Boult: ಬೌಲ್ಟ್ ಆಡಿಯೋದಿಂದ ಲಭ್ಯವಾಗಲಿದೆ 5,000ರೂ.ಗಳೊಳಗೆ ಸ್ಮಾರ್ಟ್ ರಿಂಗ್!
ಸ್ಮಾರ್ಟ್‌ರಿಂಗ್‌ಗಳು (smart ring) ಇತ್ತೀಚೆಗೆ ಹೆಚ್ಚು ಟ್ರೆಂಡ್ ಆಗುತ್ತಿವೆ. ಸ್ಮಾರ್ಟ್‌ವಾಚ್ ಖರೀದಿ ಮಾಡಬೇಕು ಅಂದುಕೊಂಡವರೆಲ್ಲಾ ಈಗ ಈ ಸ್ಮಾರ್ಟ್‌ರಿಂಗ್ ಕಡೆ ಮುಖ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಈ ರಿಂಗ್‌ನ ಶೈಲಿ ಹಾಗೂ ಫೀಚರ್ಸ್. ಆದರೆ, ಇವುಗಳ ಬೆಲೆ ಸ್ವಲ್ಪ ದುಬಾರಿ.
ಹೌದು, ಇಲ್ಲಿಯವರೆಗೆ ಲಾಂಚ್ ಆಗಿರುವ ಸಾಕಷ್ಟು ಸ್ಮಾರ್ಟ್‌ರಿಂಗ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆಯಾದರೂ ಸಾಕಷ್ಟು ಜನರು ಖರೀದಿ ಮಾಡಲು ಹಿಂದೆ ಹೆಜ್ಜೆ ಇಡುತ್ತಿದ್ದಾರೆ. ಕಾರಣ ಬೆಲೆ. ಆದರೆ, ಇನ್ಮುಂದೆ ಎಲ್ಲರೂ ಸಹ ಸ್ಮಾರ್ಟ್ ರಿಂಗ್ ಧರಿಸಲು ಅನುಕೂಲ ಮಾಡಿಕೊಡಲಿದೆ ಬೌಲ್ಟ್ (Boult). ಬೌಲ್ಟ್ 5,000 ರೂ. ಒಳಗಿನ ಬೆಲೆಯ ಸ್ಮಾರ್ಟ್ ರಿಂಗ್ ಪರಿಚಯಿಸಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಏನಿದು ಹೊಸ ವಿಚಾರ?, ಈ ರಿಂಗ್‌ಗಳಿಂದ ಆಗುವ ಪ್ರಯೋಜನ ಏನು ಅನ್ನೋ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಬೌಲ್ಟ್ ಸ್ಮಾರ್ಟ್‌ರಿಂಗ್: ಬೌಲ್ಟ್ ಈಗಾಗಲೇ ಸಾಕಷ್ಟು ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಅದರಲ್ಲೂ ಈ ಕಂಪೆನಿಯ ಸ್ಪೀಕರ್‌ಗಳಿಗೆ, ಬಡ್ಸ್‌ಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಆದರೆ ಇನ್ಮುಂದೆ ಈ ಎಲ್ಲಾ ಡಿವೈಸ್‌ಗಳನ್ನು ಬದಿಗೆ ಸರಿಸಿ ಸ್ಮಾರ್ಟ್‌ರಿಂಗ್ ಅಗ್ರಸ್ಥಾನ ಪಡೆಯುವುದರಲ್ಲಿ ಎರಡು ಮಾತಿಲ್ಲ. ಸ್ಯಾಮ್‌ಸಂಗ್, ಬೋಟ್ ಮತ್ತು ನಾಯ್ಸ್‌ನಂತರ ಪ್ರಮುಖ ಕಂಪೆನಿಗಳು ಈಗಾಗಲೇ ಈ ವಿಭಾಗದಲ್ಲಿ ಗೇಮ್ ಚೇಂಜರ್ ಆಗಿದ್ದಾರೆ. ಅದರಂತೆ ಇನ್ಮುಂದೆ ಬೌಲ್ಟ್ ಸಹ ತೀವ್ರ ಸ್ಪರ್ಧೆ ನೀಡಲಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಕಡಿಮೆ ಬೆಲೆಗೆ ಇದನ್ನು ಪರಿಚಯಿಸಲು ಮುಂದಾಗುತ್ತಿದೆ ಎಂದ ಮಾತ್ರಕ್ಕೆ ಲೋ ಕ್ವಾಲಿಟಿ ಎಂದು ನೀವು ಅಂದುಕೊಳ್ಳುವ ಹಾಗಿಲ್ಲ. ಯಾಕೆಂದರೆ ಉತ್ಪನ್ನದ ಗುಣಮಟ್ಟ ಮತ್ತು ವಿಶೇಷ ಆವಿಷ್ಕಾರದಲ್ಲಿ ಸ್ಮಾರ್ಟ್ ರಿಂಗ್ ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಉನ್ನತ ಗುಣಮಟ್ಟವನ್ನ ಖಚಿತಪಡಿಸಿಕೊಂಡಾಗ ಮಾತ್ರವೇ ಬ್ರ್ಯಾಂಡ್ ಮಾರುಕಟ್ಟೆಯನ್ನು ಪ್ರವೇಶಿಸಲು ನಿರ್ಧರಿಸುತ್ತದೆ ಎಂದು ತಿಳಿದುಬಂದಿದೆ.

ಈ ನಡುವೆ ಬೌಲ್ಟ್ ಆಡಿಯೊದ ಸಿಇಒ ವರುಣ್ ಗುಪ್ತಾ ಅವರು ದಿ ಮೊಬೈಲ್ ಇಂಡಿಯನ್ ಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಬೌಲ್ಟ್ ಸ್ಮಾರ್ಟ್ ರಿಂಗ್ (Boult Smart Ring) ವಿಭಾಗದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದು, ಶೀಘ್ರದಲ್ಲೇ 5,000 ರೂ.ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ರಿಂಗ್ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ. ಅಲ್ಲದೆ ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಮತ್ತು ದುಬಾರಿ ರಿಂಗ್‌ನ ಸಾಮರ್ಥ್ಯಗಳನ್ನೇ ನೀಡುವ ಉದ್ದೇಶದಿಂದ ನಾವು ಇಲ್ಲಿಯವರೆಗೆ ಉದ್ದೇಶಪೂರ್ವಕವಾಗಿ ಈ ವಿಭಾಗದಲ್ಲಿ ಪ್ರೊಡಕ್ಟ್‌ಗಳನ್ನು ಪ್ರಾರಂಭಿಸಲಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಇತರೆ ಸ್ಮಾರ್ಟ್‌ರಿಂಗ್‌ಗಳ ಕಡೆ ಗಮನ ಹರಿಸುವುದಾದರೆ ನಾಯ್ಸ್ ಲೂನಾ ರಿಂಗ್ 19,999 ರೂ.ಗಳ ಬೆಲೆ ಹೊಂದಿದೆ. ಹಾಗೆಯೇ ಬೋಟ್‌ನ ಸ್ಮಾರ್ಟ್ ರಿಂಗ್ 8,999 ರೂ.ಗಳ ಬೆಲೆ ಹೊಂದಿದ್ದು. ಇದರಿಂದ ಜನರು ಸೀಮಿತ ಸಂಖ್ಯೆಯಲ್ಲಿ ಇವುಗಳನ್ನು ಖರೀದಿ ಮಾಡುತ್ತಿದ್ದಾರೆ. ಇದನ್ನೇ ಗುರುಯಾಗಿಸಿಕೊಂಡು ಮಾರುಕಟ್ಟೆಯಲ್ಲಿ ಬೌಲ್ಟ್ ಸುಂಟರಗಾಳಿ ಎಬ್ಬಿಸಲಿದೆ ಎಂದರೆ ತಪ್ಪಾಗಲಾರದು.

ಸ್ಮಾರ್ಟ್‌ರಿಂಗ್‌ಗಳು ಹೇಗೆ ಪ್ರಯೋಜಕಾರಿ?: ಇತ್ತೀಚಿಗೆ ಲಾಂಚ್ ಆಗುತ್ತಿರುವ ಸ್ಮಾರ್ಟ್ ರಿಂಗ್‌ಗಳು ಹೃದಯ ಬಡಿತ, ನಿದ್ರೆ, ರಕ್ತದ ಆಮ್ಲಜನಕದ ಮಟ್ಟಗಳಂತಹ ಆರೋಗ್ಯ ಮೆಟ್ರಿಕ್‌ಗಳನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡುತ್ತವೆ. ಅಲ್ಲದೆ ದೇಹದ ಉಷ್ಣತೆ, ಹೃದಯ ಬಡಿತದ ವ್ಯತ್ಯಾಸ ಮತ್ತು ದೈಹಿಕ ಚಟುವಟಿಕೆಯಲ್ಲಿನ ಬದಲಾವಣೆಗಳನ್ನು ಸಹ ಟ್ರ್ಯಾಕ್ ಮಾಡಲಿದ್ದು, ವೈದ್ಯರ ರೀತಿಯಲ್ಲಿ ಕೆಲಸ ಮಾಡಲಿದೆ.
ಇದರೊಂದಿಗೆ ನಿಯರ್ ಫೀಲ್ಡ್ ಸಂವಹನ ಡಿವೈಸ್‌ಗಳಾಗಿಯೂ ಕಾರ್ಯನಿರ್ವಹಿಸುತ್ತವೆ ಮತ್ತು ಹೊಂದಾಣಿಕೆಯ ಮೊಬೈಲ್ ಫೋನ್‌ನೊಂದಿಗೆ ಕನೆಕ್ಟ್ ಮಾಡಿದಾಗ ಫೋನ್ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ. ಅಲ್ಲದೆ ಈ ಸ್ಮಾರ್ಟ್ ರಿಂಗ್‌ಗಳು ನೋಟಿಫಿಕೇಶನ್, ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಕಂಟ್ರೋಲ್ ಮಾಡಬಹುದಾಗಿದ್ದು, ಈ ವಿಭಾಗದಲ್ಲಿ ಕೆಲವು ರಿಂಗ್‌ಗಳಲ್ಲಿ ಪಾವತಿಗಳನ್ನೂ ಸಹ ಮಾಡಬಹುದಾಗಿದೆ.


Click it and Unblock the Notifications








