Home
Gadgets

ಈ ಫಿಟ್ನೆಸ್‌ ಬ್ಯಾಂಡ್‌ಗಳು ಬಜೆಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ!..ಇಲ್ಲಿದೆ ಮಾಹಿತಿ!

ಇತ್ತೀಚಿಗೆ ಮಾರುಕಟ್ಟೆಯಲ್ಲಿ ಫಿಟ್ನೆಸ್‌ ಬ್ಯಾಂಡ್‌ಗಳು ಅಧಿಕ ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆಗಳು ಸೇರಿದಂತೆ ಇತರೆ ಸಂಸ್ಥೆಗಳು ಭಿನ್ನ ಬೆಲೆಯಲ್ಲಿ ಫಿಟ್ನೆಸ್‌ ಬ್ಯಾಂಡ್‌ಗಳನ್ನು ಪರಿಚಯಿಸುತ್ತ ಮುನ್ನಡೆದಿವೆ. ಆ ಪೈಕಿ ಶಿಯೋಮಿ, ರಿಯಲ್‌ಮಿ, ಹಾನರ್, ಒಪ್ಪೋ, ಒನ್‌ಪ್ಲಸ್‌ ಸಂಸ್ಥೆಗಳು ಫಿಟ್ನೆಸ್‌ ಬ್ಯಾಂಡ್‌ ಗಮನ ಸೆಳೆದಿವೆ.

ಹೌದು, ಗ್ರಾಹಕರು ಜನಪ್ರಿಯ ಬ್ರ್ಯಾಂಡ್‌ಗಳ ಫಿಟ್ನೆಸ್‌ ಬ್ಯಾಂಡ್‌ಗಳನ್ನು ಖರೀದಿಸಲು ಇಚ್ಚಿಸುತ್ತಾರೆ. ಇಂದಿನ ಬಹುತೇಕ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳು ಬಳಕೆದಾರರ ದೈನಂದಿನ ಚಟುವಟಿಕೆಗಳನ್ನು ಟ್ರಾಕ್‌ ಮಾಡುವ, ಹೃದಯ ಬಡಿತ ಮಾನಿಟರ್ ಮಾಡುವ, ಸ್ಪೋರ್ಟ್ಸ್ ಮೋಡ್‌ ಆಯ್ಕೆಗಳು, ಸ್ಲಿಪ್‌ ಮಾನಿಟರ್ ಮಾಡುವಂತಹ ಆಕರ್ಷಕ ಫೀಚರ್ಸ್‌ ಹೊಂದಿವೆ.

ಈ ಫಿಟ್ನೆಸ್‌ ಬ್ಯಾಂಡ್‌ಗಳು ಬಜೆಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ!..ಇಲ್ಲಿದೆ ಮಾಹಿತಿ

ಅದಾಗ್ಯೂ, ಅನೇಕ ಗ್ರಾಹಕರು ಬಜೆಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡ ಫಿಟ್ನೆಸ್‌ ಬ್ಯಾಂಡ್‌ಗಳಿಗೆ ಹೆಚ್ಚು ಗಮನ ನೀಡುತ್ತಾರೆ. ಹಾಗಾದರೇ ಇಂದಿನ ಈ ಲೇಖನದಲ್ಲಿ ಬಜೆಟ್‌ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇರುವ ಪ್ರಮುಖ ಫಿಟ್ನೆಸ್‌ ಬ್ಯಾಂಡ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.


ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ 1.56 ಇಂಚಿನ (152 x 486 ಪಿಕ್ಸೆಲ್‌ಗಳು) ಪೂರ್ಣ ಪರದೆಯ AMOLED ಟಚ್ ಡಿಸ್‌ಪ್ಲೇಯನ್ನು ಹೊಂದಿದ್ದು 450 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಮಿ ಸ್ಮಾರ್ಟ್ ಬ್ಯಾಂಡ್‌ನ 1.1 ಇಂಚಿನ AMOLED ಡಿಸ್‌ಪ್ಲೇಗೆ ಹೋಲಿಸಿದರೆ ಪರದೆಯು ಗಾತ್ರದಲ್ಲಿ ದೊಡ್ಡದಾಗಿದೆ. ಹಾಗೆಯೇ ಮಿ ಸ್ಮಾರ್ಟ್ ಬ್ಯಾಂಡ್ 6 ಬ್ಲೂಟೂತ್ v5.0 (BLE) ಸಂಪರ್ಕದೊಂದಿಗೆ ಬರುತ್ತದೆ ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳನ್ನು ಬೆಂಬಲಿಸುತ್ತದೆ.

ಈ ಫಿಟ್ನೆಸ್‌ ಬ್ಯಾಂಡ್‌ಗಳು ಬಜೆಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ!..ಇಲ್ಲಿದೆ ಮಾಹಿತಿ

ಒನ್‌ಪ್ಲಸ್ ಬ್ಯಾಂಡ್ ಡಿವೈಸ್‌

ಒನ್‌ಪ್ಲಸ್ ಬ್ಯಾಂಡ್ ಡಿವಯಸ್ 126 x 294 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.6 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಪಿ 68 ಪ್ರಮಾಣೀಕರಣ ಮತ್ತು 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಅನ್ನು ಒಳಗೊಂಡಿದೆ. ಅದೇ ರೀತಿ ಶಿಯೋಮಿ ಮಿ ಬ್ಯಾಂಡ್ 5 ಡಿವೈಸ್‌ 1.1 ಇಂಚಿನ ಕಲರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 4 ನಲ್ಲಿನ 0.95 ಇಂಚಿನ ಪರದೆಗಿಂತ ದೊಡ್ಡದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 100 ಕ್ಕೂ ಹೆಚ್ಚು ಹೊಸ ಆನಿಮೇಟೆಡ್ ವಾಚ್ ಫೇಸ್‌ಗಳನ್ನ ಹೊಂದಿದೆ.

ಒಪ್ಪೊ ಸ್ಮಾರ್ಟ್‌ಬ್ಯಾಂಡ್ ಡಿವೈಸ್

ಒಪ್ಪೊ ಸ್ಮಾರ್ಟ್‌ಬ್ಯಾಂಡ್ ಡಿವೈಸ್ 1.1 ಇಂಚಿನ ಅಮೋಲೆಡ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 100% P3 ವೈಡ್ ಕಲರ್ ಗ್ಯಾಮಟ್ ಮತ್ತು 2.5 ಡಿ ಬಾಗಿದ ಸ್ಕ್ರಾಚ್‌ ರೆಸಿಸ್ಟೆನ್ಸ್ ಮೇಲ್ಮೈಯನ್ನು ಹೊಂದಿದೆ. ಇದು ಇನ್‌ಸೈಡ್‌ ರನ್ನಿಂಗ್‌, ಔಟ್‌ಸೈಡ್‌ ರನ್ನಿಂಗ್‌, ಔಟ್‌ಸೈಡ್‌ ಸೈಕ್ಲಿಂಗ್, ಇನ್‌ಸೈಡ್‌ ವಾಕಿಂಗ್, ಇನ್‌ಸೈಡ್‌ ಸೈಕ್ಲಿಂಗ್, ಇನ್‌ಸೈಡ್‌ ರನ್‌, ಕ್ಯಾಲೊರಿ ವೆಸ್ಟ್‌, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್‌, ರೋಯಿಂಗ್ ಮೆಷಿನ್‌, ಎಲಿಪ್ಟಿಕಲ್ ಮೆಷಿನ್, ಸೇರಿದಂತೆ ಇತರೆ ತರಬೇತಿಯನ್ನು ಒಳಗೊಂಡಿರುವ 12 ಸಮಾದರಿಯ ಕ್ರೀಡಾ ವಿಧಾನಗಳನ್ನು ಹೊಂದಿದೆ.

ಈ ಫಿಟ್ನೆಸ್‌ ಬ್ಯಾಂಡ್‌ಗಳು ಬಜೆಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ!..ಇಲ್ಲಿದೆ ಮಾಹಿತಿ

ರಿಯಲ್ ಮಿ 2 ಡಿವೈಸ್

ರಿಯಲ್ ಮಿ 2 ಡಿವೈಸ್ ಒಂದು ವಿಶಿಷ್ಟವಾದ ಆಯತಾಕಾರದ 1.4 ಇಂಚಿನ HD ಬಣ್ಣದ ಪ್ರದರ್ಶನದೊಂದಿಗೆ ಪ್ರಕಾಶಮಾನವಾದ, ವರ್ಣರಂಜಿತ ಮತ್ತು ಸ್ಪಂದಿಸುವ ಸ್ಪರ್ಶ ಅನುಭವವನ್ನು ನೀಡುತ್ತದೆ. ಫಿಟ್ನೆಸ್ ಟ್ರ್ಯಾಕರ್ ಅಂತರ್ನಿರ್ಮಿತ SpO2 ಸಂವೇದಕದೊಂದಿಗೆ ನಿರಂತರ ಹೃದಯ ಬಡಿತ ಮೇಲ್ವಿಚಾರಣೆ ಮತ್ತು ರಕ್ತದ ಶುದ್ಧತ್ವ ಮಟ್ಟವನ್ನು ಒದಗಿಸುತ್ತದೆ. 90 ಕ್ರೀಡಾ ವಿಧಾನಗಳಿವೆ. ಇದು 12 ದಿನಗಳವರೆಗೆ ಕ್ಲೈಮ್ ಮಾಡಲಾದ ಬ್ಯಾಟರಿ ಬ್ಯಾಕಪ್‌ನೊಂದಿಗೆ ಲಿಥಿಯಂ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

Best Mobiles in India

English summary
Best Fitness Bands at Budget price In India 2023; Specifications and more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+