Subscribe to Gizbot

ಧನ್ ಧನಾ ಧನ್ ಮುಗಿಯುವ ವೇಳೆಗೆ ಮತ್ತೊಂದು ಜಿಯೋ ಆಫರ್ ..!!

Written By:

ರಿಲಯನ್ಸ್ ಜಿಯೋ ತನ್ನ ಬಳಕೆದಾರಿಗೆ ಮತ್ತೊಂದು ಬಂಪರ್ ಆಫರ್ ಅನ್ನು ನೀಡಿದೆ. ತನ್ನ ಜಿಯೋಫೈ ವೈಫೈ ಡಿವೈಸ್ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಭರ್ಜರಿ ಆಫರ್ ವೊಂದನ್ನು ನೀಡಿದೆ. ಕೇವಲ ರೂ. 509ಕ್ಕೆ 224GB 4G ಡೇಟಾ ವನ್ನು ಬಳಕೆಗೆ ನೀಡುತ್ತಿದೆ. ಈ ಮೂಲಕ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.

ಧನ್ ಧನಾ ಧನ್ ಮುಗಿಯುವ ವೇಳೆಗೆ ಮತ್ತೊಂದು ಜಿಯೋ ಆಫರ್ ..!!

ಓದಿರಿ: ಜಿಯೋ ವಿರುದ್ಧ ಜಿದ್ದಿಗೆ ಬಿದ್ದ ಏರ್‌ಟೆಲ್ ಬೆಸ್ಟ್ ಯಾಕೆ..? ಉತ್ತರ ಇಲ್ಲಿದೆ

ಜಿಯೋ ಫೈ ಡಿವೈಸ್ ಮತ್ತು ನೂತನ ಜಿಯೋ ಸಿಮ್ ಕಾರ್ಡ್ ಪಡೆದುಕೊಳ್ಳುವವರಿಗೆ ಜಿಯೋ ಈ ಹೊಸ ಆಫರ್ ನೀಡಲು ಮುಂದಾಗಿದೆ. ಈ ಡೇಟಾ ಒಮ್ಮೆಗೆ ದೊರೆಯುವುದಿಲ್ಲ ಬದಲಿಗೆ ಪ್ರತಿ ತಿಂಗಳು ನೀವು ರೀಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ಹೆಚ್ಚುವರಿ ಡೇಟಾ ನಿಮ್ಮ ಖಾತೆಗೆ ಸೇರ್ಪಡೆಯಾಗುತ್ತಾ ಹೋಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಡೆಯವುದು ಹೇಗೆ..?

ಪಡೆಯವುದು ಹೇಗೆ..?

ಜಿಯೋ ಫೈ ಡಿವೈಸ್ ಮತ್ತು ನೂತನ ಜಿಯೋ ಸಿಮ್ ಕಾರ್ಡ್ ಪಡೆದ ಗ್ರಾಹಕರು ರೂ.99 ಅನ್ನು ನೀಡಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬೇಕಾಗಿದೆ. ಇದಾದ ನಂತರದಲ್ಲಿ ಅವರು ರೀಚಾರ್ಜ್ ಮಾಡಿಸಿಕೊಳ್ಳುವ ಆಫರ್ ಮೇಲೆ ಪ್ರತಿ ತಿಂಗಳು ಡೇಟಾ ಸೇರ್ಪಡೆಯಾಗಲಿದೆ.

ಪ್ರತಿ ತಿಂಗಳು ಸಿಗುವ ಡೇಟಾ ಎಷ್ಟು..?

ಪ್ರತಿ ತಿಂಗಳು ಸಿಗುವ ಡೇಟಾ ಎಷ್ಟು..?

ನೀವು ಒಮ್ಮೆ ರೂ.309ಕ್ಕೆ ರೀಚಾರ್ಜ್ ಮಾಡಿಸಿದರೆ ನಿಮಗೆ ಪ್ರತಿ ದಿನ 1GB ಡೇಟಾ ವನ್ನು ಒಟ್ಟು ಆರು ರಿಚಾರ್ಜ್ ಸೈಕಲ್ (28 ದಿನಗಳು X 6 ರಿಚಾರ್ಜ್ ಸರ್ಕಲ್) ನಲ್ಲಿ ನೀವು ಒಟ್ಟು 168 GB ಡೇಟಾವನ್ನು ಪಡೆಯಬಹುದಾಗಿದೆ.

ರೂ. 509ಕ್ಕೆ ರೀಚಾರ್ಜ್ ಮಾಡಿಸಿದರೆ..?

ರೂ. 509ಕ್ಕೆ ರೀಚಾರ್ಜ್ ಮಾಡಿಸಿದರೆ..?

ನೀವು ಒಮ್ಮೆ ರೂ.509ಕ್ಕೆ ರಿಚಾರ್ಜ್ ಮಾಡಿಸಿದರೆ ಪ್ರತಿ ದಿನ 2GB ಡೇಟಾ ವನ್ನು ಒಟ್ಟು 4 ರಿಚಾರ್ಜ್ ಸೈಕಲ್ ನಲ್ಲಿ (28 ದಿನಗಳು X 4 ರಿಚಾರ್ಜ್ ಸರ್ಕಲ್) 224 GB ಡೇಟಾ ವನ್ನು ಪಡೆದುಕೊಳ್ಳಬಹುದು.

 ಇದರೊಂದಿಗೆ ಇನ್ನು ಇದೆ:

ಇದರೊಂದಿಗೆ ಇನ್ನು ಇದೆ:

ಬರೀ ಡೇಟಾ ಮಾತ್ರವಲ್ಲದೇ ಜಿಯೋ ಆಪ್ ಗಳನ್ನು ಬಳಸುವುದು, ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶ ಮತ್ತು ಉಚಿತ ಎಸ್ಎಂಎಸ್‌ಗಳನ್ನು ಕಳುಹಿಸುವ ಅವಕಾಶವನ್ನು ಜಿಯೋ ತನ್ನ ಬಳಕೆದಾರರಿಗೆ ಮಾಡಿಕೊಡುತ್ತಿದೆ.

ಡಿವೈಸ್ ಬೆಲೆ:

ಡಿವೈಸ್ ಬೆಲೆ:

ಜಿಯೋ ಫೈ ರೂ. 1999ಕ್ಕೆ ಮಾರಾಟವಾಗುತ್ತಿದ್ದು, ಇದನ್ನು ಜಿಯೋ ರಿಟೇಲ್ ಸ್ಟೋರ್, ರಿಲಯನ್ಸ್ ಡಿಜಿಟಲ್ ಮತ್ತು ಆನ್‌ಲೈನಿನಲ್ಲಿ ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The new offer provides customers with up to 224GB data on purchasing a new JioFi device and a new Jio SIM card. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot