Just In
- 1 hr ago
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- 3 hrs ago
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- 3 hrs ago
ವಾಟ್ಸಾಪ್ಗೆ ಈ ಅಚ್ಚರಿಯ ಆಯ್ಕೆ ಸೇರೋದು ಪಕ್ಕಾ! ಇದರ ಬಗ್ಗೆ ಕೂಡಲೇ ತಿಳಿದುಕೊಳ್ಳಿ!
- 4 hrs ago
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ; ಈ ಪ್ಲ್ಯಾನ್ 28 ದಿನಕ್ಕಲ್ಲ ಬದಲಾಗಿ ಒಂದು ತಿಂಗಳ ಮಾನ್ಯತೆ!
Don't Miss
- Movies
ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ದೀಕ್ಷಿತ್ ಈಗ ಚಿತ್ರರಂಗದಲ್ಲಿ ಬ್ಯುಸಿ
- News
ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಗ್ಗದ ಬೆಲೆಗೆ ಲಭ್ಯವಿರುವ 5 ಫಿಟ್ನೆಸ್ ಬ್ಯಾಂಡ್‌ಗಳು!
ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್ ಬ್ಯಾಂಡ್‌ಗಳ ಡಿವೈಸ್‌ಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಈ ಡಿವೈಸ್‌ಗಳು ಫಿಟ್ನೆಸ್ ಪ್ರಿಯರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್ ಬ್ಯಾಂಡ್‌ಗಳಿದ್ದರೂ, ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡು ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಡಿವೈಸ್‌ಗಳಿಗೆನೇ ಗ್ರಾಹಕರು ಖರೀದಿಸಲು ಇಚ್ಚಿಸುತ್ತಾರೆ.

ಹೌದು, ಸದ್ಯ ಸ್ಮಾರ್ಟ್ ಬ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಅದರಲ್ಲಿಯೂ ದೈನಂದಿನ ಚಟುವಟಿಕೆಗಳನ್ನು ಟ್ರಾಕ್ ಮಾಡುವ, ಹೃದಯ ಬಡಿತ ಮಾನಿಟರ್ ಮಾಡುವ ಆಯ್ಕೆಗಳನ್ನು ಒಳಗೊಂಡು ಡಿವೈಸ್‌ಗಳು ಗ್ರಾಹಕರ ಖರೀದಿಯ ಲಿಸ್ಟ್‌ನಲ್ಲಿರುತ್ತವೆ. ಶಿಯೋಮಿ, ಹಾನರ್ ಮತ್ತು ಲೆನೊವಾ ಕಂಪನಿಗಳ ಸ್ಮಾರ್ಟ್ ಬ್ಯಾಂಡ್ ಡಿವೈಸ್‌ಗಳು ಅಗ್ಗದ ಬೆಲೆಯಲ್ಲಿ ಬೆಸ್ಟ್ ಎನಿಸಿಕೊಂಡಿವೆ. ಹಾಗಾದರೇ ಅಗ್ಗದ ಬೆಲೆಯಲ್ಲಿ ಲಭ್ಯವಿರುವ 5 ಬೆಸ್ಟ್ ಸ್ಮಾರ್ಟ್ ಬ್ಯಾಂಡ್‌ಗಳು ಯಾವುವು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಮಿ ಬಾಂಡ್ 3
ಶಿಯೋಮಿಯ ಈ ಡಿವೈಸ್ 0.78 ಇಂಚಿನ OLED ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಸುಮಾರು 20 ದಿನಗಳ ಬ್ಯಾಟರಿ ಬಾಳಿಕೆ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿವೈಸ್ ನಿರಂತರ ಹೃದಯ ಬಡಿತ, ಸ್ಲಿಪ್ ಟ್ರಾಕಿಂಗ್, ಕ್ಯಾಲೋರಿ ಬರ್ನ್ ಸೇರಿದಂತೆ ದೈನಂದಿನ ಆಕ್ಟಿವಿಟಿಗಳನ್ನು ಟ್ರಾಕ್ ಮಾಡುವ ಸೌಲಭ್ಯಗಳನ್ನು ಪಡೆದಿದೆ. ಫ್ಲಿಪ್‌ಕಾರ್ಟ್‌ನಲ್ಲಿ 1,999ರೂ.ಗಳಿಗೆ ಲಭ್ಯವಿದೆ.

ಹಾನರ್ ಬ್ಯಾಂಡ್ 3
ಈ ಸ್ಮಾರ್ಟ್ ಬ್ಯಾಂಡ್ ಧರಿಸಲು ಕಂಫರ್ಟ್ ಆಗಿದ್ದು, ನಿರಂತರ ಹೃದಯ ಬಡಿತ ಟ್ರ್ಯಾಕಿಂಗ್, ಸ್ಲಿಪ್ ಟ್ರಾಕಿಂಗ್, ದೈನಂದಿನ ಆಕ್ಟಿವಿಟಿಗಳನ್ನು ಟ್ರಾಕ್ ಮಾಡುವ ಸೌಲಭ್ಯಗಳನ್ನು ಸಹ ಪಡೆದಿದೆ. ಇದರ ಡಿಸ್‌ಪ್ಲೇಯು 0.78 ಇಂಚಿನಲ್ಲಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 30ದಿನಗಳ ಕಾಲ ಬಾಳಿಕೆ ಬರುವ ಸಾಮರ್ಥ್ಯ ಪಡೆದಿದೆ. ಫ್ಲಿಪ್‌ಕಾರ್ಟ್‌ನಲ್ಲಿ 2,249ರೂ.ಗಳಿಗೆ ಲಭ್ಯವಿದೆ.

ಲೆನೊವಾ HX03F ಸ್ಪೆಕ್ಟ್ರಾ ಬ್ಯಾಂಡ್
ಲೆನೊವಾದ ಈ ಸ್ಮಾರ್ಟ್ ಬ್ಯಾಂಡ್ ಡಿವೈಸ್ 7 ದಿನಗಳ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಹೃದಯ ಬಡಿತ, ಡೈಲಿ ಆಕ್ಟಿವಿಟಿಗಳ ಟ್ರ್ಯಾಕ್ ಹಂತಗಳು, ಕ್ರಮಿಸಿದ ದೂರ, ಕರಗಿದ ಕ್ಯಾಲೊರಿಗಳು ಮಾಹಿತಿ, ಪೆಡೋಮೀಟರ್, ಸ್ಲೀಪ್ ಮಾನಿಟರ್, ಅಲಾರ್ಮ್ ಕ್ಲಾಕ್ ರಿಮೈಂಡರ್, ಆಯಂಟಿ ಸ್ಲೀಪ್ ಮೋಡ್, ಸ್ಪೋರ್ಟ್ಸ್ ಟ್ರಾಕ್ ಮತ್ತು ನಡಿಗೆಯ ಟ್ರಾಕ್ ಸೌಲಭ್ಯಗಳನ್ನು ಪಡೆದಿದೆ. ಬೆಲೆಯು ಅಮೆಜಾನ್‌ನಲ್ಲಿ ಲಭ್ಯ.

ಮಿ ಬ್ಯಾಂಡ್ HRX ಎಡಿಷನ್
ಶಿಯೋಮಿ ಈ ಸ್ಮಾರ್ಟ್ ಬ್ಯಾಂಡ್ ಡಿವೈಸ್ 20 ದಿನಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಓಎಲ್‌ಇಡಿ ಡಿಸ್‌ಪ್ಲೇ ಹಾಗೂ ವಾಟರ್ ರೆಸಿಸ್ಟನ್ಸ್ ಸೌಲಭ್ಯಗಳನ್ನು ಪಡೆದಿದೆ. ಉಳಿದಂತೆ ಇದು ಸಹ ಬಳಕೆದಾರರ ದೈನಂದಿನ ಆಕ್ಟಿವಿಟಿಗಳನ್ನು ಟ್ರಾಕ್ ಮಾಡುವ ಸೌಲಭ್ಯಗಳನ್ನು ಒಳಗೊಂಡಿದೆ. ಹಾಗೆಯೇ ಸ್ಲಿಪ್ ಮಾನಿಟರಿಂಗ್, ಸ್ಟೆಪ್ ಟ್ರಾಕಿಂಗ್ ಆಯ್ಕೆಗಳಿವೆ. ಬೆಲೆಯು 1299ರೂ.ಗಳು ಆಗಿದೆ.

ನಾಯಿಸ್ ಕಲರ್ ಫಿಟ್ ಬ್ಯಾಂಡ್
0.96 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿರುವ ಈ ಡಿವೈಸ್ ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 3 ದಿನಗಳ ವರೆಗೂ ಬ್ಯಾಟರಿ ಬಾಳಿಕೆ ಒದಗಿಸಲಿದೆ. ಪೆಡೊಮೀಟರ್, ಬ್ಲಡ್ ಪ್ರೆಶರ್, ಡೈನಾಮಿಕ್ ಹಾರ್ಡ್ ರೇಟ್ ಸೆನ್ಸಾರ್, ಬ್ಲಡ್ ಆಕ್ಸಿಜನ್ ಡಿಟೆಕ್ಟಿಂಗ್ ಸೌಲಭ್ಯಗಳನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್ ಬೆಲೆಯು 1699ರೂ.ಗಳು ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470