Home
Gadgets

'ಬ್ಲೂಟೂತ್‌ ಸ್ಪೀಕರ್‌' ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ!

ಸದ್ಯ ಟೆಕ್‌ ಮಾರುಕಟ್ಟೆಯಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳು ಸಖತ್‌ ಹವಾ ಮಾಡುತ್ತಿದ್ದು, ಗ್ರಾಹಕರು ಇವುಗಳ ಡಿಸೈನ್‌ ಮತ್ತು ಸೌಂಡ್‌ ಕ್ವಾಲಿಟಿಗೆ ಮನಸೋತಿದ್ದಾರೆ. ಮೊದಲೆಲ್ಲಾ ಯಾವಾಗಲೂ ರೆಡಿಯೋ ಹೇಗೆ ಜೊತೆಯಲ್ಲಿರುತ್ತಿತ್ತೊ ಹಾಗೆಯೇ ಇಂದು ಬ್ಲೂಟೂತ್‌ ಸ್ಪೀಕರ್‌ಗಳು ಮ್ಯೂಸಿಕ್ ಪ್ರಿಯ ಗ್ರಾಹಕರ ಜೊತೆಗಾರ ಡಿವೈಸ್‌ಗಳಾಗಿವೆ. ಮಾರುಕಟ್ಟೆಯಲ್ಲಿ ವೈರೈಟಿ ಸ್ಪೀಕರ್‌ಗಳು ಲಭ್ಯವಿದ್ದು, ಆದರೆ ಖರೀದಿ ಸಮಯದಲ್ಲಿ ಸ್ವಲ್ಪ ಗಮನಿಸುವುದು ಉತ್ತಮ.

'ಬ್ಲೂಟೂತ್‌ ಸ್ಪೀಕರ್‌' ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ!

ಹೌದು, ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯಲ್ಲಿ ಬ್ಲೂಟೂತ್‌ ಸ್ಪೀಕರ್ಸ್‌ಗಳು ಲಭ್ಯವಿದ್ದು, ಅದರೊಂದಿಗೆ ವಾಟರ್‌ಪ್ರೊಫ್ ಸೇರಿದಂತೆ ಹಲವು ನೂತನ ಫೀಚರ್ಸ್‌ಗಳನ್ನು ಹೊಂದಿದೆ. ಹೀಗಾಗಿ ಗ್ರಾಹಕರು ಸ್ಪೀಕರ್‌ ಖರೀದಿಸುವಾಗ ಅವರ ಅನಕೂಲಕ್ಕೆ ಅನುಗುಣವಾಗಿ ಮತ್ತು ಉತ್ತಮ ಗುಣಮಟ್ಟದ ಡಿವೈಸ್‌ಗಳನ್ನು ಆಯ್ದುಕೊಳ್ಳಲು ಬಯಸುತ್ತಾರೆ. ಹಾಗಾದರೇ ಬ್ಲೂಟೂತ್‌ ಸ್ಪೀಕರ್‌ ಖರೀದಿಸುವಾಗ ಗಮನಿಸಬೇಕಾದ ಕೇಲವು ಅಂಶಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಫೀಚರ್ಸ್‌ಗಳನ್ನು ಅರ್ಥೈಸಿಕೊಳ್ಳಿ

ಫೀಚರ್ಸ್‌ಗಳನ್ನು ಅರ್ಥೈಸಿಕೊಳ್ಳಿ

ಬಹುತೇಕ ಆಡಿಯೊ ಕಂಪನಿಗಳು ತಮ್ಮ ಬ್ಲೂಟೂತ್‌ ಸ್ಪೀಕರ್‌ ಉತ್ಪನ್ನಗಳ ಜಾಹಿರಾತು ನೀಡಿರುತ್ತವೆ. ಅವುಗಳಲ್ಲಿ ಆ ಉತ್ಪನ್ನದ ವಿಶೇಷ ಫೀಚರ್ಸ್‌ಗಳು ಮತ್ತು ಆಯ್ಕೆಗಳ ಕುರಿತು ಮಾಹಿತಿ ನೀಡಿರುತ್ತಾರೆ. ಖರೀದಿಸುವ ಸಮಯದಲ್ಲಿ ಬ್ಲೂಟೂತ್‌ ಸ್ಪೀಕರ್‌ನಲ್ಲಿ ನೀಡುರುವ ಫೀಚರ್ಸ್‌ಗಳ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ ಮತ್ತು ಅದರ ವಿಶೇಷತೆಯೆನು ಎಂಬುದನ್ನು ಅರಿಯಿರಿ.

ಫ್ರಿಕ್ವೆನ್ಸಿ (ತರಗಾಂತರಗಳು)

ಫ್ರಿಕ್ವೆನ್ಸಿ (ತರಗಾಂತರಗಳು)

ಬ್ಲೂಟೂತ್‌ ಸ್ಪೀಕರ್ಸ್‌ ತರಗಾಂತರಗಳ ಅಳತೆಯನ್ನು ಹರ್ಡ್ಜ್‌ನಲ್ಲಿ ಹೇಳುತ್ತಾರೆ ಸಾಮಾನ್ಯವಾಗಿ 100Hz - 20,000Hz ಅಂತರದಲ್ಲಿ ತರಗಾಂತರಗಳು ಇರುತ್ತದೆ. ಹೆಚ್ಚಿನ ಅಂತರದ ತರಗಾಂತರಗಳು ಕೇಳಲು ಅಷ್ಟಾಗಿ ಉತ್ತಮ ಎನಿಸುವುದಿಲ್ಲ. ಹೀಗಾಗಿ ನೀವು ಖರೀದಿಸುವ ಬ್ಲೂಟೂತ್‌ ಸ್ಪೀಕರ್‌ ಸಂಗೀತ ಸ್ಪಷ್ಟವಾಗಿ ಕೇಳುವಂತಿರುವ ತರಗಾಂತರದ ಅಂತರದಲ್ಲಿರಲಿ.

ಬ್ಲೂಟೂತ್‌ ವರ್ಷನ್

ಬ್ಲೂಟೂತ್‌ ವರ್ಷನ್

ಬ್ಲೂಟೂತ್‌ ಸ್ಪೀಕರ್ಸ್‌ಗಳು ಬ್ಲೂಟೂತ್‌ ಕನೆಕ್ಟಿವಿಟಿಯಿಂದಲೇ ಕಾರ್ಯನಿರ್ವಹಿಸುತ್ತವೆ. ಆದರೆ ಬ್ಲೂಟೂತ್‌ ಹಲವು ವರ್ಷನ್‌ಗಳನ್ನು ಹೊಂದಿದ್ದು, ಇತ್ತೀಚಿನ್ ವರ್ಷನ ಉತ್ತಮ ಕನೆಕ್ಟಿವಿಟಿ ಸೌಲಭ್ಯವನ್ನು ಮತ್ತು ಹೆಚ್ಚಿನ ವ್ಯಾಪ್ತಿಯಲ್ಲಿ ಸೇವೆ ನೀಡುತ್ತದೆ. ಸದ್ಯ ಬ್ಲೂಟೂತ್‌ 5 ಚಾಲ್ತಿ ಇರುವ ವರ್ಷನ್ ಆಗಿದೆ.

ಆಡಿಯೊ ಡ್ರೈವರ್

ಆಡಿಯೊ ಡ್ರೈವರ್

ಸ್ಪೀಕರ್ಸ್‌ಗಳಲ್ಲಿ ಸೌಂಡ್‌ ಹೊರಹಾಕಲು ಆಡಿಯೊ ಡ್ರೈವರ್‌ಗಳು ಕಾರ್ಯನಿರ್ವಹಿಸುತ್ತವೆ. ಬಹುತೇಕ ಪೋರ್ಟೆಬಲ್ ಮಾದರಿಯ ಸ್ಪೀಕರ್ಸ್‌ಗಳ ಡ್ರೈವರ್ಸ್‌ಗಳು 40mm ಸಾಮರ್ಥ್ಯದಲ್ಲಿ ಕಂಡುಬರುತ್ತವೆ. ಹಾಗೆಯೇ ಬ್ಲೂಟೂತ್‌ ಸ್ಪೀಕರ್ಸ್‌ ಖರೀದಿಸುವಾಗ ಆಡಿಯೊ ಡ್ರೈವರ್ಸ್‌ಗಳ ಬಗ್ಗೆ ಗಮನನೀಡಿ.

ಕನೆಕ್ಟಿವಿಟಿ

ಕನೆಕ್ಟಿವಿಟಿ

ನೀವು ಖರೀದಿಸುವ ಸ್ಪೀಕರ್‌ ಬ್ಲೂಟೂತ್‌ ಮಾದರಿಯದ್ದೆ ಸರಿ ಆದರೆ ಬ್ಲೂಟೂತ್‌ ಕನೆಕ್ಟಿವಿಟಿ ಜೊತೆಗೆ ಇತರೆ ಕನೆಕ್ಟಿವಿಟಿ ಆಯ್ಕೆಗಳಿವೆಯೇ ಎಂಬುದನ್ನು ಗಮನಿಸಿ. ಕೇಲವೊಮ್ಮೆ ಕೇಬಲ್‌ ಮೂಲಕ ಕನೆಕ್ಟ್‌ ಮಾಡುವ ಸಂದರ್ಭಗಳು ಎದುರಾಗಬಹುದ ಹೀಗಾಗಿ auxiliary ಕನೆಕ್ಟರ್‌ ಲಭ್ಯವಿದ್ದರೆ ಉತ್ತಮ.

Best Mobiles in India

English summary
Buying a Bluetooth Speaker? Here’s What You Should Keep in Mind.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+