Subscribe to Gizbot

ಜಿಯೋಫೈಗೆ ಪೈಫೋಟಿ ನೀಡಿದ ಏರ್‌ಟೆಲ್: 4G ಡಾಂಗಲ್ ದರ ಕಡಿತ, ಅಧಿಕ ಡೇಟಾ..!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ವೈ-ಫೈ ಹಾಟ್ ಸ್ಪಾಟ್ ಜಿಯೋ ಫೈ ಮಾರಾಟವನ್ನು ಪ್ರೋತ್ಸಾಹಿಸುವ ಸಲುವಾಗಿ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾವನ್ನು ತನ್ನ ಬಳಕೆದಾರಿಗೆ ನೀಡಿದೆ. ಇದೇ ಬೆನ್ನಲ್ಲಿ ಏರ್‌ಟೆಲ್ ಸಹ ತನ್ನ 4G ಡಾಂಗಲ್ ಬೆಲೆಯನ್ನು ಇಳಿಕೆ ಮಾಡಿದೆ. ಈ ಮೂಲಕ ಜಿಯೋಗೆ ಪ್ರಭಲ ಸ್ಪರ್ಧೆಯನ್ನು ನೀಡುವ ಸೂಚನೆಯನ್ನು ನೀಡಿದೆ ಎನ್ನಲಾಗಿದೆ.

ಜಿಯೋಫೈಗೆ ಪೈಫೋಟಿ ನೀಡಿದ ಏರ್‌ಟೆಲ್: 4G ಡಾಂಗಲ್ ದರ ಕಡಿತ, ಅಧಿಕ ಡೇಟಾ..!!

ಓದಿರಿ: ಧನ್ ಧನಾ ಧನ್ ಮುಗಿಯುವ ವೇಳೆಗೆ ಮತ್ತೊಂದು ಜಿಯೋ ಆಫರ್ ..!!

ಈಗಾಗಲೇ ಡೇಟಾ ಮತ್ತು ಕರೆ ದರದಲ್ಲಿ ಪೈಫೋಟಿ ನೀಡಿದ್ದ ಏರ್‌ಟೆಲ್ ಸದ್ಯ ಹಾಟ್‌ಸ್ಪಾಟ್ ನಲ್ಲಿಯೂ ಜಿಯೋ ಎದುರಾಗಿ ತೊಡೆತಟ್ಟಿ ನಿಂತಿದೆ ಎನ್ನಲಾಗಿದೆ. ಜಿಯೋ ಹೇಗೆ ತನ್ನ ವೈ-ಫೈ ಕೊಂಡವರಿಗೆ ಹೆಚ್ಚಿನ ಡೇಟಾವನ್ನು ನೀಡಿತ್ತೋ ಅದೇ ಮಾದರಿಯಲ್ಲಿ ಏರ್‌ಟೆಲ್ ಸಹ ಆಫರ್ ನೀಡಿದೆ. ಆಫರ್ ಬಗ್ಗೆ ಸಂಫೂರ್ಣ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4G ಡಾಂಗಲ್:

4G ಡಾಂಗಲ್:

ಮಾರುಕಟ್ಟೆಯಲ್ಲಿ ಲಭ್ಯವಿರುವ ಏರ್‌ಟೆಲ್ 4G ಡಾಂಗಲ್ ಅನ್ನು ಖರೀದಿಸಬೇಕಿದೆ. ಈ ಮೊದಲು ರೂ.3000ಕ್ಕೆ ಲಭ್ಯವಿದ್ದ ಡಾಂಗಲ್ ಸದ್ಯ ಮಾರುಕಟ್ಟೆಯಲ್ಲಿ ರೂ.1500ಕ್ಕೆ ದೊರೆಯುತ್ತಿದೆ.

ರೂ.499 ರೀಚಾರ್ಜ್ ಮಾಡಿಸಿಕೊಳ್ಳಿ:

ರೂ.499 ರೀಚಾರ್ಜ್ ಮಾಡಿಸಿಕೊಳ್ಳಿ:

ಏರ್‌ಟೆಲ್ ಡಾಂಗಲ್ ಖರೀದಿಸಿದ ನಂತರದಲ್ಲಿ ಗ್ರಾಹಕರು ರೂ.499ರ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಇದನ್ನು ಮಾಡಿಸಿದರೆ ಮಾತ್ರವೇ ಡೇಟಾ ಲಾಭ ದೊರೆಯಲಿದೆ.

35 GB 4G ಡೇಟಾ:

35 GB 4G ಡೇಟಾ:

ರೂ.499 ರೀಚಾರ್ಜ್ ಮಾಡಿಸಿದವರಿಗೆ 4G ವೇಗದ 35 GB ಡೇಟಾ ಬಳಕೆಗೆ ದೊರೆಯಲಿದ್ದು, ಅದುವೇ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Bharati Airtel is now offering 35GB of 4G data to 4G dongle users at a minimal cost of Rs 499. to konw more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot