Home
Gadgets

ಜರ್ನಿ ಸಮಯದಲ್ಲಿ ಮ್ಯೂಸಿಕ್‌ ಕೇಳಲು ಬೆಸ್ಟ್‌ ಹೆಡ್‌ಫೋನ್‌ಗಳು!

ಜರ್ನಿ ಸಮಯದಲ್ಲಿ ಕಿವಿಗೆ ಹೆಡ್‌ಫೋನ್‌ ಧರಿಸಿ ವಿಂಡೊದ ಹೊರಗಡೆ ಕಣ್ಣಾಡಿಸುತ್ತಾ ನೆಚ್ಚಿನ ಮ್ಯೂಸಿಕ್‌ ಕೇಳುವುದೆಂದರೇ ಯಾರಿಗೆತಾನೇ ಇಷ್ಟವಿಲ್ಲ ಹೇಳಿ?..ಸಾಮಾನ್ಯವಾಗಿ ಪ್ರಯಾಣ ಮಾಡುವವರು ದಾರಿಯುದ್ದಕ್ಕೂ ಮ್ಯೂಸಿಕ್‌ನ ಹ್ಯಾಂಗೋವರ್‌ನಲ್ಲಿರಲು ಇಚ್ಚಿಸುತ್ತಾರೆ. ಅದಕ್ಕಾಗಿ ಬಹುತೇಕ ಮ್ಯೂಸಿಕ್‌ ಪ್ರೇಮಿಗಳು ಪ್ರಯಾಣದ ಸಂದರ್ಭದಲ್ಲಿ ಅತ್ಯುತ್ತಮ ಹೆಡ್‌ಫೋನ್‌ ಅಥವಾ ಇಯರ್‌ಫೋನ್‌ ಹೊಂದಲು ಬಯಸುತ್ತಾರೆ.

ಜರ್ನಿ ಸಮಯದಲ್ಲಿ ಮ್ಯೂಸಿಕ್‌ ಕೇಳಲು ಬೆಸ್ಟ್‌ ಹೆಡ್‌ಫೋನ್‌ಗಳು!

ಹೌದು, ಪ್ರಯಾಣದಲ್ಲಿ ವೇಳೆ ಉಂಟಾಗುವ ಬೇಸರ ಕಳೆಯಲು ಹೆಡ್‌ಫೋನ್‌ ಧರಿಸಿ ಮ್ಯೂಸಿಕ್‌ ಕೇಳುವವರು ಒಂದೇಡೆಯಾದರೇ, ಜರ್ನಿಯಲ್ಲಿ ಮ್ಯೂಸಿಕ್‌ ಎಂಜಾಯ್‌ ಮಾಡಲು ಬಯಸುವವರು ಸಹ ಅನೇಕರಿದ್ದಾರೆ. ಹೀಗಾಗಿಯೇ ಸದ್ಯ ಮಾರುಕಟ್ಟೆಯಲ್ಲಿ ತರಹೇವಾರಿ ಹೆಡ್‌ಫೋನ್‌ಗಳು ವಿವಿಧ ರೇಂಜ್‌ನಲ್ಲಿ ಲಭ್ಯವಿದ್ದು, ಅವುಗಳಲ್ಲಿ ಶಬ್ದ ತಡೆಯುವ (Noise-Cancelling) ಹೆಡ್‌ಫೋನ್‌ಗಳಿಗೆ ಡಿಮ್ಯಾಂಡ್‌ ಹೆಚ್ಚಾಗಿಯೇ ಇದೆ.

ಜರ್ನಿ ಸಮಯದಲ್ಲಿ ಮ್ಯೂಸಿಕ್‌ ಕೇಳಲು ಬೆಸ್ಟ್‌ ಹೆಡ್‌ಫೋನ್‌ಗಳು!

ಮಾರುಕಟ್ಟೆಯಲ್ಲಿ ಆಡಿಯೊ ಉತ್ಪನ್ನಗಳಿಂದ ಹೆಸರುವಾಸಿಯಾಗಿರುವ ಸೋನಿ, ಬೋಸ್‌, ಫಿಲಿಪ್ಸ್‌, ಜೆಬಿಎಲ್‌, ಮೈಕ್ರೋಸಾಫ್ಟ್‌, ಜಬ್ರಾ, ಬೋವೆರ್ಸ್‌ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಅತ್ಯುತ್ತಮ ನಾಯಿಸ್‌ ಕ್ಯಾನ್ಸಲೇಷನ್‌ ಸೌಲಭ್ಯವನ್ನು ಪಡೆದುಕೊಂಡಿವೆ. ಹಾಗಾದರೇ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ನಾಯಿಸ್‌ ಕ್ಯಾನ್ಸಲೇಷನ್‌ ಹೆಡ್‌ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸೋನಿ WH-1000XM3

ಸೋನಿ WH-1000XM3

ವಿಶ್ವದಲ್ಲಿಯೇ ಅತ್ಯುತ್ತಮ ನಾಯಿಸ್‌ ಕ್ಯಾನ್ಸಲೇಷನ್‌ ಹೆಡ್‌ಫೋನ್‌ ಎಂದು ಗುರುತಿಸಿಕೊಂಡಿರುವ, ಸೋನಿ WH-1000XM3 ಹೆಡ್‌ಫೋನ್ 4Hz to 40kHz ಫ್ರಿಕ್ವೇನ್ಸಿ ರೆಸ್ಪಾನ್ಸ್‌ ಹೊಂದಿದೆ. ಡೈನಾಮಿಕ್ ಮಾದರಿಯ 40mm ಡ್ರೈವರ್‌ಗಳನ್ನು ಹೊಂದಿದ್ದು, ಸುಮಾರು 30 ಗಂಟೆಗಳ ದೀರ್ಘ ಬ್ಯಾಟರಿ ಬಾಳಿಕೆಯನ್ನ ಪಡೆದುಕೊಂಡಿದೆ. ಅಮೆಜಾನ್‌ನಲ್ಲಿ ಇ ಕಾಮರ್ಸ್‌ನಲ್ಲಿ 26800ರೂ.ಗಳ ಬೆಲೆಯಲ್ಲಿ ದೊರೆಯಲಿದೆ.

ಸೋನಿ WH-1000XM2

ಸೋನಿ WH-1000XM2

ಬೆಸ್ಟ್‌ ನಾಯಿಸ್‌ ಕ್ಯಾನ್ಸಲೇಷನ್‌ ಸೌಲಭ್ಯವನ್ನು ಹೊಂದಿರುವ ಈ ಹೆಡ್‌ಫೋನ್‌ ಹಗುರವಾದ ರಚನೆಯನ್ನು ಹೊಂದಿದ್ದು, 23ಗ್ರಾಂ ತೂಕವನ್ನು ಪಡೆದಿದೆ. ವಾಯರ್‌ಲೆಸ್‌ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದಿದ್ದು, ಇದರ ವಾಯರ್‌ಲೆಸ್‌ ವ್ಯಾಪ್ತಿಯು ಸುಮಾರು 33ಫೂಟ್‌ಗಳಾಗಿದೆ. ಬೆಸ್ಟ್‌ ಆಡಿಯೋ ಡ್ರೈವರ್‌ಗಳಿದ್ದು, ಉತ್ತಮ ಸೌಂಡ್‌ ಬ್ಯಾಲೆನ್ಸ್‌ ಹೊಂದಿದೆ. ಸುಮಾರು 30 ಗಂಟೆ ಬ್ಯಾಟರಿ ಬಾಳಿಕೆಯನ್ನ ಪಡೆದುಕೊಂಡಿದೆ. ಬೆಲೆಯು 27,999ರೂ.ಗಳು.

ಬೋಸ್‌ QuietComfort 35 II

ಬೋಸ್‌ QuietComfort 35 II

ಬೋಸ್‌ ಕಂಪನಿಯ ಈ ಹೆಡ್‌ಫೋನ್‌ ಸಹ ಅತ್ಯುತ್ತಮ ನಾಯಿಸ್‌ ಕ್ಯಾನ್ಸಲೇಷನ್‌ ಆಯ್ಕೆಯನ್ನು ಹೊಂದಿದ್ದು, ಇದರೊಂದಿಗೆ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯವನ್ನು ಪಡೆದಿದೆ. ಈ ಡಿವೈಸ್‌ ಹಗುರವಾದ ರಚನೆಯಲ್ಲಿದ್ದು, ಇದರ ತೂಕವು 0.68 ಪೌಂಡ್‌ ಆಗಿದೆ. 3.94ಫೂಟ್‌ನಷ್ಟು ಕೇಬಲ್‌ ಲೆಂಥ ಹೊಂದಿದ್ದು, ಇದರೊಂದಿಗೆ ಬ್ಯಾಟರಿ ಬಾಳಿಕೆ ಸಾಮರ್ಥ್ಯವು ಸುಮಾರು 20ಗಂಟೆಗಳಿಗೂ ಅಧಿಕವಾಗಿದೆ. ಅಮೆಜಾನ್‌ನಲ್ಲಿ ಈ ಡಿವೈಸ್‌ ಬೆಲೆಯು 29,363ರೂ.ಗಳು ಆಗಿದೆ.

ಜಬ್ರಾ ಇಲೈಟ್‌ 85H

ಜಬ್ರಾ ಇಲೈಟ್‌ 85H

ಜಬ್ರಾದ ಇಲೈಟ್‌ 85H ಹೆಡ್‌ಫೋನ್‌ ಸಹ ಅತ್ಯುತ್ತಮ ನಾಯಿಸ್‌ ಕ್ಯಾನ್ಸಲೇಷನ್‌ ಸೌಲಭ್ಯವನ್ನು ಹೊಂದಿದ್ದು, ಸೌಂಡ್‌ಗಾಗಿ ಡೈನಾಮಿಕ್ ಮಾದರಿಯ 40mm ಡ್ರೈವರ್‌ಗಳನ್ನು ಹೊಂದಿದೆ. ವಾಯರ್‌ಲೆಸ್‌ ವ್ಯಾಪ್ತಿಯು 10ಮೀಟರ್‌ ಆಗಿದ್ದು, ಸುಮಾರು 36 ಗಂಟೆಗಳವರೆಗೂ ಬ್ಯಾಟರಿ ಬಾಳಿಕೆ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಹಗುರವಾದ ಡಿಸೈನ್‌ನಲ್ಲಿದ್ದು, 65 ಪೌಂಡ್‌ ತೂಕದಲ್ಲಿದೆ. ಅಮೆಜಾನ್‌ನಲ್ಲಿ ಈ ಹೆಡ್‌ಫೋನ್‌ ಬೆಲೆಯು 29,999ರೂ.ಗಳು ಆಗಿದೆ.

ಜೆಬಿಎಲ್ ಲೈವ್ 650BTNC

ಜೆಬಿಎಲ್ ಲೈವ್ 650BTNC

ಬಜೆಟ್‌ ಬೆಲೆಯಲ್ಲಿ ಬೆಸ್ಟ್‌ ನಾಯಿಸ್‌ ಕ್ಯಾನ್ಸಲೇಷನ್‌ ಹೆಡ್‌ಫೋನ್‌ ಎಂದೇ ಗುರುತಿಸಿಕೊಂಡಿರುವ ಜೆಬಿಎಲ್ ಲೈವ್ 650BTNC ಹೆಡ್‌ಫೋನ್‌, 249ಗ್ರಾಂ ತೂಕವನ್ನು ಹೊಂದಿದೆ. ಇದು ಸಹ ಡೈನಾಮಿಕ್ ಮಾದರಿಯ 40mm ಡ್ರೈವರ್‌ಗಳನ್ನು ಹೊಂದಿದ್ದು, ಇದರ ಕೇಬಲ್‌ ಲೆಂಥ 3.93 ಫೂಟ್‌ ಹಾಗೂ ವಾಯರ್‌ಲೆಸ್‌ ವ್ಯಾಪ್ತಿಯು 10ಮೀಟರ್‌ ಆಗಿದೆ. ಸುಮಾರು 20-30 ಗಂಟೆಗಳ ಬ್ಯಾಟರಿ ಶಕ್ತಿ ಇದೆ. ಅಮೆಜಾನ್‌ನಲ್ಲಿ ಬೆಲೆಯು 10,499ರೂ.ಗಳು ಆಗಿದೆ.

Best Mobiles in India

English summary
top noise-cancelling headphones for travel and commuting. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+