Best smartphones: 256GB ಸ್ಟೋರೇಜ್ ಆಯ್ಕೆಯ 15 ಸಾವಿರದ ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು!
ಉತ್ತಮ ಸ್ಮಾರ್ಟ್‌ಫೋನ್‌ಗಳು (Best smartphones) ಎಂದಿಗೂ ಸಹ ಉತ್ತಮ ಬೇಡಿಕೆ ಹೊಂದಿರುತ್ತವೆ. ಅದರಲ್ಲೂ ಇತ್ತೀಚಿಗೆ ವಿಶೇಷ ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಕಂಪೆನಿಗಳು ಅನಾವರಣ ಮಾಡಿಕೊಂಡು ಬರುತ್ತಿದ್ದು, ಬಳಕೆದಾರರಿಗೆ ವಿಭಿನ್ನ ಅನುಭವ ನೀಡುತ್ತವೆ.
ಹೌದು, ಉತ್ತಮ ಸ್ಮಾರ್ಟ್‌ಫೋನ್‌ಗಳು ಅದರಲ್ಲೂ ಬಜೆಟ್ ಬೆಲೆಯಲ್ಲಿ ಇರುವ ಫೋನ್‌ಗಳಿಗೆ ವಿಶೇಷ ಬೇಡಿಕೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಹೆಚ್ಚಿನ ಸ್ಟೋರೇಜ್ ಇರುವ ಫೋನ್‌ಗಳು ಇನ್ನೂ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಈ ವಿಭಾಗದಲ್ಲಿ ಮೊಟೊ, ಪೊಕೊ, ಇನ್ಫಿನಿಕ್ಸ್ ಸೇರಿದಂತೆ ಅನೇಕ ಕಂಪೆನಿಗಳು ಭಿನ್ನ ಫೋನ್‌ಗಳನ್ನು ಅನಾವರಣ ಮಾಡಿವೆ. ಹಾಗಿದ್ರೆ, 15 ಸಾವಿರದ ಒಳಗೆ ಲಭ್ಯ ಇರುವ ಹಾಗೂ 256GB ಸ್ಟೋರೇಜ್ ಆಯ್ಕೆಯ ಪ್ರಮುಖ ಫೋನ್‌ಗಳ ಲಿಸ್ಟ್ ಇಲ್ಲಿದೆ ನೋಡಿ.

ಮೊಟೊ G54 : ಈ ಸ್ಮಾರ್ಟ್‌ಫೋನ್(Moto G54) 256GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7020 ಆಕ್ಟಾ ಕೋರ್ ಪ್ರೊಸೆಸರ್ ಬಲ ಪಡೆದಿದ್ದು, 50+8 MP ರಿಯರ್ ಕ್ಯಾಮರಾ ಹಾಗೂ 16 MP ಸೆಲ್ಫಿ ಕ್ಯಾಮೆರಾದೊಂದಿದೆ. 120Hz ರಿಫ್ರೆಶ್ ರೇಟ್ ಆಯ್ಕೆಯ 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ 6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಇದು 30W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.
ಇನ್ಫಿನಿಕ್ಸ್ ನೋಟ್ 30 5G: ಈ ಸ್ಮಾರ್ಟ್‌ಫೋನ್ (Infinix Note30 5G) ಸಹ 256GB ಸ್ಟೋರೇಜ್‌ನಲ್ಲಿ ಲಭ್ಯ ಇದೆ. ಇದು 6.78 ಇಂಚಿನ 120Hz ರಿಫ್ರೆಶ್ ರೇಟ್ ಆಯ್ಕೆ ಇರುವ IPS LCD ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಆಕ್ಟಾ ಕೋರ್ ಪ್ರೊಸೆಸರ್ ಹಾಗೂ 108+2+0.08 MP ರಿಯರ್ ಕ್ಯಾಮರಾ, 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 45W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

ಶಿಯೋಮಿ ರೆಡ್ಮಿ 12 5G : ಈ ಫೋನ್ (Xiaomi Redmi 12 5G) 6.79 ಇಂಚಿನ 90Hz ರಿಫ್ರೆಶ್ ರೇಟ್ ಆಯ್ಕೆಯ IPS LCD ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ ಸ್ನಾಪ್‌ಡ್ರಾಗನ್ 4 ಜನ್ 2 ಆಕ್ಟಾ ಕೋರ್ ಪ್ರೊಸೆಸರ್ ಬಲ ಹಾಗೂ 50+2 MP ರಿಯರ್ ಕ್ಯಾಮೆರಾ ಮತ್ತು 8 MP ಸೆಲ್ಫಿ ಕ್ಯಾಮರಾ ಹೊಂದಿದೆ. ಅಲ್ಲದೆ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಈ ಬ್ಯಾಟರಿ 18W ಚಾರ್ಜರ್ ಬೆಂಬಲ ಪಡೆದಿದೆ.
ಶಿಯೋಮಿ ರೆಡ್ಮಿ 13C 5G: ಈ ಫೋನ್ (Xiaomi Redmi 13C 5G) 6.74 ಇಂಚಿನ 90Hz ರಿಫ್ರೆಶ್ ರೇಟ್ ಆಯ್ಕೆಯ IPS LCD ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಆಕ್ಟಾ ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 50+0.08 MP ರಿಯರ್ ಕ್ಯಾಮರಾ, 5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಕಾಣಿಸಿಕೊಂಡಿದೆ. ಈ ಬ್ಯಾಟರಿ 18W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

ಪೊಕೊ M6 ಪ್ರೊ 5G: ಈ ಫೋನ್ (Poco M6 Pro 5G) 6.79 ಇಂಚಿನ 90Hz ರಿಫ್ರೆಶ್ ರೇಟ್ ಆಯ್ಕೆ IPS LCD ಡಿಸ್‌ಪ್ಲೇ ನಲ್ಲಿ ಕಾಣಿಸಿಕೊಂಡಿದ್ದು, ಸ್ನಾಪ್‌ಡ್ರಾಗನ್ 4 ಜನ್ 2 ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 50+2 MP ಹಿಂಬದಿಯ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮರಾ ಆಯ್ಕೆ ಪಡೆದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿ ಮೂಲಕ ಉತ್ತಮ ಬ್ಯಾಕಪ್ ನೀಡಲಿದೆ.

ಟೆಕ್ನೋ ಕ್ಯಾಮನ್ 20: ಈ ಸ್ಮಾರ್ಟ್‌ಫೋನ್ (Tecno Camon 20) 6.67 ಇಂಚಿನ 60Hz ರಿಫ್ರೆಶ್ ರೇಟ್ ಆಯ್ಕೆಯ AMOLED ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೊ G85 ಆಕ್ಟಾ ಕೋರ್ ಪ್ರೊಸೆಸರ್ ಹಾಗೂ 64+2+0.08 MP ರಿಯರ್ ಕ್ಯಾಮರಾ ಮತ್ತು 32 MP ಸೆಲ್ಫಿ ಕ್ಯಾಮೆರಾದೊಂದಿಗೆ ಉತ್ತಮ ಎನಿಸಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಇದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ.


Click it and Unblock the Notifications








