Home
Gadgets

Mini Air coolers : ನೀವು ಖರೀದಿಸಬಹುದಾದ ಅತ್ಯುತ್ತಮ ಮಿನಿ ಏರ್ ಕೂಲರ್‌ಗಳು! ಆಫರ್ ಬೆಲೆಯಲ್ಲಿ ಲಭ್ಯ

ಸುಡು ಬಿಸಿಲು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ನಡುವೆ ಬೆಂಗಳೂರಂತ ಮಹಾಗರಗಳಲ್ಲಿ ನೀರಿನ ಅಭಾವ ಕಂಡುಬಂದಿದ್ದು, ಜನರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಇದು ಒಂದು ಕಡೆಯಾದರೆ ಮನೆಯಲ್ಲಿ ಇರುವವರು ಅಥವಾ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಶಾಖದಿಂದ ಬೆಂದು ಬಸವಳಿಯುತ್ತಿದ್ದಾರೆ.

ಹೌದು, ಇದೀಗ ಬೇಸಿಗೆಯ ತಾಪ ಎಲ್ಲೆಡೆ ಹೆಚ್ಚಾಗಿದ್ದು, ಇದನ್ನು ಕಡಿಮೆ ಮಾಡಿಕೊಳ್ಳಲು ಜನರು ಉತ್ತಮ ಕೂಲರ್‌ ಖರೀದಿ ಮಾಡಲು ಮುಂದಾಗಿದ್ದಾರೆ. ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಭಿನ್ನ ವಿಭಿನ್ನ ಫೀಚರ್ಸ್‌ ಆಯ್ಕೆಯ ಮಿನಿ ಕೂಲರ್‌ಗಳು (Mini air coolers ) ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ಇವು ಮನೆಯಿಂದಲೇ ಕೆಲಸ ಮಾಡುವರಿಗೆ, ಮಕ್ಕಳಿಗೆ, ಹಿರಿಯರಿಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ. ಇವು ಪೋರ್ಟಬಲ್‌ ಹಾಗೂ ಹಗುರವಾಗಿರುವುದರಿಂದ ಹೆಚ್ಚಿನ ಬೇಡಿಕೆ ಇದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಮಿನಿ ಕೂಲರ್‌ಗಳು ಎಷ್ಟು ಬೆಲೆ ಪಡೆದಿವೆ?, ಫೀಚರ್ಸ್‌ ಏನು ಅನ್ನೋದನ್ನು ಗಮನಿಸೋಣ.

ನೀವು ಖರೀದಿಸಬಹುದಾದ ಅತ್ಯುತ್ತಮ ಮಿನಿ ಏರ್ ಕೂಲರ್‌ಗಳು! ಆಫರ್ ಬೆಲೆಯಲ್ಲಿ ಲಭ್ಯ

ಚಾರ್ಕಿ ಮಿನಿ ಕೂಲರ್: ಈ ಮಿನಿ ಕೂಲರ್ (CHARKEE Mini Cooler) 999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವಿಗ ಇದನ್ನು 499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ನಿಮ್ಮ ಕೊಠಡಿ, ಅಡುಗೆ ಮನೆ ಅಥವಾ ಅಧ್ಯಯನ ರೂಂಗೆ ಸೂಕ್ತವಾಗಿದೆ. ಹಾಗೆಯೇ ಡ್ಯುಯಲ್ ಬ್ಲೋವರ್‌ಗಳು ಮತ್ತು ಐಸ್ ಚೇಂಬರ್‌ನೊಂದಿಗೆ ಕಾಣಿಸಿಕೊಂಡಿದ್ದು, ಎಲ್ಲಿ ಬೇಕಾದರೂ ತಂಪಾದ ಗಾಳಿಯನ್ನು ನೀಡುತ್ತದೆ.

ಎಕ್ವಿರಾ ಹೈ ಸ್ಪೀಡ್ ಕೂಲರ್ ಫ್ಯಾನ್: ಈ ಡಿವೈಸ್‌ (Ekvira High Speed Cooler Fan) ಅನ್ನು ನೀವು 1799ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು 1.2 ಅಡಿ ಎತ್ತರ ಹೊಂದಿದ್ದು, 120 ಡಿಗ್ರಿ ಗಾಳಿಯ ಪ್ರಸರಣ ಮಾಡುತ್ತದೆ. ಜೊತೆಗೆ ಈ ಡಿವೈಸ್‌ ನೀರಿಲ್ಲದೆಯೂ ಸಹ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ವಿವಿಧ ಪರಿಸರಗಳಿಗೆ ಅನುಕೂಲಕರ ಆಯ್ಕೆಯಾಗಿದೆ. ಇನ್ನು ಕನೆಕ್ಟವಿಟಿಗಾಗಿ ಇನ್‌ಬಿಲ್ಟ್‌ ಯುಎಸ್‌ಬಿ ಮೊಬೈಲ್ ಚಾರ್ಜರ್ ಆಯ್ಕೆ ಪಡೆದಿದ್ದು, ಪ್ರಯಾಣದಲ್ಲಿರುವಾಗ ಉತ್ತಮ ಕೂಲಿಂಗ್‌ ಅನುಭವ ಪಡೆಯಬಹುದಾಗಿದೆ.

ಚಿಲ್‌ಬ್ರೀಜ್‌ 3-ಇನ್-1 ಮಿನಿ ಏರ್ ಕೂಲರ್: ಇತ್ತೀಚೆಗೆ ಹೆಚ್ಚು ಏಲ್‌ ಆಗುತ್ತಿರುವ ಕೂಲರ್‌ (CHILLBREEZE 3-IN-1 MINI Air Cooler) ಇದಾಗಿದೆ. ಇದನ್ನು ನೀವು 1,699ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಈ ಡಿವೈಸ್‌ ಪೋರ್ಟಬಲ್ ಏರ್ ಕಂಡಿಷನರ್, ಫ್ಯಾನ್ ಮತ್ತು ವೈಯಕ್ತಿಕ ಮಿನಿ ಕೂಲರ್‌ ಕೂಲರ್ ಆಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದರಲ್ಲಿ 3 ವಿಂಡ್ ಸ್ಪೀಡ್ ಮೋಡ್‌ಗಳು ಲಭ್ಯ ಇದ್ದು, 3 ರೀತಿಯ ಸ್ಪ್ರೇ ಮೋಡ್‌ಗಳು ಸಹ ಇವೆ. ಇದರ ಜೊತೆಗೆ ಆಕರ್ಷಕ ಎಲ್‌ಇಡಿ ಲೈಟ್ ಅನ್ನು ಕಾಣಬಹುದು.

ನೀವು ಖರೀದಿಸಬಹುದಾದ ಅತ್ಯುತ್ತಮ ಮಿನಿ ಏರ್ ಕೂಲರ್‌ಗಳು! ಆಫರ್ ಬೆಲೆಯಲ್ಲಿ ಲಭ್ಯ

ಕ್ರೋಂಪ್ಟನ್ ಗಿನಿ ನಿಯೋ ಟೇಬಲ್-ಟಾಪ್ ಪರ್ಸನಲ್ ಏರ್ ಕೂಲರ್: ಈ ವಿಶೇಷ ಡಿವೈಸ್‌ (Crompton Ginie Neo Table-Top Personal Air Cooler) ನಿಮಗೆ 3735 ರೂ.ಗಳ ಬೆಲೆಗೆ ಲಭ್ಯ ಇದೆ. 10 ಲೀಟರ್ ಸಾಮರ್ಥ್ಯ ಮತ್ತು 4 ವೇ ಏರ್ ಡಿಫ್ಲೆಕ್ಷನ್ ಸಿಸ್ಟಮ್‌ನೊಂದಿಗೆ ಇದು ಕಾಣಿಸಿಕೊಂಡಿದ್ದು, ಉತ್ತಮ ಕೂಲಿಂಗ್‌ ಅನುಭವ ನೀಡಲು ಹನಿಕೋಂಬ್‌ ಪ್ಯಾಡ್‌ ಆಯ್ಕೆ ನೀಡಲಾಗಿದೆ. ಈ ಮಿನಿ ಏರ್ ಕೂಲರ್ ಸಣ್ಣ ಪ್ರದೇಶಗಳಿಗೆ ಅಥವಾ ವೈಯಕ್ತಿಕ ಬಳಕೆಗೆ ಸೂಕ್ತವಾಗಿದೆ.

ಸಿಂಫನಿ ಡಯಟ್ 3D 30i ಪೋರ್ಟಬಲ್ ಟವರ್ ಏರ್ ಕೂಲರ್: ಈ ಕೂಲರ್ ( Symphony Diet 3D 30i Portable Tower Air Cooler) 9389 ರೂ.ಗಳ ಬೆಲೆಗೆ ಲಭ್ಯ ಇದೆ. ಈ ಕೂಲರ್ ಸಹ ಮೂರು ಸೈಡ್‌ನಲ್ಲಿ ಹನಿಕೋಂಬ್‌ ಪ್ಯಾಡ್‌ಗಳು ಮತ್ತು ಐ-ಪ್ಯೂರ್ ತಂತ್ರಜ್ಞಾನದೊಂದಿಗೆ ನಿರ್ಮಾಣ ಆಗಿದ್ದು, ಸ್ಥಿರವಾದ ಕೂಲಿಂಗ್ ಮತ್ತು ಶುದ್ಧೀಕರಿಸಿದ ಗಾಳಿಯನ್ನು ನೀಡುತ್ತದೆ. ಜೊತೆಗೆ 30 ಲೀಟರ್ ನೀರಿನ ಸಾಮರ್ಥ್ಯ ಪಡೆದಿದ್ದು, ಪರಿಸರ ಸ್ನೇಹಿ ಮತ್ತು ವೆಚ್ಚ-ಪರಿಣಾಮಕಾರಿ ಆಯ್ಕೆಯಾಗಿದೆ.

ನೀವು ಖರೀದಿಸಬಹುದಾದ ಅತ್ಯುತ್ತಮ ಮಿನಿ ಏರ್ ಕೂಲರ್‌ಗಳು! ಆಫರ್ ಬೆಲೆಯಲ್ಲಿ ಲಭ್ಯ

ಕ್ಯಾಂಡೆಸ್ ಎಲೆಗಂಟ್‌ ಪರ್ಸನಲ್‌ ಏರ್ ಕೂಲರ್: ಈ ಸ್ಮಾರ್ಟ್‌ ಕೂಲರ್ (Candes Elegant Personal Air Cooler) 3649 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದು 12 ಲೀಟರ್ ಸಾಮರ್ಥ್ಯ ಪಡೆದಿದ್ದು, ಹೈ-ಸ್ಪೀಡ್ ಬ್ಲೋವರ್ ಫ್ಯಾನ್ ಮತ್ತು ಹನಿಕೋಂಬ್‌ ಕೂಲಿಂಗ್ ಪ್ಯಾಡ್‌ನೊಂದಿಗೆ ಲಭ್ಯ ಇದೆ. ಇದರ ಜೊತೆಗೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಸರಿಹೊಂದುವಂತೆ ಗ್ರಾಹಕೀಯಗೊಳಿಸಬಹುದಾದ ಗಾಳಿಯ ಹರಿವನ್ನು ನೀಡಲು ಮೂರು-ವೇಗದ ಕಂಟ್ರೋಲ್‌ ಆಯ್ಕೆ ಪಡೆದಿದೆ.

Best Mobiles in India

English summary
Mini air coolers are available in the market and are useful for work from workers, children, and seniors in various ways.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+