ಮ್ಯೂಸಿಕ್‌ 'ಬಿಟ್ಸ್‌' ಹೆಚ್ಚಿಸಲಿದೆ ಆಪಲ್‌ನ ಹೊಸ ವೈಯರ್‌ಲೆಸ್‌ ಹೆಡ್‌ಫೋನ್‌.!

|

ಟೆಕ್‌ ದಿಗ್ಗಜ ಆಪಲ್‌ ಸಂಸ್ಥೆ ಹೊಸತನದ ಉತ್ಪನ್ನಗಳನ್ನು ಪರಿಚಯಿಸಿರುವ ಟೆಕ್‌ ದಿಗ್ಗಜ ಆಪಲ್‌ ಸಂಸ್ಥೆ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಖುಷಿ ಸುದ್ದಿ ನೀಡುವ ಉತ್ಸಕದಲ್ಲಿದೆ. ಕಂಪನಿಯು ಮಾರುಕಟ್ಟೆಗೆ ನೂತನ ವೈಯರ್‌ಲೆಸ್‌ ಹೆಡ್‌ಫೋನ್‌ ಉತ್ಪನ್ನ ಒಂದನ್ನು ಪರಿಚಯಿಸಲು ಮುಂದಾಗಿದೆ. ಹೊಸ ವೈಯರ್‌ಲೆಸ್‌ ಹೆಡ್‌ಫೋನ್ ಶೀಘ್ರದಲ್ಲಿಯೇ ಗ್ರಾಹಕರ ಮೊಬೈಲ್‌ಗಳಿಗೆ ಕನೆಕ್ಟ್‌ ಆಗಲಿದೆ.

ಮ್ಯೂಸಿಕ್‌ 'ಬಿಟ್ಸ್‌' ಹೆಚ್ಚಿಸಲಿದೆ ಆಪಲ್‌ನ ಹೊಸ ವೈಯರ್‌ಲೆಸ್‌ ಹೆಡ್‌ಫೋನ್‌.!

ಹೌದು, ಆಪಲ್‌ ಸಂಸ್ಥೆಯು ಬ್ಲೂಟೂತ್ ಆಧಾರಿತ ವೈಯರ್‌ ಲೆಸ್‌ ಹೆಡ್‌ಫೋನ್‌ ಒಂದನ್ನು ಇದೇ ಏಪ್ರಿಲ್‌ ತಿಂಗಳಲ್ಲಿ ರಿಲೀಸ್‌ ಮಾಡಲಿದ್ದು, ಈ ಉತ್ಪನ್ನವನ್ನು ಕಂಪನಿಯು ತನ್ನ ಉಪಬ್ರ್ಯಾಂಡ್‌ ಆಗಿರುವ 'ಬಿಟ್ಸ್‌' ಕಂಪನಿಯ ಹೆಸರಿನಿಂದ ಪರಿಚಯವಾಗಲಿದೆ. ಇದು ಕಂಪನಿಯ ಮೊದಲ ಸಂಪೂರ್ಣ ವೈಯರ್‌ಲೆಸ್‌ ಹೆಡ್‌ಫೋನ್‌ ಎನ್ನಲಾಗುತ್ತಿದ್ದು, ಮ್ಯೂಸಿಕ್‌ ಪ್ರಿಯರು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ.

ಮ್ಯೂಸಿಕ್‌ 'ಬಿಟ್ಸ್‌' ಹೆಚ್ಚಿಸಲಿದೆ ಆಪಲ್‌ನ ಹೊಸ ವೈಯರ್‌ಲೆಸ್‌ ಹೆಡ್‌ಫೋನ್‌.!

ಬರಲಿರುವ ಬಿಟ್ಸ್‌ ಕಂಪನಿಯ ಹೊಸ ಹೆಡ್‌ಫೋನ್‌ಗಳು ಆಪಲ್‌ H1 ಚಿಪ್‌ಸೆಟ್ಟ್‌ ಅನ್ನು ಒಳಗೊಂಡಿರಲಿದ್ದು, ಆಪಲ್‌ ಸಿರಿ ಇದರಲ್ಲಿ ಕೆಲಸಮಾಡಲಿದೆ ಎನ್ನಲಾಗುತ್ತಿದೆ. ಆಪಲ್‌ ಏರ್‌ಫೋಡ್‌ಗಳಲ್ಲಿರುವ ಬ್ಯಾಟರಿ ಬಾಳಿಕೆಯ ಶಕ್ತಿಗಿಂತ ಹೆಚ್ಚಿನ ಬಾಳಿಕೆ ಸಾಮರ್ಥ್ಯವನ್ನು ಹೊಸ ಹೆಡ್‌ಫೋನ್‌ಗಳು ಹೊಂದಿರಲಿವೆ ಎಂದು ಹೇಳಲಾಗಿದೆ. ಹಾಗಾದರೇ ಬಿಟ್ಸ್‌ ಕಂಪನಿಯ ಇತರೆ ಹೆಡ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಬಿಟ್ಸ್‌ ಸ್ಟೋಡಿಯೊ 3

ಬಿಟ್ಸ್‌ ಸ್ಟೋಡಿಯೊ 3

ಬಿಟ್ಸ್‌ ಕಂಪನಿಯ ಪ್ರಮುಖ ಹೆಡ್‌ಫೋನ್‌ ಎಂದೆನಿಸಿಕೊಂಡಿರುವ ಸ್ಟೋಡಿಯೊ 3, ಆಪಲ್‌ W1 ಚಿಪ್‌ ಸೆಟ್‌ಅನ್ನು ಹೊಂದಿದ್ದು, ಕ್ಲಾಸ್‌ಒನ್‌ ವೈಯರ್‌ಲೆಸ್‌ ಬ್ಲೂಟೂತ್ ಕನೆಕ್ಟಿವಿಟಿಯನ್ನು ಪಡೆದಿದೆ. ಹೊರ ಶಬ್ದ ಕೇಳಿಸಿದಂತಹ ರಚನೆ ಇದ್ದು, 10ನಿಮಿಷ ಬ್ಯಾಟರಿ ಚಾರ್ಜ್ ಮಾಡಿದರೇ ಸುಮಾರು ಮೂರು ಗಂಟೆ ಬಾಳಿಕೆ ಒದಗಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ.

ಬಿಟ್ಸ್‌ ಸೊಲೊ 3

ಬಿಟ್ಸ್‌ ಸೊಲೊ 3

ಇದು ಸಹ ಅತ್ಯುತ್ತಮ ವೈಯರ್‌ಲೆಸ್‌ ಹೆಡ್‌ಫೋನ್‌ ಆಗಿದ್ದು, ಸಂಪೂರ್ಣ ಚಾರ್ಜ್‌ ಆಗಿರುವ ಬ್ಯಾಟರಿ ಸುಮಾರು 40 ಗಂಟೆ ಕಾಲ ಬಾಳಿಕೆ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಲಾಸ್‌ಒನ್‌ ಬ್ಲೂಟೂತ್ ಕನೆಕ್ಟಿವಿಟಿ ಸಾಮರ್ಥ್ಯವನ್ನು ಸಹ ಹೊಂದಿದ್ದು, ಹೊರಗಡೆ ಶಬ್ದ ಕೇಳಿಸದ ರಚನೆಯಿದ್ದು, ಮ್ಯೂಸಿಕ್‌ನ ಉತ್ತಮ ಸೌಂಡ್‌ ಕೇಳಿಸಿಕೊಳ್ಳಬಹುದಾಗಿದೆ.

ಬಿಟ್ಸ್‌ EP

ಬಿಟ್ಸ್‌ EP

ಬಿಟ್ಸ್‌ ಇಪಿ ಹೆಡ್‌ಫೋನ್‌ ಹಾಡುಗಳ ಡೆಪ್ತ್‌ ಮತ್ತು ಕ್ಲಿಯರ್‌ ಸೌಂಡ್‌ನ ಅನುಭವ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ನಿರಂತರ ಹಾಡುಗಳ ಕೇಳಲು ಇದು ಬ್ಯಾಟರಿ ಮುಕ್ತವಾಗಿದೆ. ಹುಗುರವಾದ ರಚನೆಹೊಂದಿದ್ದು, ಹೆಚ್ಚು ಕಾಲ ತಾಳಿಕೆಬರುವ ಗುಣಮಟ್ಟ ಇದೆ. ಹಿತಕರವಾಗಿ ಧರಿಸಲು ಅನುಕೂಲವಾಗಲು, ಹೆಡ್‌ಫೋನ್‌ ಆಡ್ಜಸ್ಟೆಬಲ್‌ ಕ್ಲಿಪ್‌ಅನ್ನು ಹೊಂದಿದೆ.

Most Read Articles
Best Mobiles in India

English summary
Beats, the audio equipment company owned by Apple, may launch their first truly wireless headphones in April.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more