20000ರೂ. ಒಳಗೆ ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳ ಲಿಸ್ಟ್ ಇಲ್ಲಿದೆ!
ಪ್ರಸ್ತುತ ಮೊಬೈಲ್‌ಗಳಂತೆ ಲ್ಯಾಪ್‌ಟಾಪ್‌ಗಳು ಸಹ ಅಗತ್ಯ ಸಾಧನ ಎನಿಸಿದೆ. ಅತ್ಯುತ್ತಮ ಹೈ ಎಂಡ್ ಲ್ಯಾಪ್‌ಟಾಪ್‌ಗಳ ಬೆಲೆ ದುಬಾರಿ ಪ್ರೈಸ್‌ಟ್ಯಾಗ್ ಅನ್ನು ಪಡೆದಿವೆ. ಆದರೆ ಕೆಲವು ಅಗತ್ಯ ಬೇಸಿಕ ಕೆಲಸಗಳನ್ನು ಪೂರೈಸಲು ಆರಂಭಿಕ ಹಂತದ ಲ್ಯಾಪ್‌ಟಾಪ್‌ಗಳು ಉತ್ತಮ ಬೇಡಿಕೆ ಪಡೆದಿವೆ. ಜನಪ್ರಿಯ ಬ್ರ್ಯಾಂಡ್‌ಗಳು ಕೂಡಾ ಬಜೆಟ್ ದರದಲ್ಲಿ ಕೆಲವು ಬೇಸಿಕ್ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿವೆ.
ಹೌದು, ಸದ್ಯ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಲ್ಯಾಪ್‌ಟಾಪ್ ಖರೀದಿಸುವ ಆಯ್ಕೆಗಳು ಇವೆ. ಬಜೆಟ್ ದರದಲ್ಲಿಯೂ ಆಕರ್ಷಕ ಸೌಲಭ್ಯ ಇರುವ ಲ್ಯಾಮ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳು ವಿಡಿಯೋ ವೀಕ್ಷಣೆ, ಎಮ್ ಎಸ್ ಎಕ್ಸ್‌ಎಲ್, ಎಮ್ ಎಸ್ ವರ್ಡ್, ವೆಬ್ ಬ್ರೌಸಿಂಗ್ ಸೇರಿದಂತೆ ಹಲವು ಅಗತ್ಯ ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸುವ ಸೌಲಭ್ಯ ಪಡೆದಿವೆ. ಹಾಗಾದರೇ 20000ರೂ. ಗಳ ಒಳಗೆ ಲಭ್ಯ ಇರುವ ಕೆಲವು ಬೆಸ್ಟ್ ಲ್ಯಾಪ್‌ಟಾಪ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಆಸುಸ್ ಕ್ರೋಮ್‌ಬುಕ್ Intel Celeron Dual Core N4500
ಆಸುಸ್ ಸಂಸ್ಥೆಯ ಈ ಲ್ಯಾಪ್‌ಟಾಪ್ 15.6 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು ಇಂಟೆಲ್ Celeron Dual Core N4500 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇನ್ನು ಈ ಲ್ಯಾಪ್‌ಟಾಪ್ 8 GB/128 GB EMMC ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದೆ. 1.80kg ತೂಕ ಹೊಂದಿರುವ ಈ ಲ್ಯಾಪ್‌ಟಾಪ್ ಸಿಲ್ವರ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ 16,990ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.
ಏಸರ್ ಕ್ರೋಮ್‌ಬುಕ್ Intel Celeron Dual Core N4500
ಆಸುಸ್ ಸಂಸ್ಥೆಯ (Acer Aspire 3) ಈ ಲ್ಯಾಪ್‌ಟಾಪ್ 14 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು Celeron Dual Core N4500 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇನ್ನು ಈ ಲ್ಯಾಪ್‌ಟಾಪ್ 8 GB/256 GB SSD ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿದ್ದು, ವಿಂಡೋಸ್ 11 ಹೋಮ್ ಇದೆ. ತೆಳ್ಳನೆಯ ರಚನೆ ಪಡೆದಿರುವ ಈ ಲ್ಯಾಪ್‌ಟಾಪ್ 1.3kg ತೂಕ ಪಡೆದಿದೆ. ಹಾಗೆಯೇ ಈ ಲ್ಯಾಪ್‌ಟಾಪ್ ಸಿಲ್ವರ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ 19,990ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.
ಥಾಮ್ಸನ್ ಇಂಟೆಲ್ Celeron Dual Core N4500
ಥಾಮ್ಸನ್ ಸಂಸ್ಥೆಯ (Thomson Laptop- IN-N15V2C) ಈ ಲ್ಯಾಪ್‌ಟಾಪ್ 15.6 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು Intel Celeron Dual Core N4020 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದೆ. ಅಂದಹಾಗೆ ಈ ಲ್ಯಾಪ್‌ಟಾಪ್ 4 GB/128 GB SSD ಸ್ಟೋರೇಜ್ ಆಯ್ಕೆಯನ್ನು ಪಡೆದಿದ್ದು, ವಿಂಡೋಸ್ 11 ಹೋಮ್ ಇದೆ. ತೆಳ್ಳನೆಯ ರಚನೆ ಪಡೆದಿರುವ ಈ ಲ್ಯಾಪ್‌ಟಾಪ್ 1.56kg ತೂಕ ಪಡೆದಿದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ 16,990ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.
HP Chromebook Intel Celeron Dual Core N4120
ಹೆಚ್‌ಪಿ ಸಂಸ್ಥೆಯ (14a-ca0506TU) ಈ ಲ್ಯಾಪ್‌ಟಾಪ್ 14 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು, ಇದು Intel Celeron Dual Core N4120 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದೆ. ಅಂದಹಾಗೆ ಈ ಲ್ಯಾಪ್‌ಟಾಪ್ 4 GB/128 GB EMMC ಸ್ಟೋರೇಜ್ ಆಯ್ಕೆಯನ್ನು ಪಡೆದಿದ್ದು, ಕ್ರೋಮ್ ಓಎಸ್ ಇದೆ. ತೆಳ್ಳನೆಯ ರಚನೆ ಪಡೆದಿರುವ ಈ ಲ್ಯಾಪ್‌ಟಾಪ್ 1.49kg ತೂಕ ಪಡೆದಿದೆ. ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ 19,990ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.


Click it and Unblock the Notifications








