ಲಾಂಚ್ ಆಯ್ತು 'ಆಂಟ್' ಕಂಪನಿಯ 'ಮಿನಿ ಸೌಂಡ್ ಬಾರ್'.! ಜೋರಾಗಲಿದೆ ಸೌಂಡ್ ಅಬ್ಬರ್.!!
ಭಾರತದಲ್ಲಿರುವ ಬಹುತೇಕ ಯುವಸಮೂಹ ಮ್ಯೂಸಿಕ ಪ್ರಿಯರಾಗಿದ್ದು, ಹೀಗಾಗಿ ದೇಶಿಯ ಮಾರುಕಟ್ಟೆಗೆ ಅನೇಕ ವಿಶ್ವಮಟ್ಟದ ಮ್ಯೂಸಿಕ್ ಪರಿಕರಗಳ ಕಂಪನಿಗಳು ಎಂಟ್ರಿ ಕೊಡುತ್ತಲೇ ಇವೆ. ಇದೀಗ ಬ್ರಿಟಿಷ್ ಮೂಲದ ಜನಪ್ರಿಯ ಆಡಿಯೋ ಉಪಕರಣ ತಯಾರಿಕಾ ಕಂಪನಿ 'ಆಂಟ್' ಎಂಟ್ರಿ ಕೊಟ್ಟಿದ್ದು, ತನ್ನ ವಿವಿಧ ಮ್ಯೂಸಿಕ್ ಉಪಕರಣಗಳಿಂದ ಗಮನ ಸೆಳೆಯಲು ಮುಂದಾಗಿದೆ.

ಹೌದು, ಆಂಟ್ ಆಡಿಯೋ ಕಂಪನಿಯು ಹೆಡ್‌ಫೋನ್, ಇಯರ್‌ಫೋನ್, ವೈಯರ್‌ಲೆಸ್ ಸ್ಪೀಕರ್ ಸೇರಿದಂತೆ ನೂತನ ಮಾದರಿಯ ಆಡಿಯೋ ಉಪಕರಣಗಳನ್ನು ಒಳಗೊಂಡಿದೆ. ಆದರೆ ಇದೀಗ ಬಿಡುಗಡೆ ಮಾಡಿರುವ ಕೆಲವು ಹೊಸ ಪರಿಕರಗಳು 399ರೂ.ಗಳಿಂದ 2,499ರೂ.ಗಳ ವರೆಗಿನ ಬಜೆಟ್ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದು, ಮ್ಯೂಸಿಕ್ ಪ್ರಿಯರಿಗೆ ಖುಷಿ ನೀಡಿದೆ.

ಆಂಟ್ ಸಾಧನಗಳು ದೀರ್ಘಬಾಳಿಕೆಯ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಇದರೊಂದಿಗೆ ಬ್ಲೂಟೂತ್ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸಲಿವೆ. ಜೊತೆಗೆ ವೈಯರ್‌ಲೇಸ್ ರಚನೆಯನ್ನು ಪಡೆದಿರುವ ಈ ಸಾಧನಗಳಲ್ಲಿ ಹೈ ಫೀಚರ್ಸ್‌ಗಳಿವೆ. ಹಾಗಾದರೇ ಆಂಟ್ ಕಂಪನಿಯ ಆಡಿಯೋ ಪರಿಕರಗಳ ಯಾವುವು ಮತ್ತು ಏನು ವಿಶೇಷತೆಗಳನ್ನು ಹೊಂದಿವೆ ಎಂಬುದನ್ನು ನೋಡೋಣ ಬನ್ನಿರಿ.

ಆಂಟ್ ಮಿನಿ ಸೌಂಡ್ ಬಾರ್ (TrebleX-1000)
ಈ ಆಡಿಯೋ ಉಪಕರಣವು ಮಿನಿ ಸೌಂಡ್ ಬಾರ್ ಸಾಧನವಾಗಿದ್ದು, 50mm ಎರಡು ಡ್ರೈವರ್‌ಗಳನ್ನು ಒಳಗೊಂಡಿದೆ. ಮನೆಗೆ ಉಪಯೋಗಕ್ಕೆ ಅತ್ಯುತ್ತಮ ಆಡಿಯೋ ಸಾಧನವೆನಿಸಿಕೊಂಡಿದ್ದು, ಅತೀ ಆಕರ್ಷಕ ಡಿಸೈನ್‌ನಿಂದ ಗಮನಸೆಳೆಯುವಂತಿದೆ. ಈ ಮಿನಿ ಸೌಂಡ್ ಬಾರ್ ಕರೆಂಟ್ ಇಲ್ಲದೇಯು ಆರು ಗಂಟೆಗಳ ಕಾಲ ಬಾಳಿಕೆ ಬರುವ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದೆ.

ಇಯರ್‌ಫೋನ್
ಆಂಟ್ ಕಂಪನಿ ಇಯರ್‌ಫೋನ್‌ಗಳ ವಿನ್ಯಾಸ ಉತ್ತಮವಾಗಿದ್ದು ಮತ್ತು ಹಗುರವಾದ ರಚನೆಯನ್ನು ಹೊಂದಿವೆ. ಜೊತೆಗೆ ಇಯರ್ ಬಡ್ಸ್ ಅತ್ಯುತ್ತಮವಾಗಿದ್ದು ಹೊರಗಿನ ಶಬ್ದವನ್ನು ತಡೆಯುತ್ತವೆ ಮತ್ತು ಸೌಂಡ್‌ನ ಅನುಭವ ನೀಡಲಿವೆ. ಕಂಪನಿಯ ಇಯರ್‌ಫೋನ್‌ಗಳೆಂದರೇ Thump 650, Thump 560, ವೇವ್ 702, ವೇವ್ ಸ್ಪೋರ್ಟ್ಸ್ 450.

ವೈಯರ್‌ಲೆಸ್ಸ್ ಹೆಡ್‌ಫೋನ್
ಕಂಪನಿಯು ವಿವಿಧ ಶ್ರೇಣಿಯ ವೈಯರ್‌ಲೆಸ್ ಹೆಡ್‌ಫೋನ್‌ಗಳನ್ನು ಹೊಂದಿದ್ದು, ಯಾವುದೇ ಅಡಚಣೆ ಇಲ್ಲದೇ ಮ್ಯೂಸಿಕ್‌ನ ಅತ್ಯುತ್ತಮ ಸೌಂಡ್‌ನ್ನು ಕೇಳಬಹುದಾಗಿದೆ. ಹೆಡ್‌ಫೋನ್‌ಗಳು ಮೃದುವಾದ ರಚನೆಯನ್ನು ಹೊಂದಿದ್ದು, ಕಿವಿಗಳಿಗೆ ಹಿತಕರ ಅನುಭವ ನೀಡುವಂತಿವೆ. Treble 900, Treble 500, Treble H82 ಇವು ವೈಯರ್‌ಲೆಸ್ ಹೆಡ್‌ಫೋನ್‌ಗಳಾಗಿವೆ.

ಲಭ್ಯತೆ..?
ಅಂಟ್ ಕಂಪನಿಯ ಬಜೆಟ್ ಬೆಲೆಯಲ್ಲಿರುವ ಆಡಿಯೋ ಸಾಧನಗಳು ಪ್ರಮುಖ ಇ ಕಾಮರ್ಸ್ ಜಾಲತಾಣಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್, ಟಾಟಾ ಕ್ಲಿಪ್ ಗಳಲ್ಲಿ ದೊರೆಯಲಿವೆ. ಇ ಕಾಮರ್ಸ್ ತಾಣಗಳಲ್ಲಿ ಆಂಟ್ ಮಿನಿ ಸೌಂಡ್ ಬಾರ್ ಸಾಧನವು ಶೀಘ್ರದಲ್ಲಿಯೇ ದೊರೆಯಲಿದೆ.


Click it and Unblock the Notifications








