ಪ್ರಿಯ ಕೇಳುಗರೇ ನನ್ನನ್ನೂ ಮರೆಯದಿರಿ.!!
ಬಹುತೇಕ ಎಲ್ಲರ ಮನೆಗಳಲ್ಲಿ ಬೆಳಗ್ಗೆ ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರ ಕೇಳುವುದರೊಂದಿಗೆ ದಿನ ಆರಂಭವಾಗುತ್ತಿತ್ತು. ರೇಡಿಯೋದಲ್ಲಿ ಬಂದರೇ ಮಾತ್ರ ಅದು ನಿಖರ ಸುದ್ದಿ ಎಂಬ ವಿಶ್ವಾಸವನ್ನು ಕೇಳುಗರಲ್ಲಿ ಮೂಡಿಸಿತ್ತು. ಇನ್ನೂ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ, ಕ್ರಿಕೆಟ್ ಮ್ಯಾಚ್‌ನ ನೇರ ಕಾಮೆಂಟ್ರಿಯನ್ನು ಕೇಳಿಯೇ ಮ್ಯಾಚ್ ನೋಡಿದ ಅನುಭವವನ್ನು, ನೀಡುತ್ತಿದ್ದ ರೇಡಿಯೋ ಸಾಧನದ ಬಳಕೆ ಈಗ ಕಡಿಮೆಯಾಗಿದ್ದು, ಬೇಸರದ ಸಂಗತಿ.

ಒಂದು ಕಾಲದಲ್ಲಿ ಮನೆ ಮನೆಗಳಲ್ಲಿ ರೇಡಿಯೋ ಧ್ವನಿ ಕೇಳಿಬರುತ್ತಿತ್ತು, ಮನರಂಜನೆಯ ಮೂಲವಾಗಿದ್ದ ರೇಡಿಯೋ ಒಂದು ವೇಳೆ ವಿದ್ಯುತ್ ಕಡಿತದಿಂದ ಕೈಕೊಟ್ಟರೆ, ಬ್ಯಾಟರಿ ಬಳಸಿ ಸಹ ಕೇಳುತ್ತಿದ್ದದು ಉಂಟು. ಕೇಳುಗರಿಗೆ ಅಷ್ಟು ಆಪ್ತವಾಗಿತ್ತು ರೇಡಿಯೋ ಎಂಬ ಮಾಂತ್ರಿಕ ಸಾಧನ. ಆದರೆ ತಂತ್ರಜ್ಞಾನ ಬೆಳವಣಿಗೆಯಿಂದಾಗಿ ಬಳಕೆಯಿಂದ ಬಹು ದೂರ ಸರೆದಿರುವ ರೇಡಿಯೋ ನೆನಪಿಗೆ ಇದು ಸಕಾಲ. ಏಕೆಂದರೇ ಇಂದು '13 ಫೆಬ್ರುವರಿ 'ವಿಶ್ವ ರೇಡಿಯೊ ದಿನ'.

ಪ್ರತಿ ವರ್ಷ ಫೆ.13 ರನ್ನು ವಿಶ್ವ ರೇಡಿಯೊ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಮೂಲಕ ರೇಡಿಯೋವನ್ನು ನೆನಪಿಸಿಕೊಳ್ಳಲಾಗುತ್ತದೆ. ಗತವೈಭವ ಮೆರೆದಿರುವ ರೇಡಿಯೋ ಇನ್ನೂ ಪೂರ್ಣ ಮರೆಯಾಗಿಲ್ಲ. ಅದರ ರಚನೆ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಹೊಸ ಮಾದರಿಯಲ್ಲಿ ರೇಡಿಯೊಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಆದರೆ ಖರೀದಿಸುವ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೇಲವು ಪ್ರಮುಖ ರೇಡಿಯೊಗಳ ಕುರಿತು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಫಿಲಿಪ್ಸ್ ರೇಡಿಯೋ (Philips IN-RL118/00)
ಫಿಲಿಪ್ಸ್ ಕಂಪನಿಯ ಈ ರೇಡಿಯೊ ಸಾಧನವು ಉತ್ತಮ ಗುಣಮಟ್ಟದ ಉಪಕರಣವಾಗಿದೆ. ಕೇಳುಗರಿಗೆ ಅತ್ಯುತ್ತಮ ಧ್ವನಿಯನ್ನು ಹೊರಡಿಸಲಿದೆ. ಇದರೊಂದಿಗೆ ನೋಡಲು ಸಹ ಆಕರ್ಷಕವಾಗಿದ್ದು, ಕ್ವಾಲಿಟಿಯಲ್ಲೂ ಉತ್ತಮವಾಗಿದೆ. ಬಿಲ್ಟ್ ಇನ್ ರೀಚಾರ್ಜೆಬಲ್ ಮಾಡುವ ಆಯ್ಕೆಯನ್ನು ಹೊಂದಿದ್ದು, ಕೇಳುಗರು ಮ್ಯಾನುವಲ್ ಟ್ಯೂನಿಂಗ್ ಮಾಡಬಹುದಾಗಿದೆ. ಟ್ಯೂನರ್ ಬ್ಯಾಂಡ್ FM ಮತ್ತು AM ಆಯ್ಕೆಯನ್ನು ಹೊಂದಿದೆ. ಟೆಲಿಸ್ಕೋಪ್ ಎರಿಯಲ್ ಅನ್ನು ಈ ರೇಡಿಯೊದಲ್ಲಿ ಕಾಣಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಸಾಧನದ ಬೆಲೆ 1575ರೂ.ಗಳು

ಪಗಾರಿಯಾ 5 ಬಾಂಡ್ ರೇಡಿಯೋ (PAGARIA 5 band FM Radio)
ಪಗಾರಿಯಾ ಕಂಪನಿಯ ಈ ರೇಡಿಯೊ ಮಲ್ಟಿ ಆಯ್ಕೆಗಳನ್ನು ಹೊಂದಿದ್ದು, ಕೇಳುಗರು ರೇಡಿಯೊ ಆಗಿಯೂ ಬಳಸಬಹುದು ಮತ್ತು ಯುಎಸ್‌ಬಿ ಪ್ಲೇಬ್ಯಾಕ್ ನೀಡಿರುವುದರಿಂದ ಎಂಪಿ3 ಹಾಡುಗಳನ್ನು ಕೇಳಲು ಸಹ ಬಳಸಬಹುದಾಗಿದೆ. ಈ ರೇಡಿಯೊ ನಿರಂತರ 48 ಗಂಟೆಗಳವರೆಗೂ ಬಾಳಿಕೆ ಬರುವಷ್ಟು ಅತ್ಯುತ್ತಮವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 500mw ಸಾಮರ್ಥ್ಯದಲ್ಲಿ ಧ್ವನಿ ಹೊರಡಿಸುತ್ತದೆ. ಇದರ ಧ್ವನಿಯ ಗುಣಮಟ್ಟ ಸಹ ಉತ್ತಮವಾಗಿದೆ. AM, MW, SW, TV1, TV2, FM ಬಾಂಡ್‌ಗಳನ್ನು ಈ ರೇಡಿಯೊದಲ್ಲಿ ಕಾಣಬಹುದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 1350ರೂ.ಗಳು.

ಸೋನಿ ರೇಡಿಯೋ (Sony ICF-306 FM Radio)
ಸೋನಿ ಕಂಪನಿಯ ಈ ರೇಡಿಯೊ ಡಿಜಿಟಲ್ ಡಿಸ್‌ಪ್ಲೇಯನ್ನು ಹೊಂದಿದ್ದು, ಟೆಲಿಸ್ಕೋಪಿಕ್ ಎಂಟಿನಾವನ್ನು ಒಳಗೊಂಡಿದೆ. AM ಮತ್ತು FM ಬಾಂಡ್‌ಗಳನ್ನು ಹೊಂದಿರುವ ಈ ರೇಡಿಯೊದ ಆಡಿಯೋ ಕ್ವಾಲಿಟಿಯು ಅತ್ಯುತ್ತಮವಾಗಿದೆ. ಹಗುರವಾಗಿದ್ದು, ಕೈಯಲ್ಲಿ ಹಿಡಿದುಕೊಂಡು ಓಡಾಡಲು ಅನುಕೂಲಕರವಾಗಿದೆ. ರೇಡಿಯೊದಲ್ಲಿ LED ಬ್ಯಾಟರಿ ಇಂಡಿಕೇಶನ್ ನೀಡಲಾಗಿದ್ದು, ಇದರೊಂದಿಗೆ ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ರೆಡ್ ಮತ್ತು ಬ್ಲೂ ಬಣ್ಣಗಳಲ್ಲಿ ಲಭ್ಯವಿರುವ ಈ ರೇಡಿಯೊದ ಬೆಲೆ 2246ರೂ.ಗಳು.

ಫಿಲಿಪ್ಸ್ ಆರ್‌ಎಲ್ 191 ರೇಡಿಯೋ (Philips RL 191 fm mw 2 band Radio)
ಜನಪ್ರಿಯ ಫಿಲಿಪ್ಸ್ ಕಂಪನಿ ವಿವಿಧ ಶ್ರೇಣಿಯ ರೇಡಿಯೋ ಸಾಧನಗಳನ್ನು ಹೊಂದಿದ್ದು, ಈ RL191 ರೇಡಿಯೊ ಸಹ ಅತ್ಯುತ್ತಮವಾಗಿದೆ. ಟ್ಯೂನಿಂಗ್ ಮತ್ತು ಗುಣಮಟ್ಟದ ಧ್ವನಿ ಕ್ವಾಲಿಟಿಯಲ್ಲಿ ಸಹ ಕೇಳುಗರಿಗೆ ಇಷ್ಟವಾಗಲಿದ್ದು, ಪ್ರಖರ ಸಿಂಗ್ನಲ್‌ಗಾಗಿ ಟೆಲಿಸ್ಕೋಪಿಕ್ ಎಂಟಿನಾವನ್ನು ಹೊಂದಿದೆ. ಈ ರೇಡಿಯೊ ಹಗುರವಾದ ರಚನೆ ಇದ್ದು, ಎಲ್ಲಿಗಾದರು ತೆಗೆದುಕೊಂಡು ಹೋಗಬಹುದಾಗಿದೆ. ಇದರೊಂದಿಗೆ ಆಕರ್ಷಕ ಡಿಸೈನ್ ಅನ್ನು ಹೊಂದಿದೆ. ಪ್ರಮುಖ ಆನ್‌ಲೈನ್ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಈ ಸಾಧನದ ಬೆಲೆಯು 1299ರೂ.ಗಳು.

ಸೋನಿ SO-ICF-C1 ರೇಡಿಯೋ (Sony SO-ICF-C1 FM Radio)
ಸೋನಿ ಕಂಪನಿಯ SO-ICF-C1 ಮಾದರಿಯ ಈ ರೇಡಿಯೋ ಬಾಕ್ಸ್ ಆಕಾರದ ರಚನೆಯೊಂದಿಗೆ ಡಿಸ್‌ಪ್ಲೇಯನ್ನು ಹೊಂದಿದೆ. ಆಟೋ ಸ್ಕ್ಯಾನ್ ಮತ್ತು ಏಂಟಿನಾಗಳನ್ನು ಒಳಗೊಂಡಿದೆ. ಈ ರೇಡಿಯೋ FM ಮತ್ತು AM ಟ್ಯೂನರ್ ಬಾಂಡ್‌ಗಳ ಆಯ್ಕೆಗಳನ್ನು ಒಳಗೊಂಡಿರುವ ಜೊತೆಗೆ ಗುಣಮಟ್ಟದ ಸೌಂಡ್ ಕ್ವಾಲಿಟಿಯನ್ನು ಹೊಂದಿದೆ. ಮೇಲ್ಭಾಗದಲ್ಲಿ ಆನ್, ಆಫ್, ಸೌಂಡ್ ಕಂಟ್ರೋಲ್ ಬಟನ್ಸ್‌ಗಳಿದ್ದು, ಯುಎಸ್‌ಬಿ ಸೌಲಭ್ಯವನ್ನು ಸಹ ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸಾಧನದ ಬೆಲೆಯು 2599ರೂ.ಗಳು.


Click it and Unblock the Notifications








