ಸ್ಮಾರ್ಟ್‌ವಾಚ್ ಖರೀದಿಸಬೇಕೆ?..ಇಲ್ಲಿವೆ ನೋಡಿ ಅಗ್ಗದ ಬೆಲೆಗೆ ಸಿಗುವ ವಾಚ್‌ಗಳು!
ಪ್ರಸಕ್ತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್ ವಾಚ್‌ಗಳು ಸಹ ಅತ್ಯಂತ ಜನಪ್ರಿಯ ಸ್ಮಾರ್ಟ್ ಡಿವೈಸ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಹೀಗಾಗಿ ಮೊಬೈಲ್ ಕಂಪನಿಗಳು ಸೇರಿದಂತೆ ಇತರೆ ಸ್ಮಾರ್ಟ್ ಡಿವೈಸ್ ತಯಾರಿಕಾ ಸಂಸ್ಥೆಗಳು ಅಗ್ಗದ ಹಾಗೂ ಬಜೆಟ್ ಬೆಲೆಯಲ್ಲಿ ವಿವಿಧ ಶ್ರೇಣಿಯಲ್ಲಿ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡುತ್ತಿವೆ.
ಹೌದು, ಸದ್ಯ ಮಾರುಕಟ್ಟೆಯಲ್ಲಿ ನಾನಾ ತರಹದ ಸ್ಮಾರ್ಟ್ ವಾಚ್ ಲಭ್ಯ. ಆದರೆ ಗ್ರಾಹಕರು ಅವರ ಅಗತ್ಯಕ್ಕೆ ಅನುಗುಣವಾಗಿ ಸ್ಮಾರ್ಟ್‌ವಾಚ್ ಖರೀದಿಗೆ ಮುಂದಾಗುತ್ತಾರೆ. ನೀವೇನಾದರೂ 2,000 ರೂ. ಒಳಗೆ ಅತ್ಯುತ್ತಮ ಸ್ಮಾರ್ಟ್ ವಾಚ್ ಖರೀದಿಸುವ ಪ್ಲ್ಯಾನ್ ಮಾಡಿದ್ದರೆ, ಈ ಲೇಖನ ನಿಮಗೆ ಉಪಯುಕ್ತ ಎನಿಸಲಿದೆ. ಹಾಗಾದರೇ 2000ರೂ. ಒಳಗೆ ಲಭ್ಯ ಇರುವ ಕೆಲವು ಬೆಸ್ಟ್ ಸ್ಮಾರ್ಟ್ ವಾಚ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್ ಐಕಾನ್ 3 ಸ್ಮಾರ್ಟ್‌ವಾಚ್
ಈ ಸ್ಮಾರ್ಟ್‌ವಾಚ್ ಪ್ರಿಮಿಯಂ ಜಿಂಕ್ ಅಲೋಯ್ ಫ್ರೆಮ್‌ನ ರಚನೆ ಹೊಂದಿದ್ದು, ಡ್ಯುಯಲ್ ಸೈಡ್ ಕೀ ಸೌಲಭ್ಯ ಪಡೆದುಕೊಂಡಿದೆ. ಇದು 2.01 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದಿದ್ದು, 500 ನಿಟ್ಸ್ ಬ್ರೈಟ್ನೆಸ್ ಅನ್ನು ಒದಗಿಸುತ್ತದೆ. ಅಲ್ಲದೇ ಇದು 2.5D ಕರ್ವ್ ಗ್ಲಾಸ್‌ನ ಲುಕ್ ಪಡೆದಿದೆ. ಈ ಸ್ಮಾರ್ಟ್ ವಾಚ್ 24 ಗಂಟೆಗಳ ಆರೋಗ್ಯ ಮೇಲ್ವಿಚಾರಣೆ ಸೌಲಭ್ಯ ಪಡೆದುಕೊಂಡಿದೆ.
ಹಾಗೆಯೇ 150 ಕ್ಕೂ ಅಧಿಕ ಫೇಸ್ ವಾಚ್ ಆಯ್ಕೆ ಪಡೆದಿದ್ದು, ಹಾಗೆಯೇ ಬ್ಲೂಟೂತ್ ಕಾಲಿಂಗ್ ಸೌಲಭ್ಯ ಸಹ ಪಡೆದುಕೊಂಡಿದೆ. ಈ ಸ್ಮಾರ್ಟ್ ವಾಚ್ 310mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದುಕೊಂಡಿದೆ. ಇದರ ಬ್ಯಾಟರಿಯು 15 ದಿನಗಳವರೆಗೆ ಸ್ಟ್ಯಾಂಡ್‌ಬೈ ಪಡೆದಿದೆ. ಇದರ ಬೆಲೆಯು 1699ರೂ. ಆಗಿದೆ.

ನಾಯ್ಸ್ ಕಲರ್‌ಫಿಟ್ ಓರ್ ಸ್ಮಾರ್ಟ್‌ವಾಚ್
ಈ ನೂತನ ವಾಚ್ 2.1 ಇಂಚಿನ ಡೈನಾಮಿಕ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 368 x 44 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ಇದು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹೊಂದಿದ್ದು, ಆಕರ್ಷಕ ಕ್ರೌನ್ ಬಟನ್ ಸೌಲಭ್ಯ ಪಡೆದಿದೆ. ಇನ್ನು ಈ ವಾಚ್ 100+ ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳನ್ನು ಪಡೆದುಕೊಂಡಿದೆ.
ಅದೇ ರೀತಿ ಈ ವಾಚ್ ಹೃದಯ ಬಡಿತ ಮತ್ತು SpO2 ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ, ಒತ್ತಡ ಮಾಪನ ಮತ್ತು ಸ್ತ್ರೀ ಸೈಕಲ್ ಟ್ರ್ಯಾಕರ್‌ನಂತಹ ಫೀಚರ್ಸ್‌ಗಳನ್ನು ಪಡೆದಿದ್ದು, ಆರೋಗ್ಯ ಮೇಲ್ವಿಚಾರಣೆಗೆ ಆದ್ಯತೆ ನೀಡುವ ಸೌಲಭ್ಯ ಇದೆ. ಇನ್ನು ಭಾರತದಲ್ಲಿ ಈ ಸ್ಮಾರ್ಟ್‌ವಾಚ್ ಬೆಲೆ 1,499ರೂ.ಗಳು ಆಗಿದೆ.
ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್
ಐಟೆಲ್ ಐಕಾನ್ 2 ಸ್ಮಾರ್ಟ್‌ವಾಚ್ 1.83 ಇಂಚಿನ ಕರ್ವ್ಡ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇಯು 550 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ಅನ್ನು ಪಡೆದಿದ್ದು, ಸುಲಭ ನ್ಯಾವಿಗೇಷನ್‌ಗಾಗಿ ತಿರುಗುವ ಕ್ರೌನ್ ಪಡೆದಿದೆ. ಅಲ್ಲದೇ ಈ ವಾಚ್ ಕಸ್ಟಮೈಸೇಶನ್‌ಗಾಗಿ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ನೀಡುತ್ತದೆ.
ಹಾಗೆಯೇ ಈ ಸ್ಮಾರ್ಟ್‌ವಾಚ್ ಫಿಟ್‌ನೆಸ್ ಉತ್ಸಾಹಿಗಳಿಗೆ SpO2, ಹೃದಯ ಬಡಿತ, ನಿದ್ರೆ ಮತ್ತು ಸ್ತ್ರೀ ಆರೋಗ್ಯಕ್ಕಾಗಿ ನಿರಂತರ ಆರೋಗ್ಯ ಟ್ರ್ಯಾಕಿಂಗ್ ಸೇರಿದಂತೆ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳ ಮೇಲ್ವಿಚಾರಣೆಯನ್ನು ಒದಗಿಸಲಿದೆ. ಹಾಗೆಯೇ AI ಧ್ವನಿ ಸಹಾಯಕ, ಕ್ಯಾಮೆರಾ, ಸಂಗೀತ ನಿಯಂತ್ರಣಗಳು ಮತ್ತು IP68 ನೀರು ಮತ್ತು ಧೂಳಿನ ಪ್ರತಿರೋಧವನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್ ವಾಚ್ ಬೆಲೆಯು 999ರೂ. ಆಗಿದೆ.


Click it and Unblock the Notifications








