Home
Gadgets

smartTV: ಈ ಸ್ಮಾರ್ಟ್‌ಟಿವಿಗಳು 30% ರಿಯಾಯಿತಿಯೊಂದಿಗೆ ಲಭ್ಯ! ಆಫರ್ ಬೆಲೆ ಎಷ್ಟು?

ಸ್ಮಾರ್ಟ್‌ಟಿವಿಗಳು(SmartTV) ಇಂದು ಬಳಕೆದಾರರಿಗೆ ಭಿನ್ನ ಸೇವೆಗಳನ್ನು ನೀಡುತ್ತಿವೆ. ಅಂದರೆ ಕೇವಲ ಮಾಹಿತಿ ಮನರಂಜನೆಗೆ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತಿದೆ.

ಹೌದು, ಸ್ಮಾರ್ಟ್‌ಟಿವಿಗಳು ಇಂದು ಎಲ್ಲಾ ರೀತಿಯಲ್ಲೂ ಅನುಕೂಲಕ್ಕೆ ಬರುತ್ತಿದ್ದು, ಈ ಕಾರಣಕ್ಕೆ ಕಂಪೆನಿಗಳು ಭಿನ್ನ ಫೀಚರ್ಸ್‌ ಆಯ್ಕೆಯೊಂದಿಗೆ ಹೊಸ ಹೊಸ ಟಿವಿಗಳನ್ನು ಲಾಂಚ್‌ ಮಾಡಲಾಗುತ್ತಿದೆ. ಈ ನಡುವೆ ನೀವೇನಾದರೂ 30% ಗಿಂತಲೂ ಅಧಿಕ ಆಫರ್ ಇರುವ ಉತ್ತಮ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಮುಂದಾಗಿದ್ರೆ ಈ ಲೇಖನ ನಿಮಗೆ ಅನುಕೂಲ ಆಗಲಿದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಏನೆಲ್ಲಾ ಬೆಲೆ ಹೊಂದಿವೆ?, ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

smartTV: ಈ ಸ್ಮಾರ್ಟ್‌ಟಿವಿಗಳು 30% ರಿಯಾಯಿತಿಯೊಂದಿಗೆ ಲಭ್ಯ! ಆಫರ್ ಬೆಲೆ ಎಷ್ಟು?

ಮಿ ಎಎಕ್ಸ್‌ ಪ್ರೊ ಸ್ಮಾರ್ಟ್‌ಟಿವಿ: ಮಿ ಎಎಕ್ಸ್‌ ಪ್ರೊ ಸ್ಮಾರ್ಟ್‌ಟಿವಿ ಅಲ್ಟ್ರಾ ಹೆಚ್‌ಡಿ (4K) ಎಲ್‌ಇಡಿ ಸ್ಮಾರ್ಟ್ ಗೂಗಲ್‌ ಟಿವಿ 2023 ಯನ್ನು ನೀವೀಗ 32,999ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 49,999 ರೂ.ಗಳಾಗಿದೆ. ಈ ಟಿವಿ ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, ಅಲ್ಟ್ರಾ HD (4K) 3840 x 2160 ಪಿಕ್ಸೆಲ್‌ ಸ್ಕ್ರೀನ್‌ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿದೆ.

ಇನ್ಫಿನಿಕ್ಸ್ Y1 80 cm ಹೆಚ್‌ಡಿ ರೆಡಿ ಎಲ್ಇಡಿ ಸ್ಮಾರ್ಟ್ ಲಿನಕ್ಸ್ ಟಿವಿ 2022 ಆವೃತ್ತಿ ಸ್ಮಾರ್ಟ್‌ಟಿವಿ: ಈ ಟಿವಿಯನ್ನು 8,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 16,999 ರೂ.ಗಳಾಗಿದೆ. ಈ ಟಿವಿ 1366 x 768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಲಿನಕ್ಸ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್‌ ಆಗಲಿದೆ. ಈ ಟಿವಿಯನ್ನು 2022 ರಲ್ಲಿ ಲಾಂಚ್‌ ಮಾಡಲಾಗಿತ್ತು.

ಥಾಮ್ಸನ್ ಆಲ್ಫಾ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಲಿನಕ್ಸ್ ಟಿವಿ: ಈ ಸ್ಮಾರ್ಟ್‌ಟಿವಿ 46% ರಿಯಾಯಿತಿಯೊಂದಿಗೆ 7,999 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರ ಸಾಮಾನ್ಯ ದರ 14,999ರೂ.ಗಳಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 30 W ಸೌಂಡ್ ಔಟ್‌ಪುಟ್ ಪಡೆದಿದೆ. ಇದರ ಜೊತೆಗೆ ಲಿನಕ್ಸ ಆಪರೇಟಿಂಗ್ ಸಿಸ್ಟಮ್‌ನಲ್ಲಿ ರನ್‌ ಆಗಲಿದೆ.

smartTV: ಈ ಸ್ಮಾರ್ಟ್‌ಟಿವಿಗಳು 30% ರಿಯಾಯಿತಿಯೊಂದಿಗೆ ಲಭ್ಯ! ಆಫರ್ ಬೆಲೆ ಎಷ್ಟು?

ಥಾಮ್ಸನ್ FA ಸರಣಿ ಹೆಚ್‌ಡಿ ರೆಡಿ ಎಲ್ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 2023 ಆವೃತ್ತಿ: ಈ ಸ್ಮಾರ್ಟ್‌ಟಿವಿ ಸಹ ಆಪರ್ ಬೆಲೆಗೆ ಲಭ್ಯ ಇದೆ. ಇದರ ಸಾಮಾನ್ಯ ದರ 17,999ರೂ.ಗಳಾಗಿದ್ದು, 47% ರಿಯಾಯಿತಿಯೊಂದಿಗೆ 9,499 ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ರನ್‌ ಮಾಡಲಿದೆ.

ರೆಡ್ಮಿ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಫೈರ್‌ಟಿವಿ ಓಎಸ್‌ 7 ಟಿವಿ 2023 ಆವೃತ್ತಿ: ಈ ಸ್ಮಾರ್ಟ್‌ಟಿವಿಗೆ 48% ರಿಯಾಯಿತಿ ನೀಡಲಾಗಿದ್ದು, 24,999 ರೂ.ಗಳ ಈ ಟಿವಿಯನ್ನು ನೀವು 12,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಡಾಲ್ಬಿ ಆಡಿಯೋ & ಡಿಟಿಎಸ್‌ ಸೌಲಭ್ಯ ಪಡೆದಿದೆ. ಹಾಗೆಯೇ ಫೈರ್‌ಟಿ ಓಎಸ್‌ 7 ಅನ್ನು ರನ್‌ ಮಾಡಲಿದೆ.

smartTV: ಈ ಸ್ಮಾರ್ಟ್‌ಟಿವಿಗಳು 30% ರಿಯಾಯಿತಿಯೊಂದಿಗೆ ಲಭ್ಯ! ಆಫರ್ ಬೆಲೆ ಎಷ್ಟು?

ರಿಲಯನ್ಸ್ ಹೆಚ್‌ಡಿ ರೆಡಿ ಎಲ್‌ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: ಈ ಸ್ಮಾರ್ಟ್‌ಟಿವಿ 10,799ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದರ ಸಾಮಾನ್ಯ ದರ 21,490ರೂ.ಗಳಾಗಿದೆ. ಈ ಟಿವಿ 32 ಇಂಚಿನ ಹೆಚ್‌ಡಿ ರೆಡಿ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್ ಓಎಸ್‌ನಲ್ಲಿ ರನ್‌ ಆಗಲಿದೆ. ಈ ಸ್ಮಾರ್ಟ್‌ಟಿವಿಯನ್ನು ಕಳೆದ ವರ್ಷ ಲಾಂಚ್‌ ಮಾಡಲಾಗಿದೆ. ಹಾಗೆಯೇ ಈ ಟಿವಿ ಖರೀದಿಯಲ್ಲಿ ಬ್ಯಾಂಕ್‌ ಆಫರ್ ಸಹ ಇದೆ.

Best Mobiles in India

English summary
The best smartTV are available on Flipkart with more than 30% off. These smart TVs have got a selection of special features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+