Home
Gadgets

ಮನರಂಜನೆಗೆ ಒಂದು ಸ್ಮಾರ್ಟ್‌ ಸಾಧನ ಅದುವೇ ಅಮೆಜಾನ್ 'ಇಕೊ ಶೋ'; ಇಲ್ಲಿದೇ ನೋಡಿ ರಿವ್ಯೂ!

ಪ್ರಸ್ತುತ ಹಲವು ಕಂಪನಿಗಳ ಸ್ಮಾರ್ಟ್‌ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಆದರೆ ಅಮೆಜಾನ್ ಅವುಗಳಿಗಿಂತ ಮುಂಚೂಣಿಯಲ್ಲಿರಬೇಕು ಎಂದು ಹೊಸ ಬಗೆಯ ಗೃಹ ಉಪಯೋಗಿ ಸ್ಮಾರ್ಟ್‌ಉತ್ಪನ್ನಗಳನ್ನು ಪರಿಚಯಿಸುತ್ತಲೇ ಸಾಗಿದ್ದು, ಇದೀಗ ಕಂಪನಿಯ 'ಇಕೋ ಶೋ' ಸ್ಮಾರ್ಟ್‌ ಸಾಧನ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

ಮನರಂಜನೆಗೆ ಸ್ಮಾರ್ಟ್‌ ಸಾಧನ ಅದುವೇ ಅಮೆಜಾನ್ 'ಇಕೊ ಶೋ'; ಇಲ್ಲಿದೇ ನೋಡಿ  ರಿವ್ಯೂ!

ಅಮೆಜಾನ್ ಈಗಾಗಲೇ ಇಕೋ ಡಾಟ್‌, ಇಕೋ ಸ್ಪಾಟ್‌, ಇಕೋ ಇನ್‌ಪುಟ್‌ ಮತ್ತು ಇಕೋ ಪ್ಲಸ್ ಉತ್ಪನ್ನಗಳನ್ನು ಪರಿಚಯಿಸಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅಮೆಜಾನಿನ ಸ್ಮಾರ್ಟ್‌ ಸಾಧನಗಳು ಉತ್ತಮ ಮಾರಾಟವನ್ನು ಸಹ ಕಂಡಿವೆ. ತನ್ನ ನೂತನ ಬಗೆಯ ಉತ್ಪನ್ನಗಳ ಮೂಲಕ ಸ್ಮಾರ್ಟ್‌ ಗ್ರಾಹಕರಿಗೆ ಹತ್ತಿರವಾಗಿರುವ ಕಂಪನಿ ಇದೀಗ ಭಾರತದಲ್ಲಿ 'ಇಕೋ ಶೋ' ಸ್ಮಾರ್ಟ್‌ ಸಾಧನವನ್ನು ಪರಿಚಯಿಸಿದೆ.

ಮನರಂಜನೆಗೆ ಸ್ಮಾರ್ಟ್‌ ಸಾಧನ ಅದುವೇ ಅಮೆಜಾನ್ 'ಇಕೊ ಶೋ'; ಇಲ್ಲಿದೇ ನೋಡಿ  ರಿವ್ಯೂ!

ವಿಡಿಯೋ, ಆಡಿಯೋ, ಫೋಟೋ, ಸಿನಿಮಾ, ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಅತ್ಯುತ್ತಮ ಮಲ್ಟಿಮೀಡಿಯಾ ಆಯ್ಕೆಗಳನ್ನು ಒದಗಿಸಲಿರುವ ಅಮೆಜಾನ್ ಎರಡನೇ ತಲೆಮಾರಿನ ಇಕೋ ಶೋ ಸಾಧನವು ಹಲವು ವೈಶೀಷ್ಟಗಳನ್ನು ಒಳಗೊಂಡಿದ್ದು, ಇದು ಅಲೆಕ್ಸಾ ವೈಯಸ್‌ ರೆಕಗ್ನೈಸ್‌ ಸಾಮರ್ಥ್ಯವನ್ನು ಸಹ ಪಡೆದುಕೊಂಡಿದೆ. ಹಾಗಾದರೇ ಅಮೆಜಾನ್ ಇಕೋ ಶೋ ಸಾಧನದ ಸ್ಪೆಷಲ್ ಫೀಚರ್ಸ್‌ಗಳನ್ನು ಹೇಗಿವೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ರಚನೆ

ಡಿಸ್‌ಪ್ಲೇ ಮತ್ತು ರಚನೆ

ಅಮೆಜಾನ್ ಇಕೋ ಶೋ ಫ್ಯಾಬ್ರಿಕ್ ರಚನೆಯನ್ನು ಹೊಂದಿದ್ದು, ನೋಡಲು ಪುಟ್ಟ ಟ್ಯಾಬ್‌ ಮಾದರಿಯಲ್ಲಿದೆ. ಈ ಸಾಧನವು 10 ಇಂಚಿನ ಹೆಚ್‌ಡಿ ರೆಸಲ್ಯೂಶನ್‌ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಸಂಪೂರ್ಣ ಮಲ್ಟಿಮೀಡಿಯಾ ಸಾಧನವಾಗಿದೆ. ಆಡಿಯೋ ಮತ್ತು ವಿಡಿಯೋ ಕಂಟೆಂಟ್ ಜೊತೆಗೆ ಅಲೆಕ್ಸಾ ವೈಯಸ್‌ ರೆಕಗ್ನೈಸ್‌ ಬೆಂಬಲವನ್ನು ಪಡೆದಿದೆ.

ಅಮೆಜಾನ್ ಪ್ರೈಮ್‌ ವಿಡಿಯೋ

ಅಮೆಜಾನ್ ಪ್ರೈಮ್‌ ವಿಡಿಯೋ

ಅಮೆಜಾನ್ ಇಕೋ ಶೋ ಸಾಧನಕ್ಕೆ ಅಮೆಜಾನ್ ಪ್ರೈಮ್‌ನ ಸಂಪೂರ್ಣ ಬೆಂಬಲವಿದ್ದು, ಈ ಸಾಧನದಲ್ಲಿ ಸಿನಿಮಾ, ವಿಡಿಯೋ ನ್ಯೂಸ್‌, ಆಡಿಯೋ ಕಾರ್ಯಕ್ರಮಗಳು, ಟಿವಿ ಕಾರ್ಯಕ್ರಮಗಳು ಸೇರಿದಂತೆ ಸಿನಿಮಾ ಟ್ರೈಲರ್‌ಗಳನ್ನು ಸಹ ವೀಕ್ಷಿಸಬಹುದಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಫೋಟೋಗಳನ್ನು ಸಹ ನೋಡಬಹುದಾಗಿದೆ.

ಅಮೆಜಾನ್ ಅಲೆಕ್ಸಾ

ಅಮೆಜಾನ್ ಅಲೆಕ್ಸಾ

ಅಮೆಜಾನ್ ಇಕೋ ಶೋ ಸಾಧನವು ಅಮೆಜಾನ್ ಅಲೆಕ್ಸಾ ವಾಯಿಸ್‌ ರಿಕಗ್ನೈಸ್‌ ಸೌಲಭ್ಯ ಲಭ್ಯವಿದ್ದು, ಬಳಕೆದಾರರು ವಾಯಿಸ್‌ ಮೂಲಕ ಇಕೋ ಶೋ ಸಾಧನವನ್ನು ಕಮಾಂಡ ಮಾಡಬಹುದಾಗಿದೆ ಮತ್ತು ನಿಯಂತ್ರಿಸಬಹುದಾಗಿದೆ.

ಅಮೆಜಾನ್ ಪ್ರೈಮ್‌ ಮ್ಯೂಸಿಕ್

ಅಮೆಜಾನ್ ಪ್ರೈಮ್‌ ಮ್ಯೂಸಿಕ್

ಮ್ಯೂಸಿಕ್‌ ಕೇಳಲು ಇಕೋ ಶೋ ಡಿವೈಸ್‌ ಅನ್ನು ಸ್ಪೀಕರ್ ಆಗಿಯು ಬಳಸಬಹುದಾಗಿದೆ ಅತ್ಯುತ್ತಮ ಡಾಲ್ಬಿ ಸೌಂಡ್‌ ಅನ್ನು ಹೊರಸೂಸಲಿದೆ. ಮ್ಯೂಸಿಕ್ ಸ್ಟ್ರೀಮಿಂಗ್ ಸರ್ವೀಸ್‌ ಆಯ್ಕೆಗಳಾದ ಗಾನಾ, ಜಿಯೋ ಸಾವನ್ ಮತ್ತು ಅಮೆಜಾನ್ ಪ್ರೈಮ್ ಮ್ಯೂಸಿಕ್ ಆಯ್ಕೆಗಳನ್ನು ಸಹ ಸಹಕರಿಸಲಿದೆ.

ಆನ್‌ಲೈನ್‌ ಸೇವೆಗಳು

ಆನ್‌ಲೈನ್‌ ಸೇವೆಗಳು

ಮನರಂಜನೆಗಳ ಆಯ್ಕೆಗಳೊಂದಿಗೆ ಆನ್‌ಲೈನ್‌ ಸೇವೆಗಳನ್ನು ಪಡೆಯಲು ಇದು ನೆರವಾಗಲಿದ್ದು, ಈ ಸಾಧನದ ಮೂಲಕ ಆನ್‌ಲೈನ್‌ನಲ್ಲಿ ಓಲಾ ಟ್ಯಾಕ್ಸಿ ಬುಕ್ಕ್‌, ಸಿನಿಮಾ ಟಿಕೆಟ್ ಬುಕ್ಕ್‌ ಮತ್ತು ಇತರೆ ಆನ್‌ಲೈನ್‌ ಬುಕ್ಕಿಂಗ್ ಮಾಡಬಹುದಾಗಿದೆ. ಜೊತೆಗೆ ನ್ಯೂಸ್‌ ಅಪ್‌ಡೇಟ್‌ ಹಾಗೂ ಇತರೆ ವಿಷಯಗಳ ಬಗ್ಗೆ ಅಪ್‌ಡೇಟ್‌ ಮಾಹಿತಿಗಳನ್ನು ತಿಳಿಯಬಹುದು.

ಉಚಿತ ವಿಡಿಯೊ ಕರೆ

ಉಚಿತ ವಿಡಿಯೊ ಕರೆ

ಅಮೆಜಾನ್ ಇಕೋ ಶೋ ಡಿವೈಸ್‌ 5 ಮೆಗಾಪಿಕ್ಸಲ್ ಕ್ಯಾಮೆರಾವನ್ನು ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಫೋಟೋ ಸೆರೆಹಿಡಿಯಬಹುದು. ಇದರೊಂದಿಗೆ ಅಮೆಜಾನ್ ಇಕೋ ಸಾಧನದಿಂದ ಇಕೋ ಸಾಧನಕ್ಕೆ ಉಚಿತ ವಿಡಿಯೊ ಕರೆ ಮಾಡುವ ಸೌಲಭ್ಯವನ್ನು ನೀಡಲಾಗಿದೆ.

ಲಾಂಚ್ ಆಫರ್‌

ಲಾಂಚ್ ಆಫರ್‌

ಭಾರತೀಯ ಮಾರುಕಟ್ಟೆಗೆ ಎಂಟ್ರಿಕೊಟ್ಟಿರುವ ಇಕೋ ಶೋ ಡಿವೈಸ್‌ಗೆ ಭರ್ಜರಿ ಲಾಂಚ್ ಆಫರ್‌ ನೀಡಲಾಗಿದ್ದು, ಆರಂಭದಲ್ಲಿ ಈ ಸಾಧನವನ್ನು ಖರೀದಿಸುವ ಗ್ರಾಹಕರಿಗೆ ಪಿಲಿಪ್ಸ್ hue ಸ್ಮಾರ್ಟ್‌ ಲೈಟ್‌ಬಲ್ಬ್‌ ಉಚಿತವಾಗಿ ದೊರೆಯಲಿದೆ. ಮತ್ತು ಸಿಟಿಬ್ಯಾಂಕ್ ಕಾರ್ಡ್‌ಬಳಸಿ ಖರೀದಿಸಿದರೇ 2000ರೂ.ಗಳವರೆಗೆ ಕ್ಯಾಶ್‌ಬ್ಯಾಕ್‌ ಸೀಗಲಿದ್ದು, ಬ್ಯಾಂಕ್‌ಗಳು ನೋ ಕಾಸ್ಟ್‌ EMI ಆಯ್ಕೆ ಸಹ ನೀಡಲಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಅಮೆಜಾನ್ನಲ್ಲಿ ಇಕೋ ಶೋ ಡಿವೈಸ್‌ ಲಭ್ಯವಿದ್ದು, ಆನ್‌ಲೈನ್‌ ಮೂಲಕ ಖರೀದಿಸಬಹುದಾಗಿದೆ. ಇದರ ಬೆಲೆಯು 22,999ರೂ.ಗಳು ಆಗಿದೆ. ಇದರೊಂದಿಗೆ ಆರಂಭದಲ್ಲಿ ಖರೀದಿಸುವ ಗ್ರಾಹಕರಿಗೆ ಪಿಲಿಪ್ಸ್ hue ಸ್ಮಾರ್ಟ್‌ ಲೈಟ್‌ಬಲ್ಬ್‌ ಉಚಿತವಾಗಿ ದೊರೆಯಲಿದೆ.

Best Mobiles in India

English summary
Amazon Echo Show launched in India, now available for Rs 22,999.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+