Home
Gadgets

ಅರೇ..ಇದೆಂಥಾ ಡಿವೈಸ್‌!..ಇದರ ಬಗ್ಗೆ ತಿಳಿದ್ರೆ, ಖಂಡಿತಾ ನೀವು ಫಿದಾ ಆಗ್ತೀರಾ!

ಪ್ರಸ್ತುತ ಟೆಕ್ ಮಾರುಕಟ್ಟೆ ತುಂಬಾ ವಿಸ್ತಾರವಾಗಿ ಬೆಳೆದಿದ್ದು, ಬಗೆ ಬಗೆಯ ಸ್ಮಾರ್ಟ್ ಡಿವೈಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಬಳಕೆದಾರರಿಗೆ ಅನುಕೂಲವಾಗುವ ಹಲವು ತರಹೇವಾರಿ ಡಿವೈಸ್‌ಗಳನ್ನು ಮಾರುಕಟ್ಟೆಯಲ್ಲಿ ಕಾಣಹುದಾಗಿದೆ. ಅದರಲ್ಲೂ ಆಡಿಯೋ ಡಿವೈಸ್‌ಗಳಲ್ಲಿ ಬಳಕೆದಾರರು ಹುಬ್ಬೇರಿಸುವಂತಹ ಸಾಧನಗಳು ಸೇರಿವೆ. ಆದ್ರೆ, ಮಾರುಕಟ್ಟೆಯಲ್ಲಿ ಈ ವಾಕಿ ಟಾಕಿ ಡಿವೈಸ್‌ ಅನ್ನು ಬಳಕೆದಾರರು ಅಚ್ಚರಿಯಿಂದ ನೋಡುವಂತೆ ಮಾಡಿದೆ.

ಹೌದು, ವಾಕಿ ಟಾಕಿ ಎಫ್‌ಎಮ್‌ ಡಿವೈಸ್‌ಗಳು ಸದ್ಯ ಅನೇಕ ಬಳಕೆದಾರರಿಗೆ ಕುತೂಹಲಕಾರಿ ಡಿವೈಸ್‌ ಎನಿಸಿದೆ. ಆರ್ಟೆಕ್ ವಾಕಿ ಟಾಕಿ (Artek Walkie Talkie with FM Radio) ಡಿವೈಸ್‌ ಕೆಲವು ಫೀಚರ್ಸ್‌ಗಳಿಂದ ಆನ್‌ಲೈನ್‌ ಶಾಪಿಂಗ್ ಪ್ರಿಯರನ್ನು ಸೆಳೆದಿದೆ. ಈ ವಾಕಿ ಟಾಕಿ ಸಾಧನವು ಅತ್ಯುತ್ತಮ ಫ್ರಿಕ್ವೆನ್ಸಿ ರೇಂಜ್‌ ಅನ್ನು ಒಳಗೊಂಡಿದೆ.

ಅರೇ..ಇದೆಂಥಾ ಡಿವೈಸ್‌!..ಇದರ ಬಗ್ಗೆ ತಿಳಿದ್ರೆ, ಖಂಡಿತಾ ನೀವು ಫಿದಾ ಆಗ್ತೀರಾ!

ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗದ ಕೆಲವು ಟೆಕ್‌ ಉತ್ಪನ್ನಗಳು ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ನಲ್ಲಿ ಬಹುಬೇಗನೆ ಲಭ್ಯವಾಗುತ್ತದೆ. ಅದೇ ರೀತಿ ಈ ವಾಕಿ ಟಾಕಿ ಡಿವೈಸ್‌ ಸಹ ಅಮೆಜಾನ್‌ ಸೇರಿದಂತೆ ಇತರೆ ಇ ಕಾಮರ್ಸ್ ತಾಣಗಳಲ್ಲಿ ಖರೀದಿಗೆ ಲಭ್ಯ ಇದೆ. ಈ ಡಿವೈಸ್‌ನ ಬೆಲೆ ಎಷ್ಟು? ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅರೇ..ಇದೆಂಥಾ ಡಿವೈಸ್‌!..ಇದರ ಬಗ್ಗೆ ತಿಳಿದ್ರೆ, ಖಂಡಿತಾ ನೀವು ಫಿದಾ ಆಗ್ತೀರಾ!

ಈ ಡಿವೈಸ್‌ನ ಪ್ರಮುಖ ಫೀಚರ್ಸ್‌ಗಳು ಹೀಗಿವೆ : ಆರ್ಟೆಕ್ ವಾಕಿ ಟಾಕಿ ಡಿವೈಸ್‌ ಎಫ್‌ಎಮ್‌ (FM) ರೇಡಿಯೊ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ವಾಕಿ ಟಾಕಿ, LED ಟಾರ್ಚ್ ಸೌಲಭ್ಯ ಒಳಗೊಂಡಿದ್ದು, ಬಳಕೆದಾರರಿಗೆ ಉಪಯುಕ್ತ ಎನಿಸಲಿದೆ. ಅಲ್ಲದೇ ಈ ಸಾಧನವು ಸುಮಾರು 5 ರಿಂದ 10km (ಲೈನ್ ಆಫ್ ಸೈಟ್) ಫ್ರೀಕ್ವೆನ್ಸಿ ರೇಂಜ್‌ ಅನ್ನು ಪಡೆದಿದೆ. ದೀರ್ಘಾವಧಿಯವರೆಗೆ ಉತ್ತಮ ಬಳಕೆಯನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ.

ಅರೇ..ಇದೆಂಥಾ ಡಿವೈಸ್‌!..ಇದರ ಬಗ್ಗೆ ತಿಳಿದ್ರೆ, ಖಂಡಿತಾ ನೀವು ಫಿದಾ ಆಗ್ತೀರಾ!

ಬ್ಲ್ಯಾಕ್‌ ಬಣ್ಣದ ಆಯ್ಕೆಯನ್ನು ಪಡೆದಿರುವ ಈ ಡಿವೈಸ್‌ 128 ಚಾನೆಲ್‌ಗಳ ಸಪೋರ್ಟ್‌ ಪಡೆದಿದೆ. ಹಾಗೆಯೇ UHF ಟ್ಯೂನರ್‌ ತಂತ್ರಜ್ಞಾನವನ್ನು ಒಳಗೊಂಡಿದೆ. ಹಾಗೆಯೇ ಈ ಡಿವೈಸ್‌ 18.93 x 13.55 x 10 cm ಸುತ್ತಳತೆಯನ್ನು ಪಡೆದಿದೆ. ಇದರೊಂದಿಗೆ ಇದು 500 ಗ್ರಾಂ ತೂಕವನ್ನು ಸಹ ಪಡೆದುಕೊಂಡಿದೆ. ಇನ್ನು ಈ ಸಾಧನದ ಬೆಲೆಯು ಅಮೆಜಾನ್‌ನಲ್ಲಿ 5000ರೂ. ಇದ್ದು, ಆದರೆ 3,400ರೂ. ಗಳಿಗೆ ಖರೀದಿಗೆ ಲಭ್ಯ.

ಅದೇ ರೀತಿ ಇ ಕಾಮರ್ಸ್‌ ವೆಬ್‌ಸೈಟ್‌ಗಳಲ್ಲಿ ಇತರೆ ಭಿನ್ನ ದರ ಶ್ರೇಣಿಯಲ್ಲಿ ವಾಕಿ ಟಾಕಿ ಡಿವೈಸ್‌ಗಳು ಲಭ್ಯ ಇವೆ. RENMAX ಲಾಂಗ್ ರೇಂಜ್ ವಾಕಿ ಟಾಕಿ ಹೆಸರಿನ ಈ ಡಿವೈಸ್‌ ಸಹ ಗಮನ ಸೆಳೆದಿದ್ದು, ಇದು 400 ರಿಂದ 480 MHz ಫ್ರೀಕ್ವೆನ್ಸಿ ರೇಂಜ್‌ ಸೌಲಭ್ಯ ಪಡೆದಿದೆ. ಈ ಡಿವೈಸ್‌ FM ರೇಡಿಯೋ ಟ್ರಾನ್ಸ್‌ಸಿವರ್ ಸಹ ಪಡೆದಿದೆ.

ಅರೇ..ಇದೆಂಥಾ ಡಿವೈಸ್‌!..ಇದರ ಬಗ್ಗೆ ತಿಳಿದ್ರೆ, ಖಂಡಿತಾ ನೀವು ಫಿದಾ ಆಗ್ತೀರಾ!

ಇದು ಹೈ ಇಲ್ಯುಮಿನೇಷನ್ ಎಲ್ಇಡಿ ಫ್ಲ್ಯಾಶ್ ಲೈಟ್‌ ಸೌಲಭ್ಯ ಹೊಂದಿದೆ. ಹಾಗೆಯೇ ಸ್ಕ್ವೆಚ್, VOX, ಡ್ಯುಯಲ್ ಸ್ಟ್ಯಾಂಡ್‌ಬೈ, ಇ ಪ್ರಾಂಪ್ಟ್, ವಾಯ್ಸ್ ಪ್ರಾಂಪ್ಟ್ ಮತ್ತು ಸೇಫ್ ಮೋಡ್‌ಗಳನ್ನು ಮೆನು ಕೀ ಬಳಸಿ ಆಯ್ಕೆ ಮಾಡಬಹುದು. ಜೊತೆಗೆ ಅತ್ಯುತ್ತಮ ಆಡಿಯೊ ಗುಣಮಟ್ಟ ಸಹ ಪಡೆದಿದೆ.

ಈ ಡಿವೈಸ್‌ ಎಮರ್ಜೆನ್ಸಿ ಅಲಾರ್ಮ್, ವೋಕ್ಸ್ 0-9 ಗ್ರೇಡ್‌ಗಳು, ಪವರ್ ಸೇವಿಂಗ್, ಲೋ ಬ್ಯಾಟರಿ ಅಲಾರಂ, ಬ್ಯುಸಿ ಚಾನೆಲ್ ಲಾಕ್‌ಔಟ್, ಕೀಪ್ಯಾಡ್ ಲಾಕ್ ಗಳಂತಹ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಪಡೆದು ಕೊಂಡಿದೆ. ಅಮೆಜಾನ್‌ನಲ್ಲಿ ಈ ಡಿವೈಸ್‌ ಬೆಲೆಯು (2 ಪ್ಯಾಕ್‌) 4,699ರೂ. ಆಗಿದೆ.

Best Mobiles in India

English summary
Best Walkie Talkie with FM Radio (Artek Walkie Talkie with FM Radio): Price, Specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+