ಅಮೆಜಾನ್ 'ಇಕೋ ಶೋ 5' ಡಿವೈಸ್‌ನ ರಿವ್ಯೂ ಹೈಲೈಟ್ಸ್!
ಅಮೆಜಾನ್ ಕಂಪನಿಯು ಇತ್ತೀಚಿಗೆ ಹೊಸದಾಗಿ 'ಇಕೋ ಶೋ 5' ಡಿವೈಸ್ ಅನ್ನು ಲಾಂಚ್ ಮಾಡಿದ್ದು, ಈ ಡಿವೈಸ್ ಹಲವು ಕಾರಣಗಳಿಂದ ಗ್ರಾಹಕರ ಗಮನ ಸೆಳೆದಿದೆ. ಮುಖ್ಯವಾಗಿ ಮನೆಗಳಲ್ಲಿ ಮತ್ತು ಆಫೀಸ್‌ಗಳಲ್ಲಿ ಅತ್ಯುತ್ತಮ ಮನರಂಜನೆಯ ಸಾಧನ ಎಂದು ಗುರುತಿಸಿಕೊಂಡಿದ್ದು, ಇದರೊಂದಿಗೆ ಅಲೆಕ್ಸಾ ವಾಯಿಸ್ ಕಮಾಂಡ್ ಸೌಲಭ್ಯವನ್ನು ಪಡೆದಿರುವುದರಿಂದ ವಾಯಿಸ್ ಮೂಲಕವೇ ನಿಯಂತ್ರಿಸಬಹುದಾಗಿದೆ.

ಅಮೆಜಾನ್ 'ಇಕೋ ಶೋ 5' ಡಿವೈಸ್ ಉತ್ತಮ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವುದರಿಂದ ವಿಡಿಯೊಗಳ ವೀಕ್ಷಣೆಗೆ ಬೆಸ್ಟ್ ಎನಿಸಿದ್ದು, ವಿಡಿಯೊ ಕಾಲಿಂಗ್ ಸೌಲಭ್ಯ, ನ್ಯೂಸ್ ವೀಕ್ಷಣೆ ಸೇರಿದಂತೆ ಅನೇಕ ಉಪಯುಕ್ತ ಫೀಚರ್ಸ್‌ಗಳನ್ನು ಹೊಂದಿದೆ. ಹಾಗಾದರೇ ಇಂದಿನ ಲೇಖನದಲ್ಲಿ ಅಮೆಜಾನ್ ಇಕೋ ಶೋ 5 ಸಾಧನವು ಇತರೆ ಏನೆಲ್ಲಾ ಸೌಲಭ್ಯಗಳನ್ನ ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬೆಸ್ಟ್ ಡಿಸ್‌ಪ್ಲೇ
ಅಮೆಜಾನ್ ಇಕೋ ಶೋ 5 ಡಿವೈಸ್ 5.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ವಿಡಿಯೊ ವೀಕ್ಷಣೆಗೆ ಸೂಕ್ತ ಎನಿಸಿಲಿದೆ. ಹಾಗಾಯೇ ಇದರಲ್ಲಿ ಹೆಚ್‌ಡಿ ಗುಣಮಟ್ಟದ ಕ್ಯಾಮೆರಾ ನೀಡಲಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದು. ವಿಡಿಯೊ ಕಾಲ್ ಮಾಡಲು ಸಹ ಹೆಚ್ಚು ಪ್ರಯೋಜನವಾಗಿದೆ.

ಗುಣಮಟ್ಟದ ವಿಡಿಯೊ ಮತ್ತು ಆಡಿಯೊ
ಅಮೆಜಾನ್ ಇಕೋ ಶೋ 5 ಡಿವೈಸ್ ಅಲೆಕ್ಸಾ ಬೆಂಬಲ ಪಡೆದಿದ್ದು, ವಾಯಿಸ್ ಮೂಲಕವೇ ವಿಡಿಯೊ ಮತ್ತಯ ಆಡಿಯೊ ಪ್ಲೇ ಮಾಡುವ ಆಯ್ಕೆ ಹೊಂದಿದೆ. ಫೇವರೇಟ್ ಶೋ, ಕೇಲವು ಚಾನಲ್‌ಗಳಿಂದ ನ್ಯೂಸ್ ವಿಡಿಯೊ ಕ್ಲಿಪ್, ಮತ್ತು ಪ್ರೈಮ್ ವಿಡಿಯೊಗಳು ಪ್ಲೇ ಆಗುತ್ತದೆ ಹಾಗಾಯೇ ಅಮೆಜಾನ್ ಮ್ಯೂಸಿಕ್, ಸಾವನ್, ಗಾನಾ, ಹಂಗಾಮಾ, ಟ್ಯೂನ್‌ಇನ್ ಸೇರಿದಂತೆ ಹಲವು ಮ್ಯೂಸಿಕ್ ಸೇವೆಗಳು ಲಭ್ಯವಾಗಲಿವೆ.

ಅಲೆಕ್ಸಾ ಬೆಂಬಲ
ಅಮೆಜಾನ್ ಇಕೋ ಶೋ 5 ಸಾಧನ ಅಮೆಜಾನ್ ಅಲೆಕ್ಸಾ ವಾಯಿಸ್ ರಿಕಗ್ನೈಸ್ ಸೌಲಭ್ಯ ಒಳಗೊಂಡಿದ್ದು, ಬಳಕೆದಾರರು ವಾಯಿಸ್ ಮೂಲಕವೇ ಇಕೋ ಶೋ ಸಾಧನವನ್ನು ಕಮಾಂಡ್ ಮಾಡಬಹುದಾಗಿದೆ ಮತ್ತು ನಿಯಂತ್ರಿಸಬಹುದಾಗಿದೆ. ಬಳಕೆದಾರರು ಹೇಳುವ ಎಲ್ಲವನ್ನು ಇದು ಗ್ರಹಿಸುವ ಸಾಮರ್ಥ್ಯವನ್ನು ಪಡೆದಿದೆ.

ವಿಡಿಯೊ ಕಾಲ್
ಅಮೆಜಾನ್ ಇಕೋ ಶೋ 5 ಡಿವೈಸ್ ಅತ್ಯುತ್ತಮ ಕ್ಯಾಮೆರಾವನ್ನು ಹೊಂದಿದ್ದು, ಈ ಮೂಲಕ ಫ್ರೆಂಡ್ಸ್ ಮತ್ತು ಕುಟುಂಬ ಸದಸ್ಯರೊಂದಿಗೆ ಹ್ಯಾಂಡ್ಸ್ ಫ್ರೀ ವಿಡಿಯೊ ಕಾಲ್ ಮಾಡುವ ಸೌಲಭ್ಯವನ್ನು ಹೊಂದಿದೆ. ಅಮೆಜಾನ ಇಕೋ, ಇಕೋ ಸ್ಪಾಟ್, ಅಲೆಕ್ಸಾ ಆಪ್ ಮತ್ತು ಸ್ಕೈಪ್ ಬಳಕೆ ಮಾಡುವ ಗೆಳೆಯ ಮತ್ತ ಕುಟುಂಬರೊಂದಿಗೆ ವಿಡಿಯೊ ಕಾಲ್ ಕನೆಕ್ಟ್ ಮಾಡಬಹುದು.

ಇಂಟರ್ನೆಟ್ ಸೇವೆಗಳು
ಮನರಂಜನೆಗಳ ಆಯ್ಕೆಗಳೊಂದಿಗೆ ಆನ್‌ಲೈನ್ ಸೇವೆಗಳನ್ನು ಪಡೆಯಲು ಇದು ನೆರವಾಗುವ ಆಯ್ಕೆಗಳಿವೆ. ಈ ಸಾಧನದ ಮೂಲಕ ಆನ್‌ಲೈನ್‌ನಲ್ಲಿ ಓಲಾ ಟ್ಯಾಕ್ಸಿ ಬುಕ್ಕ್, ಸಿನಿಮಾ ಟಿಕೆಟ್ ಬುಕ್ಕ್ ಮತ್ತು ಇತರೆ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ. ಜೊತೆಗೆ ನ್ಯೂಸ್ ಅಪ್‌ಡೇಟ್ ಹಾಗೂ ಇತರೆ ವಿಷಯಗಳ ಬಗ್ಗೆ ಅಪ್‌ಡೇಟ್ ಮಾಹಿತಿಗಳನ್ನು ತಿಳಿಯಬಹುದು.


Click it and Unblock the Notifications








