Home
Gadgets

ಆಪಲ್‌ ಏರ್‌ಪೋಡ್‌ಗೆ ಬದಲಾಗಿ ನೀವು ಈ ಏರ್‌ಬಡ್ಸ್‌ಗಳನ್ನು ಖರೀದಿಸಬಹುದು!

ಸದ್ಯ ಗ್ರಾಹಕರು ಮ್ಯೂಸಿಕ್‌ ಕೇಳಲು ಅತ್ಯುತ್ತಮ ಏರ್‌ಪೋಡ್‌ ಮೊರೆ ಹೋಗುತ್ತಾರೆ ಅದರಲ್ಲೂ ಹಣವಂತರು ಆಪಲ್‌ ಸಂಸ್ಥೆಯ ಏರ್‌ಪೋಡ್‌ಗಳನ್ನು ಖರೀದಿಸುತ್ತಾ. ಆದರೆ ಎಲ್ಲರಿಗೂ ಆಪಲ್‌ ಏರ್‌ಪೋಡ್‌ ಖರೀದಿಸಲಾಗುವುದಿಲ್ಲ ಅಲ್ಲವೇ.? ಆದರೆ ಆಪಲ್‌ ಏರ್‌ಪೋಡ್‌ಗಳಿಗೆ ಬದಲಾಗಿ ಇರುವುದರಲ್ಲೇ ಅತ್ಯುತ್ತಮ ಗುಣಮಟ್ಟದ ಮತ್ತು ಸೌಂಡ್‌ ಕ್ವಾಲಿಟಿಯ ಬೆಸ್ಟ್‌ ಏರ್‌ಬಡ್ಸ್‌ಗಳನ್ನು ಖರೀದಿಸಬಹುದು.

ಆಪಲ್‌ ಏರ್‌ಪೋಡ್‌ಗೆ ಬದಲಾಗಿ ನೀವು ಈ ಏರ್‌ಬಡ್ಸ್‌ಗಳನ್ನು ಖರೀದಿಸಬಹುದು!

ಹೌದು, ಆಪಲ್‌ ಸಂಸ್ಥೆಯ ಏರ್‌ಪೋಡ್‌ಗಳು ವಾಯಿಸ್‌ ಅಸಿಸ್ಟಂಟ್‌ ಆಯ್ಕೆಯನ್ನು ಹೊಂದಿದ್ದರೂ, ಆಂಡ್ರಾಯ್ಡ್‌ ಗ್ರಾಹಕರು ಎರಡು ಕಾರಣಗಳಿಗಾಗಿ ಆಪಲ್‌ ಏರ್‌ಪೋಡ್‌ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಅವು ಕೇವಲ ಐಓಎಸ್‌ ಮಾದರಿಗಳಿಗೆ ಬೆಂಬಲ ನೀಡುತ್ತದೆ ಮತ್ತು ಬೆಲೆಯು ಸಹ ದುಬಾರಿ ಹೀಗಾಗಿ ಗ್ರಾಹಕರ ಮನಸ್ಸು ಆಪಲ್‌ಗೆ ಬದಲಾಗಿ ಆಲ್ಟ್ರನೇಟಿವ್‌ ಬೆಸ್ಟ್‌ ಏರ್‌ಬಡ್ಸ್‌ನತ್ತ ವಾಲುತ್ತದೆ.

ಆಪಲ್‌ ಏರ್‌ಪೋಡ್‌ಗೆ ಬದಲಾಗಿ ನೀವು ಈ ಏರ್‌ಬಡ್ಸ್‌ಗಳನ್ನು ಖರೀದಿಸಬಹುದು!

ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ತರಹೇವಾರಿ ಏರ್‌ಬಡ್ಸ್‌ಗಳು ಲಭ್ಯವಿದ್ದರೂ, ಅವುಗಳಲ್ಲಿ ಯಾವುದನ್ನು ಖರೀದಿಸಬೇಕು ಎನ್ನುವ ಗೊಂದಲ ಗ್ರಾಹಕರಲ್ಲಿ ಮೂಡುತ್ತದೆ. ಅದಕ್ಕಾಗಿ ಇಂದಿನ ಲೇಖನದಲ್ಲಿ ನಾವು ಬೆಸ್ಟ್‌ ಐದು ಏರ್‌ಬಡ್ಸ್‌ಗಳ ಕುರಿತು ಮಾಹಿತಿಯನ್ನು ನೀಡಿದ್ದೆವೆ. ಹಾಗಾದರೇ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಐದು ಬೆಸ್ಟ್‌ ಏರ್‌ಬಡ್ಸ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಅಂಕರ್ ಸೌಂಡ್ಕೋರ್ ಲಿಬರ್ಟಿ ಏರ್

ಅಂಕರ್ ಸೌಂಡ್ಕೋರ್ ಲಿಬರ್ಟಿ ಏರ್

ವಾಯರ್‌ಲೆಸ್‌ ಮಾದರಿಯ ಸೌಂಡ್‌ ಅನ್ನು ನೀವು ಇಷ್ಟಪಡುತ್ತಿದ್ದರೇ ಅಂಕರ್‌ ಸೌಂಡ್ಕೋರ್‌ ಲಿಬರ್ಟಿ ಏರ್‌ಬಡ್ಸ್‌ ಅತ್ಯುತ್ತಮ ಆಯ್ಕೆ ಎನಿಸಲಿದೆ. ಈ ಏರ್‌ಬಡ್ಸ್‌ಗಳ ಬ್ಯಾಟರಿ ಬಾಳಿಕೆ ಉತ್ತಮವಾಗಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ, ಸುಮಾರು 5 ಗಂಟೆಗಳ ಕಾಲ ನಿರಂತರ ಮ್ಯೂಸಿಕ್‌ ಕೇಳಬಹುದಾಗಿದೆ. ಉತ್ತಮ ಸೌಂಡ್‌ ಡ್ರೈವರ್ಸ್‌ ಮತ್ತು ನಾಯಿಸ್‌ ಕ್ಯಾನ್ಸ್ಲಿಂಗ್‌ಗೆ ಮೈಕ್ರೋಫೋನ್‌ ಆಯ್ಕೆ ಇದೆ. ಇದರ ಬೆಲೆ 7,999ರೂ.

ಮೊಟೊರೊಲಾ ವರ್ವ್ ಬಡ್ಸ್ 500

ಮೊಟೊರೊಲಾ ವರ್ವ್ ಬಡ್ಸ್ 500

ಮೊಟೊರೊಲಾ ವರ್ವ್ ಬಡ್ಸ್ 500, ಆಪಲ್‌ ಏರ್‌ಬಡ್ಸ್‌ಗೆ ಬದಲಾಗಿ ಬೆಸ್ಟ್‌ ಏರ್‌ಬಡ್ಸ್‌ ಎನಿಸಿಕೊಂಡಿದೆ. ಸೌಂಡ್‌ ಗುಣಮಟ್ಟವು ಹೆಚ್‌ಡಿ ಸ್ಟೀರಿಯೊ ಸೌಲಭ್ಯವನ್ನು ಹೊಂದಿದ್ದು, ಉತ್ತಮ ನಾಯಿಸ್‌ ಕ್ಯಾನ್ಸ್ಲಿಂಗ್‌ಗೆ ಟೆಕ್ನಾಲಜಿ ಇದೆ ಮತ್ತು ಎರಡು ಮೈಕ್‌ಗಳಿವೆ. ಸುಮಾರು 9 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಒದಗಿಸಲಿದ್ದು, ಉತ್ತಮ ಸೌಂಡ್‌ ಡ್ರೈವರ್‌ಗಳನ್ನು ಸಹ ಹೊಂದಿದೆ. ಇದರ ಬೆಲೆಯು 6,999ರೂ.

ನೋಕಿಯಾ ಟ್ರೂ ವಾಯರ್‌ಲೆಸ್‌ ಏರ್‌ಬಡ್ಸ್‌

ನೋಕಿಯಾ ಟ್ರೂ ವಾಯರ್‌ಲೆಸ್‌ ಏರ್‌ಬಡ್ಸ್‌

ನೋಕಿಯಾದ ಈ ಏರ್‌ಬಡ್ಸ್‌ಗಳು ಐಓಎಸ್‌ ಮತ್ತು ಆಂಡ್ರಾಯ್ಡ್ ಓಎಸ್‌ ಮಾದರಿಗಳಿಗೂ ಸಪೊರ್ಟ್‌ಮಾಡುವ ಸೌಲಭ್ಯವನ್ನು ಒಳಗೊಂಡಿದೆ. ತುಂಬಾ ಹಗುರವಾದ ರಚನೆಯನ್ನು ಹೊಂದಿದ್ದು, ಸ್ಟೆಟ್‌ ರೆಸಿಸ್ಟನ್ಸ್ ಸಾಮರ್ಥ್ಯವಿದೆ. ಬ್ಲೂಟೂತ್‌ 5.0 ಬೆಂಬಲವನ್ನು ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ ನಿರಂತರ 3.5 ಗಂಟೆಗಳ ಕಾಲ ಮ್ಯೂಸಿಕ್‌ ಕೇಳಬಹುದಾಗಿದೆ. ಇದರ ಬೆಲೆಯು 6,499ರೂ.

ನಾಯಿಸ್‌ ಶಾಟ್ಸ್ X5

ನಾಯಿಸ್‌ ಶಾಟ್ಸ್ X5

ಆಪಲ್‌ ಏರ್‌ಬಡ್ಸ್‌ ಬದಲಿಗೆ ನಾಯಿಸ್‌ ಶಾಟ್ಸ್‌ x5 ಏರ್‌ಬಡ್ಸ್‌ಗಳನ್ನು ಸಹ ಉತ್ತಮ ಎನಿಸಿದ್ದು, ಈ ಏರ್‌ಪೋಡ್‌ ಬ್ಲೂಟೂತ್‌ 5.0 ಸಾಮರ್ಥ್ಯದೊಂದಿಗೆ IPX5 ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 4ಗಂಟೆಗಳ ಸಮಯ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದ್ದು, ಚಾರ್ಜಿಂಗ್‌ ಕೇಸ್‌ ಹೆಚ್ಚುವರಿ 10 ಚಾರ್ಜಿಂಗ್‌ ಬೆಂಬಲ ನೀಡುತ್ತದೆ. ಗೂಗಲ್‌ ಅಸಿಸ್ಟಂಟ್ ಮತ್ತು ಆಪಲ್‌ ಸಿರಿ ಕನೆಕ್ಟ್‌ ಮಾಡಬಹುದು. ಬೆಲೆಯು 4,999ರೂ.

ಬೋಟ್ ಏರ್ಡೋಪ್ಸ್ 411

ಬೋಟ್ ಏರ್ಡೋಪ್ಸ್ 411

ಬೋಟ್‌ ಕಂಪನಿಯ ಏರ್ಡೋಪ್ಸ್‌ ಒಂದು ಉತ್ತಮ ಬಜೆಟ್‌ ಬೆಲೆಯ ಏರ್‌ಬಡ್ಸ್‌ ಆಗಿದ್ದು, ಬ್ಲೂಟೂತ್‌ 5.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. 6ಎಂಎಂ ಸಾಮರ್ಥ್ಯದ ಸೌಂಡ್‌ ಡ್ರೈವರ್‌ಗಳನ್ನು ಒಳಗೊಂಡಿದ್ದು, ಇಂದು ಬಾರಿ ಚಾರ್ಜ್‌ ಆದರೇ ಸುಮಾರು 3.5 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಹೆಚ್‌ಡಿ ಸೌಂಡ್‌, ಸ್ವೆಟ್‌ಪ್ರೊಫ್‌, ಆಯ್ಕೆಗಳನ್ನು ಸಹ ಹೊಂದಿದೆ. ಬೆಲೆಯು 2,499ರೂ.

Best Mobiles in India

English summary
we have curated a list of the best AirPods' alternatives currently available in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+