Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್‌ಗಳು! ಫೀಚರ್ಸ್ ಏನಿದೆ?
ಬೇಸಿಗೆಯ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು, ಜನರು ಸಾಕಷ್ಟು ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ನಿಮ್ಮ ಬಳಿ 5 ಸಾವಿರ ರೂ.ಗಿಂತ ಕಡಿಮೆ ಹಣ ಇದೆ. ಉತ್ತಮ ಕೂಲರ್ ಬೇಕು ಎಂದರೆ ಚಿಂತೆ ಬೇಡ. ನಾವಿಲ್ಲಿ ತಿಳಿಸಿಕೊಡಲಿರುವ ಕೂಲರ್‌ಗಳ (Best Coolers) ಮೂಲಕ ತಂಪಾದ ಅನುಭವ ಪಡೆಯಬಹುದಾಗಿದೆ.
ಹೌದು, ಅತಿಯಾದ ಬಿಸಿಲಿನಿಂದ ಪಾರಾಗಲು ಈಗಾಗಲೇ ಸಾಕಷ್ಟು ಜನರು ಕೂಲರ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಆದರೆ ಇನ್ನೂ ಕೆಲವರು ಉತ್ತಮ ಹಾಗೂ ಬಜೆಟ್ ಬೆಲೆಯ ಕೂಲರ್‌ಗಳನ್ನು ಸರ್ಚ್ ಮಾಡುತ್ತಿದ್ದಾರೆ. ಆ ವಿಭಾಗದಲ್ಲಿ ನೀವಿದ್ದರೆ ನಾವಿಲ್ಲಿ ತಿಳಿಸಿಕೊಡುತ್ತಿರುವ ಕೂಲರ್‌ಗಳನ್ನು ಖರೀದಿ ಮಾಡಬಹುದು. ಇವು ಕೇವಲ ಐದು ಸಾವಿರ ಒಳಗೆ ಲಭ್ಯ ಇದ್ದು, ಅತ್ಯುತ್ತಮ ಫೀಚರ್ಸ್ ಆಯ್ಕೆ ಪಡೆದುಕೊಂಡಿವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ

ಸಿಂಫನಿ ಐಸ್ ಕ್ಯೂಬ್ 27 ಏರ್ ಕೂಲರ್: ಈ ಕೂಲರ್ (Symphony Ice Cube 27 Air Cooler) ಅನ್ನು ಅತ್ಯುತ್ತಮ ಪೋರ್ಟಬಲ್ ಕೂಲರ್ ಎಂದು ಕರೆಯಲಾಗುತ್ತದೆ. ಇದು 27 ಲೀಟರ್ ಸಾಮರ್ಥ್ಯದೊಂದಿಗೆ ಬಂದಿದ್ದು, ಎಲ್ಲಾ ಸ್ಥಳಗಳಿಗೂ ಸೂಕ್ತವಾಗಿದೆ. ಅಷ್ಟೇ ಅಲ್ಲದೆ ಕಡಿಮೆ ವಿದ್ಯುತ್ ಬಳಕೆಯನ್ನು ಮಾಡುವುದರಿಂದ ನಯವಾದ ಮತ್ತು ಬಳಕೆದಾರ ಸ್ನೇಹಿ ಆಯ್ಕೆ ಆಗಿರಲಿದೆ. ಇದನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದಾಗಿದೆ. ಇದು 965 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ.
ಕ್ಯಾಂಡೆಸ್ 12L ಪೋರ್ಟಬಲ್ ಮಿನಿ ಏರ್ ಕೂಲರ್: ಈ ಕೂಲರ್ (Candes 12L Portable Mini Air Cooler) 12 ಲೀಟರ್ ನೀರಿನ ಸಾಮರ್ಥ್ಯ ಹೊಂದಿದ್ದು, ಹೈ ಸ್ಪೀಡ್ ಬ್ಲೋವರ್, ಐಸ್ ಚೇಂಬರ್, ಮೂರು ಸ್ಪೀಡ್ ಕಂಟ್ರೋಲ್ ಆಯ್ಕೆ, ಹನಿಕೋಂಬ್ ಕೂಲಿಂಗ್ ಪ್ಯಾಡ್‌ಗಳೊಂದಿಗೆ ಉತ್ತಮ ಎನಿಸಿಕೊಂಡಿದೆ. ಇದರೊಂದಿಗೆ ಶುದ್ಧ ಗಾಳಿಯ ಅನುಭವವನ್ನು ಈ ಮೂಲಕ ಪಡೆಯಬಹುದಾಗಿದೆ. ಇದನ್ನು ನೀವು ಅಮೆಜಾನ್‌ನಲ್ಲಿ 3,749 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಬಜಾಜ್ PMH 25 DLX 24L ಏರ್ ಕೂಲರ್: ಇದನ್ನು (Bajaj PMH 25 DLX 24L Air Cooler) ಅತ್ಯುತ್ತಮ ಬಾಳಿಕೆ ವಿಭಾಗದಲ್ಲಿ ಟಾಪ್ ಕೂಲರ್ ಎಂದು ಗುರುತಿಸಲಾಗಿದೆ. ಇದು ದೃಢವಾದ ವಿನ್ಯಾಸ ಮತ್ತು ಡ್ಯುರೋಮ್ಯಾರಿನ್ ಪಂಪ್ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯುತ್ತಮ ಬಾಳಿಕೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೆ ಬ್ಯಾಕ್ಟೀರಿಯಾ ವಿರೋಧಿ ಹೆಕ್ಸಾಕೂಲ್ ಮಾಸ್ಟರ್ ಮತ್ತು ಮೂರು ವೇಗದ ಕಂಟ್ರೋಲ್ ಆಯ್ಕೆ ಪಡೆದುಕೊಂಡಿದೆ. ಅಮೆಜಾನ್‌ನಲ್ಲಿ ಸದ್ಯಕ್ಕೆ ಲಭ್ಯ ಇಲ್ಲ.
ಸಿಂಫನಿ ಡಯಟ್ 12T ಪರ್ಸನಲ್ ಟವರ್ ಏರ್ ಕೂಲರ್: ಅತ್ಯುತ್ತಮ ದಕ್ಷತೆ ವಿಭಾಗದಲ್ಲಿ ಈ ಕೂಲರ್ (Symphony Diet 12T Personal Tower Air Cooler) ಗುರುತಿಸಿಕೊಂಡಿದೆ. ಅಲ್ಲದೆ ಕನಿಷ್ಠ ವಿದ್ಯುತ್ ಬಳಕೆಯೊಂದಿಗೆ ಅತ್ಯುತ್ತಮವಾದ ಕೂಲಿಂಗ್ ಅನುಭವವನ್ನು ನೀಡಲಿದ್ದು, ಇದರೊಂದಿಗೆ ಶುದ್ಧ ಗಾಳಿ ಮತ್ತು ಶಕ್ತಿಯುತ ಬ್ಲೋವರ್‌ಗಾಗಿ ಐ-ಪ್ಯೂರ್ ಟೆಕ್ನಾಲಜಿ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ. ಇದಕ್ಕೆ ಅಮೆಜಾನ್‌ನಲ್ಲಿ 965 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

ಬಜಾಜ್ Px 97 ಟಾರ್ಕ್ ನ್ಯೂ 36L ಏರ್ ಕೂಲರ್: ಈ ಕೂಲರ್ (Bajaj Px 97 Torque New 36L Air Cooler) ಅನ್ನು ಎಲ್ಲಾ ವಿಭಾಗದಲ್ಲಿಯೂ ಅತ್ಯುತ್ತಮ ಹಾಗೂ ಟಾಪ್ ಕೂಲರ್ ಎಂದು ಗುರುತಿಸಲಾಗಿದೆ. ಇದು 36 ಲೀಟರ್ ನೀರಿನ ಟ್ಯಾಂಕ್ ಅನ್ನು ಹೊಂದಿದ್ದು, ಪ್ರಬಲ ಟರ್ಬೋಫಾನ್ ತಂತ್ರಜ್ಞಾನದ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 1177 CFM ಗಾಳಿಯ ಹರಿವಿನೊಂದಿಗೆ ಬಳಕೆದಾರರಿಗೆ ತಂಗಾಳಿಯಲ್ಲಿ ತೇಲುವಂತೆ ಮಾಡಲಿದೆ. ಇದು ಅಮೆಜಾನ್‌ನಲ್ಲಿ 1,017 ರೂ.ಗಳ ಬೆಲೆ ಹೊಂದಿದೆ

ಬರ್ಲಿ ಬೋಲ್ಡ್10L ಪರ್ಸನಲ್ ಪೋರ್ಟಬಲ್ ಕೂಲರ್ : ಇದು (BURLY BOLD 10 LTR Personal Portable Cooler) ಥರ್ಮಲ್ ಓವರ್‌ಲೋಡ್ ಪ್ರೊಟೆಕ್ಟ್ ಫೀಚರ್ಸ್ ಹೊಂದಿದ್ದು, ಬಲವಾದ ಗಾಳಿಯ ಹರಿವನ್ನು ನೀಡಲಿದೆ. ಹಾಗೆಯೇ ಪೋರ್ಟಬಲ್ ಆಗಿದ್ದು, ಕಡಿಮೆ ವಿದ್ಯುತ್ ಬಳಕೆ ಮಾಡಲಿದೆ. ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಸೌಲಭ್ಯ ಪಡೆದುಕಂಡಿದೆ. ಇದರೊಂದಿಗೆ 6500 CMPH ಗಾಳಿಯ ಹರಿವಿನ ಸಾಮರ್ಥ್ಯ ಹೊಂದಿದ್ದು, 3,590 ರೂ.ಗಳ ಬೆಲೆಯಲ್ಲಿ ಮಾರಾಟ ಆಗುತ್ತಿದೆ.


Click it and Unblock the Notifications








