Home
Gadgets

Air Coolers : ಬೇಸಿಗೆಯಲ್ಲಿ ತಣ್ಣನೆ ಅನುಭವಕ್ಕಾಗಿ ಅತ್ಯುತ್ತಮ ವಿಂಡೋ ಕೂಲರ್‌ಗಳು: ಆಫರ್ ಬೆಲೆಯಲ್ಲಿ ಲಭ್ಯ!

ಬೇಸಿಗೆಯ ಬಿಸಿ ಈಗಾಗಲೇ ಜನರಿಗೆ ಕಾಡುತ್ತಿದೆ. ಈ ನಡುವೆ ಮಾರುಕಟ್ಟೆಗೆ ವಿಶೇಷ ಫೀಚರ್ಸ್‌ ಆಯ್ಕೆ ಇರುವ ಹೊಸ ಹೊಸ ಕೂಲಿಂಗ್‌ ಡಿವೈಸ್‌ಗಳು ಬಂದಿದ್ದು, ಇವುಗಳನ್ನು ಜನರು ಖರೀದಿ ಮಾಡಲು ಪ್ಲ್ಯಾನ್‌ ಮಾಡುತ್ತಿದ್ದಾರೆ. ಆದರೆ, ನಿಮ್ಮ ಮನೆಯಲ್ಲಿ ತಂಪಾದ ಅನುಭವ ಪಡೆಯಲು ಇನ್ನೂ ಯಾವುದೇ ಏರ್‌ ಕೂಲರ್ (Air Coolers) ಖರೀದಿ ಮಾಡಿಲ್ಲ ಅಂದರೆ ಈ ಕಡೆ ಸ್ವಲ್ಪ ನೋಡಿ.

ಹೌದು, ಸುಡುವ ಬಿಸಿಲು ಜನರನ್ನು ವಿವಿಧ ಸಮಸ್ಯೆಗಳಿಗೆ ದೂಡುತ್ತಿದೆ. ಈ ನಡುವೆ ಮಕ್ಕಳು ಹಾಗೂ ವಯೋವೃದ್ಧರು ಇದರಿಂದ ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ವಾಹನಗಳ ಸಂಚಾರ ಹೆಚ್ಚಿರುವ ಕಡೆ ಈ ತಾಪ ಇನ್ನೂ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ನೀವು ಉತ್ತಮವಾದ ಕೂಲರ್‌ಗಳನ್ನು ಖರೀದಿ ಮಾಡುವ ಮೂಲಕ ಈ ಬೇಸಿಗೆ ಕಾಲವನ್ನು ಸಂತಸದಿಂದ ಕಳೆಯಬಹುದು. ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ವಿಂಡೋ ಕೂಲರ್‌ಗಳು (Window coolers) ಸಖತ್‌ ಸದ್ದು ಮಾಡುತ್ತಿದ್ದು, ಇವು ವಿಶೇಷ ಬೇಡಿಕೆ ಪಡೆದುಕೊಂಡಿವೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ವಿಂಡೋ ಕೂಲರ್‌ಗಳು ಏನೆಲ್ಲಾ ಫೀಚರ್ಸ್‌ ಪಡೆದಿವೆ?, ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ತಿಳಿಯೋಣ.

ಬೇಸಿಗೆಯಲ್ಲಿ ತಣ್ಣನೆ ಅನುಭವಕ್ಕಾಗಿ ಅತ್ಯುತ್ತಮ ವಿಂಡೋ ಕೂಲರ್‌ಗಳು...

ಕೆನ್‌ಸ್ಟಾರ್ ಡಬಲ್ ಕೂಲ್ ಡಿಎಕ್ಸ್ ಏರ್ ಕೂಲರ್: ಈ ಕೂಲರ್ (Kenstar Double Cool Dx Air Cooler) ಅಮೆಜಾನ್‌ನಲ್ಲಿ 21% ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ನೀವೀಗ ಇದನ್ನು 7490 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ 1750 CMPH ಗಾಳಿಯ ಹರಿವನ್ನು ನೀಡಲಿದ್ದು, 50 ಲೀಟರ್ ಟ್ಯಾಂಕ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ ರಿಮೋಟ್ ಕಂಟ್ರೋಲ್, 3-ಸ್ಪೀಡ್ ಸೆಟ್ಟಿಂಗ್‌ ಸೇರಿದಂತೆ ಆಕರ್ಷಕ ಫೀಚರ್ಸ್‌ ಅನ್ನು ಇದರಲ್ಲಿ ಕಾಣಬಹುದು.

ಹ್ಯಾವೆಲ್ಸ್ ಹೆವಿ ಡ್ಯೂಟಿ ವಿಂಡೋ ಏರ್ ಕೂಲರ್: ಈ ಕೂಲರ್‌ (Havells Heavy Window Air Cooler 50 Litres) ಅನ್ನು 36% ರಿಯಾಯಿತಿ ಜೊತೆಗೆ ಅಮೆಜಾನ್‌ನಲ್ಲಿ 7,390 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 50 ಲೀಟರ್ ಸಾಮರ್ಥ್ಯ ಹೊಂದಿದ್ದು, ಶಕ್ತಿಯುತ ಏರ್ ಡೆಲಿವರಿ ಮಾಡುವ ಬಲ ಹೊಂದಿದೆ. ಜೊತೆಗೆ ತೇವಾಂಶ ನಿಯಂತ್ರಣ, ಸ್ವಯಂ ಡ್ರೈನ್ ಮತ್ತು ಡಸ್ಟ್ ಫಿಲ್ಟರ್ ನೆಟ್ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ.

ಬೇಸಿಗೆಯಲ್ಲಿ ತಣ್ಣನೆ ಅನುಭವಕ್ಕಾಗಿ ಅತ್ಯುತ್ತಮ ವಿಂಡೋ ಕೂಲರ್‌ಗಳು...

ಹ್ಯಾವೆಲ್ಸ್ ಹೆವಿ ಡ್ಯೂಟಿ ವಿಂಡೋ ಏರ್ ಕೂಲರ್: ಹ್ಯಾವೆಲ್ಸ್ ನ ಮತ್ತೊಂದು ಕೂಲರ್‌ (Havells Heavy Duty Window Air Cooler 45 litres) ಸಹ ಉತ್ತಮವಾದ ಜನಪ್ರಿಯತೆ ಪಡೆದುಕೊಂಡಿದೆ. ಈ ಡಿವೈಸ್‌ 37% ರಿಯಾಯಿತಿ ಪಡೆದಿದ್ದು, 6289 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಹಾಗೆಯೇ 45 ಲೀಟರ್ ಸಾಮರ್ಥ್ಯದ ಜೊತೆಗೆ 1500 CMPH ಗಾಳಿಯ ಹರಿವು, ಕಡಿಮೆ ಶಬ್ದ, 3 ವೇಗದ ಸೆಟ್ಟಿಂಗ್‌ಗಳು, ವಾಸನೆ-ಮುಕ್ತ ಹನಿಕಾಂಬ್‌ ಪ್ಯಾಡ್‌ಗಳು, 3 ಕೋರ್ 3 ಪಿನ್ ಪವರ್ ಕಾರ್ಡ್, ಫ್ರೀಸ್ಟ್ಯಾಂಡಿಂಗ್ ಮೌಂಟಿಂಗ್ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಪಡೆದುಕೊಂಡಿದೆ.

ಸಿಂಫನಿ ಜಂಬೋ 51 ಡಸರ್ಟ್ ಏರ್ ಕೂಲರ್: ಇದು (Symphony Jumbo 51 Desert Air Cooler) ತುಂಬಾ ಪ್ರೀಮಿಯಂ ಆಗಿದ್ದು, 11790 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ. 4000 CMPH ಗಾಳಿಯ ಹರಿವು, 51 ಲೀಟರ್ ನೀರಿನ ಸಾಮರ್ಥ್ಯದ ಜೊತೆಗೆ ಕಡಿಮೆ ವಿದ್ಯುತ್ ಬಳಕೆ, ಹಗುರತೆ, ರಿಮೋಟ್ ಕಂಟ್ರೋಲ್, ಕೂಲ್ ಫ್ಲೋ ಡಿಸ್ಪೆನ್ಸರ್, ಹೈ-ಸ್ಪೀಡ್ ಫ್ಯಾನ್, ಟ್ರಾಲಿ ಆಯ್ಕೆ ಸೇರಿದಂತೆ ಬಳಕೆದಾರರಿಗೆ ಅಗತ್ಯ ಎನಿಸುವ ಸಾಕಷ್ಟು ಫೀಚರ್ಸ್‌ ಅನ್ನು ಇದರಲ್ಲಿ ಕಾಣಬಹುದು.

ಸೆಲ್ಲೋ ಸ್ವಿಫ್ಟ್ 50 ಲೀಟರ್ ವಿಂಡೋ ಏರ್ ಕೂಲರ್: ಈ ಕೂಲರ್ (

ಬೇಸಿಗೆಯಲ್ಲಿ ತಣ್ಣನೆ ಅನುಭವಕ್ಕಾಗಿ ಅತ್ಯುತ್ತಮ ವಿಂಡೋ ಕೂಲರ್‌ಗಳು...
)‌ 15% ರಿಯಾಯಿತಿಯೊಂದಿಗೆ ನಿಮಗೆ 7999 ರೂ.ಗಳ ಬೆಲೆಗೆ ಲಭ್ಯ ಇದೆ. 2000 CMPH ಗಾಳಿಯ ಹರಿವು, 50 ಲೀಟರ್ ಟ್ಯಾಂಕ್ ಸಾಮರ್ಥ್ಯ, ಆಸ್ಪೆನ್ ವುಡ್ ವುಲ್ ಕೂಲಿಂಗ್ ಪ್ಯಾಡ್‌ಗಳು, ಟ್ರಾಲಿ ಆಯ್ಕೆ, 3 ಸ್ಪೀಡ್ ಮೋಟಾರ್ ಆಯ್ಕೆ ಪಡೆದಿದ್ದು, ಚಿಕ್ಕ ರೂಂಗಳಿಗೆ ಅಥವಾ ಬೆಡ್‌ರೂಂಗಳಿಗೆ ಅತ್ಯುತ್ತಮವಾದ ಕೂಲರ್ ಆಗಿರಲಿದೆ.

Best Mobiles in India

English summary
Best window Air Coolers with attractive features; know specs, price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+