Home
Gadgets

AMOLED ಡಿಸ್‌ಪ್ಲೇಯ ಬೆಸ್ಟ್‌ ಸ್ಮಾರ್ಟ್‌ವಾಚ್‌ಗಳ ಲಿಸ್ಟ್‌ ಇಲ್ಲಿದೆ!

ಸದ್ಯ ಮೊಬೈಲ್‌ಗಳಂತೆ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನ ಪಡೆದಿವೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ವಾಚ್‌ ತಯಾರಿಕಾ ಸಂಸ್ಥೆಗಳು ಸಹ ಭಿನ್ನ ಫೀಚರ್ಸ್‌ ಜೊತೆಗೆ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತ ಸಾಗಿವೆ. ಆ ಪೈಕಿ ಅಮೊಲೆಡ್‌ (AMOLED) ಡಿಸ್‌ಪ್ಲೇ ಒಳಗೊಂಡ ಸ್ಮಾರ್ಟ್‌ವಾಚ್‌ಗಳು ಹೆಚ್ಚು ಗಮನ ಸೆಳೆದಿವೆ.

ಹೌದು, ಪ್ರಸ್ತುತ ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್‌ವಾಚ್‌ ಡಿವೈಸ್‌ಗಳು ಖರೀದಿಗೆ ಲಭ್ಯ ಇವೆ. ಅವುಗಳಲ್ಲಿ ಅಮೊಲೆಡ್‌ ಡಿಸ್‌ಪ್ಲೇ ಇರುವ ವಾಚ್‌ಗಳು ಡಿಮ್ಯಾಂಡ್‌ ಪಡೆದಿವೆ. ಈ ಮಾದರಿಯ ಡಿಸ್‌ಪ್ಲೇ, ಬಳಕೆದಾರರಿಗೆ ಅನುಕೂಲಕರ ಎನಿಸುತ್ತದೆ. ಮುಖ್ಯವಾಗಿ 5,000ರೂ. ಬೆಲೆಯ ಒಳಗೆ ಲಭ್ಯ ಇರುವ ಅಮೊಲೆಡ್‌ ಡಿಸ್‌ಪ್ಲೇಯ ಸ್ಮಾರ್ಟ್‌ವಾಚ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

AMOLED ಡಿಸ್‌ಪ್ಲೇಯ ಬೆಸ್ಟ್‌ ಸ್ಮಾರ್ಟ್‌ವಾಚ್‌ಗಳ ಲಿಸ್ಟ್‌ ಇಲ್ಲಿದೆ!

ಅಮಾಜಿಫಿಟ್‌ ಪಾಪ್‌ 3R (Amazfit Pop 3R) ಸ್ಮಾರ್ಟ್‌ವಾಚ್‌ : ಈ ಸ್ಮಾರ್ಟ್‌ವಾಚ್‌ 1.43 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು ಅಮೊಲೆಡ್‌ ಮಾದರಿಯಲ್ಲಿದೆ. ಹಾಗೆಯೇ ಈ ವಾಚ್‌ ವಾಟರ್‌ ರೆಸಿಸ್ಟನ್ಸ್‌, ಡಸ್ಟ್‌ ಪ್ರೂಫ್‌, ಹಾರ್ಟ್‌ ರೇಟ್ ಮಾನಿಟರಿಂಗ್ ನಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಇದರೊಂದಿಗೆ ಬ್ಲೂಟೂತ್‌ ಕಾಲಿಂಗ್, ವೈ-ಫೈ, ಸ್ಟೇಪ್‌ ಕೌಂಟ್‌, 12 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದೆ. ಜೊತೆಗೆ ಆಂಡ್ರಾಯ್ಡ್ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಸಪೋರ್ಟ್‌ ಪಡೆದಿದೆ.

ಅಮಾಜಿಫಿಟ್‌ ಪಾಪ್‌ 3s (Amazfit Pop 3s) ಸ್ಮಾರ್ಟ್‌ವಾಚ್‌ : ಈ ಸ್ಮಾರ್ಟ್‌ವಾಚ್‌ 1.96 ಇಂಚಿನ ಡಿಸ್‌ಪ್ಲೇ ಪಡೆದಿದ್ದು, ಡಿಸ್‌ಪ್ಲೇಯು ಅಮೊಲೆಡ್‌ ಮಾದರಿಯಲ್ಲಿದೆ. ಹಾಗೆಯೇ ಈ ವಾಚ್‌ SpO2, 12 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಮ್ಯಾಗ್ನೆಟಿಕ್‌ ಚಾರ್ಜಿಂಗ್, ವಾಟರ್‌ ಪ್ರೂಫ್‌, ಹಾರ್ಟ್‌ ರೇಟ್ ಮಾನಿಟರಿಂಗ್ ನಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಇದರೊಂದಿಗೆ ಬ್ಲೂಟೂತ್‌ ಕಾಲಿಂಗ್, ವೈ-ಫೈ, ಸ್ಟೇಪ್‌ ಕೌಂಟ್‌ ಆಯ್ಕೆ ಇದೆ. ಜೊತೆಗೆ ಆಂಡ್ರಾಯ್ಡ್ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಸಪೋರ್ಟ್‌ ಪಡೆದಿದೆ.

ನಾಯ್ಸ್‌ ಕಲರ್‌ಫಿಟ್‌ ವಿಷನ್‌ 3 (Noise ColorFit Vision 3) ಈ ವಾಚ್‌ 1.96 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 410 x 502 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 150 ಕ್ಕೂ ಹೆಚ್ಚು ವಾಚ್‌ಫೇಸ್‌ ಸಪೋರ್ಟ್‌ ಪಡೆದಿದ್ದು, ಕ್ರೌನ್‌ ಬಟನ್‌ ಈ ವಾಚ್‌ಗೆ ಮತ್ತಷ್ಟು ಮೆರಗು ನೀಡುತ್ತದೆ.

ಹಾಗೆಯೇ ಈ ವಾಚ್‌ ಬ್ಲೂಟೂತ್ ಆವೃತ್ತಿ 5.3 ಯನ್ನು ಹೊಂದಿದ್ದು, ನಾಯ್ಸ್ ಟ್ರೂ ಸಿಂಕ್ ತಂತ್ರಜ್ಞಾನದೊಂದಿಗೆ ಕಾರ್ಯ ಮಾಡುತ್ತದೆ. ಅಲ್ಲದೇ 24×7 ಹೃದಯ ಬಡಿತ ಮಾನಿಟರಿಂಗ್, SpO2, ನಿದ್ರೆ ಟ್ರ್ಯಾಕಿಂಗ್, ಒತ್ತಡ ನಿರ್ವಹಣೆ, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಸೇರಿದಂತೆ ಅಗತ್ಯ ಆಯ್ಕೆಗಳನ್ನು ಇದು ಪಡೆದಿದೆ.

ಫಾಸ್ಟ್ರ್ಯಾಕ್ ರಿವಾಲ್ಟ್ FS1 ಪ್ರೊ (Fastrack Revoltt FS1 Pro) : ಫಾಸ್ಟ್ರ್ಯಾಕ್ ರಿವಾಲ್ಟ್ FS1 ಪ್ರೊ ವಾಚ್‌ ಸಖತ್‌ ಟ್ರೆಂಡಿ ಲುಕ್ ಪಡೆದುಕೊಂಡಿದೆ. ಇದು 1.96 ಇಂಚಿನ ಸೂಪರ್ AMOLED ಆರ್ಚ್ಡ್ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇ ಆಲ್‌ವೇಸ್‌ ಆನ್‌-ಡಿಸ್‌ಪ್ಲೇ ಮಾದರಿಯಲ್ಲಿದೆ. ಇನ್ನು ಡಿಸ್‌ಪ್ಲೇ 410×502 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದು, ಇದು 110+ ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಕೆಲವು ಅಗತ್ಯ ಹಾಗೂ ಅನುಕೂಲವಾಗುವಂತಹ ಹೆಲ್ತ್‌ ಟ್ರ್ಯಾಕಿಂಗ್‌ ಆಯ್ಕೆಗಳನ್ನು ಪಡೆದಿದೆ.

ಫೈರ್‌ಬೋಲ್ಟ್‌ ಲೆಗಸಿ (Fire Boltt Legacy) : ಈ ಸ್ಮಾರ್ಟ್‌ವಾಚ್‌ 1.43 ಇಂಚಿನ ಆಲ್‌ವೇಸ್‌ ಆನ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಎರಡು ಕ್ರೌನ್‌ ಬಟನ್‌ ಆಯ್ಕೆಯೊಂದಿಗೆ ಕಾಣಿಸಿಕೊಂಡಿದೆ. ಇದು ಸ್ಟೇನ್‌ಲೆಸ್ ಸ್ಟೀಲ್ ವಿನ್ಯಾಸ ಪಡೆದುಕೊಂಡಿದ್ದು, 60 Hz ರಿಫ್ರೆಶ್ ರೇಟ್‌ ಆಯ್ಕೆ ಸಹ ಇದರಲ್ಲಿದೆ.

ಜೊತೆಗೆ ಈ ವಾಚ್‌ 100+ ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಹೊಂದಿದ್ದು, ಫೈರ್ ಬೋಲ್ಟ್‌ನ ಸಿಗ್ನೇಚರ್ ಹೆಲ್ತ್ ಸೂಟ್ ಅನ್ನು ಪಡೆದುಕೊಂಡಿದೆ. ಮುಖ್ಯವಾಗಿ ಹೃದಯ ಬಡಿತದ ಮೇಲ್ವಿಚಾರಣೆ, ನಿದ್ರೆಯ ಮೇಲ್ವಿಚಾರಣೆ, SpO2 ಮಾನಿಟರಿಂಗ್ ಆಯ್ಕೆ ಪಡೆದಿದೆ.

Best Mobiles in India

English summary
ಪ್ರಸ್ತುತ ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್‌ವಾಚ್‌ ಡಿವೈಸ್‌ಗಳು ಖರೀದಿಗೆ ಲಭ್ಯ ಇವೆ. ಅವುಗಳಲ್ಲಿ ಅಮೊಲೆಡ್‌ ಡಿಸ್‌ಪ್ಲೇ ಇರುವ ವಾಚ್‌ಗಳು ಡಿಮ್ಯಾಂಡ್‌ ಪಡೆದಿವೆ. ಈ ಮಾದರಿಯ ಡಿಸ್‌ಪ್ಲೇ, ಬಳಕೆದಾರರಿಗೆ ಅನುಕೂಲಕರ ಎನಿಸುತ್ತದೆ. ಮುಖ್ಯವಾಗಿ 5,000ರೂ. ಬೆಲೆಯ ಒಳಗೆ ಲಭ್ಯ ಇರುವ ಅಮೊಲೆಡ್‌ ಡಿಸ್‌ಪ್ಲೇಯ ಸ್ಮಾರ್ಟ್‌ವಾಚ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+