Home
ಸುದ್ದಿಜಾಲ

Apple Watch: ಶಾಕಿಂಗ್‌... ಆಪಲ್‌ ವಾಚ್‌ನಲ್ಲಿ ಇನ್ಮುಂದೆ ಈ ಫೀಚರ್ಸ್‌ ಇರೋಲ್ಲ! ಯಾಕೆ ಗೊತ್ತಾ?

ಆಪಲ್ ವಾಚ್‌ಗಳು (Apple Watch) ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ ಬಳಕೆದಾರರ ಜೀವವನ್ನೇ ಉಳಿಸುವ ಪ್ರಮುಖ ಫೀಚರ್ಸ್‌ ಈ ವಾಚ್‌ಗಳಲ್ಲಿ ಇರುತ್ತವೆ. ಆದರೆ, ಇದೀಗ ಆಪಲ್‌ ವಾಚ್‌ ಬಳಕೆದಾರರಿಗೆ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಆಪಲ್‌ ವಾಚ್‌ಗಳು ಇತರೆ ಸ್ಮಾರ್ಟ್‌ವಾಚ್‌ಗಳಿಗಿಂತ ಭಿನ್ನ ಫೀಚರ್ಸ್‌ ಪಡೆದಿರುತ್ತವೆ ಅನ್ನೋದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವು ಕಾರಣಗಳಿಂದಾಗಿ ಈ ಒಂದು ಪ್ರಮುಖ ಫೀಚರ್ಸ್‌ ಅನ್ನು ಕೈಬಿಡಲಾಗುತ್ತಿದೆ ಎನ್ನಲಾಗಿದೆ. ಈ ಫೀಚರ್ಸ್‌ ಈಗಾಗಲೇ ಸಾಕಷ್ಟು ಜನರಿಗೆ ವಿವಿಧ ರೀತಿಯಲ್ಲಿ ಸಹಕಾರಿ ಆಗಿದೆ. ಹಾಗಿದ್ರೆ, ಯಾವುದು ಈ ಫೀಚರ್ಸ್‌?, ಯಾಕೆ ಆಪಲ್‌ ಈ ನಿರ್ಧಾರ ಮಾಡಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಶಾಕಿಂಗ್‌... ಆಪಲ್‌ ವಾಚ್‌ನಲ್ಲಿ ಇನ್ಮುಂದೆ ಈ ಫೀಚರ್ಸ್‌ ಇರೋಲ್ಲ! ಯಾಕೆ ಗೊತ್ತಾ?

ಆಪಲ್‌ ವಾಚ್‌ ಸರಣಿ 9 ಮತ್ತು ಅಲ್ಟ್ರಾ 2 ನಲ್ಲಿ ಈ ಸೌಲಭ್ಯ ಇರೋಲ್ಲ: ವೈದ್ಯಕೀಯ ಡಿವೈಸ್‌ ತಯಾರಕ ಮಾಸಿಮೊ (Masimo) ಜೊತೆಗಿನ ಪೇಟೆಂಟ್ ಉಲ್ಲಂಘನೆಯ ಮೊಕದ್ದಮೆಯಿಂದ ಉಂಟಾದ ಯುಎಸ್‌ ಆಮದು ನಿಷೇಧದ ಭಾಗವಾಗಿ ಈ ಬೆಳವಣಿಗೆ ಕಂಡುಬಂದಿದೆ. ಈ ಮೂಲಕ ಇಂಟರ್‌ನ್ಯಾಶನಲ್‌ ಟ್ರೇಡ್‌ ಕಮಿಷನ್‌ನ ನಿಷೇಧಕ್ಕೆ ಬದ್ಧವಾಗಿರಲು ನಿರ್ದಿಷ್ಟಪಡಿಸಿದ ಫೀಚರ್ಸ್‌ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಲು ಆಪಲ್‌ ಮುಂದಾಗಿದೆ.

ಅದರಂತೆ ಪಲ್ಸ್ ಆಕ್ಸಿಮೆಟ್ರಿ ಫೀಚರ್ಸ್‌ (Pulse oximetry features) ಅನ್ನು ಆಪಲ್‌ ವಾಚ್ ಸರಣಿ 9 ಮತ್ತು ಆಪಲ್‌ ವಾಚ್ ಅಲ್ಟ್ರಾ 2 (Apple Watch Series 9 and Apple Watch Ultra 2) ದಿಂದ ಹೊರಗಿಡಲಾಗುತ್ತಿದೆ. ಇನ್ನು ಕಳೆದ ತಿಂಗಳ ಆರಂಭದಲ್ಲಿಯೇ ಆಪಲ್ ವಾಚ್ ಸರಣಿ 9 ಮತ್ತು ವಾಚ್ ಅಲ್ಟ್ರಾ 2 ರ ಸೇಲ್‌ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಿದೆ ಎಂದು ತಿಳಿದುಬಂದಿದೆ.

ಶಾಕಿಂಗ್‌... ಆಪಲ್‌ ವಾಚ್‌ನಲ್ಲಿ ಇನ್ಮುಂದೆ ಈ ಫೀಚರ್ಸ್‌ ಇರೋಲ್ಲ! ಯಾಕೆ ಗೊತ್ತಾ?

ಕೆಲವು ಮಾಧ್ಯಮಗಳ ವರದಿ ಪ್ರಕಾರ ಈ ಬದಲಾವಣೆಯು ಯುಎಸ್ ಇಂಟರ್ನ್ಯಾಷನಲ್ ಟ್ರೇಡ್ ಕಮಿಷನ್ ಹಿಂದಿನ ತೀರ್ಪಿಗೆ ಅನುಗುಣವಾಗಿದೆ ಎನ್ನಲಾಗಿದೆ. ಅಂದರೆ ಇದು ರಕ್ತದ ಆಮ್ಲಜನಕದ ಫೀಚರ್ಸ್‌ನೊಂದಿಗೆ ಬರುವ ಆಪಲ್ ವಾಚ್‌ಗಳ ಆಮದು ಮತ್ತು ಮಾರಾಟದ ನಿಷೇಧವನ್ನು ಉಲ್ಲೇಖಿಸಿತ್ತು. ಈ ಮೂಲಕ ಆಪಲ್ ಮಾಸಿಮೊದ ಪಲ್ಸ್ ಆಕ್ಸಿಮೆಟ್ರಿ ಪೇಟೆಂಟ್‌ಗಳನ್ನು ಉಲ್ಲಂಘಿಸಿದೆ ಎಂದು ಇಂಟರ್ನ್ಯಾಷನಲ್ ಟ್ರೇಡ್ ಕಮಿಷನ್ ತೀರ್ಮಾನಿಸಿದೆ.

ಕಳೆದ ವರ್ಷ, ಪೇಟೆಂಟ್ ಉಲ್ಲಂಘನೆಯಿಂದಾಗಿ ಐಟಿಸಿ ಯುಎಸ್‌ನಲ್ಲಿ ಆಪಲ್ ವಾಚ್‌ಗಳ ಸೇಲ್‌ ಅನ್ನು ನಿಷೇಧಿಸಿತ್ತು. ಆದಾಗ್ಯೂ, ಮೇಲ್ಮನವಿ ಅಲ್ಲಿಸಿದ ಆಪಲ್‌ ನಿಷೇಧವನ್ನು ತಾತ್ಕಾಲಿಕವಾಗಿ ತಡೆಹಿಡಯುವಂತೆ ಮಾಡಿತ್ತು. ಇದಾದ ನಂತರ ಯುಎಸ್‌ ನಲ್ಲಿನ ಕೆಲವು ರಿಟೇಲರ್‌ ಸ್ಟೋರ್‌ಗಳಲ್ಲಿ ಆಪಲ್ ವಾಚ್ ಸರಣಿ 9 ಮತ್ತು ಅಲ್ಟ್ರಾ 2 ಸೇಲ್‌ ಅನ್ನು ಆರಂಭ ಮಾಡಿತ್ತು.

ಆದರೆ ತನ್ನ ಪಟ್ಟು ಬಿಡದ ಮಾಸಿಮೊ ಆಪಲ್ ಪೇಟೆಂಟ್ ಅನ್ನು ಉಲ್ಲಂಘಿಸಿದೆ ಎಂದು ಒತ್ತಿ ಹೇಳಿತ್ತು. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ 1995 ರಲ್ಲಿ ಪೇಟೆಂಟ್ ಪಡೆದುಕೊಂಡಿತ್ತಂತೆ. ಆ ವೇಳೆ ಇಂಟರ್‌ನ್ಯಾಶನಲ್‌ ಟ್ರೇಡ್‌ ಕಮಿಷನ್‌ ಸೀಮಿತಗೊಳಿಸಿತ್ತು ಎಂದು ತಿಳಿದುಬಂದಿದೆ. ಗಮನಿಸಬೇಕಾದ ವಿಚಾರ ಏನೆಂದರೆ ಆಪಲ್ ಪ್ರಕಾರ, ಈ ಸೇಲ್‌ ಅವಧಿಯು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರಲಿದೆಯಂತೆ. ಅಲ್ಲಿಯವರೆಗೆ, ಆಪಲ್ ವಾಚ್ ಬ್ಲಡ್ ಆಕ್ಸಿಜನ್ ಫೀಚರ್ಸ್‌ ಪ್ರಸ್ತುತ ಸೇಲ್‌ನಲ್ಲಿರುವ ವಾಚ್‌ಗಳಲ್ಲಿ ಲಭ್ಯ ಇರಲಿದೆ ಎಂದು ಹೇಳಲಾಗುತ್ತಿದೆ.

ಶಾಕಿಂಗ್‌... ಆಪಲ್‌ ವಾಚ್‌ನಲ್ಲಿ ಇನ್ಮುಂದೆ ಈ ಫೀಚರ್ಸ್‌ ಇರೋಲ್ಲ! ಯಾಕೆ ಗೊತ್ತಾ?

ಇನ್ನು ಆಪಲ್ ರಿಟೇಲರ್‌ ಸ್ಟೋರ್‌ಗಳು ಈಗಾಗಲೇ ಸರಣಿ 9 ಮತ್ತು ಅಲ್ಟ್ರಾ 2 ವಾಚ್‌ಗಳ ಟ್ವೀಕ್ ಮಾಡಲಾದ ವೇರಿಯಂಟ್‌ ಅನ್ನು ಸಹ ಸ್ವೀಕರಿಸಿವೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಆದರೆ, ಆಪಲ್‌ನ ಕಾರ್ಪೊರೇಟ್ ಕಚೇರಿಗಳಿಂದ ಸೂಚನೆಯನ್ನು ಸ್ವೀಕರಿಸುವವರೆಗೆ ಆ ಯೂನಿಟ್‌ಗಳನ್ನು ಮಾರಾಟ ಮಾಡದಂತೆ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ.

Best Mobiles in India

English summary
Apple Watch Series 9 and Ultra 2 will not have pulse oximetry features due to some patent issues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+