Airtel ನ ಈ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳಲ್ಲಿ OTT ಜೊತೆಗೆ ಭರ್ಜರಿ ಡೇಟಾ ಸೌಲಭ್ಯ ಖಚಿತ!
ದೇಶದ ದ್ವಿತೀಯ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರ್ತಿ ಏರ್‌ಟೆಲ್ (Airtel) ಕಂಪನಿಯು ಈಗಾಗಲೇ ಹಲವು ಯೋಜನೆಗಳ ಮೂಲಕ ಗ್ರಾಹಕರನ್ನು ಆಕರ್ಷಿಒಸಿದೆ. ಹಾಗೆಯೇ ಟಿವಿ ಪ್ರಯೋಜನಗಳನ್ನು ಒಳಗೊಂಡ ಸಂಸ್ಥೆಯ ಮೂರು ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು ಹೆಚ್ಚುವ ಗಮನ ಸೆಳದಿದ್ದು, ಅವುಗಳು 1000 ರೂ. ಗಳ ಒಳಗೆ ಲಭ್ಯ ಇವೆ. ಇದರಲ್ಲಿ ಟಿವಿ ಪ್ರಯೋಜನಗಳ ಜೊತೆಗೆ ಗ್ರಾಹಕರಿಗೆ OTT (ಓವರ್ ದಿ ಟಾಪ್) ಪ್ಲಾಟ್‌ಫಾರ್ಮ್ ಗಳಿಗೆ ಚಂದಾದಾರಿಕೆಗಳೂ ಸಿಗಲಿವೆ.
ಹೌದು, ಭಾರ್ತಿ ಏರ್‌ಟೆಲ್ (Airtel) ಸಂಸ್ಥೆಯು ಗ್ರಾಹಕರಿಗೆ ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡುವ ಆಯ್ಕೆಯನ್ನು ಸಹ ಒದಗಿದೆ. ಅಲ್ಲದೇ ಸಂಸ್ಥೆಯ ತಿಂಗಳಿಗೆ 599ರೂ, 699ರೂ ಮತ್ತು 899ರೂ ಬೆಲೆ ಮೂರು ಆಕರ್ಷಕ ಯೋಜನೆಗಳ ಆಯ್ಕೆ ಸಹ ನೀಡಿದೆ. ಈ ಬಜೆಟ್ ಬೆಲೆಯ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ (Airtel Xstream AirFiber Broadband) ಪ್ಲ್ಯಾನ್‌ಗಳು ಮನರಂಜನಾ ಪ್ರಯೋಜನಗಳನ್ನು ಬಯಸುವ ಬಳಕೆದಾರರಿಗೆ ಖಂಡಿತವಾಗಿಯೂ ಆಸಕ್ತಿದಾಯಕ ಎನಿಸಲಿವೆ. ಈ ಪ್ಲ್ಯಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್ 599 ರೂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಮಾಹಿತಿ
ಏರ್‌ಟೆಲ್ ಸಂಸ್ಥೆಯು 599 ರೂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ 30 Mbps ವೇಗದ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ OTT ಪ್ರಯೋಜನಗಳ ಜೊತೆಗೆ 3.3 TB FUP (fair usage policy) ಡೇಟಾ ಪ್ರಯೋಜನ ನೀಡುತ್ತದೆ. ಅಲ್ಲದೇ ಒಟಿಟಿ ಪ್ರಯೋಜನಗಳೆಂದರೆ ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಇದು 20+ OTT ಪ್ರಯೋಜನಗಳನ್ನು ಪಡೆದಿದೆ.
ಹಾಗೆಯೇ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ನಲ್ಲಿ 350+ ಟಿವಿ ಚಾನೆಲ್‌ಗಳನ್ನು ಹೊಂದಿದೆ (HD ಒಳಗೊಂಡಿದೆ). ಇನ್ನು ಗ್ರಾಹಕರು ಮೂರು ತಿಂಗಳ ಯೋಜನೆಯಂತಹ ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ಆಯ್ಕೆ ಮಾಡುತ್ತಿದ್ದರೇ, ವೈ-ಫೈ ರೂಟರ್ ಮತ್ತು ಇನ್‌ಸ್ಟಾಲೇಷನ್ ಉಚಿತವಾಗಿ ಸಿಗಲಿದೆ.
ಏರ್‌ಟೆಲ್ 699 ರೂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಮಾಹಿತಿ
ಏರ್‌ಟೆಲ್ ಸಂಸ್ಥೆಯು 699 ರೂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ 40 Mbps ವೇಗದ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ OTT ಪ್ರಯೋಜನಗಳ ಜೊತೆಗೆ 3.3 TB FUP (fair usage policy) ಡೇಟಾ ಪ್ರಯೋಜನ ನೀಡುತ್ತದೆ. ಅಲ್ಲದೇ ಒಟಿಟಿ ಪ್ರಯೋಜನಗಳೆಂದರೆ ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಇದು 20+ OTT ಪ್ರಯೋಜನಗಳನ್ನು ಪಡೆದಿದೆ. ಹಾಗೆಯೇ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ನಲ್ಲಿ 350+ ಟಿವಿ ಚಾನೆಲ್‌ಗಳನ್ನು ಹೊಂದಿದೆ (HD ಒಳಗೊಂಡಿದೆ).
ಏರ್‌ಟೆಲ್ 899 ರೂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಮಾಹಿತಿ
ಏರ್‌ಟೆಲ್ ಸಂಸ್ಥೆಯು 899 ರೂ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ 100 Mbps ವೇಗದ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ OTT ಪ್ರಯೋಜನಗಳ ಜೊತೆಗೆ 3.3 TB FUP (fair usage policy) ಡೇಟಾ ಪ್ರಯೋಜನ ನೀಡುತ್ತದೆ. ಅಲ್ಲದೇ ಒಟಿಟಿ ಪ್ರಯೋಜನಗಳೆಂದರೆ ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಇದು 20+ OTT ಪ್ರಯೋಜನಗಳನ್ನು ಪಡೆದಿದೆ. ಹಾಗೆಯೇ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ನಲ್ಲಿ 350+ ಟಿವಿ ಚಾನೆಲ್‌ಗಳನ್ನು ಹೊಂದಿದೆ.
ಏರ್‌ಟೆಲ್‌ನ ಇತರೆ ಯೋಜನೆಗಳ ಮಾಹಿತಿ
ಭಾರ್ತಿ ಏರ್‌ಟೆಲ್ 1000ರೂ. ಒಳಗೆ ಇತರೆ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿಯೂ ಬ್ರಾಡ್‌ಬ್ಯಾಂಡ್ ಯೋಜನೆಗಳ ಆಯ್ಕೆ ನೀಡಿದೆ. ಅವುಗಳು ಕ್ರಮವಾಗಿ ಏರ್‌ಟೆಲ್ 499 ರೂ, ಏರ್‌ಟೆಲ್ 799 ರೂ, ಏರ್‌ಟೆಲ್ 999 ರೂ. ಬೆಲೆಯಲ್ಲಿ ಇವೆ.


Click it and Unblock the Notifications








