SmartTV: ಹೊಸ ಸ್ಮಾರ್ಟ್‌ಟಿವಿ ಬೇಕೆ? ಅದೂ 15 ಸಾವಿರದೊಳಗೆ! ಇಲ್ಲಿವೆ ನೋಡಿ ಬೆಸ್ಟ್ ಟಿವಿ
ಸ್ಮಾರ್ಟ್‌ಟಿವಿಗಳು (SmartTV) ಇಂದು ಜನಪ್ರಿಯ ಡಿವೈಸ್‌ಗಳಾಗಿದೆ. ಅದರಲ್ಲೂ ಇತ್ತೀಚಿನ ಸ್ಮಾರ್ಟ್‌ಟಿವಿಗಳು ಮೊಬೈಲ್ ಅನ್ನೇ ಮೀರಿಸುವ ವಿಶೇಷ ಫೀಚರ್ಸ್ ಆಯ್ಕೆ ಪಡೆದುಕೊಳ್ಳುತ್ತಿದ್ದು, ಕೇವಲ ಮಾಹಿತಿ ಮನರಂಜನೆಗೆ ಮಾತ್ರವಲ್ಲದೆ ಈ ಸ್ಮಾರ್ಟ್‌ಟಿವಿಯನ್ನು ಮಾನಿಟರ್ ಆಗಿ ಅಥವಾ ಸಿಸಿಟಿವಿ ಬಳಕೆ ಸೇರಿದಂತೆ ಅನೇಕ ರೀತಿಯಲ್ಲಿ ಉಪಯೋಗ ಮಾಡಬಹುದಾಗಿದೆ.
ಹೌದು, ಸ್ಮಾರ್ಟ್‌ಟಿವಿಗಳು ಇಂದು ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತಿವೆ. ಅದರಲ್ಲೂ ಅತ್ಯುತ್ತಮ ಆಡಿಯೋ ಹಾಗೂ ವಿಡಿಯೋ ಕ್ವಾಲಿಟಿ ಹೊಂದಿರುವ ಸ್ಮಾರ್ಟ್‌ಟಿವಿಗಳು ಸಿನಿಮಾ ಹಾಲ್‌ನಲ್ಲಿ ಕೂತು ಸಿನಿಮಾ ನೋಡುವ ಅನುಭವ ನೀಡುತ್ತವೆ. ಈ ನಡುವೆ ನೀವೇನಾವದೂ ಬಜೆಟ್ ಬೆಲೆಯಲ್ಲಿ ಅದರಲ್ಲೂ ಅತ್ಯುತ್ತಮ ಫೀಚರ್ಸ್ ಆಯ್ಕೆ ಇರುವ ಸ್ಮಾರ್ಟ್‌ಟಿವಿ ಖರೀದಿ ಮಾಡಬೇಕು ಅಂದುಕೊಂಡರೆ ಈ ಲೇಖನ ಉಪಯುಕ್ತ ಆಗಲಿದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಏನೆಲ್ಲಾ ಫೀಚರ್ಸ್ ಪಡೆದಿವೆ ಹಾಗೂ ಬೆಲೆ ಎಷ್ಟು ಅನ್ನೋದನ್ನು ನೋಡೋಣ.

ಶಿಯೋಮಿ ಎ ಸರಣಿ ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಟಿವಿ (L32M8-5AIN): ಈ ಸ್ಮಾರ್ಟ್‌ಟಿವಿಯನ್ನು ನೀವು 12,990 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು 32 ಇಂಚಿನ ಎಲ್ಇಡಿ ಡಿಸ್‌ಪ್ಲೇ ಪಡೆದಿದ್ದು, ಈ ಡಿಸ್‌ಪ್ಲೆ 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಹಾಗೆಯೇ 2 ಸ್ಪೀಕರ್ ಆಯ್ಕೆ ಇದ್ದು, 20 W ಸೌಂಡ್ ಔಟ್‌ಪುಟ್ ನೀಡಲಿವೆ. ಇದರೊಂದಿಗೆ ಕ್ವಾಡ್ ಕೋರ್ ಕಾರ್ಟೆಕ್ಸ್ A35 ಪ್ರೊಸೆಸರ್, 1.5 GB RAM ಹಾಗೂ 8 GB ಇಂಟರ್ ಸ್ಟೋರೇಜ್ ಆಯ್ಕೆ ಇದ್ದು, 2 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳಿಂದ ಪ್ಯಾಕ್ ಆಗಿದೆ.
ಸ್ಯಾಮ್‌ಸಂಗ್ T4380 ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಟಿವಿ (UA32T4380AKXXL): ಈ ಟಿವಿಯನ್ನು 13,990 ರೂ.ಗಳ ಅಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದು ಸಹ 32 ಇಂಚಿನ ಎಲ್ಇಡಿ ಸ್ಮಾರ್ಟ್‌ಟಿವಿ ಆಗಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 20 W ಔಟ್‌ಪುಟ್ ನೀಡುವ ಎರಡು ಸ್ಪೀಕರ್ ಮತ್ತು 2 HDMI ಪೋರ್ಟ್‌ಗಳು, 1 USB ಪೋರ್ಟ್‌ಗಳ ಸೌಲಭ್ಯ ಪಡೆದಿದೆ. ಇದರೊಂದಿಗೆ ಸ್ಕ್ರೀನ್ ಮಿರರಿಂಗ್ / ಮಿರಾಕಾಸ್ಟ್ ಬೆಂಬಲ ಈ ಟಿವಿ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ.

ರೆಡ್ಮಿ L32R8-FVIN ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಫೈರ್‌ಟಿವಿ: ಈ ಟಿವಿ 10,499 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದು ಸಹ 32 ಇಂಚಿನ ಎಲ್ಇಡಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ 20 W ಸೌಂಡ್ ಔಟ್‌ಪುಟ್, ಕ್ವಾಡ್ ಕೋರ್ ಕಾರ್ಟೆಕ್ಸ್ A35 ಪ್ರೊಸೆಸರ್, 1 GB RAM, 8 GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ 2 HDMI ಪೋರ್ಟ್‌ಗಳು, 2 USB ಪೋರ್ಟ್ ಆಯ್ಕೆ ಪಡೆದುಕೊಂಡಿದೆ.
ಶಿಯೋಮಿ EA43 ಫುಲ್ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಟಿವಿ (L43M7-EA): ಈ ಸ್ಮಾರ್ಟ್‌ಟಿವಿ ಕೇವಲ 9,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದು 43 ಇಂಚಿನ ಎಲ್ಇಡಿ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 16 W ಸೌಂಡ್ ಔಟ್‌ಪುಟ್ ಹಾಗೂ ಕಾರ್ಟೆಕ್ಸ್ A53 ಪ್ರೊಸೆಸರ್ ಬಲದೊಂದಿಗೆ 1GB RAM ಮತ್ತು 8 GB ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ.
ರೆಡ್ಮಿ ಎ ಸರಣಿ 2024 ಹೆಚ್‌ಡಿ ರೆಡಿ ಟಿವಿ (A32): ಈ ಸ್ಮಾರ್ಟ್‌ಟಿವಿ 6,699 ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ 32 ಇಂಚಿನ ಎಲ್ಇಡಿ ಟಿವಿ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಈ ಡಿಸ್‌ಪ್ಲೇ 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 20 W ಸೌಂಡ್ ಔಟ್‌ಪುಟ್ ಶಕ್ತಿಯೊಂದಿಗೆ ಕ್ವಾಡ್ ಕೋರ್ ಪ್ರೊಸೆಸರ್, 1 GB RAM ಹಾಗೂ 8 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 1 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳು, ಸ್ಕ್ರೀನ್ ಮಿರರಿಂಗ್ ಸೌಲಭ್ಯ ಪಡೆದಿದೆ.

ಮೊಟೊರೊಲಾ ಎನ್ವಿಶನ್ X ಹೆಚ್‌ಡಿ ರೆಡಿ ಸ್ಮಾರ್ಟ್ ಎಲ್‌ಇಡಿ ಟಿವಿ (32HDGDMWSBE): ಈ ಸ್ಮಾರ್ಟ್‌ಟಿವಿ 10,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, 32 ಇಂಚಿನ ಎಲ್ಇಡಿ ಡಿಸ್‌ಪ್ಲೇ ಪಡೆದಿದೆ. ಇದರೊಂದಿಗೆ 1366 x 768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದ್ದು, ಈ ಮೂಲಕ ಅತ್ಯುತ್ತಮ ವೀಕ್ಷಣಾ ಅನುಭವ ಪಡೆದುಕೊಳ್ಳಬಹುದಾಗಿದೆ. ಜೊತೆಗೆ
20 W ಸೌಂಡ್ ಔಟ್‌ಪುಟ್, ಮೀಡಿಯಾ ಟೆಕ್ ಕ್ವಾಡ್ ಕೋರ್ ಪ್ರೊಸೆಸರ್ ಪ್ರೊಸೆಸರ್, 1.5 GB RAM, 8 GB ಇಂಟರ್ ಸ್ಟೋರೇಜ್ ಬೆಂಬಲದೊಂದಿಗೆ ಈ ಟಿವಿ ಕಾಣಿಸಿಕೊಂಡಿದೆ.


Click it and Unblock the Notifications








