ಗ್ರಾಹಕ ಸ್ನೇಹಿ ಬೆಲೆಯಲ್ಲಿ ಲಭ್ಯವಿರುವ 5 'ಬಿಗ್ ಸ್ಕ್ರೀನ್' ಸ್ಮಾರ್ಟ್‌ಟಿವಿಗಳು!
ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಟಿವಿಗಳು ಈಗಾಗಲೇ ಜನಪ್ರಿಯವಾಗಿದ್ದು, ಈ ನಿಟ್ಟಿನಲ್ಲಿ ಹಲವು ಕಂಪನಿಗಳು ದೇಶಿಯ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತ ಸಾಗಿವೆ. ಆದರೆ ಗ್ರಾಹಕರು ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಗುಣಮಟ್ಟದ ಸ್ಮಾರ್ಟ್‌ಟಿವಿಗಳಿಗೆನೇ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಸದ್ಯ ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಗಳ ಹಲವು ಸ್ಮಾರ್ಟ್‌ಟಿವಿಗಳು ರಾರಾಜಿಸುತ್ತಿವೆ.

ಹೌದು, ದೇಶಿಯ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಲಾಂಚ್ ಮಾಡಿದ್ದು, ಉತ್ತಮ ಮಾರುಕಟ್ಟೆ ಕಂಡಿಕೊಳ್ಳುತ್ತಿವೆ. ಅವುಗಳಲ್ಲಿ ಬಹುತೇಕ ಕಂಪನಿಗಳು ಆನ್‌ಲೈನ್ ಮೂಲಕವೇ ಸ್ಮಾರ್ಟ್‌ಟಿವಿಗಳನ್ನು ಮಾರಾಟವನ್ನು ಮಾಡುತ್ತಿದ್ದು, ಅವುಗಳಲ್ಲಿ ಥಾಮ್ಸನ್, ಟಿಸಿಎಲ್, ಐಎಫ್ಎಫ್ಕಾನ್, ಮಾರ್ಕ್ ಮತ್ತು ವೂ ಕಂಪನಿಗಳು (Thomson, TCL's iFFalcon, MarQ and Vu) ಜನಪ್ರಿಯತೆ ಗಳಿಸಿವೆ.

ಬಜೆಟ್ ಬೆಲೆಯ ಕೇಲವು ಸ್ಮಾರ್ಟ್‌ಟಿವಿಗಳು ಬಿಗ್ ಸ್ಕ್ರೀನ್ ಜೊತೆಗೆ 4K ರೆಸಲ್ಯೂಶನ್ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿದ್ದು, ಆಂಡ್ರಾಯ್ಡ್‌ನ ಹಲವು ಆಪ್ಸ್‌ಗಳನ್ನು ಬೆಂಬಲಿಸುತ್ತದೆ. ಹಾಗೆಯೇ ಅತ್ಯುತ್ತಮ ಸೌಂಡ್ ಗುಣಮಟ್ಟವು ಹೊಂದಿವೆ. ಹಾಗಾದರೇ ಸದ್ಯ ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 ಬಿಗ್ ಸ್ಕ್ರೀನ್ ಸ್ಮಾರ್ಟ್‌ಟಿವಿಗಳು ಯಾವುವು ಮತ್ತು ಅವುಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಶಿಯೋಮಿ ಮಿ ಟಿವಿ 4A ಪ್ರೊ(Mi TV 4A Pro)
ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿಯ ಸ್ಮಾರ್ಟ್‌ಟಿವಿಗಳು ಜನಪ್ರಿಯ ಗಳಿಸಿದ್ದು, ಹಲವು ಡಿಸ್‌ಪ್ಲೇ ಗಾತ್ರಗಳನ್ನು ಹೊಂದಿದೆ. ಆದರೆ ಅವುಗಳಲ್ಲಿ 43 ಇಂಚು ಮತ್ತು 49 ಇಂಚಿನ ಸ್ಮಾರ್ಟ್‌ಟಿವಿಗಳು ಬಿಗ್‌ಸ್ಕ್ರೀನ್ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿವೆ. ಯುಎಸ್‌ಬಿ ಪೋರ್ಟ್, ಎಚ್‌ಡಿಎಮ್‌ಐ ಪೋರ್ಟ್, ವೈ-ಫೈ, AV ಪೋರ್ಟ್, ಆಯ್ಕೆಗಳ ಸೌಲಭ್ಯಗಳು ಇವೆ. 43 ಇಂಚಿನ ಬೆಲೆಯು 22,999ರೂ.ಗಳು ಮತ್ತು 49 ಇಂಚಿನ ಬೆಲೆಯು 29,999ರೂ.ಗಳು ಆಗಿದೆ.

ಥಾಮ್ಸನ್ ಟಿವಿ (Thomson UD9 40)
ಈ ಸ್ಮಾರ್ಟ್‌ಟಿವಿಯು 40 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 60Hz ರೀಪ್ರೇಶ್ ರೇಟ್‌ನೊಂದಿಗೆ 3840×2160ಪಿಕ್ಸಲ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಮೂರು HDMI ಪೋರ್ಟ್, ಎರಡು USB ಪೋರ್ಟ್, ಹಾಗೂ ನೆಟ್‌ಫ್ಲೆಕ್ಸ್ ಮತ್ತು ಹಾಟ್‌ಸ್ಟಾರ್ ಆಪ್‌ಗಳ ಬೆಂಬಲವನ್ನು ಪಡೆದುಕೊಂಡಿದೆ. 20W ಸೌಂಡ್ ಅನ್ನು ಹೊರಸೂಸುವ ಸಾಮರ್ಥ್ಯವನ್ನು ಹೊಂದಿದ್ದು, ಇದರ ಬೆಲೆಯು 20,999ರೂ.ಗಳು ಆಗಿದೆ. ಹಾಗೆಯೇ ಇಎಮ್‌ಐ ಆಯ್ಕೆಯು ಲಭ್ಯವಿದೆ.

ಮಾರ್ಕ್ ಆಂಡ್ರಾಯ್ಡ್ ಟಿವಿ(MarQ 43)
43 ಇಂಚಿನ ಮಾರ್ಕ್ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಯು 3840×2160 ಪಿಕ್ಸಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿ ಅಲ್ಟ್ರಾ ಎಚ್‌ಡಿ ಪ್ಯಾನೆಲ್ ರಚನೆಯನ್ನು ಪಡೆದಿದೆ. ಮೂರು HDMI ಪೋರ್ಟ್, ಎರಡು USB ಪೋರ್ಟ್, ಹಾಗೂ ನೆಟ್‌ಫ್ಲೆಕ್ಸ್ ಮತ್ತು ಹಾಟ್‌ಸ್ಟಾರ್ ಆಪ್‌ಗಳ ಬೆಂಬಲವನ್ನು ಪಡೆದುಕೊಂಡಿದ್ದು, 20W ಸಾಮರ್ಥ್ಯದ ಸ್ಪೀಕರ್ ಔಟ್‌ಪುಟ್ ಅನ್ನು ಒಳಗೊಂಡಿದೆ.

ಐಎಫ್ಎಫ್ಕಾನ್ ಆಂಡ್ರಾಯ್ಡ್ ಟಿವಿ (iFFalcon 40 Android)
ಐಎಫ್ಎಫ್ಕಾನ್ ಟಿವಿ ಉತ್ಪನ್ನಗಳು ಟಿಸಿಎಲ್ ಕಂಪನಿಯದಾಗಿದ್ದು, 40 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿಯು ಆಂಡ್ರಾಯ್ಡ್ ಓಎಸ್‌ನ ಬೆಂಬಲಿತವಾಗಿದೆ. ಹೀಗಾಗಿ ಆಂಡ್ರಾಯ್ಡ್ನ ಎಲ್ಲ ಆಪ್ಸ್‌ಗಳು ಇನ್‌ಬಿಲ್ಟ್ ಆಗಿ ಅಳವಡಿಸಲಾಗಿದೆ. ಹಾಗೆಯೇ ನೆಟ್‌ಫ್ಲೆಕ್ಸ್ ಸಹ ಇದೆ. ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಟಿವಿಯ ಬೆಲೆಯು 18,999ರೂ.ಗಳು ಆಗಿದೆ.

ಯುವಿ ಅಲ್ಟ್ರಾ ಎಚ್‌ಡಿ ಟಿವಿ(Vu Pixelight 50)
50 ಇಂಚಿನ ಡಿಸ್‌ಪ್ಲೇಯ ಈ ಸ್ಮಾರ್ಟ್‌ಟಿವಿಯು ಅಲ್ಟ್ರಾ ಹೆಚ್‌ಡಿ ಪ್ಯಾನೆಲ್ ರಚನೆಯೊಂದಿದೆ 3840×2160 ಪಿಕ್ಸಲ್ ರೆಸಲ್ಯೂಶನ್‌ನ ಸಾಮರ್ಥ್ಯದಲ್ಲಿದೆ. ಆಂಡ್ರಾಯ್ಡ್ ಆಪ್ಸ್‌ಗಳ ಬೆಂಬಲವಿದ್ದು, ಮನರಂಜನೆಯ ನೆಟ್‌ಫ್ಲೆಕ್ಸ್ ಮತ್ತು ಅಮೆಜಾನ್ ಪ್ರೈಮ್ ಮತ್ತು ಯೂಟ್ಯೂಬ್ ಅನ್ನು ಹೊಂದಿದೆ. ಮೂರು HDMI ಪೋರ್ಟ್, ಎರಡು USB ಪೋರ್ಟ್ ಜೊತೆಗೆ 24W ಔಟ್‌ಪುಟ್ ಸ್ಪೀಕರ್ ನೀಡಲಾಗಿದೆ. ಬೆಲೆಯು 28,999 ರೂ.ಗಳು.


Click it and Unblock the Notifications








