Home
Gadgets

ಅತ್ಯುತ್ತಮ ಇಯರಬಡ್ಸ್‌ ಲಿಸ್ಟ್‌ ಇಲ್ಲಿದೆ.. ಇದ್ರಲ್ಲಿ ನಿಮ್ಮ ಆಯ್ಕೆ ಯಾವುದು?

ಪ್ರಸ್ತುತ ಸ್ಮಾರ್ಟ್‌ಫೋನ್‌ ಜೊತೆಗೊಂದು ಇಯರ್‌ಬಡ್ಸ್‌ ಅಗತ್ಯ ಸಾಧನ ಎನ್ನುವಂತಾಗಿದೆ. ಇದೇ ಕಾರಣಕ್ಕೆ ಕೆಲವು ಮೊಬೈಲ್‌ ಸಂಸ್ಥೆಗಳು ಸ್ಮಾರ್ಟ್‌ಫೋನ್‌ ಜೊತೆಗೆ ಇಯರ್‌ಬಡ್ಸ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿವೆ. ಆದರೆ ಬಜೆಟ್‌ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಇಯರ್‌ಬಡ್ಸ್‌ಗಳು ಹೆಚ್ಚು ಡಿಮ್ಯಾಂಡ್‌ ಪಡೆದಿವೆ.

ಹೌದು, ಮಾರುಕಟ್ಟೆಯಲ್ಲಿ ಸದ್ಯ ಇಯರ್‌ಬಡ್ಸ್‌ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಅನೇಕರು ಆಕರ್ಷಕ ಫೀಚರ್ಸ್‌ ಹೊಂದಿರುವ ಅತ್ಯುತ್ತಮ ಬ್ರ್ಯಾಂಡ್‌ನ ಇಯರ್‌ಬಡ್ಸ್‌ ಖರೀದಿಸಲು ಬಯಸುತ್ತಾರೆ. ಈ ಲಿಸ್ಟ್‌ನಲ್ಲಿ ಸ್ಯಾಮ್‌ಸಂಗ್‌, ಒಪ್ಪೋ, ರೆಡ್ಮಿ, ಬೋಟ್‌, ಜೆಬಿಎಲ್‌ ನಂತಹ ಸಂಸ್ಥೆಗಳ ಡಿವೈಸ್‌ ಕೂಡಾ ಸೇರಿವೆ. ಹಾಗಾದರೆ ಸುಮಾರು 5,000ರೂ. ಒಳಗೆ ಲಭ್ಯ ಇರುವ ಕೆಲವು ಅತ್ಯುತ್ತಮ ಇಯರ್‌ಬಡ್ಸ್‌ ಡಿವೈಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಅತ್ಯುತ್ತಮ ಇಯರಬಡ್ಸ್‌ ಲಿಸ್ಟ್‌ ಇಲ್ಲಿದೆ.. ಇದ್ರಲ್ಲಿ ನಿಮ್ಮ ಆಯ್ಕೆ ಯಾವುದು?

ಒಪ್ಪೋ ಎನ್ಕೋ ಏರ್‌ 3 ಪ್ರೊ

ಒಪ್ಪೋ ಎನ್ಕೋ ಏರ್‌ 3 ಪ್ರೊ (Oppo Enco Air 3 Pro ) ಇದು ಬಿದಿರಿನ ಫೈಬರ್ ಡಯಾಫ್ರಾಮ್ ಅನ್ನು ಒಳಗೊಂಡಿದೆ. ಅಲ್ಲದೇ 49dB ಅಲ್ಟ್ರಾ ಡೀಪ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು ಗೋಲ್ಡನ್ ಸೌಂಡ್ 2.0 ಜೊತೆಗೆ 47ms ಅಲ್ಟ್ರಾ-ಲೋ ಲೇಟೆನ್ಸಿ ಗೇಮಿಂಗ್ ಮೋಡ್‌ ಸೌಲಭ್ಯ ಪಡೆದಿದೆ. ಹಾಗೆಯೇ ಇದು ಧೂಳು ನಿರೋಧಕ ಮತ್ತು ಜಲನಿರೋಧಕ IP65 ರೇಟಿಂಗ್ ಪಡೆದಿದ್ದು, ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಈ ಡಿವೈಸ್‌ ಗ್ರೀನ್‌, ವೈಟ್‌ ಮತ್ತು ಗ್ರೇ ಕಲರ್ ಆಯ್ಕೆ ಪಡೆದಿದೆ. ಇ ಕಾಮರ್ಸ್‌ ತಾಣಗಳಲ್ಲಿ ಖರೀದಿಗೆ ಲಭ್ಯ.

ಅತ್ಯುತ್ತಮ ಇಯರಬಡ್ಸ್‌ ಲಿಸ್ಟ್‌ ಇಲ್ಲಿದೆ.. ಇದ್ರಲ್ಲಿ ನಿಮ್ಮ ಆಯ್ಕೆ ಯಾವುದು?

ರಿಯಲ್‌ಮಿ ಬಡ್ಸ್ ಏರ್ 5 ಪ್ರೊ ಇಯರ್‌ಬಡ್ಸ್‌

ಈ ಇಯರ್‌ಬಡ್ಸ್‌ 11 ಎಂಎಂ ಬಾಸ್ ಡ್ರೈವರ್ ಮತ್ತು 6 ಎಂಎಂ ಮೈಕ್ರೋ-ಪ್ಲಾನರ್ ಅನ್ನು ಒಳಗೊಂಡಿದೆ. ಇದರ ಬಡ್ಸ್‌ 50dB ವರೆಗೆ ಸಕ್ರಿಯ ಶಬ್ದ ರದ್ದತಿಯನ್ನು ಒದಗಿಸುತ್ತವೆ. ಹಾಗೆಯೇ ರಿಯಲ್‌ಮಿ ಬಡ್ಸ್ ಏರ್ 5 ಪ್ರೊ 40 ಎಂಎಸ್ ಕಡಿಮೆ ಲೇಟೆನ್ಸಿ, ಡ್ಯುಯಲ್-ಡಿವೈಸ್ ಸಂಪರ್ಕ ಮತ್ತು ಐಪಿಎಕ್ಸ್ 5 ವಾಟರ್ ರೆಸಿಸ್ಟೆನ್ಸ್ ಸೌಲಭ್ಯ ಪಡೆದುಕೊಂಡಿದೆ. ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಸಹ ಒಳಗೊಂಡಿದ್ದು, ಇನ್ನು ಇದು ಆಸ್ಟ್ರಲ್ ಬ್ಲಾಕ್ ಮತ್ತು ಸನ್‌ರೈಸ್ ಬೀಜ್ ಬಣ್ಣಗಳಲ್ಲಿ ಖರೀದಿಗೆ ಲಭ್ಯ.

ಜಬ್ರಾ ಎಲೈಟ್ 4 ಇಯರ್‌ಬಡ್ಸ್‌

ಈ ಇಯರ್‌ಬಡ್‌ ಗಾಳಿಯ ಶಬ್ದ ರಕ್ಷಣೆಗಾಗಿ ವಿಶೇಷ ಮೆಶ್ ಹೊದಿಕೆಯಿಂದ ರಕ್ಷಿಸಲ್ಪಟ್ಟ 4 ಅಂತರ್ನಿರ್ಮಿತ ಮೈಕ್ರೊಫೋನ್‌ ಪಡೆದಿದೆ. ಸುಮಾರು 28 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ IP57 ರೇಟೆಡ್ ವಾಟರ್ ಮತ್ತು ಬೆವರು-ನಿರೋಧಕ ರಕ್ಷಣೆಯೊಂದಿಗೆ ಸಕ್ರಿಯ ಜೀವನಶೈಲಿಗಾಗಿ ವಿನ್ಯಾಸ ಪಡೆದಿದೆ. ಇದು ಬ್ಲೂಟೂತ್ 5.2, ಪಡೆದಿದ್ದು, ಇದರ ಬಡ್ಸ್‌ಗಳು 37.5 ಗ್ರಾಂ ತೂಕ ಪಡೆದಿವೆ.

ಅತ್ಯುತ್ತಮ ಇಯರಬಡ್ಸ್‌ ಲಿಸ್ಟ್‌ ಇಲ್ಲಿದೆ.. ಇದ್ರಲ್ಲಿ ನಿಮ್ಮ ಆಯ್ಕೆ ಯಾವುದು?

ಒನ್‌ಪ್ಲಸ್‌ ಬಡ್ಸ್ Z2 ಇಯರ್‌ಬಡ್ಸ್‌ ಡಿವೈಸ್‌

ಒನ್‌ಪ್ಲಸ್‌ ಸಂಸ್ಥೆಯ ಈ ಡಿವೈಸ್‌ ಡಾಲ್ಬಿ ಅಟ್ಮಾಸ್‌ ಸೌಲಭ್ಯದ ಜೊತೆಗೆ 11 mm ಬಾಸ್-ಟ್ಯೂನ್ಡ್ ಡೈನಾಮಿಕ್ ಡ್ರೈವರ್‌ಗಳನ್ನು ಪಡೆದಿದೆ. ಹಾಗೆಯೇ ಆಕ್ಟಿವ್ ನಾಯಿಸ್‌ ಕ್ಯಾನ್ಸಲೇಶನ್ ನೀಡುತ್ತದೆ. ಬಡ್ಸ್‌ಗಳು ಅದರ ಕೇಸ್‌ನೊಂದಿಗೆ 38 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತವೆ. ಈ ಡಿವೈಸ್‌ಗಳು IP55 ರೇಟಿಂಗ್, 94ms ಲೇಟೆನ್ಸಿ, ಡಾಲ್ಬಿ Atmos ಸಪೋರ್ಟ್ ಮತ್ತು ಬ್ಲೂಟೂತ್ 5.2 ಕನೆಕ್ಷನ್‌ ಸೌಲಭ್ಯ ಪಡೆದಿವೆ. ಈ ಡಿವೈಸ್‌ ಪರ್ಲ್ ವೈಟ್, ಅಬ್ಸಿಡಿಯನ್ ಕಪ್ಪು ಮತ್ತು ಮ್ಯಾಟ್ ಕಪ್ಪು ಕಲರ್ ಆಯ್ಕೆ ಹೊಂದಿದೆ.

Best Mobiles in India

English summary
Few best TWS Earbuds under Rs 5000. list is here, check all details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+