Just In
- 19 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 48 min ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 2 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
Breaking: ರಾಜಸ್ಥಾನದ ಭರತ್ಪುರದಲ್ಲಿ ಚಾರ್ಟರ್ಡ್ ವಿಮಾನ ಪತನ!
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಿಯಲ್ ಟೈಮ್‌ನಲ್ಲಿ ಲವರ್ ಹಾರ್ಟ್‌ಬೀಟ್ ಫೀಲ್‌ಗಾಗಿ "ಸ್ಮಾರ್ಟ್ ರಿಂಗ್'
ಲವ್ ಲೆಟರ್ ಸಂಖ್ಯೆ ವಿರಳವಾಗಿ ಯಾವುದೋ ಕಾಲವಾಗಿದೆ. ಆದ್ರೆ ಲವ್ ಮಾಡುವವರ ಸಂಖ್ಯೆ, ಕಪಲ್‌ಗಳ ಸಂಖ್ಯೆ ಮಾತ್ರ ವಿರಳವಲ್ಲ ಹೇರಳ. ಯಾಕ್ ಲವ್ ಬಗ್ಗೆ ಹೇಳ್ತಿದ್ದೀವಿ ಅಂದ್ರೆ ಲವ್‌ಗೂ ಟೆಕ್ನಾಲಜಿಗೂ ಒಂದು ಲಿಂಕ್ ಇದೆ.
ಲವರ್‌ನ ಹಾರ್ಟ್‌ಬೀಟ್ ಫೀಲ್ ಮಾಡೋಕೆ ಈ ಹಿಂದೆ ಡಾರ್ಕೆಸ್ಟ್ 'ಆಪಲ್ ವಾಚ್'ನಲ್ಲಿ ಮಾತ್ರ ಫೀಚರ್ ಇತ್ತು. ರಿಯಲ್ ಟೈಮ್‌ನಲ್ಲಿ ಲವರ್ ಹಾರ್ಟ್‌ಬೀಟ್ ಅನ್ನು ಆಪಲ್ ವಾಚ್‌ಗಳ ನಡುವೆ ಸೆಂಡ್ ಮಾಡಿಕೊಳ್ಳುವ ಫೀಚರ್ ಇತ್ತು. ಆದ್ರೆ ಈಗ ರಿಯಲ್ ಟೈಮ್‌ನಲ್ಲಿ ಲವರ್ ಹಾರ್ಟ್‌ಬೀಟ್ ಫೀಲ್ ಮಾಡೋಕೆ ಅಂತಲೇ ಸ್ಮಾರ್ಟ್ ರಿಂಗ್(ಉಂಗುರ) ಒಂದು ರೆಡಿಯಾಗಿದೆ.
'ದಿ ಟಚ್' ಎಂಬ ಕಂಪನಿಯು ಕಪ್ಪು ಬಣ್ಣದ ಅದ್ಭುತವಾದ HB ರಿಂಗ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಆಪಲ್ ವಾಚ್‌ಗಿಂತ ಉತ್ತಮ ಅನುಭವ ನೀಡಲಿದೆ. ಈ ಸ್ಮಾರ್ಟ್ ರಿಂಗ್‌ನಿಂದ ನಿಮ್ಮ ಲವರ್‌ಗಳಿಗೆ ಹೇಗೆ ಹಾರ್ಟ್‌ಬೀಟ್ ಫೀಲ್ ಕೊಡಬಹುದು, ಬೆಲೆ ಎಷ್ಟು, ವಿಶೇಷತೆ ಏನು? ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.
ಸ್ಯಾಮ್‌ಸಂಗ್ ಇಯರ್‌ಫೋನ್ ಬಳಸುತ್ತಿದ್ದೀರಾ? ಹಾಗಿದ್ರೆ ನೀವ್ ತುಂಬಾ ಸ್ಪೆಷಲ್!
ಚಿತ್ರ ಕೃಪೆ: THETOUCH
ಅಂದಹಾಗೆ ಸ್ಮಾರ್ಟ್ ರಿಂಗ್ ಮುಖಾಂತರ ವ್ಯಕ್ತಿಗಳಿಬ್ಬರು ಪರಸ್ಪರ ತಮ್ಮ ಹಾರ್ಟ್‌ಬೀಟ್ ಅನ್ನು ಸಿಂಪಲ್ಲಾಗಿ ರಿಂಗ್ ಹೊರ ಮೇಲ್ಮೈನಲ್ಲಿ ಟ್ಯಾಪ್ ಮಾಡುವ ಮುಖಾಂತರ ಸೆಂಡ್ ಮಾಡಿಕೊಳ್ಳಬಹುದು. 'ವಿಶ್ವದ ಅತ್ಯಾಧುನಿಕ ರಿಂಗ್' ಎನ್ನಲಾದ HB ರಿಂಗ್ ಸ್ಮಾರ್ಟ್‌ಫೋನ್ ಮತ್ತು ಐಓಎಸ್‌ಗಳಿಗೆ ಅಪ್ಲಿಕೇಶನ್ ಮೂಲಕ ಸಂಪರ್ಕ ಪಡೆಯುವ ಫೀಚರ್ ಅನ್ನು ಹೊಂದಿದೆ. ಸ್ಮಾರ್ಟ್ HB ರಿಂಗ್ ಬ್ಲೂಟೂತ್ ಮೂಲಕ ಸಂಪರ್ಕ ಪಡೆಯುವ ಫೀಚರ್ ಹೊಂದಿದ್ದು, 14 ಗಂಟೆಗಳ ಬ್ಯಾಟರಿ ಲೈಫ್ ಮತ್ತು 160 ಗಂಟೆಗಳ ಸ್ಟ್ಯಾಂಡ್‌ಬೈ ಟೈಮ್ ಹೊಂದಿದೆ. ಅಂದಹಾಗೆ HB ರಿಂಗ್ ಫೋನ್‌ಗಳಿಗೆ ಡಾಟಾ ಕನೆಕ್ಷನ್ ಮೂಲಕ ಕನೆಕ್ಟ್ ಆಗಲಿದ್ದು, ಇಂಟರ್ನೆಟ್ ಮೂಲಕ ಹಾರ್ಟ್‌ಬೀಟ್ ಅನ್ನು ಸ್ವೀಕರಿಸುತ್ತದೆ. ಸ್ಮಾರ್ಟ್ HB ರಿಂಗ್ 16, 17, 18, 19, 20, 21mm ಗಾತ್ರದಲ್ಲಿದ್ದು, 'ದಿ ಟಚ್' ಕಂಪನಿಯು ಕಾಮನ್ ವೆಡ್ಡಿಂಗ್ ರಿಂಗ್‌ಗೆ ಹೋಲಿಸಿದೆ. ಬೆಸ್ಟ್ ಪಾರ್ಟ್: ರಿಂಗ್ ವೈರ್‌ಲೆಸ್ ಚಾರ್ಜರ್ ಫೀಚರ್ ಅನ್ನು ಹೊಂದಿದೆ. ರಿಂಗ್‌ನ ಒಂದು ವರ್ಸನ್ ರಿಯಲ್ 18K ಗುಲಾಬಿ ಗೋಲ್ಡ್ ಜೊತೆಗೆ ನೀಲಮಣಿ ಸ್ಫಟಿಕ ಯುನಿಬಾಡಿ ಹೊಂದಿದೆ. ಮತ್ತೊಂದು ವರ್ಸನ್‌ನ ರಿಂಗ್ ಗುಲಾಬಿ ಗೋಲ್ಡ್ ಮತ್ತು ಜೆಟ್ ಬ್ಲಾಕ್ ಸಹಿತ ಅಭಿವೃದ್ದಿಗೊಂಡಿದೆ. ಆದ್ರೆ ಒರಿಜಿನಲ್ ಗೋಲ್ಡ್‌ನಿಂದ ಅಭಿವೃದ್ದಿ ಪಡಿಸಿಲ್ಲ. ವರ್ಸ್ಟ್ ಪಾರ್ಟ್: ಪ್ರಸ್ತುತದಲ್ಲಿ ಪ್ಯಾರಿಸ್‌ನಲ್ಲಿ ಮಾರಾಟ ಮಾಡುತ್ತಿದ್ದು, 18K ಗುಲಾಬಿ ಗೋಲ್ಡ್ HB ರಿಂಗ್ ಬೆಲೆ $2,990. ಸ್ಮಾರ್ಟ್ HB ರಿಂಗ್‌ನ ಎಲ್ಲಾ ಮಾಡೆಲ್‌ಗಳನ್ನು ಮುಂಚಿತವಾಗಿ ಕಂಪನಿಯ ವೆಬ್‌ಸೈಟ್ ಮೂಲಕ ಕಾಯ್ದಿರಿಸಬಹುದಾಗಿದೆ. ಆದ್ರೆ ಪ್ಯಾರಿಸ್‌ನಲ್ಲಿ ಮಾತ್ರ.ಸ್ಮಾರ್ಟ್ ರಿಂಗ್
ಸ್ಮಾರ್ಟ್‌ಫೋನ್‌ಗು ಕನೆಕ್ಟ್ ಮಾಡಬಹುದು
ಸ್ಮಾರ್ಟ್ HB ರಿಂಗ್
ಡಾಟಾ ಕನೆಕ್ಷನ್
ಕಾಮನ್ ವೆಡ್ಡಿಂಗ್ ರಿಂಗ್ ಮತ್ತು ಸೈಜ್
ವೈರ್‌ಲೆಸ್ ಚಾರ್ಜರ್ ಮತ್ತು ವಿಶೇಷತೆ
ಪ್ಯಾರಿಸ್‌ನಲ್ಲಿ ಮಾರಾಟ
ಗಿಜ್‌ಬಾಟ್
ಓದಿರಿ ಗಿಜ್‌ಬಾಟ್ ಲೇಖನಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470