Home
Gadgets

ಅಮೆಜಾನ್ ಸಮ್ಮರ್ ಅಪ್ಲೈಯನ್ಸ್ ಫೆಸ್ಟ್ 2024: ಈ ಎಲ್ಲಾ ಡಿವೈಸ್‌ಗಳಿಗೆ ಬೆಸ್ಟ್‌ ಆಫರ್

ಬೇಸಿಗೆ ಆರಂಭ ಆಗುತ್ತಿದ್ದಂತೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ವಿಶೇಷ ಸೇಲ್‌ ಆನ್ನು ಆಯೋಜನೆ ಮಾಡುತ್ತವೆ. ಅದರಂತೆ ಈಗ ಅಮೆಜಾನ್ ಸಮ್ಮರ್ ಅಪ್ಲೈಯನ್ಸ್ ಫೆಸ್ಟ್ 2024 ಅನ್ನು ಘೋಷಣೆ ಮಾಡಿದ್ದು, ಎಸಿ, ವಾಷಿಂಗ್‌ ಮೆಷಿನ್, ರೆಫ್ರಿಜರೇಟರ್‌ ಸೇರಿದಂತೆ ಅನೇಕ ಡಿವೈಸ್‌ಗಳ ಮೇಲೆ ಭಾರೀ ಆಫರ್ ನೀಡುತ್ತಿದೆ.

ಹೌದು, ಈ ಬಿರುಬೇಸಿಗೆಯನ್ನು ತಣ್ಣನೆ ಅನುಭವ ಪಡೆಯಲು ಮುಂದಾಗಿದ್ರೆ ಈ ವಿಶೇಷ ಸೇಲ್‌ನಲ್ಲಿ ಕಾಣಿಸಿಕೊಂಡಿರುವ ಎಸಿಗಳನ್ನು ಖರೀದಿ ಮಾಡಬಹುದಾಗಿದೆ. ಅಲ್ಲದೆ ಇತರೆ ಮನೆಗೆ ಬೇಕಾದ ವಸ್ತುಗಳು ಲಭ್ಯ ಇದ್ದು, ನೋ ಕಾಸ್ಟ್‌ ಇಎಂಐ ಸೌಲಭ್ಯ ಸಹ ಇದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಡಿವೈಸ್‌ಗಳು ಈ ವಿಶೇಷ ಸೇಲ್‌ನಲ್ಲಿ ಲಭ್ಯ ಇವೆ. ಅವುಗಳ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಅಮೆಜಾನ್ ಸಮ್ಮರ್ ಅಪ್ಲೈಯನ್ಸ್ ಫೆಸ್ಟ್ 2024: ಈ ಡಿವೈಸ್‌ಗಳಿಗೆ ಬೆಸ್ಟ್‌ ಆಫರ್..

ಎಲ್‌ಜಿ 1.5 ಟನ್ 5 ಸ್ಟಾರ್ ಡ್ಯುಯಲ್ ಇನ್ವರ್ಟರ್ ಸ್ಪ್ಲಿಟ್ ಎಸಿ: ಅಮೆಜಾನ್‌ನಲ್ಲಿ ಇದು ಅತ್ಯಂತ ಜನಪ್ರಿಯ ಸ್ಪ್ಲಿಟ್ ಎಸಿಗಳಲ್ಲಿ ಒಂದಾಗಿದ್ದು, ಈ ನೀವು ಏನು ಮಾಡುತ್ತಿದ್ದೀರಿ ಮತ್ತು ಎಷ್ಟು ಜನರು ಕೋಣೆಯಲ್ಲಿದ್ದಾರೆ ಎಂಬುದರ ಆಧಾರದ ಮೇಲೆ ಕಸ್ಟಮೈಸ್ ಮಾಡಬಹುದಾದ ಆಯ್ಕೆಗಳನ್ನು ಇದು ಹೊಂದಿದೆ. ಅಂದರೆ 6 ಮೋಡ್‌ಗಳೊಂದಿಗೆ ಬರಲಿದ್ದು, ಎಐ ಫೀಚರ್ಸ್‌ ಅನ್ನೂ ಸಹ ಇದರಲ್ಲಿ ಕಾಣಬಹುದು. ಈ ಎಸಿಯು 52 ಡಿಗ್ರಿ ಸೆಲ್ಸಿಯಸ್ ವರೆಗಿನ ಹೆಚ್ಚಿನ ತಾಪಮಾನವನ್ನು ನಿಭಾಯಿಸಬಲ್ಲದು.

ಪ್ಯಾನಾಸೋನಿಕ್ 1.5 ಟನ್ 5 ಸ್ಟಾರ್ ವೈ-ಫೈ ಇನ್ವರ್ಟರ್ ಸ್ಪ್ಲಿಟ್ ಎಸಿ: ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಕೆಲಸ ಮಾಡುವ ಸ್ಮಾರ್ಟ್ ಫೀಚರ್ಸ್‌ ಇರುವ ಎಸಿ ಖರೀದಿ ಮಾಡಲು ಮುಂದಾದರೆ ಇದು ಉತ್ತಮ ಆಯ್ಕೆ ಆಗಿರಲಿದೆ. ಇದು 5-ಸ್ಟಾರ್ ರೇಟಿಂಗ್‌ ಹೊಂದಿದ್ದು, ಇದನ್ನು ಕಂಟ್ರೋಲ್‌ ಮಾಡಲು ರಿಮೋಟ್, ಪ್ಯಾನಾಸೋನಿಕ್ ಮಿರೈ ಆಪ್‌ ಅಥವಾ ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ ವನ್ನು ಬಳಕೆ ಮಾಡಬಹುದು.

ಅಮೆಜಾನ್ ಸಮ್ಮರ್ ಅಪ್ಲೈಯನ್ಸ್ ಫೆಸ್ಟ್ 2024: ಈ ಡಿವೈಸ್‌ಗಳಿಗೆ ಬೆಸ್ಟ್‌ ಆಫರ್..

ವೋಲ್ಟಾಸ್ 1 ಟನ್ 3 ಸ್ಟಾರ್, ಇನ್ವರ್ಟರ್ ಸ್ಪ್ಲಿಟ್ ಎಸಿ: ವೋಲ್ಟಾಸ್‌ನ ಎಸಿ ಅಮೆಜಾನ್ ಸಮ್ಮರ್ ಅಪ್ಲೈಯನ್ಸ್ ಫೆಸ್ಟ್‌ನಿಂದ ಉತ್ತಮ ಮೌಲ್ಯದ ಏರ್ ಕಂಡಿಷನರ್‌ಗಳಲ್ಲಿ ಒಂದಾಗಿದೆ. ಇದರ ಬೆಲೆ ರೂ 30,000 ಕ್ಕಿಂತ ಕಡಿಮೆ ಇದೆ. ಇದು ಬಹುತೇಕ ಎಲ್ಲಾ ಅಗತ್ಯ ಫೀಚರ್ಸ್‌ ಆಯ್ಕೆ ಪಡೆದಿದ್ದು, 52 ° C ನಲ್ಲಿ ತಂಪಾಗಿಸುವಿಕೆಯ ಭರವಸೆ ನೀಡುತ್ತದೆ. ಹಾಗೆಯೇ 4-ಇನ್-1 ಹೊಂದಾಣಿಕೆ ಮೋಡ್ ಆಯ್ಕೆ, ಡಸ್ಟ್‌ ಫಿಲ್ಟರ್ ಆಯ್ಕೆಯನ್ನು ಇದರಲ್ಲಿ ಕಾಣಬಹುದು.

ಸ್ಯಾಮ್‌ಸಂಗ್‌ 236 L, 3 ಸ್ಟಾರ್, ಡಿಜಿಟಲ್ ಇನ್ವರ್ಟರ್, ಫ್ರಾಸ್ಟ್ ಫ್ರೀ ಡಬಲ್ ಡೋರ್ ರೆಫ್ರಿಜರೇಟರ್: ಈ ಸ್ಯಾಮ್‌ಸಂಗ್ ಡಬಲ್-ಡೋರ್ ರೆಫ್ರಿಜರೇಟರ್ಅನ್ನು ನೀವು 25,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಚಲಿಸಬಲ್ಲ ಟ್ವಿಸ್ಟ್ ಐಸ್ ಮೇಕರ್, ಟಫ್ಡ್ ಗ್ಲಾಸ್ ಶೆಲ್ಫ್‌ಗಳು, ಡಿಯೋಡರೈಸಿಂಗ್ ಫಿಲ್ಟರ್, ಆಲ್-ರೌಂಡ್ ಕೂಲಿಂಗ್ ಮತ್ತು ಇನ್ನೂ ಹಲವು ಆಕರ್ಷಕ ಫೀಚರ್ಸ್‌ ಅನ್ನು ಹೊಂದಿದ್ದು, ಉತ್ತಮವಾಗಿ ಕೆಲಸ ಮಾಡಲಿದೆ.

ಅಮೆಜಾನ್ ಸಮ್ಮರ್ ಅಪ್ಲೈಯನ್ಸ್ ಫೆಸ್ಟ್ 2024: ಈ ಡಿವೈಸ್‌ಗಳಿಗೆ ಬೆಸ್ಟ್‌ ಆಫರ್..

ಎಲ್‌ಜಿ 9 ಕೆಜಿ 5 ಸ್ಟಾರ್ ವೈ-ಫೈ ಇನ್ವರ್ಟರ್ ಎಐ ಡೈರೆಕ್ಟ್ ಡ್ರೈವ್ ವಾಷಿಂಗ್ ಮೆಷಿನ್: ನೀವು ದೊಡ್ಡ ವಾಷಿಂಗ್ ಮೆಷಿನ್ ಖರೀದಿ ಮಾಡಲು ಮುಂದಾಗಿದ್ರೆ ಇದು ಉತ್ತಮ ಆಯ್ಕೆ ಆಗಿರಲಿದೆ. ಈ ವಾಷಿಂಗ್ ಮೆಷಿನ್‌ನ ಎಐ ಡೈರೆಕ್ಟ್ ಡ್ರೈವ್ ಫೀಚರ್ಸ್‌ ಬಟ್ಟೆಯ ತೂಕ ಮತ್ತು ಮೃದುತ್ವಕ್ಕೆ ಅನುಗುಣವಾಗಿ 20,000 ವಾಶ್ ಮಾದರಿಗಳಿಂದ ಆಟೋಮ್ಯಾಟಿಕ್‌ ಆಗಿ ಹೊಂದಾಣಿಕೆ ಆಗುತ್ತದೆ.

Best Mobiles in India

English summary
Amazon has just announced the Amazon Summer Appliance Fest 2024. huge offers on many devices including AC, washing machine, refrigerator.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+