುದಕ್ಕೆ ಪೂರಕವಾಗಿದೆ. ಐಓಎಸ್ ಮತ್ತು ಆಂಡ್ರಾಯ್ಡ್ ಮಾದರಿಗಳ ಫೋನ್‌ಗಳಿಗೂ ಹೊಂದುತ್ತದೆ. ಈ ಸಾಧನದ ಬೆಲೆಯು 699ರೂ.ಗಳು.

ಒನ್‌ಪ್ಲಸ್ Type-C ಬುಲೆಟ್ ಇಯರ್‌ಫೋನ್
ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಇಯರ್‌ಫೋನ್ ಇದಾಗಿದ್ದು, ಇದರಲ್ಲಿ ರೆಗ್ಯುಲರ್ 3.5mm ಕನೆಕ್ಟರ್ ಬದಲಿದೆ ಇದರಲ್ಲಿ Type-C ಇಂಟರ್‌ಫೇಸ್ ನೀಡಲಾಗಿದೆ. ಇದರೊಂದಿಗೆ ಮೆಟಲ್ ರಚನೆಯನ್ನು ಹೊಂದಿದೆ. ಪ್ರೊಫೇಶನಲ್ DAC ಸಹಯೋಗದೊಂದಿದಗೆ ಕ್ರುಸಸ್ ಲಾಜಿಕ್ ಇದ್ದು, ಇಯರ್‌ಫೋನಿನಲ್ಲಿ ಬಾಹ್ಯ ಶಬ್ದ ರಹಿತವಾದ ಸೌಂಡ್ ಕೇಳಿಸಲಿದೆ. ಕ್ಚಾಲಿಟಿಯು ಉತ್ತಮವಾಗಿದೆ. ಇದರ ಬೆಲೆಯು. 1490ರೂ.ಗಳು ಆಗಿದೆ.

ಸೋನಿ MDR-AS410AP
ಸೋನಿ MDR-AS410AP ಸ್ಪೋರ್ಟ್ಸ್ ಇಯರ್‌ಫೋನ್ ಆಗಿದ್ದು, ಇದರ ಬಡ್ಸ್ ಕಿವಿಗೆ ಅತ್ಯುತ್ತಮ ಗ್ರಿಪ್ ಒದಗಿಸಲಿದೆ. ಈ ಇಯರ್‌ಫೋನ್ ಬೆವರು ನಿರೋಧಕ ಆಗಿದ್ದು, 9mm ಡೈನಾಮಿಕ್ ಡ್ರೈವರ್‌ಗಳನ್ನು ಒಳಗೊಂಡಿದೆ. 5Hz-24,000Hz ತರಂಗಾಂತರವನ್ನು ಹೊಂದಿದೆ. ಉತ್ತಮವಾದ ಕೇಬಲ್‌ನೊಂದಿಗೆ ಮೈಕ್ ಅನ್ನು ಒಳಗೊಂಡಿದೆ. ಈ ಇಯರ್‌ಫೋನ್ ಬೆಲೆಯು 1799ರೂ.ಗಳು ಆಗಿದೆ.


Click it and Unblock the Notifications







